ಎಣ್ಣೆ ಮತ್ತಿನಲ್ಲಿ ಸ್ನ್ಯಾಕ್ಸ್ ಬದಲು ಸ್ನೇಕ್ ತಿಂದ ಭೂಪ..!
ಕರೋನಾ ವೈರಸ್ ಹರಡುವುದನ್ನು ತಡೆಯಲು ಕಳೆದ 40 ದಿನಗಳಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಸದ್ಯಕ್ಕೆ ಮೂರನೇ ಹಂತದ ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್‌ಗೆ ವಿನಾಯಿತಿ ನೀಡಲಾಗಿದೆ.

ಆದರೆ ಜನರು ಬೇಕಾಬಿಟ್ಟಿಯಾಗಿ ಸಂಚರಿಸುವುದನ್ನು ನಿಷೇಧಿಸಲಾಗಿದೆ. ಈ ವಿನಾಯಿತಿಯಿಂದಾಗಿ ಸರ್ಕಾರದ ಕೆಲವು ಇಲಾಖೆಗಳು ಹಲವು ಷರತ್ತುಗಳೊಂದಿಗೆ ಕಾರ್ಯನಿರ್ವಹಿಸಬಹುದಾಗಿದೆ. ಕೆಲವು ರಾಜ್ಯಗಳಲ್ಲಿ ರಾಜ್ಯಗಳ ಬೊಕ್ಕಸಕ್ಕೆ ಆದಾಯ ತರುವ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

40 ದಿನಗಳಿಗಿಂತ ಹೆಚ್ಚು ಕಾಲದಿಂದ ಮದ್ಯ ಸೇವನೆಯಿಂದ ದೂರವಿದ್ದ ಎಣ್ಣೆ ಪ್ರಿಯರು ಮದ್ಯದಂಗಡಿಗಳನ್ನು ತೆರೆಯುವಂತೆ ಸರ್ಕಾರದ ಮೇಲೆ ಒತ್ತಡ ಏರುತ್ತಿದ್ದರು. ಕರ್ನಾಟಕದಲ್ಲಿ ಮದ್ಯ ಮಾರಾಟದಿಂದ ಮೊದಲ ದಿನವೇ ಹಲವಾರು ಕೋಟಿ ರೂಪಾಯಿಗಳ ಆದಾಯ ಲಭ್ಯವಾಗಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಮೊದಲ ದಿನ ಮಾರಾಟವಾಗದೆ ಉಳಿದಿದ್ದ ಹಳೆ ಸ್ಟಾಕ್‌ಗಳನ್ನು ಮಾರಾಟ ಮಾಡಲಾಗಿದೆ. ತಮಿಳುನಾಡು ಸರ್ಕಾರವು ಸಹ ಶೀಘ್ರದಲ್ಲೇ ಮದ್ಯ ಮಾರಾಟ ಆರಂಭಿಸಲಾಗುವುದೆಂದು ತಿಳಿಸಿದೆ.

ಮೇ 7ರಿಂದ ಚೆನ್ನೈ ಹೊರತುಪಡಿಸಿ ತಮಿಳುನಾಡಿನ ಇತರ ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ನಮ್ಮ ಕರ್ನಾಟಕದಲ್ಲಿ ಈಗಾಗಲೇ ಮದ್ಯ ಮಾರಾಟವನ್ನು ಆರಂಭಿಸಲಾಗಿದೆ. ಇದರಿಂದಾಗಿ 40 ದಿನಗಳಿಂದ ಕಾಯುತ್ತಿದ್ದ ಎಣ್ಣೆ ಪ್ರಿಯರು ಮುಗಿಬಿದ್ದು ಮದ್ಯ ಖರೀದಿಸುತ್ತಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಎಲ್ಲಾ ಘಟನೆಗಳ ನಡುವೆ ವಿಪರೀತವಾಗಿ ಕುಡಿದು ಟೈಟ್ ಆಗಿದ್ದವನೊಬ್ಬ ಹಾವನ್ನೇ ಕಚ್ಚಿ ತಿಂದಿದ್ದಾನೆ. ಈ ಘಟನೆ ಕೋಲಾರದಲ್ಲಿ ನಡೆದಿದೆ. ಹಾವನ್ನು ಕಚ್ಚಿ ತಿಂದ ಭೂಪನನ್ನು ಕೋಲಾರದ ನಿವಾಸಿ ಕುಮಾರ್ ಎಂದು ಗುರುತಿಸಲಾಗಿದೆ.

