2 ಕೋಟಿ ಐಷಾರಾಮಿ ಕಾರು ಖರೀದಿಸಿದ್ದು ಇವರೇ? ನಟಿಯಷ್ಟೇ ಅಂದವಾಗಿದೆ ಕಾರು!

ಐಷಾರಾಮಿ ಲ್ಯಾಂಡ್‌ ರೋವರ್ ಬಗ್ಗೆ ಬಹುತೇಕ ಆಟೋ ಉತ್ಸಾಹಿಗಳಿಗೆ ತಿಳಿದೇ ಇದೆ. ಬ್ರಿಟಿಷ್ ಎಸ್‌ಯುವಿ ತಯಾರಕರಿಂದ ನಿರ್ಮಾಣಗೊಂಡ ಈ ಎಸ್‌ಯುವಿಗೆ ವಿಶ್ವದಾದ್ಯಂತ ಬೇಡಿಕೆ ಇದೆ. ಇಂತಹ ಕಾರನ್ನು ನಮ್ಮ ಭಾರತೀಯ ನಟಿಯೊಬ್ಬರು ಖರೀದಿಸಿ ಸುದ್ದಿಯಾಗಿದ್ದಾರೆ.

ನಟಿಗಿಂತ ಮೊದಲು ಈ ಕಾರಿನ ವಿಶೇಷತೆಗಳನ್ನು ತಿಳಿಯಲೇಬೇಕು, ಈ ಲ್ಯಾಂಡ್ ರೋವರ್ ಆಫ್ ರೋಡರ್ ಡಿಫೆಂಡರ್ ಅತ್ಯಂತ ಐಕಾನಿಕ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಈ ಬೃಹತ್ SUV ಅದರ ಆಫ್ ರೋಡ್ ಸಾಮರ್ಥ್ಯಗಳಿಂದಲೇ ಜನಪ್ರಿಯವಾಗಿದೆ. ಜೊತೆಗೆ ಈ ಕಾರನ್ನು ಖರೀದಿಸಿದರೆ ತಮ್ಮ ಸಂಪತ್ತಿಗೆ ತಕ್ಕ ಗುರ್ತಿಸುವಿಕೆ ಸಿಗುತ್ತದೆ ಎಂದು ಬಹುತೇಕ ಉದ್ಯಮಿಗಳು, ಸೆಲೆಬ್ರಿಟಿಗಳು ಭಾವಿಸುತ್ತಾರೆ.

kareena-kapoor-land-rover-defender-worth-1-2-crore

2023ರ ಡಿಫೆಂಡರ್: ಪ್ರಸ್ತುತ ಹೊಸ ಲ್ಯಾಂಡ್ ರೋವರ್ 90, 110, ಮತ್ತು 130 ಎಂಬ ಮೂರು ಪ್ರಮುಖ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇವುಗಳಲ್ಲಿ 130 ವೇರಿಯೆಂಟ್ ಬ್ರ್ಯಾಂಡ್‌ನಿಂದ ಹೊರಬಂದ ಹೊಸ ಬಿಡುಗಡೆಯಾಗಿದ್ದು, ಇದು 110 ಮಾದರಿಯಂತೆಯೇ 5 ಡೋರ್ ಆವೃತ್ತಿಯಾಗಿದೆ. ಇದು ಏಳು ಜನರು ಪ್ರಯಾಣಿಸುವ ಆಸನ ವಿನ್ಯಾಸವನ್ನು ಒಳಗೊಂಡಿದೆ. ಇವುಗಳ ಬೆಲೆಯು 93 ಲಕ್ಷದಿಂದ ಆರಂಭವಾಗಿ 2.30 ಕೋಟಿ ರೂ.ವರೆಗೆ ಹೋಗುತ್ತದೆ.

ಕಂಪನಿಯು ಡಿಫೆಂಡರ್ ಅನ್ನು ಡಿಫೆಂಡರ್ 90 ಎಂಬ ಮೂರು ಬಾಗಿಲಿನ ವೇರಿಯೆಂಟ್‌ನಲ್ಲೂ ನೀಡುತ್ತದೆ. ಇತ್ತೀಚೆಗೆ, ದಕ್ಷಿಣ ಭಾರತದ ಜನಪ್ರಿಯ ನಟರಲ್ಲಿ ಒಬ್ಬರಾದ ಫಹಾದ್ ಫಾಸಿಲ್ ಅವರು ಕೂಡ ಈ SUV ಯ ಬೃಹತ್ V8 ಎಂಜಿನ್‌ನೊಂದಿಗೆ ಖರೀದಿಸಿದ್ದರು. ಎಂಜಿನ್ ಆಯ್ಕೆಗಳ ಬಗ್ಗೆ ಮಾತನಾಡುವುದಾದ್ರೆ, ಲ್ಯಾಂಡ್ ರೋವರ್ ಪ್ರಸ್ತುತ ಭಾರತದಲ್ಲಿ ಈ ದೈತ್ಯ SUV ಗಾಗಿ ಮೂರು ಎಂಜಿನ್ ಆಯ್ಕೆಗಳನ್ನು ನೀಡುತ್ತಿದೆ.

