ಕರ್ನಾಟಕದ ಶ್ರೀಮಂತ ರಾಜಕಾರಣಿ MTB ನಾಗರಾಜ್ ಬಳಿ ರೋಲ್ಸ್ ರಾಯ್ಸ್ ಕಾರು ಉಂಟು.. ಮಾರುತಿ ಓಮ್ನಿಯೂ ಉಂಟು!

ಕರ್ನಾಟಕದ ಎಂಟಿಬಿ ನಾಗರಾಜ್ (MTB Nagaraj) ಭಾರತದ ಶ್ರೀಮಂತ ರಾಜಕಾರಣಿಯಾಗಿದ್ದಾರೆ. ಬೇರೆಲ್ಲ ನಾಯಕರಿಗೆ ಹೋಲಿಸಿದರೆ, ಎಂಟಿಬಿ ಅವರಿಗೆ ಕಾರುಗಳ ಮೇಲೆ ವಿಶೇಷ ಪ್ರೀತಿಯಿದೆ. ಅವರು, ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್, ಲ್ಯಾಂಡ್ ರೋವರ್, ಫೆರಾರಿ ಎಫ್8 ಟ್ರಿಬ್ಯೂಟೊ ಹಾಗೂ ಕಡಿಮೆ ಬೆಲೆಯ ಮಾರುತಿ ಓಮ್ನಿಯ ಮಾಲೀಕರಾಗಿದ್ದಾರೆ.

ಇತ್ತೀಚೆಗೆ, ದಸರಾ ಹಬ್ಬದ ಆಯುಧ ಪೂಜೆಯಲ್ಲಿ ಎಂಟಿಬಿ ನಾಗರಾಜ್ ಅವರು, ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರುಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಆ ವಿಡಿಯೋವನ್ನು ಖಾಸಗಿ ಸುದ್ದಿವಾಹಿನಿಯೊಂದು ತನ್ನ ಯುಟ್ಯೂಬ್ ನಲ್ಲಿ ಹಂಚಿಕೊಂಡಿದೆ. ಪೂಜೆಯ ಸಂದರ್ಭದಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಫೆರಾರಿ ಎಫ್8 ಟ್ರಿಬ್ಯೂಟೊ, ಲ್ಯಾಂಡ್ ರೋವರ್ ಡಿಫೆಂಡರ್ 110, ಟೊಯೊಟಾ ಇನ್ನೋವಾ ಎಂಪಿವಿ ಹಾಗೂ ಮಾರುತಿ ಓಮ್ನಿ ಸಾಲಾಗಿ ನಿಂತಿರುವುದನ್ನು ಕಾಣಬಹುದು.

ಕರ್ನಾಟಕದ ಶ್ರೀಮಂತ ರಾಜಕಾರಣಿ MTB ನಾಗರಾಜ್ ಬಳಿ ರೋಲ್ಸ್ ರಾಯ್ಸ್ ಕಾರು ಉಂಟು.. ಮಾರುತಿ ಓಮ್ನಿಯೂ ಉಂಟು!

ಮೊದಲಿಗೆ ಎಂಟಿಬಿ ನಾಗರಾಜ್ ಬಳಿಯಿರುವ ಬಿಳಿ ಬಣ್ಣದ ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ (Rolls-Royce Phantom) ಕಾರಿನ ಬಗ್ಗೆ ಮಾತನಾಡೋಣ. ಈ ಕಾರು, ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ರೂ.8.99 ಕೋಟಿಯಿಂದ ರೂ.10.48ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V12 ಪೆಟ್ರೋಲ್ ಎಂಜಿನ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಲ್ಯಾಂಡ್ ರೋವರ್ ರೇಂಜ್ ರೋವರ್ (Land Rover Range Rover), ಖ್ಯಾತ ಉದ್ಯಮಿಗಳು, ಸಿನಿ ತಾರೆಯರು, ರಾಜಕಾರಣಿಗಳ ನೆಚ್ಚಿನ ಎಸ್‍ಯುವಿಯಾಗಿದೆ. ಎಂಟಿಬಿ ನಾಗರಾಜ್ ಅವರು, ಈ ಕಾರನ್ನು ಹೊಂದಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ರೂ. 2.39 ಕೋಟಿಯಿಂದ ರೂ.4.17 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ.

