U.T.Khader: ಸ್ಪೀಕರ್ ಯು.ಟಿ.ಖಾದರ್‌ಗೆ ಹೊಸ ಟೊಯೊಟಾ ಕಾರು.. ಬೆಲೆ ಎಷ್ಟು, ವಿಶೇಷತೆಗಳೇನು?
ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ (U.T.Khader) ಅವರ ಓಡಾಟಕ್ಕೆ ಹೊಚ್ಚ ಹೊಸ ಟೊಯೊಟಾ ಫಾರ್ಚುನರ್ (Toyota Fortuner) ಎಸ್‌ಯುವಿಯನ್ನು ನೀಡಲಾಗಿದೆ. ಸಚಿವಾಲಯದಿಂದ ಈ ಕಾರನ್ನು ಒದಗಿಸಲಾಗಿದೆ. ಕಪ್ಪು ಬಣ್ಣದ ಎಸ್‌ಯುವಿಯು ಗಂಡಭೇರುಂಡ ಲಾಂಛನವನ್ನು ಪಡೆದಿದೆ. ಜೊತೆಗೆ ವಿಶೇಷ ವಿನ್ಯಾಸವನ್ನು ಹೊಂದಿದೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ನೂತನ ಟೊಯೊಟಾ ಫಾರ್ಚುನರ್ ಫುಲ್-ಸೈಜ್ ಎಸ್‌ಯುವಿ, ರೂ.33.44 ರಿಂದ 51.44 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಲೆಜೆಂಡರ್, ಸ್ಟ್ಯಾಂಡರ್ಡ್, ಜಿಆರ್-ಎಸ್ ರೂಪಾಂತರ (Variant)ದ ಆಯ್ಕೆಯಲ್ಲಿ ಸಿಗಲಿದೆ. ಆದರೆ, ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ನೀಡಿರುವ ಕಾರಿನ ರೂಪಾಂತರದ ಬಗ್ಗೆ ಮಾಹಿತಿಯಿಲ್ಲ.

ಈ ಟೊಯೊಟಾ ಫಾರ್ಚುನರ್ (Toyota Fortuner), ಪ್ಲಾಟಿನಂ ವೈಟ್ ಪರ್ಲ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್, ಫ್ಯಾಂಟಮ್ ಬ್ರೌನ್ ಸೇರಿದಂತೆ 7 - ಮೊನೊಟೋನ್ ಬಣ್ಣಗಳೊಂದಿಗೆ ಸಿಗಲಿದ್ದು, ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ. ಜೊತೆಗೆ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಲಭ್ಯವಿದೆ. 2WD (ಟೂ ವೀಲ್ ಡ್ರೈವ್) ಮತ್ತು 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.
ಟೊಯೊಟಾ ಫಾರ್ಚುನರ್ ಎಸ್‌ಯುವಿ, ಪೆಟ್ರೋಲ್ ಹಾಗೂ ಡೀಸೆಲ್ ಪವರ್ ಟ್ರೇನ್ ಆಯ್ಕೆಯಲ್ಲಿ ಸಿಗಲಿದ್ದು, ಇದರ 2.7 - ಲೀಟರ್ ಪೆಟ್ರೋಲ್ ಎಂಜಿನ್ 166 ಪಿಎಸ್ ಗರಿಷ್ಠ ಪವರ್ (ಶಕ್ತಿ) 245 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ.

ಮತ್ತೊಂದು, 2.8 - ಲೀಟರ್ ಟರ್ಬೊ ಡೀಸೆಲ್ ಎಂಜಿನ್ 204 ಪಿಎಸ್ ಪವರ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. 6 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, 10.0 ಕೆಎಂಪಿಎಲ್ ಇಂಧನ ದಕ್ಷತೆಯನ್ನು ಹೊಂದಿದೆ.
ಈ ಕಾರು ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 8 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕನೆಕ್ಟ್ದ್ ಕಾರ್ ಟೆಕ್, 6 - ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಕಿಕ್-ಟು-ಓಪನ್ ಪವರ್ಡ್ ಟೈಲ್‌ಗೇಟ್, ಡುಯಲ್-ಜೋನ್ ಎಸಿ ಹಾಗೂ ಕ್ರೂಸ್ ಕಂಟ್ರೋಲ್ ಅನ್ನು ಪಡೆದಿದೆ.

ಟೊಯೊಟಾ ಫಾರ್ಚುನರ್ ಎಸ್‌ಯುವಿಯು ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಗ್ಲೋಬಲ್ ಎನ್‌ಸಿಎಪಿಯಿಂದ 4 ಸ್ಟಾರ್ ರೇಟಿಂಗ್ ಹೊಂದಿದೆ. 7 - ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್)ನಂತಹ ಸೇಫ್ಟಿ ಫೀಚರ್ಸ್ ಪಡೆದಿದೆ. ಈ ಕಾರಿಗೆ ಎಂಜಿ ಗ್ಲೋಸ್ಟರ್ (MG Gloster), ಜೀಪ್ ಮೆರಿಡಿಯನ್ (Jeep Meridian), ಸ್ಕೋಡಾ ಕೊಡಿಯಾಕ್ (Skoda Kodiaq) ಪ್ರಬಲ ಎದುರಾಳಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: Vijay Karnataka


Click it and Unblock the Notifications