ಕನ್ನಡದ ನಟಿಯಿಂದ ಅಗ್ಗದ 'ಟಿವಿಎಸ್ ಐಕ್ಯೂಬ್' ಇ-ಸ್ಕೂಟರ್ ಖರೀದಿ.. ಖುಷಿ, ಖುಷಿಯಾಗಿ ವಿತರಣೆ ಪಡೆದ್ರು!
ನಟಿ ಸುನೇತ್ರಾ ಪಂಡಿತ್ (Sunetra Pandit), ತಮ್ಮ ಮನೋಜ್ಞವಾದ ಅಭಿನಯದ ಮೂಲಕವೇ ಖ್ಯಾತಿ ಗಳಿಸಿದ್ದಾರೆ. ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ. ಸಿಹಿ-ಕಹಿ ಚಂದ್ರು ಆಕ್ಷನ್ ಕಟ್ ಹೇಳಿದ್ದ ಸಿಲ್ಲಿ-ಲಲ್ಲಿ ಧಾರಾವಾಹಿಯ 'ವಿಶಾಲು' ಪಾತ್ರ ಸುನೇತ್ರಾ ಪಂಡಿತ್ ಅವರಿಗೆ ಹೆಚ್ಚು ಜನಮನ್ನಣೆ ತಂದುಕೊಂಡಿತ್ತು. ಕಂಠದಾನ ಕಲಾವಿದೆಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಉಪೇಂದ್ರ ನಿರ್ದೇಶಿಸಿ, ನಟ ಶಿವರಾಜ್ ಕುಮಾರ್ ಅಭಿನಯಿದ್ದ 'ಓಂ' ಚಿತ್ರದಲ್ಲಿ ನಟಿ ಪ್ರೇಮಾ ಅವರಿಗೆ ಧ್ವನಿ ನೀಡಿದ್ದರು.
ಸುನೇತ್ರಾ ಪಂಡಿತ್ ಅವರ ಪತಿ ರಮೇಶ್ ಪಂಡಿತ್ ಕೂಡ ಜನಪ್ರಿಯ ಪೋಷಕ ನಟರಾಗಿದ್ದಾರೆ. ಅವರು ಸಿನಿಮಾ, ಧಾರವಾಹಿ ಹಾಗೂ ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಸದ್ಯ ರಮೇಶ್ ಪಂಡಿತ್ ಅವರು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಕಿಲಾಡಿ ಪೊಲೀಸ್, ಸಿಲಿಕಾನ್ ಸಿಟಿ ಹಾಗೂ ಲವ-ಕುಶ ಸೇರಿದಂತೆ ಹಲವು ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.

ಇತ್ತೀಚೆಗೆ ನಟಿ ಸುನೇತ್ರಾ ಪಂಡಿತ್ ಅವರು ಹೊಚ್ಚ ಹೊಸ ಟಿವಿಎಸ್ ಐಕ್ಯೂಬ್ (TVS iQube) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಖರೀದಿ ಮಾಡಿದ್ದಾರೆ. ಈ ಕುರಿತಂತೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಪತಿ ರಮೇಶ್ ಪಂಡಿತ್ ಹಾಗೂ ಪುತ್ರಿ ಶ್ರೀಯಾ ಪಂಡಿತ್ ಅವರೊಂದಿಗೆ ನೂತನ ಇ-ಸ್ಕೂಟರ್‌ನ್ನು ವಿತರಣೆ ಪಡೆಯುತ್ತಿರುವುದನ್ನು ಕಾಣಬಹುದು.
ಟಿವಿಎಸ್ ಐಕ್ಯೂಬ್ ವಿಶೇಷತೆಗಳೇನು: ಈ ಎಲೆಕ್ಟ್ರಿಕ್ ಸ್ಕೂಟರ್, ಐಕ್ಯೂಬ್, ಐಕ್ಯೂಬ್ ಎಸ್ & ಐಕ್ಯೂಬ್ ಎಸ್‌ಟಿ ಎಂಬ ಮೂರು ವಿಧದಲ್ಲಿ ದೇಶೀಯ ಗ್ರಾಹಕರ ಖರೀದಿಗೆ ಲಭ್ಯವಾಗುತ್ತದೆ. ಟಿವಿಎಸ್ ಕಂಪನಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಸ್ಟ್ಯಾಂಡರ್ಡ್ ಐಕ್ಯೂಬ್ ಮಾಡೆಲ್, ರೂ.89,999 ರಿಂದ ರೂ.1,26,628 ಬೆಲೆಯನ್ನು ಹೊಂದಿದೆ.

ಈ ಸ್ಟ್ಯಾಂಡರ್ಡ್ ಅಥವಾ ಬೇಸ್ ಐಕ್ಯೂಬ್ ಮಾಡೆಲ್, 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 75 ರಿಂದ 100 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಜೊತೆಗೆ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಿಡ್-ಲೆವೆಲ್ ಟಿವಿಎಸ್ ಐಕ್ಯೂಬ್ ಎಸ್ ಮಾಡೆಲ್ ಬಗ್ಗೆ ಹೇಳುವುದಾದರೆ, ಇದು ರೂ.1,44,420 ದರವನ್ನು ಹೊಂದಿದೆ. 3.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 100 ಕಿಲೋಮೀಟರ್ ಓಡುತ್ತದೆ. ಇದರ ಬ್ಯಾಟರಿ ಪ್ಯಾಕ್ ಶೇಕಡ 0 ರಿಂದ 80% ಚಾರ್ಜ್ ಆಗಲು 4 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಕಡೆಯದಾಗಿ ಟಾಪ್-ಲೆವೆಲ್ ಟಿವಿಎಸ್ ಐಕ್ಯೂಬ್ ಎಸ್‌ಟಿ ಮಾಡೆಲ್ ಕುರಿತಂತೆ ಮಾತನಾಡುವುದಾದರೆ, ಈ ಎಲೆಕ್ಟ್ರಿಕ್ ಸ್ಕೂಟರ್, ರೂ.155,555 ರಿಂದ ರೂ.185,373 ಬೆಲೆಯನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 100 ರಿಂದ 150 ಕಿಲೋಮೀಟರ್ ಕ್ರಮಿಸುತ್ತದೆ. 7-ಇಂಚಿನ ಫುಲ್ ಕಲರ್ ಟಿಎಫ್‌ಟಿ ಸ್ಕ್ರೀನ್, ವಾಯ್ಸ್ ಅಸಿಸ್ಟ್, ಅಲೆಕ್ಸಾ ಸ್ಕಿಲ್‌ಸೆಟ್ ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications