ಹಬ್ಬಕ್ಕೆ ಕಡಿಮೆ ಖರ್ಚಿನಲ್ಲಿ ಮಲ್ಕೊಂಡು ಊರಿಗೆ ಹೋಗಿ: ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಬಸ್​ಗಳ ವಿಶೇಷತೆಗಳೇನು?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ದೂರದ ಊರುಗಳಿಗೆ ಕಡಿಮೆ ಖರ್ಚಿನಲ್ಲಿ ಜನರು ಹೋಗಲು, ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅತ್ಯಾಧುನಿಕ ನಾನ್ ಎಸಿ ಸ್ಲೀಪರ್ (Non AC Sleeper) ಬಸ್‌ಗಳನ್ನು ಪರಿಚಯಿಸಿದೆ. ಕೆಎಸ್‌ಆರ್‌ಟಿಸಿಯ ಹೊಸದಾಗಿ ಖರೀದಿ ಮಾಡಿರುವ ನಾನ್ ಏಸಿ ಸ್ಲೀಪರ್ ಬಸ್ ಗಳಿಗೆ 'ಪಲ್ಲಕ್ಕಿ' ಎಂದು ಹೆಸರಿಡಲಾಗಿದೆ.

ಕೆಎಸ್‌ಆರ್‌ಟಿಸಿ ನಿಗಮ ಹೊಸದಾಗಿ 40 ನಾನ್ ಏಸಿ ಸ್ಲೀಪರ್ ಬಸ್ ಗಳನ್ನ ಖರೀದಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೂತನ ಬಸ್ ಗಳಿಗೆ ಇತ್ತೀಚೆಗೆ ಚಾಲನೆ ನೀಡಿದರು. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಗಳ‌ ಮೇಲೆ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

KSRTC Non-AC Pallakki Sleeper Buses

ಏಸಿ ಸ್ಲೀಪರ್ ಪಲ್ಲಕ್ಕಿ ಬಸ್‌ಗಳು 6 ರಿಂದ 8 ಗಂಟೆಗಳ ಪ್ರಯಾಣ ಇರುವ ಜಿಲ್ಲೆಗಳಿಗೆ 30 ಬಸ್ ಗಳು ಹಾಗೂ ಹೊರ ರಾಜ್ಯಕ್ಕೆ 10 ಬಸ್ ಗಳನ್ನ ಕಾರ್ಯಾಚರಣೆ ನಡೆಸುತ್ತದೆ. ಇಲ್ಲಿಯವರೆಗೂ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ ಗಳಿಗೆ ಯಾವುದೇ ಹೆಸರಿನ ಬ್ರ್ಯಾಂಡ್ ಅನ್ನು ಹೊಂದಿರಲಿಲ್ಲ. ಹೊಸದಾಗಿ ಖರೀದಿ ಮಾಡಿರುವ ಹೊಸ ಬಸ್​ಗಳಿಗೆ ಪಲ್ಲಕ್ಕಿ (Pallakki) ಎಂದು ಹೆಸರನ್ನು ನೀಡಲಾಗಿದೆ. ಈ ಪಲ್ಲಕಿ ಬಸ್‌ಗಳ ವಿಶೇಷತೆಗಳು ಇಲ್ಲಿದೆ.

ಹೊಸ ಪಲ್ಲಕಿ ಬಸ್ ಗಳು 30 ಸ್ಲೀಪಿಂಗ್ ಬರ್ತ್‌ಗಳನ್ನು ಹೊಂದಿದೆ. ನೀವು ಪಲ್ಲಕಿ ಬಸ್ ಪ್ರಯಾಣದ ಸಮಯದಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡಲು ಜಾರ್ಜಿಂಗ್ ಸೌಲಭ್ಯವನ್ನು ಮಾಡಲಾಗಿದೆ. ಪ್ರತಿ ಬರ್ತ್‌ನಲ್ಲಿ ಮೀಸಲಾದ ಮೊಬೈಲ್ ಹೋಲ್ಡರ್ ಅನ್ನು ನೀಡಲಾಗಿದೆ. ಅಲ್ಲದೇ ಈ ಬಸ್ ನಲ್ಲಿ ಪ್ರಯಾಣಿಕರ ಚಪ್ಪಳಿ, ಶೂಗಳನ್ನು ಇಡಲು ಸ್ಥಳಾವಕಾಶದ ವ್ಯವಸ್ಥೆ ಮಾಡಲಾಗಿದೆ.

