Karnataka: ಬಾಲ ರಾಮನ ದರ್ಶನಕ್ಕೆ ತೆರಳುವವರಿಗೆ ದೊಡ್ಡ ಸಿಹಿಸುದ್ದಿ, ನಿಮ್ಮೂರಿನಿಂದ ವಿಶೇಷ ರೈಲು

ಕರ್ನಾಟಕದಿಂದ ಅಯೋಧ್ಯೆಯ ಬಾಲ ರಾಮನ ದರ್ಶನಕ್ಕೆ ತೆರಳುವವರಿಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ. ನೈಋತ್ಯ ರೈಲ್ವೆ (South Western Railway-SWR) ಕರ್ನಾಟಕ, ಗೋವಾದಿಂದ ಪವಿತ್ರ ಪುಣ್ಯಕ್ಷೇತ್ರ ಅಯೋಧ್ಯೆಗೆ ಆಸ್ತಾ ವಿಶೇಷ ಎಕ್ಸ್‌ಪ್ರೆಸ್ (Aastha Special Express) ಹೆಸರಿನ 7 ಜೋಡಿ ರೈಲುಗಳನ್ನು ಓಡಿಸಲಿದೆ.

ಎರಡು ರೈಲುಗಳು ಮೈಸೂರಿನಿಂದ (ಎಸ್ಎಂವಿಟಿ ಬೆಂಗಳೂರು ಮೂಲಕ) ಕಾರ್ಯಚರಣೆ ನಡೆಸಲಿವೆ. ಉಳಿದ ರೈಲುಗಳು ಎಸ್ಎಂವಿಟಿ ಬೆಂಗಳೂರು (SMVT Bengaluru), ತುಮಕೂರು (Tumakuru), ಚಿತ್ರದುರ್ಗ (Chitradurga), ಬೆಳಗಾವಿ (Belagavi)ಯಿಂದ ಆರಂಭವಾಗಲಿದ್ದು, ಧಾರವಾಡ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿವೆ. ಮತ್ತೊಂದು ರೈಲು ವಾಸ್ಕೋ ಡಾ ಗಾಮಾ (ಗೋವಾ)ದಿಂದ ಹೊರಟು ರತ್ನಗಿರಿ, ಪನ್ವೆಲ್ ಮೂಲಕ ಅಯೋಧ್ಯೆಯನ್ನು ತಲುಪಲಿದೆ.

Karnataka: Special Trains For Ayodhya, Starts Bengaluru, Tumakuru, Mysuru, Chitradurga, Belagavi

ಪ್ರಯಾಣಿಕರು ಇಂಡಿಯನ್ ರೈಲ್ ಕ್ಯಾಟರಿಂಗ್ & ಟೂರಿಸಂ ಕಾರ್ಪೊರೇಷನ್ (IRCTC), ಅಪ್ಲಿಕೇಶನ್/ ವೆಬ್‌ಸೈಟ್ ನಿಂದ ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ರೈಲ್ವೆ ನಿಲ್ದಾಣದ ಕೌಂಟರ್‌ಗಳಲ್ಲಿ ಯಾವುದೇ ಟಿಕೆಟ್‌ ಲಭ್ಯವಾಗುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ರೈಲುಗಳು ಸೀಮಿತ ಅವಧಿಗೆ ಮಾತ್ರ ಸಂಚರಿಸಲಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ವಿಸ್ತರಿಸಬಹುದು ಎಂಬ ವಿವರಗಳು ದೊರೆತ್ತಿವೆ.