ಕರ್ನಾಟಕದ ಶ್ರೀಮಂತ ರಾಜಕಾರಣಿ MTB ನಾಗರಾಜ್ ಬಳಿ ರೋಲ್ಸ್ ರಾಯ್ಸ್ ಕಾರು ಉಂಟು.. ಮಾರುತಿ ಓಮ್ನಿಯೂ ಉಂಟು!

ಎಂಟಿಬಿ ನಾಗರಾಜ್ ಅವರ ಗ್ಯಾರೇಜ್‌ನಲ್ಲಿ ಸೂಪರ್‌ಕಾರ್ ಫೆರಾರಿ ಎಫ್8 ಟ್ರಿಬ್ಯೂಟೊ (Ferrari F8 Tributo) ಕೂಡ ಇದೆ. ನೀಲಿ ಬಣ್ಣದ ಈ ಕಾರು, ನೋಡಲು ಅತ್ಯಾಕರ್ಷಕವಾಗಿದೆ. ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ರೂ.4.02 ಕೋಟಿ ಆರಂಭಿಕ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 3.9-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್‌ ಹೊಂದಿದ್ದು, 710 bhp ಪವರ್ ಮತ್ತು 770 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ಕಾರನ್ನು ಸಹ ಎಂಟಿಬಿ ನಾಗರಾಜ್ ಅವರು ಹೊಂದಿದ್ದಾರೆ. ಈ ಎಸ್‍ಯುವಿ ಬಹುತೇಕರ ಫೆವರೇಟ್ ಆಗಿದ್ದು, 3-ಡೋರ್ ಹಾಗೂ 5-ಡೋರ್ ಆಯ್ಕೆಯಲ್ಲಿ ಸಿಗುತ್ತದೆ. ರೂ.93.55 ಲಕ್ಷದಿಂದ ರೂ.2.30 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2.0-ಲೀಟರ್, 3.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 3.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ.

ಕರ್ನಾಟಕದ ಶ್ರೀಮಂತ ರಾಜಕಾರಣಿ MTB ನಾಗರಾಜ್ ಬಳಿ ರೋಲ್ಸ್ ರಾಯ್ಸ್ ಕಾರು ಉಂಟು.. ಮಾರುತಿ ಓಮ್ನಿಯೂ ಉಂಟು!

ಪೋರ್ಷೆ ಕೇಯೆನ್ನೆ (Porsche Cayenne) ಸೂಪರ್‌ಕಾರ್ ಕೂಡ ಎಂಟಿಬಿ ಬಳಿಯಿದೆ. ಆದರೆ, ಈ ಕಾರು ಹೊಸ ಮಾದರಿಯಲ್ಲ ಎಂಬುದನ್ನು ಇಲ್ಲಿ ಗಮನಿಬೇಕು. ಪೋರ್ಷೆ ಕೇಯೆನ್ನೆ 3.0-ಲೀಟರ್ V6 ಡೀಸೆಲ್ ಎಂಜಿನ್‌ ಹೊಂದಿದ್ದು, 340 bhp ಗರಿಷ್ಠ ಪವರ್ ಮತ್ತು 450 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಇದೇ ಕಾರು, ರೂ.1.36 - 1.93 ಕೋಟಿ ಬೆಲೆಯನ್ನು ಪಡೆದಿದೆ.

ಇದಿಷ್ಟೇ ಅಲ್ಲದೆ, ಎಂಟಿಬಿ ನಾಗರಾಜ್ ಅವರು, ಟೊಯೋಟಾ ಫಾರ್ಚುನರ್, ಇನ್ನೋವಾ ಕ್ರಿಸ್ಟಾ ಮತ್ತು ಮಾರುತಿ ಓಮ್ನಿ ಕಾರುಗಳ ಮಾಲೀಕರಾಗಿದ್ದಾರೆ. ಓಮ್ನಿಯನ್ನು ಎಂಟಿಬಿ ಅವರು ಬಳಕೆ ಮಾಡುವುದು ಎಲ್ಲಿಯೂ ಕಂಡುಬಂದಿಲ್ಲ. ಬಹುಶಃ ಅವರ ಸಿಬ್ಬಂದಿ ಬಳಕೆ ಮಾಡುತ್ತಿರಬಹುದು. ಸದ್ಯ, ಎಂಟಿಬಿ ನಾಗರಾಜ್ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದು, ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 13, 2023, 14:04 [IST]
English summary
Karnataka richest politician mtb nagaraj car collection rolls royce to maruti omni
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+