Karnataka: ಕರ್ನಾಟಕದಿಂದ ಅಯೋಧ್ಯೆಗೆ 11 ರೈಲುಗಳು.. ಬೆಂಗಳೂರು, ಶಿವಮೊಗ್ಗ ಸೇರಿ ಈ ನಗರದಿಂದ ಸಂಚಾರ?

ಪುಣ್ಯ ಭೂಮಿ ಅಯೋಧ್ಯೆ (Ayodhya)ಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಜನವರಿ 22ರಂದು 'ರಾಮ ಲಲ್ಲಾ' ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದಕ್ಕಾಗಿ ಭರದಿಂದ ತಯಾರಿಗಳು ನಡೆಯುತ್ತಿವೆ. ಕರ್ನಾಟಕ (Karnataka)ದಿಂದ ಮುಂದಿನ ತಿಂಗಳು (ಫೆಬ್ರವರಿ) ಅಯೋಧ್ಯೆಗೆ 11 ವಿಶೇಷ ರೈಲುಗಳು ಸಂಚರಿಸುವ ಸಾಧ್ಯತೆಯಿದೆ.

ಬೆಂಗಳೂರು (Bengaluru) ನಗರದಿಂದ 3 ರೈಲುಗಳು, ಹುಬ್ಬಳ್ಳಿ (Hubballi)ಯಿಂದ 2, ಮೈಸೂರು (Mysuru), ಮಂಗಳೂರು (Mangaluru), ಶಿವಮೊಗ್ಗ (Shivamogga) ಹಾಗೂ ಬೆಳಗಾವಿ (Belagavi)ಯಿಂದ ತಲಾ 1 ರೈಲು ಕಾರ್ಯಾಚರಣೆ ನಡೆಸುವ ನೀರಿಕ್ಷೆಯಿದೆ. ಈ ಬಗ್ಗೆ ನೈಋತ್ಯ ರೈಲ್ವೆ (South Western Railway) ಮೂಲಗಳಿಂದ ತಿಳಿದುಬಂದಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

Karnataka: ಕರ್ನಾಟಕದಿಂದ ಅಯೋಧ್ಯೆಗೆ 11 ರೈಲುಗಳು.. ಬೆಂಗಳೂರು, ಶಿವಮೊಗ್ಗ ಸೇರಿ ಈ ನಗರದಿಂದ ಹೊರಡಲಿವೆ?

ಈ ರೈಲುಗಳನ್ನು IRCTC (ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್) ನಿರ್ವಹಿಸಲಿದೆ. ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಇವು ಸಾಮಾನ್ಯ ರೈಲುಗಳಲ್ಲ. ಕೌಂಟರ್‌ನಲ್ಲಿ ಯಾವುದೇ ಟಿಕೆಟ್‌ಗಳನ್ನು ನೀಡಲಾಗುವುದಿಲ್ಲ. ಕಡೆ ಕ್ಷಣದಲ್ಲಿ ಬುಕ್ಕಿಂಗ್ ಕೂಡ ಮಾಡಿಕೊಳ್ಳುವುದಿಲ್ಲ. ಜೊತೆಗೆ ವೇಳಾಪಟ್ಟಿ, ಟಿಕೆಟ್ ದರಗಳು ಹಾಗೂ ಯಾವ ಮಾರ್ಗದಲ್ಲಿ ಸಂಚರಿಸಲಿವೆ ಎಂಬುದನ್ನು ಅಂತಿಮಗೊಳಿಸುವ ಕೆಲಸಗಳು ನಡೆಯುತ್ತಿವೆ ಎಂದು ಮೂಲಗಳು ಹೇಳಿವೆ.

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿರುವ ರಾಮ ಮಂದಿರದಲ್ಲಿ ಜನವರಿ 22ರಂದು 'ರಾಮ ಲಲ್ಲಾ' ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಆ ಬಳಿಕ, 1 ತಿಂಗಳೊಳಗೆ ರೈಲು ಸೇವೆ ಆರಂಭವಾಗುವ ನೀರಿಕ್ಷೆಯಿದೆ. ಈ ರೈಲು ಸೇವೆ ಶುರುವಾದ ಮೇಲೆ ಐಆರ್‌ಸಿಟಿಸಿ ಕರ್ನಾಟಕ ಭಾರತ್ ಗೌರವ್ ಯಾತ್ರಾ ರೈಲು (Karnataka Bharat Gaurav Yatra train) ಸೇವೆಯನ್ನು ನಿಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

Karnataka: ಕರ್ನಾಟಕದಿಂದ ಅಯೋಧ್ಯೆಗೆ 11 ರೈಲುಗಳು.. ಬೆಂಗಳೂರು, ಶಿವಮೊಗ್ಗ ಸೇರಿ ಈ ನಗರದಿಂದ ಹೊರಡಲಿವೆ?

ಜನವರಿ 17ರಿಂದ ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಇತ್ತೀಚೆಗೆ ಘೋಷಣೆ ಮಾಡಿದೆ. ಬೆಂಗಳೂರು (Bengaluru) - ಅಯೋಧ್ಯೆ (Ayodhya) ಮಾರ್ಗದಲ್ಲಿ ಸಂಚರಿಸುವ ಮೊದಲ ವಿಮಾನವು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಜ.17ರಂದು ಬೆಳಗ್ಗೆ 8.05ಕ್ಕೆ ಹೊರಟು 10.35ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3.40ಕ್ಕೆ ಹೊರಡುವ ವಿಮಾನವು ಸಂಜೆ 6.10ಕ್ಕೆ ಬೆಂಗಳೂರಿಗೆ ಹಿಂದಿರುಗಲಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ airindiaexpress.com ಮತ್ತು ಇತರೆ ಪ್ರಮುಖ ಬುಕ್ಕಿಂಗ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಬಹುದು. ಜನವರಿ 16ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯ 'ಐಎಕ್ಸ್ 2789' ವಿಮಾನವು ದೆಹಲಿಯಿಂದ ಅಯೋಧ್ಯೆಗೆ ದೈನಂದಿನ ಓಡಾಟವನ್ನು ಶುರು ಮಾಡಲಿದೆ. ಇಂಡಿಗೋ ಕೂಡ ಜನವರಿ 15 ರಿಂದ ಮುಂಬೈ ಮತ್ತು ಅಯೋಧ್ಯೆ ನಡುವೆ ವಿಮಾನ ಸೇವೆ ಪ್ರಾರಂಭಿಸುವುದಾಗಿ ಪ್ರಕಟಿಸಿದೆ.

ಇನ್ನು, ಅಯೋಧ್ಯೆಗೆ ತೆರಳುವ ಯಾತ್ರಿಕರಿಗಾಗಿ ಹಲವು ರಾಜ್ಯಗಳಿಂದ ವಿಶೇಷ ರೈಲುಗಳನ್ನು ಓಡಿಸಲು ಬೇಡಿಕೆಯೂ ಹೆಚ್ಚಾಗುತ್ತಿದೆ. ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ನೇತೃತ್ವದ ಆಡಳಿತರೂಢ ಬಿಜೆಪಿ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಶ್ರೀರಾಮನ ದರ್ಶನಕ್ಕೆ ಹೋಗಲು ಇಚ್ಚಿಸುವ ಭಕ್ತರಿಗಾಗಿ 'ವಾರ್ಷಿಕ ಉಚಿತ ರೈಲು ಪ್ರಯಾಣ ಯೋಜನೆ'ಗೆ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, January 12, 2024, 9:34 [IST]
English summary
Karnataka to ayodhya irctc likely run 11 special trains starts bengaluru shivamogga more citys
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+