ಕರ್ನಾಟಕ: HSRP ನಂಬರ್ ಪ್ಲೇಟ್‌ ಅಳವಡಿಕೆ ಬಗ್ಗೆ ಮಹತ್ವದ ಮಾಹಿತಿ: ನೀವು ತಿಳಿದುಕೊಳ್ಳಲೇಬೇಕು!

ಕರ್ನಾಟಕ ಸರ್ಕಾರ (Karnataka Government) ವಾಹನ ಮಾಲೀಕರಿಗೆ ಬಿಗ್ ರಿಲೀಫ್ ನೀಡಿದೆ. 2019ರ ಏಪ್ರಿಲ್ ಮೊದಲು ಖರೀದಿ ಮಾಡಿದ ವಾಹನಗಳಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು (ಹೆಚ್‌ಎಸ್‌ಆರ್‌ಪಿ - HSRP) ಅಳವಡಿಸಲು ನೀಡಿದ್ದ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದೆ. ಸರ್ಕಾರದ ಹೊಸ ಆದೇಶದ ಪ್ರಕಾರ, ನವೆಂಬರ್ 30ರೊಳಗೆ ವಾಹನ ಮಾಲೀಕರು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಹಾಕಿಸಬೇಕಾಗಿದೆ. ಈ ಹಿಂದೆ, ನಾಲ್ಕು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿತ್ತು.

ಡಿಸೆಂಬರ್ 1ರಿಂದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಕೆ ಮಾಡದ ವಾಹನ ಮಾಲೀಕರಿಗೆ ದಂಡ ವಿಧಿಸುವಂತಹ ಕ್ರಮಕ್ಕೂ ಸಾರಿಗೆ ಇಲಾಖೆ ಮುಂದಾಗಬಹುದು. ಈ ಹಿಂದೆ 'ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಹಾಕಿಸದ ವಾಹನ ಸವಾರರ ವಿರುದ್ಧ ಯಾವುದೇ ರೀತಿ ಕ್ರಮ ಕೈಗೊಳ್ಳಬಾರದು' ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿ, ನವೆಂಬರ್ 20ಕ್ಕೆ ವಿಚಾರಣೆ ಮುಂದೂಡಿತ್ತು.

Karnataka HSRP Number Plate Deadline Extended November 30 How To Register

ದ್ವಿಚಕ್ರ ವಾಹನಗಳು (ಸ್ಕೂಟರ್ & ಬೈಕ್), ತ್ರಿಚಕ್ರ ವಾಹನಗಳು (ಆಟೋ) ಹಾಗೂ ನಾಲ್ಕು ಚಕ್ರದ ವಾಹನಗಳು (ಕಾರು ಇತ್ಯಾದಿ) ಸೇರಿದಂತೆ ಎಲ್ಲ ವಾಹನಗೂ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನ್ನು ಅಳವಡಿಕೆ ಮಾಡಬೇಕಾಗಿದೆ. ಸಾರಿಗೆ ಇಲಾಖೆ ಮಾಹಿತಿ ಪ್ರಕಾರ, ಸೆಪ್ಟೆಂಬರ್ (2024) ಹೊತ್ತಿಗೆ ರಾಜ್ಯದಲ್ಲಿ ಕೇವಲ 52 ಲಕ್ಷ ವಾಹನಗಳು ಮಾತ್ರ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಹೊಂದಿವೆ. ಇನ್ನೂ 1.4 ಕೋಟಿ ವಾಹನಗಳಿಗೆ ಈ ನಂಬರ್ ಪ್ಲೇಟ್‌ಗಳನ್ನು ಹಾಕಿಸಲಾಗಿಲ್ಲ.

ನಿಮ್ಮ ವಾಹನದ 'ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್' ನೋಂದಣಿಗೆ ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://transport.karnataka.gov.in ಭೇಟಿ ನೀಡಬೇಕು. ಅಲ್ಲಿ ವಿಂಡೋ ತೆರೆದ ಕೂಡಲೇ ಮೆನು ಬಾರ್‌ನಲ್ಲಿ 'HSRP booking' ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡುವುದರೊಂದಿಗೆ ಸುಲಭವಾಗಿ ನೋಂದಣಿ ಮಾಡಬಹುದು.

