ಅಬ್ಬಾ ಅಂತೂ ಕ್ಯೂಟ್ ಐಂದ್ರಿತಾಗೆ ಸಿಕ್ತು ಬಾಯ್‌ಫ್ರೆಂಡ್!

ಕನ್ನಡ ಚಲನಚಿತ್ರರಂಗದಲ್ಲಿ ಚಾಕೋಲೇಟ್ ಹೀರೊಯಿನ್ ಎಂದೇ ಖ್ಯಾತಿ ಪಡೆದಿರುವ ಐಂದ್ರಿತಾ ರೇ ಅವರನ್ನು ಇನ್ನು ಕೆಲವು ಸಂದರ್ಭಗಳಲ್ಲಿ 'ಐಟಂ ಗರ್ಲ್' ಎಂದು ಬಣ್ಣಿಸಲಾಗಿತ್ತು.

ನಟ ದಿಗಂತ್ ಜತೆಗಿನ ಗಾಸಿಪ್ ಸುದ್ದಿಗಳು ಒಂದೆಡೆಯಿರುವಂತೆಯೇ ಕೊನೆಗೂ ಐಂದ್ರಿತಾ ಬಯಸಿದ ಬಾಯ್‌ಫ್ರೆಂಡ್ ಸಿಕ್ಕಿ ಬಿಟ್ಟಿದ್ದಾರೆ. ಹ್ಹಾಂ ಅದೇನಂತೀರಾ..? ಗಾಬರಿಯಾಗಬೇಡಿರಿ ನಾವು ಮಾತನಾಡುತ್ತಿರುವುದು ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ನ ಈ ಕ್ಯೂಟ್ ಬೇಬಿ ಐಷಾರಾಮಿ ಬಿಎಂಡಬ್ಲ್ಯು ಖರೀದಿಸಿದ್ದಾರೆ.

ನೀಲಿ ಬಣ್ಣದ ಬಿಎಂಡಬ್ಲ್ಯು ಕ್ಯೂ3 ಖರೀದಿಸಿದ ಬಳಿಕವಂತೂ ಐಂದ್ರಿತಾಗೆ ನಿದ್ದೆಯಿಲ್ಲಂತೆ! ಹೋಗೋದು ಬರೋದು ಸುತ್ತಾಡುವುದಕ್ಕೆ ಎಲ್ಲದಕ್ಕೂ ಇದೇ ಕಾರನ್ನು ಬಳಸುತ್ತಿದ್ದಾರೆ. ಇನ್ನು ತನ್ನ ಇಷ್ಟದ ಪಪ್ಪಿ ಹೋ ಸಾರಿ ಪ್ರೀತಿಯ ನಾಯಿ ಝರೊ ಜತೆ ಸೇರಿ ಬೆಂಗಳೂರಿನೆಲ್ಲೆಡೆ ಜಾಲಿ ರೈಡ್ ಹೊಡಿದಿದ್ದಾರೆಂಬ ಮಾಹಿತಿಯಿದೆ.

ಅದು ಏನೇ ಇರಲಿ. ಅಂತೂ ಈ ಮನಸಾರೆ ಹುಡುಗಿ ಇದು ಮೊದಲ ಬಾರಿಯೇನಲ್ಲ ಕಾರು ಖರೀದಿಸುತ್ತಿರುವುದು ಅಥವಾ ಬದಲಾಯಿಸುತ್ತಿರುವುದು? ಯಾಕೆಂದರೆ ಐಂದ್ರಿತಾ ಪಾಲಿಗಿದು ನಾಲ್ಕನೇ ಕಾರು. ಅಂದ್ರೆ ಸ್ಲಿಮ್ ಬೇಬಿಗೆ ಯಾವ ಕಾರು ಸ್ಯೂಟ್ ಆಗುತ್ತಿಲ್ಲ ಎಂದು ಓವರ್ ಪ್ರಶ್ನೆ ಹಾಕಬೇಡಿರಿ ಇದಕ್ಕುತ್ತರ ಈ ಸ್ಯಾಂಡಲ್‌ವುಡ್ ಬೆಡಗಿಯಿಂದಲೇ ಪಡೆಯಬೇಕಾಗಿತು.

