ಪತ್ನಿಗೆ ಚೀನಾ ಕಂಪನಿಯ ಎಲೆಕ್ಟ್ರಿಕ್ ಕಾರು ಗಿಫ್ಟ್ ನೀಡಿ ಪರಿಸರ ಪ್ರೇಮ ಮೆರೆದ ಅಕುಲ್ ಬಾಲಾಜಿ
ಅಕುಲ್ ಬಾಲಾಜಿ (Akul Balaji) ನಗು ನಗುತ್ತಲೇ ಎಲ್ಲರನ್ನೂ ನಗಿಸುವ ಅವರ ಕಲೆ ಇಂದು ರಾಜ್ಯದ ಮನೆ ಮಾತಾದ ನಿರೂಪಕ. ಕನ್ನಡ ನಿರೂಪಕ ಅಂದರೆ, ನೆನಪುಗುವುದು ಅಕುಲ್ ಬಾಲಾಜಿ. ಈ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಅವರು ಹೊಸ ದುಬಾರಿ ಎಲೆಕ್ಟ್ರಿಕ್ ಕಾರು (Electric Car) ಖರೀದಿ ಮಾಡಿ ಪತ್ನಿ ಜ್ಯೋತಿಗೆ ಉಡುಗೊರೆ ನೀಡಿದ್ದಾರೆ.
ಅಕುಲ್ ಬಾಲಾಜಿ ಪತ್ನಿ ಜ್ಯೋತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಎಲೆಕ್ಟ್ರಿಕ್ ಕಾರಿನ ವಿತರಣೆ ಪಡೆಯುವುದು, ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದು, ಡ್ರೈವ್ ಮಾಡಿರುವ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಎಲೆಕ್ಟ್ರಿಕ್ ವಾಹನ ಕುಟುಂಬ ಸೇರಿಕೊಂಡೆ ಕಾರ್ಬನ್ ಫುಟ್‌ಪ್ರಿಂಟ್ ಕಡಿಮೆ ಮಾಡಲು ಇಲ್ಲಿಂದ ಆರಂಭ. ಸರ್ಪ್ರೈಸ್ ಕೊಟ್ಟಿರು ಅಕುಲ್ ಎಂದು ಜೋ ಅವರು ಬರೆದುಕೊಂಡಿದ್ದಾರೆ. ಅನೇಕರು ಹೊಸ ಕಾರು ಖರೀದಿಸಿರುವುದಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಹಳ್ಳಿ ಹೈದ ಪ್ಯಾಟೆಗ್ ಬಂದ, ಪ್ಯಾಟೆ ಮಂದಿ ಕಾಡಿಗ ಬಂದ್ರು ಸೇರಿದಂತೆ ಹಲವು ಟಿವಿ ಕಾರ್ಯಕ್ರಮಗಳನ್ನು ಅಕುಲ್ ಬಾಲಾಜಿ ನಿರೂಪಣೆ ಮಾಡಿದ್ದಾರೆ. ಇನ್ನು ಇವರು ಕೆಲ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಜ್ಯೋತಿ ಅವರು ಪತಿಯ ಜೊತೆ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ, ಫೋಟೋಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅಕುಲ್ ಬಾಲಾಜಿ, ಜ್ಯೋತಿ ದಂಪತಿಗೆ ಒಬ್ಬ ಮಗನಿದ್ದಾನೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ರೇಲ್ವೆ ಕೋಡೂರಿನಲ್ಲಿ ಜನಿಸಿದ ಅಕುಲ್ ಬಾಲಾಜಿ ದೂರದರ್ಶನ ಕಾರ್ಯಕ್ರಮಗಳ ನಿರೂಪಣೆ ಮೂಲಕ ತಮ್ಮ ವೃತ್ತಿ ರಂಗಕ್ಕೆ ಪ್ರವೇಶಿಸಿದರು. ಅಕುಲ್ ಅವರಿಗೆ ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್ ಎಂಬ ಟಿವಿ ರಿಯಾಲಿಟಿ ಶೋ ಹೆಸರು, ಖ್ಯಾತಿ ತಂದು ಕೊಟ್ಟಿತು. ಇದರ ಮೂಲಕ ಅಕುಲ್ ಬಾಲಾಜಿ ಅವರು ರಾಜ್ಯದ ಮನೆಮಾತಾದರು.

ಅಕುಲ್ ಬಾಲಾಜಿ ಪತ್ನಿ ಜ್ಯೋತಿಗೆ ಸಿಲ್ವರ್ ಬಣ್ಣದ ಬಿವೈಡಿ ಆಟ್ಟೊ 3 (BYD Atto 3) ಎಲೆಕ್ಟ್ರಿಕ್ ಕಾರನ್ನು ಗಿಫ್ಟ್ ಕೊಟ್ಟಿದ್ದಾರೆ. ಈ ಕಾರಿನ ಬಗ್ಗೆ ಹೇಳುವುದಾದರೆ, ಈ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕೋನಾ ಇವಿ ಮತ್ತು ಎಂಜಿ ZS ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರು 3.0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.
ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಇ6 ಎಂಪಿವಿಯ ನಂತರ ಬ್ರ್ಯಾಂಡ್‌ನ ಎರಡನೇ ಎಲೆಕ್ಟ್ರಿಕ್ ವಾಹನವಾಗಿದೆ. ಇದು SKD (ಸೆಮಿ-ನಾಕ್ಡ್ ಡೌನ್) ಮಾರ್ಗದ ಮೂಲಕ ಬರುತ್ತದೆ ಮತ್ತು ಚೆನ್ನೈ ಬಳಿಯ ಬ್ರ್ಯಾಂಡ್‌ನ ಶ್ರೀಪೆರಂಬದೂರ್ ಮೂಲದ ಸ್ಥಾವರದಲ್ಲಿ ಜೋಡಿಸಲಾಗಿದೆ. ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 60kWh ಬಿವೈಡಿ ಬ್ಲೇಡ್ ಬ್ಯಾಟರಿಯನ್ನು ಅಳವಡಿಸಲಾಗಿದೆ.
ಇದು ಪೂರ್ಣ ಚಾರ್ಜ್‌ನಲ್ಲಿ ARAI- ಪ್ರಮಾಣೀಕರಿಸಿದ ಪ್ರಕಾರ 521 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರು 201 ಬಿಹೆಚ್‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು 7.3 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಬ್ಯಾಟರಿ ಪ್ಯಾಕ್ ಅನ್ನು 50 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.
ಈ ಹೊಸ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಕಾರು ತನ್ನ ದೊಡ್ಡ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಬಲವಾದ ಲೈನ್ ಮತ್ತು ಪೂರ್ಣ-ಅಗಲದ ಎಲ್ಇಡಿ ಟೈಲ್‌ಲೈಟ್‌ಗಳೊಂದಿಗೆ ಸ್ಪೋರ್ಟಿ ಮತ್ತು ಅತ್ಯಾಧುನಿಕ ಲುಕ್ ಅನ್ನು ಹೊಂದಿದೆ. ಈ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಬೌಲ್ಡರ್ ಗ್ರೇ, ಪಾರ್ಕರ್ ರೆಡ್, ಸ್ಕೀ ವೈಟ್ ಮತ್ತು ಸರ್ಫ್ ಬ್ಲೂ ಸೇರಿದಂತೆ ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