KSRTC Non-AC Pallakki Sleeper Buses

40 ಬಸ್‌ಗಳ ಪೈಕಿ 30 ಬಸ್‌ಗಳನ್ನು ರಾಜ್ಯದೊಳಗೆ ಸಂಚರಿಸಲಿವೆ. ಉಳಿದ 10 ಬಸ್‌ಗಳು ಬೆಂಗಳೂರಿನಿಂದ‌ ಹೊರರಾಜ್ಯಗಳಿಗೆ ಸಂಚರಿಸಲಿವೆ. ಪಲ್ಲಕ್ಕಿ ಬಸ್ ನಲ್ಲಿ ಸೀಟ್ ನಂಬರ್ ಮೇಲೆ ಎಲ್ಇಡಿಯನ್ನು ಅಳವಡಿಕೆ ಮಾಡಲಾಗಿದೆ. ಓದಲು ಉತ್ತಮ ಬೆಳಕಿನ ಎಲ್.ಇ.ಡಿ ಲೈಟ್ ಅಳವಡಿಕೆ ಮಾಡಿದ್ದಾರೆ. ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ ಇದ್ದು ಚಾಲಕರಿಗೆ ಸಹಾಯವಾಗಲೂ ಬಸ್ ಹಿಂಭಾಗದಲ್ಲಿ ಹೈಟೆಕ್ -ಕ್ಯಾಮರಾವನ್ನು ಕೂಡ ಅಳವಡಿಸಲಾಗಿದೆ.

ಬಸ್‌ಗಳನ್ನು ಪ್ರಯಾಣಿಕರ ಸುರಕ್ಷತೆಯ ಹಲವಾರು ವೈಶಿಷ್ಟ್ಯಗಳನ್ನು ನೀಡಿದ್ದ್ದಾರೆ. ಬಸ್‌ಗಳಲ್ಲಿ ವಿಶೇಷ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಬಸ್ಸಿನೊಳಗೆ ಯಾವುದೇ ಅಹಿತಕರ ಸಂದರ್ಭದಲ್ಲಿ ಎಲ್ಲಾ ಪ್ರಯಾಣಿಕರಿಗೆ ಅಲರ್ಟ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಬಸ್ ನಲ್ಲಿ ಅಡಿಯೋ ಸ್ವೀಕರ್ ಗಳ ಮೂಲಕ ಜನರಿಗೆ ಮಾಹಿತಿ ನೀಡುವ ಸಿಸ್ಟಂ ಅನ್ನು ಕೂಡ ಒಳಗೊಂಡಿದೆ.

KSRTC Non-AC Pallakki Sleeper Buses

ಪ್ರಯಾಣಿಕರು ಬಸ್​ನಲ್ಲಿ ಆಗುವ ಸಮಸ್ಯೆಗಳನ್ನು ಬಸ್ ಸಿಬ್ಬಂದಿಗೆ ಸಾರ್ವಜನಿಕ ವಿಳಾಸ ವ್ಯವಸ್ಥೆ ಮತ್ತು ಬಸ್‌ನಲ್ಲಿ ಒದಗಿಸಲಾದ ಆಡಿಯೊ ಸ್ಪೀಕರ್‌ಗಳ ಮೂಲಕ ತಿಳಿಸಬಹುದು. ಪಲ್ಲಕ್ಕಿ 11.3 ಮೀಟರ್ ಉದ್ದದ ನಾನ್ ಎಸಿ ಬಸ್. ಬಿಎಸ್-6 ತಂತ್ರಜ್ಞಾನದ ಮಾದರಿಯ ಹೆಚ್.ಪಿ. ಎಂಜಿನ್ ಅನ್ನು ಅಳವಡಿಸಲಾಗಿದೆ. ಒಟ್ಟಿನಲ್ಲಿ ನಾನ್ ಎಸಿಯಾದರೂ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಇನ್ನು ಆಗಸ್ಟ್ 28 ರಂದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆ​ಆರ್​ಟಿಸಿ), 'ಕಲ್ಯಾಣ ರಥ' ಹೆಸರಿನಲ್ಲಿ ನೂತನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್​ನ್ನು ಲೋಕಾರ್ಪಣೆ ಮಾಡಿತ್ತು. ಈ ಬಸ್ ಸಾಕಷ್ಟು ಆಕರ್ಷಕ ಸೌಲಭ್ಯಗಳನ್ನು ಹೊಂದಿದೆ. ಪ್ರಮುಖವಾಗಿ, ಸಂಪೂರ್ಣ ಎಸಿ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್ ಸೇರಿದಂತೆ ಹತ್ತಾರು ಸೌಕರ್ಯಗಳನ್ನು ಹೊಂದಿದೆ.

ಈ ವರ್ಷದ ಫೆಬ್ರವರಿಯಲ್ಲಿ ಕೆಎಸ್​ಆರ್​ಟಿಸಿ ತನ್ನ ಪ್ರೀಮಿಯಂ 'ಅಂಬಾರಿ ಉತ್ಸವ' ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್​ಗಳನ್ನು ರಸ್ತೆಗಿಳಿಸಿತ್ತು. ಇದು, ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಬಸ್ ಆಗಿದ್ದು, ಬೆಂಗಳೂರು - ಹೈದರಾಬಾದ್, ಬೆಂಗಳೂರು - ಪಣಜಿ, ಬೆಂಗಳೂರು - ತ್ರಿಶೂರು, ಬೆಂಗಳೂರು - ಎರ್ನಾಕುಲಂ, ಬೆಂಗಳೂರು - ತಿರುವನಂತಪುರ ಸೇರಿದಂತೆ ವಿವಿಧ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡುತ್ತಿದೆ.

Article Published On: Thursday, October 12, 2023, 19:36 [IST]
English summary
Karnataka ksrtc pallakki buses all features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+