ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

ಸ್ಯಾಂಡಲ್‍ವುಡ್ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಹೊಸ Audi Q8 ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದು ರಕ್ಷಿತ್ ಶೆಟ್ಟಿ ಕಾರ್ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಹೊಸ ಐಷಾರಾಮಿ ಕಾರಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

ನಟ ರಕ್ಷಿತ್ ಶೆಟ್ಟಿ ಅವರಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಈ Audi Q8 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದೆ. ಇನ್ನು ನಟ ರಕ್ಷಿತ್ ಶೆಟ್ಟಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಅವರು 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಎರಡನೇ ಹಂತದಲ್ಲಿ ಬಾಕಿ ಉಳಿದಿರುವ ಶೋಟಿಂಗ್ ಮಾಡಲು ರಕ್ಷಿತ್ ಶೆಟ್ಟಿ ಪ್ಲಾನ್ ಮಾಡಿದ್ದಾರ ಎಂದು ವರದಿಗಳಾಗಿದೆ.

ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

ಇದರ ಜೊತೆಯಲ್ಲಿ '777 ಚಾರ್ಲಿ' ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಈಗಾಗಲೇ '777 ಚಾರ್ಲಿ' ಸಿನಿಮಾದ ಟೀಸರ್ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಈ ಟೀಸರ್'ಗೆ ಸಿನಿಪ್ರಿಯರಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ, ಇನ್ನು ಉಳಿದವರು ಕಂಡಂತೆ' ಚಿತ್ರದ ಕಥೆಯನ್ನು 'ರಿಚರ್ಡ್‌ ಆಂಟನಿ' ಮೂಲಕ ಮುಂದುವರಿಸೋಕೆ ರಕ್ಷಿತ್ ಶೆಟ್ಟಿ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

'ಸಿಂಪಲ್​ ಸ್ಟಾರ್​' ರಕ್ಷಿತ್​ ಶೆಟ್ಟಿ ಅವರು ಖರೀದಿಸಿದ Audi Q8 ಕಾರಿನ ಬಗ್ಗೆ ಹೇಳುವುದಾದರೆ, ಇದು ಕಂಪನಿಯ ಪೋರ್ಟ್ಪೋಲಿಯೊದಲ್ಲಿ Q7 ಎಸ್‍‍ಯುವಿಗಿಂತ ಮೇಲೆನ ಸ್ಥಾನದಲ್ಲಿರುತ್ತದೆ. Q7 ಎಸ್‍ಯುವಿಗೆ ಹೋಲಿಸಿದರೆ Q8 ಹೆಚ್ಚಿನ ಫೀಚರ್ಸ್‍‍ಗಳನ್ನು ಹೊಂದಿದೆ. ಹೊಸ Q8 ಮುಂಭಾಗದಲ್ಲಿ ಆಕರ್ಷಕ ದೊಡ್ಡ ಗ್ರಿಲ್ ಅನ್ನು ಹೊಂದಿದ್ದು, ಇದರ ಸುತ್ತಲೂ ಸಿಲ್ವರ್ ಅಸೆಂಟ್‍ಗಳನ್ನು ಅಳವಡಿಸಲಾಗಿದೆ.

ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

ಇನ್ನೂ ಪೂರ್ಣ ಪ್ರಮಾಣದ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳು, ಬ್ರ್ಯಾಂಡ್‍‍ನ ಮ್ಯಾಟ್ರಿಕ್ಸ್ ಎಲ್‍ಇಡಿ ಯುನಿ‍‍ಟ್‍ಗಳಿವೆ. ಜೊತೆಗೆ 21 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಈ Audi Q8 ಎಸ್‍ಯುವಿಯು ಆಕರ್ಷಕ ಮತ್ತು ಲಕ್ಷುರಿ ಲುಕ್ ಅನ್ನು ಹೊಂದಿದೆ.

ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

ಇನ್ನು Audi Q8 ಎಸ್‍ಯುವಿಯಲ್ಲಿ 3.0 ಬಿಎಸ್-6 ಟಿಎಫ್‍‍ಎಸ್‍ಐ 48 ವಿ ಮೈಲ್ಡ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 340 ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿ‍‍ನ್‍ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ ಮತ್ತು ಕಂಪನಿಯ ಕ್ವಾಟ್ರೋ ಅಲ್-ವ್ಹೀಲ್ ಡ್ರೈವ್ ಅನ್ನು ಅಳವಡಿಸಲಾಗಿದೆ.

ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

ಈ Q8 ಎಸ್‍ಯುವಿಯು ಕೇವಲ 5.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. Q8 ಎಸ್‍‍ಯುವಿಯು ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ Q8 ಎಸ್‍ಯುವಿ ಮೂರು ಝೋನ್ ಕ್ಲೈಮೆಂಟ್ ಕಂಟ್ರೋಲ್, ರೇರ್ ವೀವ್ ಮಿರರ್, ಡಿಜಿಟಲ್ ಕಂಪಾಸ್, ಪನಾರೋಮಿಕ್ ಸನ್‍‍ರೂಫ್, ಹೊಂದಾಣಿಕೆ ಮಾಡಬಹುದಾದ ಪವರ್ ಫ್ರಂಟ್ ಸೀಟ್‍ಗಳನ್ನು ಹೊಂದಿದೆ.

ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

ಇನ್ನು ಇನ್ಫೋಟೇನ್‍‍ಮೆಂಟ್ ಮೋಡ್‍‍ಗಳಲ್ಲಿ ಕಾರ್ಯನಿರ್ವಹಿಸುವ 12.3 ಇಂಚಿನ ಡಿಜಿ‍‍ಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನಿತರ ಅತ್ಯಾಧುನಿಕ ಫೀಚರ್ಸ್‍‍ಗಳನ್ನು ಒಳಗೊಂಡಿದೆ. ಇನ್ನು ಈ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

ಇದರಲ್ಲಿ ಸುರಕ್ಷತೆಗಾಗಿ ಆರು - ಏರ್‍‍ಬ್ಯಾಗ್‍‍ಗಳು, ಎಲೆಕ್ಟ್ರಾನಿಕ್ ಸ್ಟಬಿಲಿಟಿ ಕಂಟ್ರೋಲ್, ಎಬಿಎಸ್ ನೊಂದಿಗೆ ಇಬಿಡಿ, ಟಯರ್ ಫ್ರಶರ್ ಮ್ಯಾನೇಜ್‍‍ಮೆಂಟ್ ಸಿಸ್ಟಂ, ಎಲೆಕ್ಟ್ರೊ ಮ್ಯಾಗ್ನೆಟಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೋವರ್ ಆಂಕರ್‍‍ಗಳನ್ನು ಅಳವಡಿಸಲಾಗಿದೆ.

ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

Audi India ತನ್ನ ಹೊಸ e-tron gt ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಆಡಿ ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ Audi e-tron gt ಮಾದರಿಯು ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಆಗಿರಬಹುದು. ಇದು ಬ್ರಾಂಡ್‌ನ ಮೂರನೇ ಎಲೆಕ್ಟ್ರಿಕ್ ಮಾದರಿಯಾಗರಲಿದೆ. ಆಡಿ ಭಾರತೀಯ ಮಾರುಕಟ್ಟೆಯ ಐಷಾರಾಮಿ ಕ್ಷೇತ್ರದಲ್ಲಿ ಅತಿದೊಡ್ಡ ಇವಿ ಪೋರ್ಟ್ಫೋಲಿಯೊವನ್ನು ನೀಡುತ್ತದೆ.

ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

ಈ ವರ್ಷದ ಫೆಬ್ರವರಿಯಲ್ಲಿ ಮಾತ್ರ Audi e-tron gt ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿತು. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. Audi e-tron gt ಕಾರು ಭಾರತೀಯ ಮಾರುಕಟ್ಟೆಗೆ ಸಿಬಿಯು ಯುನಿಟ್ ಗಳಾಗಿ ಬರುತ್ತದೆ. ಆಡಿ e-tron gt ಕೂಪ್ ಅನ್ನು ಕ್ವಾಟ್ರೊ ಮತ್ತು ಆರ್‌ಎಸ್ ಆವೃತ್ತಿಗಳಲ್ಲಿ ನೀಡಲಾಗಿದೆ ಮತ್ತು ಎರಡೂ ರೂಪಾಂತರಗಳು ಭಾರತಕ್ಕೆ ಬರುವ ಸಾಧ್ಯತೆಯಿದೆ. 2018ರ ಲಾಸ್ ಏಂಜಲೀಸ್ ಆಟೋ ಶೋನಲ್ಲಿ ಈ ಮಾದರಿಯ ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿದ್ದರು. ಈ ಮಾದರಿಯ ದೊಡ್ಡ ಅಗ್ರೇಸಿವ್ ಲೈನ್ ಗಳನ್ನು ಹೊಂದಿದೆ.

ದುಬಾರಿ Audi ಕಾರನ್ನು ಖರೀದಿಸಿದ ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ

Audi ಕಾರುಗಳಿಗೆ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಬೆಂಝ್ ಕಾರುಗಳು ಪ್ರಬಲ ಪೈಪೋಟಿಯನ್ನು ನೀಡುತ್ತಿವೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಭದ್ರಪಡಿಸಲು Q8 ಹೆಚ್ಚಿನ ಸಹಾಯವಾಗುತ್ತಿದೆ. ಈ Audi Q8 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ಸ್ಪೋರ್ಟ್, ಪೋರ್ಷೆ ಕೇನ್, ಬಿಎಂಡಬ್ಲ್ಯು ಎಕ್ಸ್ 7 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Kannada actor rakshith shetty bought new audi q8 suv details
Story first published: Saturday, August 21, 2021, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X