ಅಪ್ಪು, ದರ್ಶನ್, ಸುದೀಪ್ ಬಳಿಯಿವೆ ಈ ಐಷಾರಾಮಿ ಬೈಕ್‌ಗಳು.. ಇವುಗಳ ಬಗ್ಗೆ ಕೇಳಿದ್ದೀರಾ?
ಬಾಲಿವುಡ್ ಸೆಲೆಬ್ರಿಟಿಗಳಂತೆ ಸ್ಯಾಂಡಲ್‌ವುಡ್ ನಟರು ಕೂಡ ನಾವೇನು ಕಮ್ಮಿಯಿಲ್ಲ ಎಂಬಂತೆ ದುಬಾರಿ ಬೆಲೆಯ ಐಷಾರಾಮಿ ಕಾರು ಹಾಗೂ ಬೈಕ್‌ಗಳನ್ನು ಹೊಂದಿದ್ದಾರೆ. ಅದರಲ್ಲೂ ಕನ್ನಡದ ಸ್ಟಾರ್ ನಟರಿಗೆ ಹಾರ್ಲೆ-ಡೇವಿಡ್ಸನ್ (Harley-Davidson) ಹಾಗೂ ಸುಜುಕಿ (Suzuki) ಮೋಟಾರ್‌ಸೈಕಲ್‌ಗಳ ಮೇಲೆ ವಿಶೇಷವಾದ ಪ್ರೀತಿಯಿದೆ. ಹಲವರು ಇದೇ ಕಂಪನಿಗಳಿಗೆ ಸೇರಿದ ಬೈಕ್‌ಗಳಿಗೂ ಒಡೆಯರಾಗಿದ್ದಾರೆ. ಆಗಾಗ್ಗೆ ಈ ಮೋಟಾರ್‌ಸೈಕಲ್‌ಗಳನ್ನು ಓಡಿಸುವಾಗಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಆ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿಯೂ ಭಾರಿ ವೈರಲ್ ಆಗಿರುವುದನ್ನು ನೋಡಿದ್ದೇವೆ.
ದಿವಂಗತ ನಟ ಪುನೀತ್ ರಾಜ್‌ಕುಮಾರ್ (Puneeth Rajkumar), ಮೋಟಾರ್‌ಸೈಕಲ್‌ಗಳನ್ನು ತುಂಬಾ ಇಷ್ಟಪಡುತ್ತಿದ್ದರು. ಅವರು ಹಾರ್ಲೆ ಡೇವಿಡ್ಸನ್ ಕ್ರೂಸರ್ ಮತ್ತು ಸುಜುಕಿ ಹಯಾಬುಸಾ ಬೈಕ್‌ಗಳ ಮಾಲೀಕರಾಗಿದ್ದರು. ಆದರೆ, ಹಾರ್ಲೆ ಡೇವಿಡ್ಸನ್ ಕ್ರೂಸರ್ ಮೋಟಾರ್‌ಸೈಕಲ್‌ಗಳ ಯಾವ ಮಾದರಿಯನ್ನು (ಮಾಡೆಲ್) ಹೊಂದಿದ್ದರೂ ಎಂಬುದರ ಕುರಿತಂತೆ ಸ್ಪಷ್ಟವಾದ ವಿವರಗಳು ತಿಳಿದುಬಂದಿಲ್ಲ.

ಅಪ್ಪು ಬಳಿಯಿದ್ದ ಈ ಸುಜುಕಿ ಹಯಾಬುಸಾ (Suzuki Hayabusa) ಬೈಕ್, ಸದ್ಯ ರೂ.17 ರಿಂದ ರೂ.17.80 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಶಕ್ತಿಯುತವಾಗಿರುವ 1340 ಸಿಸಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದ್ದು, 190 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 150 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 17 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ (Darshan) ಅವರು ಸಹ ಐಷಾರಾಮಿ ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಾಫ್ಟೇಲ್ ಕ್ಲಾಸಿಕ್ ಮತ್ತು ಸುಜುಕಿ ಹಯಾಬುಸಾ ಮೋಟಾರ್‌ಸೈಕಲ್‌ಗಳ ಒಡೆಯರಾಗಿದ್ದಾರೆ. ಅವರ ಹತ್ತಿರವಿರುವ ಈ 'ಹೆರಿಟೇಜ್ ಸಾಫ್ಟೇಲ್ ಕ್ಲಾಸಿಕ್' ಬೈಕ್ ಮಾರಾಟವನ್ನು ಕಂಪನಿಯು ಸ್ಥಗಿತಗೊಳಿಸಿ ವರ್ಷಗಳಾಗಿವೆ.

ಈ ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಾಫ್ಟೇಲ್ ಕ್ಲಾಸಿಕ್ ಮೋಟಾರ್‌ಸೈಕಲ್, ರೂ. 23,20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿತ್ತು. 1,690 ಸಿಸಿ ಪೆಟ್ರೋಲ್ ಎಂಜಿನ್ ಹಾಗೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿತ್ತು. 18 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತಿತ್ತು. ಜೊತೆಗೆ 347 ತೂಕವನ್ನು ಒಳಗೊಂಡಿತ್ತು.
ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ (Sudeep) ಅವರಿಗೂ ಬೈಕ್‌ಗಳ ಮೇಲೆ ವಿಶೇಷ ಪ್ರೀತಿಯಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರು ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಾಫ್ಟೇಲ್ ಕ್ಲಾಸಿಕ್, ಯಮಹಾ ವೈಝಡ್ಎಫ್-ಆರ್1, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಮತ್ತು ಯಮಹಾ ಆರ್‌ಎಕ್ಸ್ 100 ಮೋಟಾರ್‌ಸೈಕಲ್‌ಗಳ ಮಾಲೀಕರೂ ಆಗಿದ್ದಾರೆ.
ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ರೂ.1.93 ರಿಂದ ರೂ.2.30 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 349.34 ಸಿಸಿ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 41.55 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ನಟ, ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ಕೂಡ ಹಾರ್ಲೆ-ಡೇವಿಡ್ಸನ್ ಎಕ್ಸ್440 (Harley-Davidson X440) ಬೈಕ್ ಒಡೆಯರಾಗಿದ್ದಾರೆ. ಈ ಮೋಟಾರ್‌ಸೈಕಲ್‌ನ್ನು ತರುಣ್ ಸುಧೀರ್ ಅವರ ಹುಟ್ಟುಹಬಕ್ಕೆ ನಟ ದರ್ಶನ್ ಅವರು ಉಡುಗೊರೆ ನೀಡಿದ್ದರು. ಕಳೆದ ತಿಂಗಳು ಆಯುಧ ಪೂಜೆ ಸಂದರ್ಭದಲ್ಲಿ ತರುಣ್ ಈ ಬೈಕ್‌ನಲ್ಲಿ ಪತ್ನಿ ಸೋನಲ್ ಜೊತೆಗೆ ಜಾಲಿ ರೈಡ್ ನಡೆಸಿದ್ದರು.
ಈ ಹಾರ್ಲೆ-ಡೇವಿಡ್ಸನ್ ಎಕ್ಸ್440 ಮೋಟಾರ್‌ಸೈಕಲ್, ರೂ.2.40 ರಿಂದ ರೂ.2.80 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ. 440 ಸಿಸಿ ಪೆಟ್ರೋಲ್ ಎಂಜಿನ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 35 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಸವಾರರ ರಕ್ಷಣೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.


Click it and Unblock the Notifications