Kannada Actress Aindrita Ray Buys BMW Car

ಸೆಲೆಬ್ರಿಟಿಗಳು ತಮ್ಮ ಐಷಾರಾಮಿ ಜೀವನಶೈಲಿಗೆ ತಕ್ಕಂತೆ ಕಾರುಗಳನ್ನು ಬದಲಾಯಿಸುತ್ತಿರುತ್ತಾರೆ. ಅದೇ ರೀತಿ ಐಂದ್ರಿತಾ ರೇ ಬಿಎಂಡಬ್ಲ್ಯು ಎಕ್ಸ್3 ನೀಲಿ ಬಣ್ಣದ ಕಾರನ್ನು ಖರೀದಿಸಿದ್ದಾರೆ.

Kannada Actress Aindrita Ray Buys BMW Car

ಅಂದ ಹಾಗೆ ಐಂದ್ರಿತಾ ಪಾಲಿಗಿದು ನಾಲ್ಕನೇ ಕಾರಾಗಿದೆ. ಈ ಹಿಂದೆ ಮಾರುತಿ ಸ್ವಿಫ್ಟ್, ಹೋಂಡಾ ಸಿಆರ್‌ವಿ ಹಾಗೂ ದುಬಾರಿ ಮರ್ಸಿಡಿಸ್ ಬೆಂಝ್ ಕಾರನ್ನು ಖರೀದಿಸಿದ್ದರು. ಈಗ ಖರೀದಿಸಿರುವ ಬಿಎಂಡಬ್ಲ್ಯು ಕಾರಿನ ದರ ಬರೋಬ್ಬರಿ 55 ಲಕ್ಷ ರು.ಗಳಾಗಿವೆ.

Kannada Actress Aindrita Ray Buys BMW Car

ಪ್ರಸ್ತುತ ಅವಿವಾಹಿತ ನಟಿಯರು ಕಾರು ಮೇಲೆ ಹೆಚ್ಚಿನ ಪ್ರೀತಿ ಹೊಂದಿದ್ದಾರೆ. ಇದು ಸ್ಯಾಂಡಲ್‌ವುಡ್‌ನ ಹೊಸ ಟ್ರೆಂಡ್ ಕೂಡಾ ಹೌದು.

Kannada Actress Aindrita Ray Buys BMW Car

ಏತನ್ಮಧ್ಯೆ 2012 ಸಾಲಿನಲ್ಲಿ ಸ್ವಲ್ಪ ಮಂಕಾಗಿದ್ದ ಈ ಮನಸಾರೆ ಹುಡುಗಿ ಬಳಿಯೀಗ ಸಾಲು ಸಾಲು ಚಿತ್ರಗಳಿವೆ. ಬಚ್ಚನ್, ಆದಿ ಅಪರೂಪ ಹಾಗೂ ಟೋನಿ ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಪ್ರಸಕ್ತ ಸಾಲಿನಲ್ಲಿ ಬಿಡುಗಡೆಗೊಂಡ ರಜನಿ ಕಾಂತ ಚಿತ್ರದಲ್ಲಿ ಐಂದ್ರಿತಾ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು.

Kannada Actress Aindrita Ray Buys BMW Car

ಅಂದ ಹಾಗೆ ಐಂದಿತ್ರಾ ರೇ ಕಾರುಗಳ ಪಟ್ಟಿಯಲ್ಲಿ ಮುಂದೆ ಯಾವ ಕಾರು ಸೇರ್ಪಡೆಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Kannada Actress Aindrita Ray Buys BMW Car

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ

More from DriveSpark

Article Published On: Thursday, March 21, 2013, 12:49 [IST]
English summary
Kannada Actress Aindrita Ray Buys New BMW Car. The blue BMW worth Rs 55 lakh that she purchased is her fourth car. She already owns a Maruti Swift, Honda CRV and a Mercedes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+