ಕರ್ನಾಟಕದ ಮೊದಲ ವಂದೇ ಭಾರತ್ ಸ್ಲೀಪರ್ ಈ ಮಾರ್ಗದಲ್ಲಿ ಸಂಚಾರ: ಆಧುನಿಕ ವಿಮಾನವನ್ನು ನಾಚಿಸುವ ಸೌಕರ್ಯ!

ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express), ಸೆಮಿ-ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಈ ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡಲು ಅಸಾಧ್ಯ. ಈ ಹಿನ್ನೆಲೆ ಕೆಲವೇ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲು ಹಳಿಗೆ ಬರಲಿದೆ. ಇದು ವಿಮಾನದಂತಹ ಸೌಕರ್ಯವನ್ನು ಪ್ರಯಾಣಿಕರಿಗೆ ಒದಗಿಸಲಿದೆ. ಅತಿ ಶೀಘ್ರದಲ್ಲಿ ಕರ್ನಾಟಕದ ಈ ಮಾರ್ಗದಲ್ಲಿ ಕೂಡ 'ವಂದೇ ಸ್ಲೀಪರ್' ರೈಲು ಸಂಚಾರ ನಡೆಸಲಿದೆ.

ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ (V.Somanna) ಅವರು, 'ಕರ್ನಾಟಕವು ಶೀಘ್ರದಲ್ಲಿಯೇ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಪಡೆಯಲಿದೆ. ಈ ರೈಲು ಮುಂದಿನ ತಿಂಗಳಿಂದ ಕಾರ್ಯಾಚರಣೆ ಆರಂಭಿಸಲಿದ್ದು, ಬೆಳಗಾವಿ (Belagavi) ಹಾಗೂ ಬೆಂಗಳೂರು (Bengaluru) ನಡುವೆ ಸಂಚರಿಲಿದೆ' ಎಂದು ಹೇಳಿದ್ದಾರೆ.

Karnataka Get Next Month First Vande Bharat Sleeper This Route Details

ಕಿತ್ತೂರು ಮೂಲಕ ಬೆಳಗಾವಿ ಮತ್ತು ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆ ಬಗ್ಗೆಯೂ ಪ್ರತಿಕಿಯೆ ನೀಡಿದ ಸಚಿವರು, 'ಇದು ದಿವಂಗತ ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಕನಸಿನ ಯೋಜನೆಯಾಗಿತ್ತು. ಆದಷ್ಟು ಬೇಗ ಈ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಉತ್ಪಾದನಾ ಘಟಕದಲ್ಲಿ ತಯಾರಿಸಲಾದ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ವಿ.ಸೋಮಣ್ಣ ಅವರು ಅನಾವರಣಗೊಳಿಸಿದ್ದರು. ಸಾಮಾನ್ಯ ಸ್ಲೀಪರ್ ರೈಲಿಗೆ ಹೋಲಿಕೆ ಮಾಡಿದರೆ, ಈ ರೈಲು ಹತ್ತು ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ.

Karnataka Get Next Month First Vande Bharat Sleeper This Route Details

ಈ ನೂತನ ವಂದೇ ಭಾರತ್ ​ಸ್ಲೀಪರ್‌ ಗಂಟೆಗೆ 160 ಕಿ.ಮೀ ಗರಿಷ್ಠ ವೇಗದಲ್ಲಿ ಕಾರ್ಯಾಚರಣೆ ನಡೆಸಲಿದೆ. 16 ಕೋಚ್‌ಗಳನ್ನು ಹೊಂದಿದ್ದು, ರಾತ್ರಿಯ ವೇಳೆಯಲ್ಲಿ ಪ್ರಯಾಣಿಕರು ಆರಾಮದಾಯಕವಾಗಿ ನಿದ್ದೆ ಮಾಡುತ್ತಾ ಪ್ರಯಾಣಿಸಬಹುದು. ಹೊಸ ವಂದೇ ಭಾರತ್ ​ಸ್ಲೀಪರ್‌ 800 ರಿಂದ 1,200 ಕಿಲೋಮೀಟರ್‌ವರೆಗಿನ ಮಾರ್ಗದಲ್ಲಿ ಓಡಾಟ ನಡೆಸಲಿದೆ.

ವಂದೇ ಭಾರತ್ ​ಸ್ಲೀಪರ್‌ ರೈಲಿನಲ್ಲಿ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ರೈಲು ಜಿಎಫ್‌ಆರ್‌ಪಿ ಪ್ಯಾನೆಲ್‌ಗಳು, ಸ್ಪೆಷಲ್ ಬರ್ತ್‌ಗಳು, ಯುಎಸ್‌ಬಿ ಚಾರ್ಜಿಂಗ್ ಸಾಕೆಟ್, ರೀಡಿಂಗ್ ಲೈಟ್ ಮತ್ತು ಬೃಹತ್ ಗಾತ್ರದ ಲಗೇಜ್ ರೂಂ ಮತ್ತು ಆಟೋಮೆಟಿಕ್ ಡೋರ್‌ಗಳು ಸೇರಿದಂತೆ ವಿವಿಧ ಸೌಕರ್ಯಗಳನ್ನು ಒಳಗೊಂಡಿದೆ.

Karnataka Get Next Month First Vande Bharat Sleeper This Route Details

ಸೆಪ್ಟೆಂಬರ್ 16 ರಂದು ದೇಶದ ಮೊದಲ ವಂದೇ ಭಾರತ್ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅವರು ಚಾಲನೆ ನೀಡಿದ್ದರು. ಈ ರೈಲಿಗೆ 'ನಮೋ ಭಾರತ್ ರಾಪಿಡ್ ರೈಲು' ಎಂದು ಕೂಡ ಮರುನಾಮಕರಣ ಮಾಡಲಾಗಿದೆ. ಇದು ಗುಜರಾತ್‌ನ ಭುಜ್ ಹಾಗೂ ಅಹಮದಾಬಾದ್ ಮಧ್ಯೆ ಓಡಾಟ ನಡೆಸುತ್ತಿದೆ. 360 ಕಿ.ಮೀ ಅಂತರವನ್ನು ಕ್ರಮಿಸಲು 6 ಗಂಟೆ ತೆಗೆದುಕೊಳ್ಳುತ್ತದೆ.

ಈ ನಮೋ ಭಾರತ್ ರಾಪಿಡ್ ರೈಲಿನಲ್ಲಿ 1,150 ಜನರು ಕುಳಿತುಕೊಂಡು ಪ್ರಯಾಣಿಸಬಹುದು. 2,058 ಮಂದಿ ನಿಂತುಕೊಂಡು ಓಡಾಟ ನಡೆಸಬಹುದು. 12 ಎಸಿ ಕೋಚ್‌ಗಳನ್ನು ಒಳಗೊಂಡಿದ್ದು, ಆಟೋಮೆಟಿಕ್ ಡೋರ್‌ಗಳು, ಎಲ್‌ಇಡಿ ಲೈಟಿಂಗ್, ಸಿಸಿಟಿವಿ, ಫೋನ್ ಚಾರ್ಜಿಂಗ್ ಸಾಕೆಟ್, ಆಟೋಮೆಟಿಕ್ ಫೈರ್ ಡಿಟೆಕ್ಷನ್ ಸಿಸ್ಟಮ್ ಮತ್ತು ಪನೊರೊಮಿಕ್ ವಿಂಡೋಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, November 19, 2024, 14:29 [IST]
English summary
Karnataka get next month first vande bharat sleeper this route details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+