ಬುಕ್ಕಿಂಗ್ ಆರಂಭದ ದಿನಾಂಕ, ಟೆಕೆಟ್ ದರಗಳು ಹಾಗೂ ರೈಲು ಹೊರಡುವ ಸಮಯ ಸೇರಿದಂತೆ ಇನ್ನಿತರೇ ಮಾಹಿತಿಗಳು ಶೀಘ್ರದಲ್ಲೇ ದೊರೆಯಲಿದೆ. ರೈಲು ಗಾಡಿ ಸಂಖ್ಯೆ 06201, ಎಸ್ಎಂವಿಟಿ ಬೆಂಗಳೂರಿನಿಂದ ಬುಧವಾರ ಸಂಚಾರ ಆರಂಭಿಸಲಿದ್ದು, ಶುಕ್ರವಾರ ಅಯೋಧ್ಯೆಯನ್ನು ತಲುಪಲಿದೆ. ಅಲ್ಲಿಂದ ಶನಿವಾರ ಪ್ರಯಾಣವನ್ನು ಆರಂಭಿಸಿ, ಮಂಗಳವಾರ ಬೆಂಗಳೂರಿಗೆ ಬರಲಿದೆ.

Karnataka: Special Trains For Ayodhya, Starts Bengaluru, Tumakuru, Mysuru, Chitradurga, Belagavi

ಈ ರೈಲು ಬೆಂಗಳೂರಿನಿಂದ ಜನವರಿ 31, ಫೆಬ್ರವರಿ 14, ಫೆಬ್ರವರಿ 28 ರಂದು ಹೊರಡಲಿದೆ. ಅಯೋಧ್ಯೆಯಿಂದ ಫೆಬ್ರವರಿ 3, 17, ಮಾರ್ಚ್ 2 ರಂದು ಪ್ರಯಾಣವನ್ನು ಪ್ರಾರಂಭಿಸಲಿದೆ. 22 ಬೋಗಿಗಳನ್ನು ಒಳಗೊಂಡಿರಲಿದ್ದು, ಒಟ್ಟು 2,802 ಕಿ.ಮೀ ದೂರವನ್ನು ಕ್ರಮಿಸಲಿದೆ. ಕರ್ನಾಟಕದ (Karnataka), ತುಮಕೂರು, ಅರಸೀಕೆರೆ, ಕಡೂರು, ಬೀರೂರು, ಚಿತ್ರದುರ್ಗ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ನಿಲುಗಡೆಯಾಗಲಿದೆ.

ರೈಲು ಗಾಡಿ ಸಂಖ್ಯೆ 06202 (Train number 06202), ಮೈಸೂರಿನಿಂದ ಭಾನುವಾರ ಸಂಚಾರ ಆರಂಭಿಸಲಿದ್ದು, ಮಂಗಳವಾರ ಅಯೋಧ್ಯೆಯನ್ನು ತಲುಪಲಿದೆ ಅಯೋಧ್ಯೆಯಿಂದ ಬುಧವಾರ ಹೊರಡಲಿದ್ದು, ಶನಿವಾರ ಮೈಸೂರಿಗೆ ಹಿಂದಿರುಗಲಿದೆ. ಮೈಸೂರಿನಿಂದ ಫೆಬ್ರವರಿ 2, 18 ರಿಂದ ಪ್ರಯಾಣವನ್ನು ಆರಂಭಿಸಿದರೆ, ಅಯೋಧ್ಯೆಯಿಂದ ಫೆಬ್ರವರಿ 7 ಮತ್ತು 21 ರಿಂದ ಹೊರಡಲಿದೆ.

Karnataka: Special Trains For Ayodhya, Starts Bengaluru, Tumakuru, Mysuru, Chitradurga, Belagavi

ಈ ರೈಲು ಸಹ 22 ಕೋಚ್ ಗಳನ್ನು ಹೊಂದಿರಲಿದ್ದು, ಮೈಸೂರಿನಿಂದ ಅಯೋಧ್ಯೆಯನ್ನು ತಲುಪಲು ಒಟ್ಟು 2,952 ಕಿ.ಮೀ ಕ್ರಮಿಸಲಿದೆ. ಮಾರ್ಗ ಮಧ್ಯೆ ಎಸ್ಎಂವಿಟಿ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಬೀರೂರು, ಚಿತ್ರದುರ್ಗ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಹಾಗೂ ವಿಜಯಪುರ ರೈಲು ನಿಲ್ದಾಣದಲ್ಲಿ ನಿಲ್ಲುತ್ತದೆ.

