ವಿದೇಶದಲ್ಲಿ ದುಬಾರಿ ಬೆಲೆಯ ಕಾರು ಖರೀದಿಸಿದ ‘ಮನೆದೇವ್ರು’ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ
ಮಧುಬಾಲ, ಮನೆದೇವ್ರು ಮುಂತಾದ ಸೀರಿಯಲ್‌ಗಳಲ್ಲಿ ಮಿಂಚಿ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ (Archana Lakshminarasimhaswamy) ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಟಿ ಅರ್ಚನಾ ಅವರು ವಿಘ್ನೇಶ್ ಶರ್ಮಾ ಎನ್ನುವವರನ್ನ ಮದುವೆಯ ಬಳಿಕ ಅಮೆರಿಕದ ಫ್ಲೋರಿಡಾದಲ್ಲಿ ಸೆಟಲ್ ಆಗಿದ್ದಾರೆ. ಈಗ ನಟಿಯ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ.
ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಮರ್ಸಿಡಿಸ್ ಬೆಂಝ್ ಜಿಎಲ್‌ಇ 450 (Mercedes Benz GLE 450) ಕಾರನ್ನು ಖರೀದಿಸಿದ್ದಾರೆ. ಇದು ಜನಪ್ರಿಯ ಮರ್ಸಿಡಿಸ್ ಮಾಡೆಲ್ ಆಗಿದೆ. ಇದು ಭಾರತದಲ್ಲಿ ಕೂಡ ಮಾರಾಟವಾಗುತ್ತಿರುವ ಮಾದರಿಯಾಗಿದೆ. ಈ ಮರ್ಸಿಡಿಸ್ ಬೆಂಝ್ ಜಿಎಲ್‌ಇ 450 ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.10 ಕೋಟಿಯಾಗಿದೆ. ಇದನ್ನು ಫ್ಲೋರಿಡಾದಲ್ಲಿ ಇನ್ನು ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಮಗಳು ಹುಟ್ಟಿದ ಬಳಿಕ ಹೊಸ ಕಾರನ್ನ ನಟಿ ಅರ್ಚನಾ ಅವರು ಹೊಸ ದುಬಾರಿ ಕಾರು ಖರೀದಿ ಮಾಡಿದ್ದಾರೆ. ಇವರ ಮಗಳ ಹೆಸರು ವಿಯಾರಾ. ಹೊಸ ಕಾರನ್ನು ವಿತರಣೆ ಪಡೆದ ಬಳಿಕ ಮಗಳನ್ನು ಹೊಸ ಕಾರಿನ ಮೇಲೆ ಕೂರಿಸಿ ಫೋಟೋಶೂಟ್ ಮಾಡಿದ್ದಾರೆ. ಇನ್ನು ಮಿಸ್ ಕರ್ನಾಟಕ 2013 ಕಿರೀಟ ಬಳಿಕ ಅರ್ಚನಾ ಅವರಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಧುಬಾಲ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು.
ಬಳಿಕ ಅವರು ಮನೆದೇವ್ರು ಧಾರಾವಾಹಿಯಲ್ಲಿ ನಟಿಸಿದ್ದು, ಇದು ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಕನ್ನಡ ಮಾತ್ರವಲ್ಲದೇ ತಮಿಳು ಕಿರುತೆರೆಯಲ್ಲೂ ಅರ್ಚನಾ ನಟಿಸಿದ್ದಾರೆ. ತಮಿಳಿನಲ್ಲಿ ಎರಡು ಸೀರಿಯಲ್ ಗಳಲ್ಲಿ ಇವರು ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲಿ ಚೇತನ್ ಜೊತೆಗೆ ನೂರೋಂದು ನೆನಪು ಸಿನಿಮಾದಲ್ಲೂ ಕೂಡ ಅರ್ಚನಾ ನಟಿಸಿದ್ದರು.

ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಖರೀದಿಸಿದ ಮರ್ಸಿಡಿಸ್ ಬೆಂಝ್ ಜಿಎಲ್‌ಇ 450 ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನ . ವಿನ್ಯಾಸದ ದೃಷ್ಟಿಯಿಂದ ಈ ಕಾರು, ಹೆಚ್ಚು ಅತ್ಯಾಧುನಿಕವಾಗಿದೆ. ಮುಂಭಾಗ ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿಂಗಲ್ ಸ್ಲ್ಯಾಟ್ ಗ್ರಿಲ್, ಮರುವಿನ್ಯಾಸಗೊಳಿಸಲಾದ ಅಲಾಯ್ ವೀಲ್ಸ್, ನವೀನವಾದ ಎಲ್‌ಇಡಿ ಟೈಲ್‌ಲೈಟ್ ಹಾಗೂ ಹಿಂಭಾಗದ ಹೊಸದಾದ ಬಂಪರ್, ಜೊತೆಗೆ ಲಾಂಗ್ ವೀಲ್ ಬೇಸ್ ಹೊಂದಿದೆ.
ಈ ಕಾರು, ಸಾಕಷ್ಟು ವಿನೂತನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನವೀನ ಸ್ಟೀರಿಂಗ್ ವೀಲ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಮರುವಿನ್ಯಾಸಗೊಳಿಸಲಾದ ಏರ್‌ಕಾನ್ ವೆಂಟ್ಸ್, ಫೋರ್ ಜೋನ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, 360 - ಡಿಗ್ರಿ ಸರೌಂಡ್ ಕ್ಯಾಮೆರಾ, ಟ್ರಾನ್ಸ್ಪರೆಂಟ್ ಬಾನೆಟ್ ಫಂಕ್ಷನ್, ಎಲೆಕ್ಟ್ರಿಕ್ ಸನ್ ಬ್ಲೈಂಡ್ಸ್, ಪನೋರಮಿಕ್ ಸನ್‌ರೂಫ್ ಅನ್ನು ಪಡೆದಿದೆ.

ಮರ್ಸಿಡಿಸ್ ಬೆಂಝ್ GLE ಏಕೈಕ ಪೆಟ್ರೋಲ್-ಚಾಲಿತ ಆವೃತ್ತಿಯು GLE 450 ಆಗಿದೆ, ಇದು 3.0-ಲೀಟರ್ ಇನ್‌ಲೈನ್-ಆರು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 362 bhp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯ ಮೂರು ಆವೃತ್ತಿಗಳು ಲಾಂಗ್-ವೀಲ್‌ಬೇಸ್ ಮಾಡೆಲ್‌ಗಳಾಗಿವೆ. ಈ ಎಸ್‍ಯುವಿಯು ಆಲ್-ವೀಲ್ ಡ್ರೈವ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಜೋಡೀಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








