'ಕರಿಮಣಿ ಮಾಲೀಕ' ಖ್ಯಾತಿಯ ಕನಕ ಖರೀದಿಸಿದ್ರು ಹೊಸ ರಾಯಲ್ ಎನ್‌ಫೀಲ್ಡ್ ಬೈಕ್: ಮೈಲಾರಲಿಂಗ ಸ್ವಾಮಿ ಎದುರಿಗೆ ಪೂಜೆ

ಕೆಲ ತಿಂಗಳ ಹಿಂದೆ, ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ಉಪೇಂದ್ರ ಸಿನಿಮಾದ 'ಕರಿಮಣಿ ಮಾಲೀಕ ನೀನಲ್ಲ' ಎಂಬ ಹಾಡಿನ ಶಾರ್ಟ್ ವಿಡಿಯೊಗಳೇ ಬರುತ್ತಿದ್ದವು. ಅಷ್ಟರ ಮಟ್ಟಿಗೆ ಈ ಸಾಂಗ್ ಫೇಮಸ್ ಆಗಿತ್ತು. ಈ ಹಾಡು ಸಖತ್ ವೈರಲ್ ಆಗಲು ಉತ್ತರ ಕರ್ನಾಟಕದ ಪ್ರತಿಭೆ ಕನಕ (Kanaka) ಪ್ರಮುಖ ಕಾರಣಕರ್ತರಾಗಿದ್ದರು. ಅವರಿಗೂ ಇದೇ ಸಾಂಗ್ ಭಾರೀ ಖ್ಯಾತಿಯನ್ನು ತಂದುಕೊಟ್ಟಿತ್ತು. ಜೊತೆಗೆ ಸೊಷಿಯಲ್ ಮೀಡಿಯಾದಲ್ಲಿಯೂ ಫಾಲೋವರ್‌ಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿತ್ತು.

ಇತ್ತೀಚೆಗೆ ಕನಕ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 (Royal Enfield Himalayan 450) ಬೈಕ್‌ನ್ನು ಖರೀದಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕನಕ ತಮ್ಮ ತಾಯಿಯೊಂದಿಗೆ ನೂತನ ಮೋಟಾರ್‌ಸೈಕಲ್‌ನ್ನು ವಿತರಣೆ ಪಡೆದಿದ್ದಾರೆ. ಆ ಬಳಿಕ ಅಮ್ಮನನ್ನು ಕುರಿಸಿಕೊಂಡು ಮನೆಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Karimani Malika Neenalla Viral Song Fame Kanaka Buys Royal Enfield Himalayan 450 Bike Details

ನೂತನ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್ ತೆಗೆದುಕೊಂಡ ಹಿನ್ನೆಲೆ, ಕನಕ ಅವರಿಗೆ ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಮೋಟಾರ್‌ಸೈಕಲ್ ಖರೀದಿಸಿದ ಅವರು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಮೈಲಾರಕ್ಕೆ ತೆರಳಿ, ತಮ್ಮ ಮನೆದೇವರಾದ 'ಮೈಲಾರಲಿಂಗ ಸ್ವಾಮಿ'ಗೂ ವಿಶೇಷವಾದ ಪೂಜೆ ಸಲ್ಲಿಸಿದ್ದಾರೆ. ಆ ವಿಡಿಯೋವನ್ನು ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮೋಟಾರ್‌ಸೈಕಲ್ ವಿಶೇಷತೆ ಬಗ್ಗೆ ಹೇಳುವುದಾದರೆ, ಇದು ರೂ.2.85 ಲಕ್ಷದಿಂದ ರೂ.2.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಕಾಜಾ ಬ್ರೌನ್, ಸ್ಲೇಟ್ ಹಿಮಾಲಯನ್ ಸಾಲ್ಟ್ ಮತ್ತು ಸ್ಲೇಟ್ ಪೋಪೆ ಬ್ಲೂ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯನ್ನು ಪಡೆದಿದೆ.

ಈ ಬೈಕ್ 452 ಸಿಸಿ ಲಿಕ್ವಿಡ್ ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 40 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 40 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 30 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Karimani Malika Neenalla Viral Song Fame Kanaka Buys Royal Enfield Himalayan 450 Bike Details

ನೂತನ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮೋಟಾರ್‌ಸೈಕಲ್, ಕೇವಲ 6.91 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. 148 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಜೊತೆಗೆ ಆಕರ್ಷಕವಾದ ಹೈಡ್‌ಲೈಟ್, ಟಿಎಫ್‌ಟಿ ಇನ್ಸ್ಟ್ರುಮೆಂಟ್ ಸ್ಕ್ರೀನ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಹಿಮಾಲಯನ್ 450 ಬೈಕ್ ಮುಂಭಾಗ (ಫ್ರಂಟ್) 43 ಎಂಎಂ ಅಪ್‌ಸೈಡ್ ಡೌನ್ ಫೋರ್ಕ್ಸ್, ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಆಯ್ಕೆಯನ್ನು ಪಡೆದಿದೆ.

ಈ ಮೋಟಾರ್‌ಸೈಕಲ್ ಸೀಟ್ ಹೈಟ್ 825 ಎಂಎಂ ಹಾಗೂ ಗ್ರೌಂಡ್ ಕ್ಲಿಯರೆನ್ಸ್ 230 ಎಂಎಂ ಇದೆ. ಬರೋಬ್ಬರಿ 196 ತೂಕವಿದ್ದು, 17 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ. ನೂತನ ಹಿಮಾಲಯನ್ 450 ಬೈಕ್‌ಗೆ ಕೆಟಿಎಂ 390 ಅಡ್ವೆಂಚರ್, ಬಿಎಂಡಬ್ಲ್ಯೂ ಜಿ 310 ಜಿಎಸ್, ಯೆಜ್ಡಿ ಅಡ್ವೆಂಚರ್ ಹಾರ್ಲೆ-ಡೇವಿಡ್ಸನ್ ಎಕ್ಸ್ 440 ಮತ್ತು ಟ್ರಯಂಫ್ ಸ್ಪೀಡ್ 400 ಮೋಟಾರ್‌ಸೈಕಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 30, 2024, 11:57 [IST]
English summary
Karimani malika neenalla viral song fame kanaka buys royal enfield himalayan 450 bike details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+