Karnataka HSRP Number Plate Deadline Extended November 30 How To Register

ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಕೆಯ ಅನುಕೂಲಗಳೇನು: ಈ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು (ಹೆಚ್‌ಎಸ್ಆರ್‌ಪಿ) ಹಾಕಿಸುವುದರಿಂದ ವಾಹನ ಮಾಲೀಕರಿಗೆ ಹೆಚ್ಚಿನ ಪ್ರಯೋಜನಗಳು ಲಭ್ಯವಾಗಲಿದೆ. ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ಗಳನ್ನು 'ಅಲ್ಯೂಮಿನಿಯಂ' ಶೀಟ್‌ ಬಳಸಿಕೊಂಡು ಸಿದ್ದಪಡಿಸಲಾಗಿದೆ. ಇದನ್ನು ವಿರೂಪಗೊಳಿಸುವುದು (ಟ್ಯಾಂಪರಿಂಗ್) ತುಂಬಾ ಕಷ್ಟದ ಕೆಲಸ. ಆಗೊಮ್ಮೆ ವಿರೂಪಗೊಂಡಿದ್ದರೆ ಬೇಗನೆ ಪತ್ತೆ ಹಚ್ಚಬಹುದು.

ಈ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ ಸುರಕ್ಷತೆಗಾಗಿ 'ಲೇಸರ್' ಕೋಡ್‌'ನ್ನು ಹೊಂದಿರುತ್ತದೆ. ಒಂದು ವೇಳೆ ವಾಹನ ಕಳುವಾದರೆ ಶೀಘ್ರ ಹುಡುಕಾಟ ನಡೆಸಬಹುದು. ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ಗಳು ರಾತ್ರಿಯ ವೇಳೆಯಲ್ಲಿಯೂ ಸ್ಪಷ್ಟವಾಗಿ ಕಾಣುತ್ತವೆ. ಜೊತೆಗೆ 'ಸ್ನ್ಯಾಪ್ ಲಾಕ್‌'ನ್ನು ಬಳಸಿ, ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ವಾಹನಗಳಿಗೆ ಅಳವಡಿಕೆ ಮಾಡಲಾಗಿರುತ್ತದೆ. ಈ ನಂಬರ್ ಪ್ಲೇಟ್‌ಗೆ ಯಾವುದೇ ಹಾನಿಯಾಗದಂತೆ ವಾಹನದಿಂದ ಬೇರ್ಪಡಿಸಿವುದು ಅಷ್ಟು ಸುಲಭವಲ್ಲ. ಇದು ಭದ್ರತೆ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗಿದೆ.

ಇನ್ನು, ಕಳ್ಳತನವಾಗುವುದನ್ನು ತಡೆಯಲು ಹಾಗೂ ಸುರಕ್ಷತೆಗಾಗಿ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ ತುಂಬಾ ಮಹತ್ವದ್ದಾಗಿದೆ. ನೀವು 2019ರ ಏಪ್ರಿಲ್ ತಿಂಗಳಿಗೂ ಮುನ್ನ ಹೊಸ ವಾಹನವನ್ನು ಖರೀದಿ ಮಾಡಿದರೆ, ಆದಷ್ಟು ಬೇಗ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ನ್ನು ಹಾಕಿಸಿರಿ. ವಿಶೇಷವಾಗಿ ಏಪ್ರಿಲ್ 1, 2019ರ ಬಳಿಕ, ನೋಂದಣಿಯಾದ ವಾಹನಗಳಲ್ಲಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಕೆ ಮಾಡಲಾಗುತ್ತಿದೆ

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 16, 2024, 16:30 [IST]
English summary
Karnataka hsrp number plate deadline extended november 30 how to register
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+