ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ಅಪಘಾತವಾಗುವುದನ್ನು ಯಾರೂ ಬಯಸುವುದಿಲ್ಲ. ಆದರೆ ನಿರ್ಲಕ್ಷಗಳಿಂದ ಸಂಭವಿಸುವ ಅಪಘಾತಗಳಿಂದ ಆಗುವ ಪರಿಣಾಮ ಕೆಲವು ವೇಳೆ ಭೀಕರವಾಗಿರುತ್ತದೆ. ಅಪಘಾತಗಳು ಕೇವಲ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರವಲ್ಲದೆ ಸಾರಿಗೆ ಉದ್ಯಮಕ್ಕೂ ದೊಡ್ಡ ಹೊಡೆತ ನೀಡುತ್ತವೆ.

ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ಈ ಕಾರಣಕ್ಕಾಗಿಯೇ ಸರ್ಕಾರಗಳು ಅಪಘಾತಗಳನ್ನು ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗದೆ ಹೆಚ್ಚಾಗುತ್ತಲೇ ಇವೆ. ಜನರನ್ನು ಅಪಘಾತಗಳಿಂದ ರಕ್ಷಿಸಲು ಹಾಗೂ ಅಪಘಾತಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕರ್ನಾಟಕ ಸರ್ಕಾರವು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ.

ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ಅಪಘಾತಗಳನ್ನು ಕಡಿಮೆ ಮಾಡಲು ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿಯೂ ಹೈಟೆಕ್ ಸುರಕ್ಷತಾ ಸಾಧನಗಳನ್ನು ಅಳವಡಿಸುವುದಾಗಿ ಕರ್ನಾಟಕ ಸರ್ಕಾರವು ಘೋಷಿಸಿದೆ. ಈ ಬಗ್ಗೆ ನ್ಯೂಸ್ 18 ವರದಿ ಮಾಡಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ಲಾಕ್ ಡೌನ್ ಬಳಿಕ ಜನ ಜೀವನವು ಸಹಜ ಸ್ಥಿತಿಯತ್ತ ಮರಳುತ್ತಿದೆ. ಸಾರ್ವಜನಿಕ ಸಾರಿಗೆ ಕ್ಷೇತ್ರವು ಸಹ ನಿಧಾನವಾಗಿ ಸಹಜ ಸ್ಥಿತಿಗೆ ಮರಳಲು ಆರಂಭಿಸಿದೆ. ಸಂಚಾರ ದಟ್ಟಣೆಯು ಹೆಚ್ಚಾಗುತ್ತಿದ್ದು, ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ.

ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ಲಾಕ್ ಡೌನ್ ಅವಧಿಯಲ್ಲಿ ಕಡಿಮೆಯಾಗಿದ್ದ ಅಪಘಾತಗಳ ಸಂಖ್ಯೆ ಈಗ ಹೆಚ್ಚುತ್ತಿದೆ. ಅಪಘಾತಗಳನ್ನು ನಿಯಂತ್ರಿಸಲು ಹಲವು ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ತನ್ನ ಸಾರಿಗೆ ಬಸ್‌ಗಳಲ್ಲಿ ಹೈಟೆಕ್ ಸುರಕ್ಷತಾ ಸಾಧನಗಳನ್ನು ಅಳವಡಿಸಲಿದೆ. ಸಾರಿಗೆ ಇಲಾಖೆಯ ಮೇಲ್ವಿಚಾರಣೆಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ಹೆಚ್ಚಿನ ಸೆನ್ಸಾರ್ ಗಳನ್ನು ಹೊಂದಿರುವ ಈ ಹೊಸ ಭದ್ರತಾ ಸಾಧನವು ಬೀಪ್ ಸೌಂಡ್ ಮಾಡಿ ಕೆಂಪು ದೀಪಗಳೊಂದಿಗೆ ಅಲಾರಂ ಮಾಡುತ್ತದೆ ಎಂದು ಸವದಿ ಹೇಳಿದ್ದಾರೆ. ಕೆಲಸದ ವೇಳೆಯಲ್ಲಿ ಚಾಲಕ ನಿದ್ರೆಯಲ್ಲಿದ್ದರೂ ಸಾಧನವು ಅಲಾರಂ ಮಾಡುತ್ತದೆ. ಈ ಸಾಧನವು ಎಚ್ಚರಿಕೆ ನೀಡುವುದು ಮಾತ್ರವಲ್ಲದೆ ವಾಹನವನ್ನು ನಿಧಾನಗೊಳಿಸುತ್ತದೆ. ಜೊತೆಗೆ ಎಮರ್ಜೆನ್ಸಿ ಬ್ರೇಕ್ ಅನ್ನು ಸಕ್ರಿಯಗೊಳಿಸುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ಈ ಸಾಧನವನ್ನು ಹೊಂದುವ ಬಸ್ಸುಗಳು ಟಾಪ್ ಎಂಡ್ ಕಾರುಗಳಂತೆ ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತವೆ. ಶೀಘ್ರದಲ್ಲೇ ಕರ್ನಾಟಕ ಸರ್ಕಾರದಡಿಯಲ್ಲಿರುವ ಎಲ್ಲಾ ಸರ್ಕಾರಿ ಬಸ್ಸುಗಳು ಹೆಚ್ಚಿನ ಸುರಕ್ಷತೆಯನ್ನು ಹೊಂದಲಿವೆ.

ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ಕರ್ನಾಟಕ ಸರ್ಕಾರವು ಈ ಸಾಧನಗಳನ್ನು ಅಳವಡಿಸಲು ರೂ.100 ಕೋಟಿ ವೆಚ್ಚ ಮಾಡುತ್ತಿದೆ. ಈ ಹೊಸ ತಂತ್ರಜ್ಞಾನದ ಅಳವಡಿಕೆಯ ನಂತರ ಅಪಘಾತದ ಪ್ರಮಾಣವು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ನಿದ್ರೆಯ ಮಂಪರಿನಲ್ಲಿ ಚಾಲಕರು ಬಸ್ ಚಾಲನೆ ಮಾಡುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ ಎಂಬ ವರದಿಗಳ ಆಧಾರದ ಮೇಲೆ ಕರ್ನಾಟಕ ಸರ್ಕಾರವು ಈ ಕ್ರಮಕ್ಕೆ ಮುಂದಾಗಿದೆ.

ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ಅಪಘಾತವು ಕರ್ನಾಟಕದಲ್ಲಿ ಮಾತ್ರ ಇರುವ ಸಮಸ್ಯೆಯಲ್ಲ. ಇದೊಂದು ಜಾಗತಿಕ ಸಮಸ್ಯೆಯಾಗಿದೆ. ಈ ಕಾರಣಕ್ಕೆ ಹಲವು ಕಂಪನಿಗಳು ವಿಶೇಷ ಸೆನ್ಸಾರ್ ಗಳನ್ನು ಅಭಿವೃದ್ಧಿಪಡಿಸಿವೆ ಎಂದು ಸವದಿ ಹೇಳಿದರು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ವಿಶೇಷ ಸುರಕ್ಷತಾ ಸಾಧನಗಳನ್ನು ಹೊಂದಲಿವೆ ಕೆಎಸ್‌ಆರ್‌ಟಿಸಿ ಬಸ್ಸುಗಳು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ರಾಜ್ಯದ ಎಲ್ಲಾ ಭಾಗಗಳನ್ನು ಸಂಪರ್ಕಿಸುತ್ತವೆ. ಬೆಂಗಳೂರು ಸಾರಿಗೆ ನಿಗಮವು ಬೆಂಗಳೂರು ನಗರಕ್ಕೆ ಮಾತ್ರ ಸ್ಥಳೀಯ ಬಸ್ಸುಗಳನ್ನು ನಿರ್ವಹಿಸುತ್ತದೆ.

Most Read Articles

Kannada
English summary
Karnataka government installing high security equipments in KSRTC buses. Read in Kannada.
Story first published: Friday, October 9, 2020, 18:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X