Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಾತಿ ಸೂಚಕ ಸ್ಟಿಕ್ಕರ್ ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ಪೊಲೀಸರು
ತಮಿಳುನಾಡು ಪೊಲೀಸರು ಕಳೆದ ಕೆಲವು ದಿನಗಳಿಂದ ಕಾರುಗಳಲ್ಲಿ ಅಳವಡಿಸಿರುವ ಹೆಚ್ಚುವರಿ ಬಂಪರ್ ಗಳನ್ನು ತೆಗೆದು ಹಾಕುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೀಡಾಗಿದೆ.

ಕಾರುಗಳಲ್ಲಿ ಹೆಚ್ಚುವರಿಯಾಗಿ ಬಂಪರ್‌ಗಳನ್ನು ಅಳವಡಿಸುವುದರಿಂದ ಹಲವು ತೊಂದರೆಗಳು ಎದುರಾಗುತ್ತವೆ. ಹೆಚ್ಚುವರಿ ಬಂಪರ್‌ಗಳನ್ನು ಅಳವಡಿಸುವುದರಿಂದ ಉಂಟಾಗುವ ಮುಖ್ಯ ಅನಾನುಕೂಲವೆಂದರೆ ಅಪಘಾತ ಸಂಭವಿಸಿದಾಗ ಏರ್‌ಬ್ಯಾಗ್ ತೆರೆದುಕೊಳ್ಳುವುದಿಲ್ಲ. ಹೆಚ್ಚುವರಿ ಬಂಪರ್‌ಗಳಿಂದ ಪಾದಚಾರಿಗಳಿಗೂ ತೊಂದರೆಯಾಗುತ್ತದೆ.

ಈ ಕಾರಣಕ್ಕೆ ಕಾರುಗಳಲ್ಲಿ ಹೆಚ್ಚುವರಿಯಾಗಿ ಅಳವಡಿಸಿರುವ ಬಂಪರ್‌ಗಳನ್ನು ತೆಗೆದುಹಾಕುವಂತೆ ಪೊಲೀಸರು ವಾಹನ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಉಲ್ಲಂಘಿಸುವವರಿಗೆ ದಂಡ ವಿಧಿಸುವುದರ ಜೊತೆಗೆ ಬಂಪರ್‌ಗಳನ್ನು ಪೊಲೀಸರೇ ತೆಗೆದುಹಾಕುತ್ತಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ತಮಿಳುನಾಡು ಪೊಲೀಸರ ರೀತಿಯಲ್ಲಿಯೇ ಉತ್ತರ ಪ್ರದೇಶ ಪೊಲೀಸರು ಸಹ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ದ್ವಿಚಕ್ರ ವಾಹನ ಹಾಗೂ ಕಾರುಗಳ ಮಾಲೀಕರು ನಂಬರ್ ಪ್ಲೇಟ್ ಹಾಗೂ ವಿಂಡ್‌ಸ್ಕ್ರೀನ್‌ಗಳಲ್ಲಿ ಜಾತಿ ಸೂಚಕ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಳ್ಳುವುದು ಸಾಮಾನ್ಯವಾಗಿದೆ.

ದೇಶಾದ್ಯಂತ ಇದು ಕಂಡು ಬಂದರೂ ಉತ್ತರ ಪ್ರದೇಶದಲ್ಲಿ ತುಸು ಜಾಸ್ತಿಯೇ ಆಗಿದೆ. ಈ ಬಗ್ಗೆ ಮಹಾರಾಷ್ಟ್ರದ ಶಿಕ್ಷಕರೊಬ್ಬರು ಪ್ರಧಾನ ಮಂತ್ರಿಗಳ ಕಚೇರಿಗೆ ಪತ್ರ ಬರೆದು ಜಾತಿ ಸೂಚಕ ಸ್ಟಿಕ್ಕರ್ ಅಳವಡಿಕೆ ವ್ಯವಸ್ಥೆಗೆ ಕೊನೆ ಹಾಡಬೇಕು ಎಂದು ಮನವಿ ಮಾಡಿದ್ದರು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದೂರನ್ನು ಪರಿಶೀಲಿಸಿದ ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳು ವಾಹನಗಳ ಮೇಲೆ ಜಾತಿ ಸೂಚಕ ಸ್ಟಿಕ್ಕರ್ ಗಳನ್ನು ಪ್ರದರ್ಶಿಸುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದರು.

ಪ್ರಧಾನ ಮಂತ್ರಿ ಕಚೇರಿಯ ಸೂಚನೆಗಳನ್ನು ಅನುಸರಿಸಿ, ವಾಹನಗಳ ಮೇಲೆ ಈ ರೀತಿಯ ಸ್ಟಿಕ್ಕರ್‌ಗಳನ್ನು ಅಂಟಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸಾರಿಗೆ ಇಲಾಖೆಯು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾನ್ಪುರದ ವ್ಯಕ್ತಿಯೊಬ್ಬ ತನ್ನ ಎಸ್‌ಯುವಿಯಲ್ಲಿ ಜಾತಿ ಸೂಚಕ ಸ್ಟಿಕ್ಕರ್ ಹೊಂದಿದ್ದ ಕಾರಣಕ್ಕೆ ಪೊಲೀಸರು ಆತನಿಗೆ ದಂಡ ವಿಧಿಸಿದ್ದಾರೆ. ಅನಿಲ್ ಕುಮಾರ್ ಎಂಬಾತನಿಗೆ ಸೇರಿದ ಈ ಎಸ್‌ಯುವಿಯ ಹಿಂಭಾಗದ ವಿಂಡ್‌ಸ್ಕ್ರೀನ್‌ನಲ್ಲಿ ಜಾತಿ ಸೂಚಕ ಸ್ಟಿಕ್ಕರ್ ಅಂಟಿಸಲಾಗಿತ್ತು.

ಎಸ್‌ಯುವಿಯಲ್ಲಿ ತನ್ನ ಜಾತಿ ಗುರುತನ್ನು ಬಹಿರಂಗಪಡಿಸಿದ್ದಕ್ಕಾಗಿ ಪೊಲೀಸರು ಎಸ್‌ಯುವಿ ಮಾಲೀಕನಿಗೆ ರೂ.2,000ಗಳ ದಂಡ ವಿಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿಯೇ ನಡೆದ ಮತ್ತೊಂದು ಘಟನೆಯಲ್ಲಿ ಜಾತಿ ಆಧಾರಿತ ಸ್ಟಿಕ್ಕರ್‌ಗಳನ್ನು ತನ್ನ ಕಾರಿನ ಮೇಲೆ ಅಂಟಿಸಿದ್ದಕ್ಕಾಗಿ ಪೊಲೀಸರು ಸರ್ಕಾರಿ ಅಧಿಕಾರಿಯೊಬ್ಬರಿಗೆ ರೂ.5,000ಗಳ ದಂಡ ವಿಧಿಸಿದ್ದಾರೆ.