ಕುಮಾರ್ ಕೂಲಿ ಕಾರ್ಮಿಕನಾಗಿದ್ದು, ಮೂವರು ಮಕ್ಕಳಿದ್ದಾರೆ. ಮಂಗಳವಾರ ತನ್ನ ಬೈಕ್‌ನಲ್ಲಿ ಮನೆಗೆ ಮರಳುವಾಗ ರಸ್ತೆಯಲ್ಲಿ ಹಾವು ಎದುರಾಗಿದೆ. ಅವನು ಎಷ್ಟು ಟೈಟ್ ಆಗಿದ್ದನೆಂದರೆ ಹಾವು ತನ್ನ ದಾರಿಗೆ ಅಡ್ಡ ಬರುತ್ತಿದೆ ಎಂದು ಭಾವಿಸಿ ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹಾವನ್ನು ಕೆಲ ಸಮಯದವರೆಗೆ ದಿಟ್ಟಿಸಿ ನೋಡಿ, ಇದ್ದಕ್ಕಿದ್ದಂತೆ ಹಾವನ್ನು ಕಚ್ಚಲು ಶುರು ಮಾಡಿದ್ದಾನೆ. ನನ್ನ ದಾರಿಗೆ ಅಡ್ಡ ಬರುತ್ತೀಯಾ ಎಂದು ಹಾವನ್ನೇ ಕೇಳಿದ್ದಾನೆ. ಈ ಘಟನೆಯು ಅಲ್ಲಿದ್ದ ಜನರನ್ನು ಒಂದು ಕ್ಷಣ ಗಾಬರಿ ಬೀಳುವಂತೆ ಮಾಡಿದೆ.

ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಕುಮಾರ್ ಅದನ್ನು ಹಿಸುಕಿ ನಂತರ ಅದರ ಮೇಲೆ ಉಗಿದಿದ್ದಾನೆ. ತಾನು ಕುಳಿತಿದ್ದ ಹೀರೋ ಹೋಂಡಾ ಫ್ಯಾಶನ್ ಪ್ಲಸ್ ಬೈಕ್‌ನ ಆಕ್ಸಿಲರೇಟರ್ ಹೆಚ್ಚಿಸಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾನೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸ್ಥಳದಲ್ಲಿದ್ದವರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು 30 ನಿಮಿಷದ ನಂತರ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಹಾವು ಸತ್ತು ಹೋಗಿತ್ತು. ವಿಪರೀತವಾಗಿ ಕುಡಿದ್ದಿದ್ದ ಕುಮಾರ್ ಹಾವನ್ನೇ ಸ್ನ್ಯಾಕ್ಸ್ ಎಂದು ಭಾವಿಸಿ ಕಚ್ಚಿದ್ದಾನೆ.

ಈ ಬಗ್ಗೆ ಮಾತನಾಡಿರುವ ಕುಮಾರ್, ನಾನು ಬೆಳಿಗ್ಗೆ ಕೆಲಸಕ್ಕೆ ಹೋಗುವಾಗಲೂ ಹಾವು ನನಗೆ ಅಡ್ಡ ಬಂದಿತ್ತು. ಸಂಜೆ ವಾಪಸ್ ಆಗುವಾಗಲೂ ಅಡ್ಡ ಬಂದಿತ್ತು. ಈ ಕಾರಣಕ್ಕೆ ಹಾವನ್ನು ಕೊಂದೆ ಎಂದು ಹೇಳಿದ್ದಾನೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕುಮಾರ್‌ನ ಈ ಕೃತ್ಯದಿಂದಾಗಿ ಅಲ್ಲಿದ್ದ ಜನರು ಭಯಗೊಂಡಿದ್ದಂತು ನಿಜ. ದೀರ್ಘಕಾಲದವರೆಗೆ ಮದ್ಯದಂಗಡಿಗಳನ್ನು ತೆರೆದ ಕಾರಣ ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆದಿಲ್ಲವೆಂದು ಹೇಳಲಾಗಿದೆ.


Click it and Unblock the Notifications