ಆನಂದ್ ಮಹೀಂದ್ರಾ ಹೃದಯ ಗೆದ್ದ ಕರ್ನಾಟಕ ದಂಪತಿ.. 2 ಲಕ್ಷ ವೆಚ್ಚದಲ್ಲಿ ಇನ್ನೋವಾ ಕಾರು ಮನೆಯಾಗಿ ಪರಿವರ್ತನೆ!
ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ (Anand Mahindra), ಪ್ರಖ್ಯಾತ ಉದ್ಯಮಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಇರುತ್ತಾರೆ. ತಮಗೆ ಆಸಕ್ತಿ ಎನಿಸುವ ಒಂದಷ್ಟು ಪೋಸ್ಟ್‌ಗಳನ್ನು 'ಎಕ್ಸ್' ಖಾತೆಯಲ್ಲಿಯೂ ಹಂಚಿಕೊಳ್ಳುತ್ತಿರುತ್ತಾರೆ. ಅವುಗಳು ಸಖತ್ ವೈರಲ್ ಕೂಡ ಆಗುತ್ತಿರುತ್ತವೆ. ಇತ್ತಿಚೆಗೆ, ಕರ್ನಾಟಕದ ದಂಪತಿಗಳಿಬ್ಬರು 'ಟೊಯೊಟಾ ಇನ್ನೋವಾ' ಎಂಪಿವಿಯನ್ನು ಮನೆಯಾಗಿ (ಮೊಬೈಲ್ ಹೋಂ) ಬದಲಾಯಿಸಿರುವ ಪ್ರಯತ್ನವನ್ನು ಅವರು ಶ್ಲಾಘಿಸಿದ್ದಾರೆ.
ಈ ಸಂಬಂಧ ವಿಡಿಯೋವೊಂದನ್ನು ಆನಂದ್ ಮಹೀಂದ್ರಾ ತಮ್ಮ 'ಎಕ್ಸ್' ಖಾತೆಯಲ್ಲಿಯೂ ಪೋಸ್ಟ್ ಮಾಡಿದ್ದಾರೆ. ಅದಕ್ಕೆ 'ಹೌದು.. ಇಂತಹ ಹೊಸತನಗಳಿಗೆ ನಾನು ಆಕರ್ಷಿತನಾಗುತ್ತೇನೆ ಎಂಬುದು ಪೂರ್ಣ ಸತ್ಯ. ಆದರೆ, ಅವರು ಮಹೀಂದ್ರಾ ಕಾರನ್ನು ಬಳಕೆ ಮಾಡಿದ್ದರೆ, ನನ್ನನ್ನು ಇನ್ನಷ್ಟು ಸೆಳೆಯುತ್ತಿತ್ತು ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು' ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಕರ್ನಾಟಕದ ದಂಪತಿಗಳು ನೇಪಾಳಕ್ಕೆ ರಸ್ತೆ ಮೂಲಕ ಪ್ರವಾಸಕ್ಕೆ ಹೋಗಲು ಬಯಸಿದ್ದಾರೆ. ಸಾಧ್ಯವಾದಷ್ಟು ದಿನ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿನ ನಡೆಯುತ್ತಿರುವ 'ಮಹಾಕುಂಭ'ದಲ್ಲಿ ವಾಸ್ತವ್ಯ ಹೂಡಲು ಆಲೋಚಿಸಿದ್ದಾರೆ. ಅದಕ್ಕಾಗಿ ತಮ್ಮ ಟೊಯೊಟಾ ಇನ್ನೋವಾ (Toyota Innova) ಎಂಪಿವಿಯನ್ನು ರೂ.2 ಲಕ್ಷ ವೆಚ್ಚದಲ್ಲಿ ಮನೆಯಾಗಿ ಪರಿವರ್ತಿಸಿದ್ದಾರೆ.
ಟೊಯೊಟಾ ಇನ್ನೋವಾ ಕಾರಿನ ಹಿಂಭಾಗವನ್ನು ಅಡುಗೆ ಮನೆಯಂತೆ ಸಿದ್ಧಪಡಿಸಲಾಗಿದೆ. 'ಗ್ಯಾಸ್ ಸ್ಟವ್'ನ್ನು ಅಳವಡಿಕೆ ಮಾಡಲಾಗಿದೆ. ಮೇಲ್ಭಾಗದಲ್ಲಿ ಟೆಂಟ್‌ನ್ನು ಹಾಕಲಾಗಿದ್ದು, ಅದನ್ನು 'ಬೆಡ್ ರೂಂ' ರೀತಿಯನ್ನು ಬಳಕೆ ಮಾಡಬಹುದು. ನಿತ್ಯವಸರದ ವಿದ್ಯುತ್ ಉಪಯೋಗಕ್ಕಾಗಿ ಕಾರಿನ ಮುಂಭಾಗದಲ್ಲಿ ಸೋಲಾರ್ ಪ್ಯಾನಲ್ ಅನ್ನು ಇಡಲಾಗಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ 'ಟೊಯೊಟಾ ಇನ್ನೋವಾ' ಎಂಪಿವಿ ಎರಡು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಇದರ ಇನ್ನೋವಾ ಹೈಕ್ರಾಸ್ (Innova Hycross) ಮಾಡೆಲ್, ರೂ.19.94 ಲಕ್ಷದಿಂದ ರೂ.31.34 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿದೆ. 2-ಲೀ. ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಹಾಗೂ 2-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 16.13 ರಿಂದ 23.24 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ನೂತನ ಟೊಯೊಟಾ ಇನ್ನೋವಾ ಎಂಪಿವಿ 7/ 8 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta) ಮಾಡೆಲ್ ಬಗ್ಗೆ ಹೇಳುವುದಾದರೆ, ಇದು ರೂ.19.99 ಲಕ್ಷದಿಂದ ರೂ.26.55 ಲಕ್ಷ ಎಕ್ಸ್- ಶೋರೂಂ ಬೆಲೆಯನ್ನು ಹೊಂದಿದೆ. 2.4-ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಸರಿ ಸುಮಾರು 8 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಈ ಎಂಪಿವಿ 7/ 8 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ರೇರ್-ಎಸಿ ವೆಂಟ್‌ಗಳು ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಫ್ರಂಟ್ & ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications