ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

'ರಾಧಾ ರಮಣ' ಮತ್ತು 'ಪಾರು' ಸೀರಿಯಲ್‌ಗಳ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಮಾನ್ಸಿ ಜೋಶಿ ಹೊಸ ಕಾರನ್ನು ಖರೀದಿಸಿದ್ದಾರೆ. ನಟಿ ಮಾನ್ಸಿ ಜೋಶಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಇಷ್ಟದ ಕಾರು ಕಿಯಾ ಸೊನೆಟ್(Kia Sonet) ಕಂಪ್ಯಾಕ್ಟ್ ಎಸ್‍ಯುವಿ ಮಾದರಿಯನ್ನು ಖರೀದಿ ಮಾಡಿದ್ದಾರೆ.

ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

ತಮ್ಮ ಕುಟುಂಬದವರೊಂದಿಗೆ ತೆರಳಿ ಹೊಸ ಕಾರಿನ ವಿತರಣೆಯನ್ನು ಪಡೆಯುವ ಸಂತಸ ಕ್ಷಣದ ಫೋಟೋಗಳನ್ನು ಮಾನ್ಸಿ ಜೋಶಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನನ್ನ ಬರ್ತ್‌ಡೆಗೆ ನಾನು ಇದನ್ನು ಗಿಫ್ಟ್ ಮಾಡಿಕೊಂಡೆ, ನನ್ನ ಪರಿಶ್ರಮ ಮತ್ತು ಡೆಡಿಕೇಷನ್‌ನಿಂದ ಇದು ಸಾಧ್ಯವಾಗಿದೆ. ಅಪ್ಪ, ಅಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಈ ಚಿತ್ರಗಳ ಕೆಳಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

ನಟಿ ಮಾನ್ಸಿ ಜೋಶಿ.'ರಾಧಾ ರಮಣ' ಸೀರಿಯಲ್‌ನಲ್ಲಿ ಅನ್ವಿತಾ ಪಾತ್ರದಲ್ಲಿ ಮತ್ತು 'ಪಾರು' ಧಾರಾವಾಹಿಯಲ್ಲಿ ಅರಸನಕೋಟೆಯ ಅನುಷ್ಕಾ ಪಾತ್ರದಲ್ಲಿ ಸೀರಿಯಲ್ ಪ್ರಿಯರ ಮನ ಗೆದ್ದಿದ್ದಾರೆ. ಇನ್ನು ಇತ್ತೀಚೆಗೆ ನಟ ಶೈನ್ ಶೆಟ್ಟಿ ಬಿಎಂಡಬ್ಲ್ಯು ಕಾರು ಖರೀದಿಸಿದರೆ, ಕಿರುತೆರೆ ನಟಿ ಮೇಘಾ ಶೆಟ್ಟಿ ಎರಡು ಹೊಸ ಕಾರುಗಳನ್ನು ಖರೀದಿಸಿದ್ದರು.

ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

ಇನ್ನು ನಟಿ ಮಾನ್ಸಿ ಜೋಶಿ ಅವರು ಖರೀದಿಸಿದ ಕಿಯಾ ಸೊನೆಟ್ ಬಗ್ಗೆ ಹೇಳುವುದಾದರೆ, ಸೆಲ್ಟೋಸ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಸೊನೆಟ್ ಕಂಪ್ಯಾಕ್ಟ್ ಎಸ್‍ಯುವಿಯು ಜಿಟಿ-ಲೈನ್ ಮಾದರಿಯಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್ ಗಳಲ್ಲಿ ಲಭ್ಯವಿದೆ,

ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

ಈ ಸೊನೆಟ್ ಎಸ್‍ಯುವಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಡಿಆರ್‌ಎಲ್ಎಸ್, ಫಾಗ್ ಲ್ಯಾಂಪ್ಸ್, ಸಿಗ್ನೆಚೆರ್ ಟೈಗರ್ ನೊಸ್ ಫ್ರಂಟ್ ಗ್ರಿಲ್, 16-ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವೀಲ್ಹ್, ರಿಪ್ಲೆಕ್ಟರ್ ಸ್ಟ್ರೀಪ್‌ಗೆ ಹೊಂದಿಕೊಂಡಂತಿರುವ ಹಾರ್ಟ್ ಬಿಟ್‌ ವಿನ್ಯಾಸದ ಎಲ್ಇಡಿ ಟೈಲ್ ಲೈಟ್ಸ್, ಫ್ಲಕ್ಸ್ ಡಿಫ್ಯೂಸರ್ ಮತ್ತು ರಿಯರ್ ಬಂಪರ್ ನೀಡಲಾಗಿದೆ.

ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

ಒಳಭಾಗದಲ್ಲೂ ಕೂಡಾ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ನೀಡಲಾಗಿದೆ. ಇದರಲ್ಲಿ ಮುಂಭಾಗದಲ್ಲಿ ವೆಂಟಿಲೆಟೆಡ್ ಲೆದರ್ ಸೀಟುಗಳು, ತ್ರಿ ಸ್ಪೋಕ್ ಡಿ ಕಟ್ ಸ್ಟೀರಿಂಗ್ ವೀಲ್ಹ್ ಜೊತೆ ಮೌಂಟೆಡ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, 10.25-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ವೈರ್‌ಲೆಸ್ ಚಾರ್ಜರ್, ಸೌಂಡ್ ಮೋಡ್ ಲೈಟಿಂಗ್ ಮತ್ತು ಬಾಷ್ ಸಿಸ್ಟಂ ಹೊಂದಿರುವ 7-ಸ್ಪೀಕರ್ಸ್ ಅನ್ನು ಒಳಗೊಂಡಿದೆ.

ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

ಇನ್ನು ಕಿಯಾ ಮೋಟಾರ್ಸ್‌ ಅಭಿವೃದ್ದಿಪಡಿಸಿರುವ ಯುವಿಒ ಕಾರ್ ಕನೆಕ್ಟ್ ಟೆಕ್ನಾಲಜಿ ಸೌಲಭ್ಯವು ಗರಿಷ್ಠ ಫೀಚರ್ಸ್ ಹೊಂದಿದ್ದು, ಸುಮಾರು 57 ಫೀಚರ್ಸ್‌ಗಳನ್ನು ಯುವಿಒ ಆ್ಯಪ್ ಮೂಲಕವೇ ಕಾರಿನ ಪ್ರಮುಖ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ. ಇದರೊಂದಿಗೆ 1.2-ಲೀಟರ್ ಎಂಜಿನ್ 84 ಬಿಹೆಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

ಇನ್ನು ಟಾಪ್ ಸ್ಪೆಕ್ ಮಾದರಿಯಲ್ಲಿರುವ 1.0-ಲೀಟರ್ ಎಂಜಿನ್ 119 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಅಥವಾ 6-ಸ್ಪೀಡ್ ಐಎಂಟಿ ಅನ್ನು ಜೋಡಿಸಲಾಗಿದೆ.

ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

ಇನ್ನು ಈ ಕಾಂಪ್ಯಾಕ್ಟ್ ಎಸ್‍ಯುವಿಯ ಡೀಸೆಲ್ ಎಂಜಿನ್ ಬಗ್ಗೆ ಹೇಳುವುದಾದರೆ, 1.5-ಲೀಟರ್ ಡೀಸೆಲ್ ಡಬ್ಲ್ಯುಜಿಟಿ ಎಂಜಿನ್ 99 ಬಿಹೆಚ್‌ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ವಿಜಿಟಿ ಎಂಜಿನ್ 114 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

ಈ ಕಿಯಾ ಸೊನೆಟ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ, 6-ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಮ್ಯಾನೆಜ್‌ಮೆಂಟ್(ವಿಎಸ್ಎಂ), ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಬ್ರೇಕ್ ಅಸಿಸ್ಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಇಂಪ್ಯಾಕ್ಟ್ ಸೆನ್ಸಾರ್ ಆಟೋ ಡೋರ್ ಅನ್‌ಲಾಕ್, ಸ್ಪೀಡ್-ಸೆನ್ಸಿಂಗ್ ಆಟೋ ಡೋರ್ ಲಾಕ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೊಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಅನ್ನು ನೀಡಲಾಗಿದೆ.

ಹೊಸ Kia Sonet ಕಾರು ಖರೀದಿಸಿದ ಕಿರುತೆರೆ ನಟಿ ಮಾನ್ಸಿ ಜೋಶಿ

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಬಿಡುಗಡೆಯಾದ ಆರಂಭದಲ್ಲೇ ಅತಿ ಹೆಚ್ಚು ಪೈಪೋಟಿ ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿತು.. ಕಿಯಾ ಸೊನೆಟ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ. ಕಿಯಾ ಸೊನೆಟ್ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್ ಮತ್ತು ಟಾಟಾ ನೆಕ್ಸಾನ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Tuesday, September 7, 2021, 19:03 [IST]
English summary
Kannada serial actor mansi joshi buys new kia sonet details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+