kareena-kapoor-land-rover-defender-worth-1-2-crore

ಮೂರರಲ್ಲಿ ಎರಡು ಪೆಟ್ರೋಲ್, ಒಂದು ಡೀಸೆಲ್ ಎಂಜಿನ್ ಆಯ್ಕೆಯಿದೆ. ಟರ್ಬೊ ಪೆಟ್ರೋಲ್ ಎಂಜಿನ್‌ಗಳು 2.0-ಲೀಟರ್ 4-ಸಿಲಿಂಡರ್ ಘಟಕವನ್ನು ಒಳಗೊಂಡಿದ್ದು, 300 bhp ಪವರ್ ಮತ್ತು 400 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 3.0-ಲೀಟರ್ 6-ಸಿಲಿಂಡರ್ ಸಹ ಕೊಡುಗೆಯಲ್ಲಿದ್ದು, ಇದು ಗರಿಷ್ಠ 400 bhp ಮತ್ತು 550 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿರುವ ಟರ್ಬೊ ಡೀಸೆಲ್ ಎಂಜಿನ್ 3.0-ಲೀಟರ್ ಇನ್‌ಲೈನ್ 6-ಸಿಲಿಂಡರ್ ಯುನಿಟ್ ಆಗಿದ್ದು, ಇದು 300 bhp ಮತ್ತು 650 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಂತಹ ಅದ್ಬುತ ಕಾರನ್ನು ತೀರಾ ಇತ್ತೀಚೆಗೆ, ಪ್ರಸಿದ್ಧ ಬಾಲಿವುಡ್ ನಟಿ ಖರೀದಿಸಿದ್ದಾರೆ. ಅವರ ಹೊಸ ಡಿಫೆಂಡರ್‌ನ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

kareena-kapoor-land-rover-defender-worth-1-2-crore

ಕರೀನಾ ಕಪೂರ್ ಅವರ ಹೊಸ ಲ್ಯಾಂಡ್ ರೋವರ್ ಡಿಫೆಂಡರ್: ಕರೀನಾ ಕಪೂರ್ ಅವರ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ವೀಡಿಯೊವನ್ನು ಕಾರ್ಸ್ ಫಾರ್ ಯೂ ತಮ್ಮ YouTube ಚಾನಲ್‌ನಲ್ಲಿ ಹಂಚಿಕೊಂಡಿದೆ. ವೀಡಿಯೊದಲ್ಲಿ, ಕರೀನಾ ಕಪೂರ್ ಅವರ ಸಹೋದರಿ ಕರಿಷ್ಮಾ ಕಪೂರ್ ಅವರು ತಮ್ಮ ಬಿಳಿ ಬಣ್ಣದ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಸ್‌ಯುವಿನಲ್ಲಿ ಕರೀನಾ ಅವರ ಮನೆಗೆ ಪ್ರವೇಶಿಸುವುದನ್ನು ಕಾಣಬಹುದು.

ವೀಡಿಯೊದಲ್ಲಿ, ಕರಿಷ್ಮಾ ಮತ್ತು ಕರೀನಾ ಸಣ್ಣ ಸಂಭಾಷಣೆಯನ್ನು ನಡೆಸುತ್ತಿದ್ದು, ನಂತರ ಅವರ SUV ಗಳ ಕಡೆಗೆ ಚಲಿಸುತ್ತಿದ್ದಾರೆ. ಎರಡೂ ಲ್ಯಾಂಡ್ ರೋವರ್ ಎಸ್‌ಯುವಿಗಳು ಒಂದಕ್ಕೊಂದು ಪಕ್ಕದಲ್ಲಿ ನಿಂತಿದ್ದವು. ವೀಡಿಯೊದಿಂದ, ಕರೀನಾ ಕಪೂರ್ ಅವರ ಹೊಸ ಡಿಫೆಂಡರ್ ಬಿಳಿಯ ಬಣ್ಣದಲ್ಲಿರುವುದು ಗಮನಿಸಬಹುದು, ಇದು ಸೆಲೆಬ್ರಿಟಿಗಳಿಗೆ ಸಾಮಾನ್ಯ ಆಯ್ಕೆಯಾಗಿದೆ. ಸನ್ನಿ ಡಿಯೋಲ್ ಮತ್ತು ಸುನೀಲ್ ಶೆಟ್ಟಿ ಇಬ್ಬರೂ ಕೂಡ ತಮ್ಮದೇ ಆದ ಒಂದೇ ಬಣ್ಣದ ಡಿಫೆಂಡರ್‌ಗಳನ್ನು ಹೊಂದಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, October 19, 2023, 15:21 [IST]
English summary
Kareena kapoor land rover defender worth 1 2 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+