ಆಕ್ಸಿಜನ್ ಅಗತ್ಯವಿರುವವರಿಗೆ ವರದಾನವಾಗಲಿವೆ ಈ ಆಕ್ಸಿಜನ್ ಬಸ್ಸುಗಳು

ದೇಶಾದ್ಯಂತ ಕರೋನಾ ವೈರಸ್ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದೆ. ಕರೋನಾ ವೈರಸ್ ಎರಡನೇ ಅಲೆಯಲ್ಲಿ ಜನರು ಉಸಿರಾಟದ ತೊಂದರೆಯನ್ನು ಎದುರಿಸುತ್ತಿದ್ದಾರೆ. ಪ್ರತಿ ನಿತ್ಯ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿರುವುದರಿಂದ ದೇಶದೆಲ್ಲೆಡೆ ಆಕ್ಸಿಜನ್ ಕೊರತೆ ಎದುರಾಗಿದೆ.

ಆಕ್ಸಿಜನ್ ಅಗತ್ಯವಿರುವವರಿಗೆ ವರದಾನವಾಗಲಿವೆ ಈ ಆಕ್ಸಿಜನ್ ಬಸ್ಸುಗಳು

ಸಕಾಲಕ್ಕೆ ಆಕ್ಸಿಜನ್ ದೊರಕದ ಕಾರಣ ಪ್ರತಿ ನಿತ್ಯ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಸಂಕಷ್ಟದಲ್ಲಿರುವ ಭಾರತಕ್ಕೆ ನೆರವಾಗಲು ಹಲವಾರು ದೇಶಗಳು ಮುಂದೆ ಬಂದಿವೆ. ಅಮೆರಿಕಾ ಸೇರಿದಂತೆ ಹಲವು ದೇಶಗಳು ಮೆಡಿಕಲ್ ಆಕ್ಸಿಜನ್ ಟ್ಯಾಂಕರ್‌ಗಳನ್ನು ಹಡಗು ಹಾಗೂ ವಿಮಾನಗಳ ಮೂಲಕ ರವಾನಿಸುತ್ತಿವೆ.

ಆಕ್ಸಿಜನ್ ಅಗತ್ಯವಿರುವವರಿಗೆ ವರದಾನವಾಗಲಿವೆ ಈ ಆಕ್ಸಿಜನ್ ಬಸ್ಸುಗಳು

ಕರ್ನಾಟಕದಲ್ಲಿಯೂ ಜನರು ಸಕಾಲಕ್ಕೆ ಆಕ್ಸಿಜನ್ ದೊರೆಯದೇ ಸಾವನ್ನಪ್ಪುತ್ತಿದ್ದಾರೆ. ಅಗತ್ಯವಿರುವವರಿಗೆ ನಿರಂತರವಾಗಿ ಆಕ್ಸಿಜನ್ ಪೂರೈಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಕ್ಸಿಜನ್ ಬಸ್'ಗೆ ಚಾಲನೆ ನೀಡಿದ್ದಾರೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಆಕ್ಸಿಜನ್ ಅಗತ್ಯವಿರುವವರಿಗೆ ವರದಾನವಾಗಲಿವೆ ಈ ಆಕ್ಸಿಜನ್ ಬಸ್ಸುಗಳು

ಸಾರ್ವಜನಿಕ ಬಸ್‌ಗಳನ್ನು ತಾತ್ಕಾಲಿಕವಾಗಿ ಆಕ್ಸಿಜನ್ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಪ್ರತಿ ಸೀಟುಗಳ ನಡುವಿನ ಸೀಟುಗಳನ್ನು ತೆಗೆದುಹಾಕಿ ಅವುಗಳ ಹಿಂಭಾಗದಲ್ಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಅಳವಡಿಸಲಾಗಿದೆ.

ಆಕ್ಸಿಜನ್ ಅಗತ್ಯವಿರುವವರಿಗೆ ವರದಾನವಾಗಲಿವೆ ಈ ಆಕ್ಸಿಜನ್ ಬಸ್ಸುಗಳು

ರೋಗಿಗಳು ಆರಾಮವಾಗಿ ಕುಳಿತುಕೊಳ್ಳುವಂತೆ ಸೀಟುಗಳನ್ನು ವಿನ್ಯಾಸಗೊಳಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಆಕ್ಸಿಜನ್ ಬಸ್ಸುಗಳಿಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಆಕ್ಸಿಜನ್ ಅಗತ್ಯವಿರುವವರಿಗೆ ವರದಾನವಾಗಲಿವೆ ಈ ಆಕ್ಸಿಜನ್ ಬಸ್ಸುಗಳು

ಆಕ್ಸಿಜನ್ ಸಿಲಿಂಡರ್ ಬಸ್‌ಗಳ ಬಿಡುಗಡೆಯ ನಂತರ ಮಾತನಾಡಿದ ಯಡಿಯೂರಪ್ಪನವರು, ಕರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ದೇಶದಲ್ಲಿ ಆಕ್ಸಿಜನ್'ಗೆ ಬೇಡಿಕೆ ಹೆಚ್ಚಾಗಿದೆ.

