ಬೈಕ್‌ನಲ್ಲಿ ಪತ್ನಿ ಸೋನಲ್ ಜೊತೆಗೆ ತರುಣ್ ಸುಧೀರ್ ಜಾಲಿ ರೈಡ್... ಈ ಮೋಟಾರ್‌ಸೈಕಲ್ ಬಗ್ಗೆ ಕೇಳಿದ್ದೀರಾ?

ಕನ್ನಡದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ (Tharun Sudhir), ನಟಿ ಸೋನಾಲ್ ಮೊಂಟೆರೊ (Sonal Monteiro) ಅವರೊಂದಿಗೆ ಆಗಸ್ಟ್ 11ರಂದು ಸಪ್ತಪದಿ ತುಳಿದಿದ್ದರು. ಕೆಲವೇ ದಿನಗಳ ಹಿಂದೆ ಮಾಲ್ದೀವ್ಸ್‌ಗೆ ನವದಂಪತಿ ಹನಿಮೂನ್‌ಗೂ ತೆರಳಿದ್ದು, ಒಂದಷ್ಟು ಫೋಟೋಗಳನ್ನು ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಸಖತ್ ಸುದ್ದಿಯಾಗಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ತರುಣ್ ಸುಧೀರ್‌ಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಚೌಕ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಅವರು, ರಾಬರ್ಟ್ ಸಿನಿಮಾಕ್ಕೂ ಆಕ್ಷನ್ ಕಟ್ ಹೇಳಿದ್ದರು.

ಇತ್ತೀಚೆಗೆ ತರುಣ್ ಸುಧೀರ್ ಅವರ ಕಚೇರಿಯಲ್ಲಿ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ, ವಿವಿಧ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿಗೂ ಸಂಪ್ರದಾಯ ಬದ್ಧವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ತರುಣ್ ಸುಧೀರ್ ಅವರೊಂದಿಗೆ ತಾಯಿ ಮಾಲತಿ ಸುಧೀರ್, ಪತ್ನಿ ಸೋನಲ್ ಹಾಗೂ ಕಚೇರಿ ಸಿಬ್ಬಂದಿಗಳು ಸಹ ಪೂಜೆಯಲ್ಲಿ ಭಾಗವಹಿಸಿದ್ದರು.

Kannada Famous Director Tharun Sudhir And Actor Sonal Couple Do Jolly Ride In Harley-Davidson X440 Bike

ಪೂಜೆ ನಂತರ, ತರುಣ್ ಸುಧೀರ್ ಪತ್ನಿ ಸೋನಲ್ ಜೊತೆಗೆ ತಮ್ಮ ಕಚೇರಿ ಎದುರಿನ ರಸ್ತೆಯಲ್ಲಿ ಹಾರ್ಲೆ-ಡೇವಿಡ್ಸನ್ ಎಕ್ಸ್440 (Harley-Davidson X440) ಬೈಕ್‌ನಲ್ಲಿ ಕೊಂಚ ದೂರ ಜಾಲಿ ರೈಡ್ ನಡೆಸಿದರು. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇದೇ ಪೋಸ್ಟ್ 33 ಸಾವಿರಕ್ಕೂ ಅಧಿಕ ಲೈಕ್ ಪಡೆದುಕೊಂಡಿದೆ.

ಹಾರ್ಲೆ-ಡೇವಿಡ್ಸನ್ ಎಕ್ಸ್440 ವಿಶೇಷತೆ ಬಗ್ಗೆ ಹೇಳುವುದಾದರೆ, ಈ ಮೋಟಾರ್‌ಸೈಕಲ್ ರೂ.2.40 ಲಕ್ಷದಿಂದ ರೂ.2.80 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಮಸ್ಟರ್ಡ್ ಡೆನಿಮ್, ಡಾರ್ಕ್ ಸಿಲ್ವರ್, ಥಿಕ್ ರೆಡ್ & ಮ್ಯಾಟ್ ಬ್ಲ್ಯಾಕ್ ಎಂಬ ಆಕರ್ಷಕ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಲಭ್ಯವಿದೆ.

Kannada Famous Director Tharun Sudhir And Actor Sonal Couple Do Jolly Ride In Harley-Davidson X440 Bike

ಈ ಹಾರ್ಲೆ-ಡೇವಿಡ್ಸನ್ ಎಕ್ಸ್440 ಬೈಕ್, 440 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 27.37 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 38 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದ್ದು, 35 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಸುರಕ್ಷತೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ನ್ನು ಹೊಂದಿದೆ.

ಕಳೆದ ಏಪ್ರಿಲ್‌ನಲ್ಲಿ ಕಾಟೇರ ಸಿನಿಮಾದ ಯಶಸ್ಸಿನ ಬಳಿಕ ನಿರ್ದೇಶಕ ತರುಣ್ ಸುಧೀರ್ ಅವರು, ದುಬಾರಿ ಬೆಲೆಯ ಐಷಾರಾಮಿ ಬಿಎಂಡಬ್ಲ್ಯೂ ಎಕ್ಸ್1 (BMW X1) ಎಸ್‍ಯುವಿಯನ್ನು ಖರೀದಿಸಿದ್ದರು. ಈ ಕಾರನ್ನು ತಮ್ಮ ತಾಯಿ ಮಾಲತಿ ಸುಧೀರ್ (Malathi Sudheer) ಅವರೊಂದಿಗೆ ಶೋರೂಂಗೆ ತೆರಳಿ ವಿತರಣೆ ಪಡೆದಿದ್ದರು.

ನೂತನ ಬಿಎಂಡಬ್ಲ್ಯೂ ಎಕ್ಸ್1 ಎಸ್‍ಯುವಿ ಬಗ್ಗೆ ಹೇಳುವುದಾದರೆ, ಇದು ರೂ.49.90 ರಿಂದ ರೂ.52.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.5-ಲೀಟರ್ ಪೆಟ್ರೋಲ್ ಹಾಗೂ 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 5-ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.7-ಇಂಚು) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 14, 2024, 15:23 [IST]
English summary
Kannada famous director tharun sudhir actor sonal couple do jolly ride in harley davidson x440 bike
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+