ರೈಲು ಸಂಖ್ಯೆ 06204, ಚಿತ್ರದುರ್ಗದಿಂದ ಫೆಬ್ರವರಿ 11, 25 ರಂದು ಸಂಚಾರ ಆರಂಭಿಸಲಿದ್ದು, ಅಯೋಧ್ಯೆಯಿಂದ ಫೆಬ್ರವರಿ 14, 28 ರಂದು ವಾಪಸ್ ಆಗಲಿದೆ. ಒಟ್ಟು 2,483 ಕಿ.ಮೀ ದೂರವನ್ನು ಕ್ರಮಿಸಲಿದೆ. ರೈಲು ಗಾಡಿ ಸಂಖ್ಯೆ 06207, ಬೆಳಗಾವಿಯಿಂದ ಫೆಬ್ರವರಿ 17 ರಂದು ಅಯೋಧ್ಯೆಗೆ ಹೊರಡಲಿದ್ದು, ಅಲ್ಲಿಂದ ಫೆಬ್ರವರಿ 20 ರಂದು ಸಂಚಾರವನ್ನು ಆರಂಭಿಸಲಿದೆ. ಧಾರವಾಡ, ಹುಬ್ಬಳ್ಳಿ, ಗದಗ, ಬಳ್ಳಾರಿ, ರಾಯಚೂರು, ಯಾದಗಿರಿ, ಸಿಕಂದರಾಬಾದ್ ಮಾರ್ಗವಾಗಿ ಕಾರ್ಯಾಚರಣೆ ನಡೆಸಲಿದೆ.

ರೈಲು ಗಾಡಿ ಸಂಖ್ಯೆ 06206, ಮೈಸೂರಿಂದ ಅಯೋಧ್ಯೆಗೆ ಫೆಬ್ರವರಿ 17 ರಂದು ಹೊರಡಿಲಿದ್ದು, ಅಲ್ಲಿಂದ ಫೆಬ್ರವರಿ 20 ರಂದು ಹಿಂದಿರುಗಲಿದೆ. ಈ ರೈಲು ಸಹ 22 ಬೋಗಿಗಳನ್ನು ಹೊಂದಿರಲಿದ್ದು, ಒಟ್ಟು 3,004 ಕಿ.ಮೀ ಸಂಚರಿಸಲಿದೆ. ಕೆಎಸ್‌ಆರ್ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಬೀರೂರು, ಚಿತ್ರದುರ್ಗ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ, ಬಿಜಾಪುರ, ಕಲಬುರಗಿ, ವಾಡಿ, ನಾಗಪುರ, ಜಬಲ್‌ಪುರ, ಪ್ರಯಾಗರಾಜ್ ಮಾರ್ಗದಲ್ಲಿ ಸಂಚರಿಸಲಿದೆ.

ಆಸ್ತಾ ವಿಶೇಷ ಎಕ್ಸ್‌ಪ್ರೆಸ್ ರೈಲು ಗಾಡಿ ಸಂಖ್ಯೆ 06203, ತುಮಕೂರು (Tumakuru) - ಅಯೋಧ್ಯೆ (Ayodhya) ನಡುವೆ ಓಡಾಟವನ್ನು ನಡೆಸಲಿದೆ. ತುಮಕೂರಿನಿಂದ ಫೆಬ್ರವರಿ 7, 21 ರಂದು ಪ್ರಯಾಣವನ್ನು ಆರಂಭಿಸಲಿದೆ. ಅಯೋಧ್ಯೆಯಿಂದ ಫೆಬ್ರವರಿ 10, 24 ರಂದು ಹಿಂದಿರುಗಲಿದೆ. ಸುಮಾರು 2,726 ಕಿ.ಮೀ ದೂರ ಚಲಿಸಲಿದ್ದು, 22 ಕೋಚ್ ಗಳನ್ನು ಒಳಗೊಂಡಿರಲಿದೆ.

Article Published On: Wednesday, January 24, 2024, 10:33 [IST]
English summary
Karnataka special trains for ayodhya starts bengaluru tumakuru mysuru chitradurga belagavi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+