ಆಕ್ಸಿಜನ್ ಅಗತ್ಯವಿರುವವರಿಗೆ ವರದಾನವಾಗಲಿವೆ ಈ ಆಕ್ಸಿಜನ್ ಬಸ್ಸುಗಳು

ರಾಜ್ಯದಲ್ಲಿ ಆಕ್ಸಿಜನ್'ಗೆ ಕೊರತೆ ಉಂಟಾಗದಂತೆ ತಡೆಯಲು ಈ ಆಕ್ಸಿಜನ್ ಬಸ್'ಗಳನ್ನು ಪರಿಚಯಿಸಲಾಗಿದೆ. ಈ ಬಸ್ಸುಗಳು ಆಸ್ಪತ್ರೆಗಳ ಹೊರಗೆ ಆಕ್ಸಿಜನ್ಇಲ್ಲದೇ ಪರದಾಡುವವರಿಗೆ ನೆರವಾಗುತ್ತವೆ ಎಂದು ಹೇಳಿದರು.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಆಕ್ಸಿಜನ್ ಅಗತ್ಯವಿರುವವರಿಗೆ ವರದಾನವಾಗಲಿವೆ ಈ ಆಕ್ಸಿಜನ್ ಬಸ್ಸುಗಳು

ಸದ್ಯಕ್ಕೆ ಮೊದಲ ಹಂತದಲ್ಲಿ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಇಪ್ಪತ್ತು ಬಸ್ಸುಗಳನ್ನು ಪರಿಚಯಿಸಲಾಗುವುದು. ಅವುಗಳನ್ನು ಪ್ರಮುಖ ಆಸ್ಪತ್ರೆಗಳ ಬಳಿ ನಿಲ್ಲಿಸಲಾಗುತ್ತದೆ. ಪ್ರತಿ ಬಸ್‌ನಲ್ಲಿ 8 ಜನರಿಗೆ ಆಕ್ಸಿಜನ್ ಸೌಲಭ್ಯ ನೀಡಬಹುದು ಎಂದು ಯಡಿಯೂರಪ್ಪನವರು ತಮ್ಮ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ.

ಆಕ್ಸಿಜನ್ ಅಗತ್ಯವಿರುವವರಿಗೆ ವರದಾನವಾಗಲಿವೆ ಈ ಆಕ್ಸಿಜನ್ ಬಸ್ಸುಗಳು

ಕರೋನಾ ಸೋಂಕಿತರಿಗೆ ಆಕ್ಸಿಜನ್ ಅತ್ಯಗತ್ಯವಾಗಿದೆ. ಆದರೆ ಭಾರತದಲ್ಲಿ ಆಕ್ಸಿಜನ್ ಉತ್ಪಾದನೆಯು ಬೇಡಿಕೆಗಿಂತ ತೀರಾ ಕಡಿಮೆಯಿದೆ. ಇದರಿಂದಾಗಿ ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಆಕ್ಸಿಜನ್ ಜೊತೆಗೆ ವೆಂಟಿಲೇಟರ್ ಹಾಗೂ ಬೆಡ್'ಗಳ ಕೊರತೆ ಎದುರಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಆಕ್ಸಿಜನ್ ಅಗತ್ಯವಿರುವವರಿಗೆ ವರದಾನವಾಗಲಿವೆ ಈ ಆಕ್ಸಿಜನ್ ಬಸ್ಸುಗಳು

ಆಕ್ಸಿಜನ್ ಕೊರತೆಯನ್ನು ನೀಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಶ್ರಮಿಸುತ್ತಿವೆ. ಆದರೂ ಸಹ ದೇಶಾದ್ಯಂತ ಆಕ್ಸಿಜನ್ ಕೊರತೆಯಿಂದ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಜನರ ಜೀವ ಉಳಿಸಲು ಆಕ್ಸಿಜನ್ ಬಸ್ಸುಗಳನ್ನು ಪರಿಚಯಿಸಲಾಗಿದೆ.

Most Read Articles

Kannada
English summary
Karnataka CM flags off oxygen buses in Bengaluru. Read in Kannada.
Story first published: Thursday, May 13, 2021, 14:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X