ಶಕ್ತಿ ಕುಂದಿದ ಶಕ್ತಿ ಯೋಜನೆ: ಟ್ರೋಲರ್‌ಗಳಿಗೆ ಸರಿಯಾಗಿ ಉತ್ತರ ಕೊಟ್ಟ ಸಾರಿಗೆ ಇಲಾಖೆ

ಶಕ್ತಿ ಯೋಜನೆಯ ಬಗ್ಗೆ ನಿರಂತರವಾಗಿ‌ ಇನ್ನಿಲ್ಲದಂತೆ ಸಾಮಾಜಿಕ‌ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಈ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಯಶಸ್ಸು ದೊರಕಿದ್ದು, ಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸುವ ಕುರಿತು ಹಬ್ಬಿಸಲಾಗುತ್ತಿರುವ ಸುಳ್ಳು ಸುದ್ದಿಯನ್ನು ಸಾರ್ವಜನಿಕರು ನಂಬಬಾರದು ಎಂದು ರಾಜ್ಯ ಸಾರಿಗೆ ಇಲಾಖೆ ಮನವಿ ಮಾಡಿದೆ.

ಸುಳ್ಳುಸುದ್ದಿ: ಕರ್ನಾಟಕ ರಾಜ್ಯ ಸರ್ಕಾರ 2023 ರ ಸಾಲಿನಿಂದ ಶಕ್ತಿ ಯೋಜನೆ ಜಾರಿ ಮಾಡಿದ್ದು ಖುಷಿಯ ವಿಷಯ. ಆದರೆ ಮಹಿಳೆಯರು ಶಕ್ತಿ ಯೋಜನೆಯ ಪ್ರಯೋಜನವನ್ನು ದುರ್ಬಳಕೆ ಮಾಡಿಕೊಂಡು ಅನಾವಶ್ಯಕವಾಗಿ ಪ್ರವಾಸಕ್ಕೆ ತೆರಳುವುದು, ನಿಗಮದ ಸಿಬ್ಬಂದಿಯನ್ನು ವಿನಾಕಾರಣ ನಿಂದಿಸುವುದು ಮಾಡುತ್ತಿದ್ದಾರೆ. ಶಕ್ತಿ ಯೋಜನೆಯಿಂದ ಅನಾವಶ್ಯಕ ಪ್ರಯಾಣಗಳು ಹೆಚ್ಚಾಗಿ ನಿಗಮ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ.

karnataka-transport-department-reacted-shakti-scheme-stalled

ಬಸ್‌ಗಳ ದುರಸ್ತಿಗೂ ಸಹ ನಿಗಮದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಸಿಬ್ಬಂದಿಗೆ ಸಂಬಳ ಪಾವತಿಸಲಾಗುತ್ತಿಲ್ಲ, ಹಾಗಾಗಿ ಸಾರಿಗೆ ಸಚಿವಾಲಯದ ನಿರ್ದೇಶನದೊಂದಿಗೆ ಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಆಗಸ್ಟ್ 21 ರಂದು ಆದೇಶ ಹೊರಡಿಸಿರುವುದಾಗಿ ಹಬ್ಬಿಸಲಾಗಿದೆ. ಇದನ್ನು ಖಂಡಿಸಿ ಈಗ ಸಾರಿಗೆ ಇಲಾಖೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದೆ.

ಇಲಾಖೆಯ ಸ್ಪಷ್ಟನೆ: ಈ‌ ಮೇಲಿನ ಆದೇಶದ ಪ್ರತಿಯು ಸತ್ಯಕ್ಕೆ ದೂರವಾಗಿದ್ದು, ನಮ್ಮ ಹಿಂದಿನ ನಿರ್ದೇಶಕರು ( ಸಿಬ್ಬಂದಿ‌ & ಜಾಗೃತ ರವರ ಸಹಿ) ಯಲ್ಲಿ‌ ಹೊರಡಿಸಲಾಗಿದೆ. ಶ್ರೀ‌.ಪ್ರಶಾಂತ್ ಕುಮಾರ್ ಮಿಶ್ರ ಭಾಆಸೇ ರವರು ದಿನಾಂಕ 22-07-2023 ರಂದು ಕೆಎಸ್‌ಆರ್‌ಟಿಸಿ ಯಿಂದ ವರ್ಗಾವಣೆಗೊಂಡಿರುತ್ತಾರೆ. ಆದರೆ ಇಂದು ದಿನಾಂಕ 21-08-2023 ರಲ್ಲಿ ಅವರ ಸಹಿಯಲ್ಲಿ ಈ ಆದೇಶವನ್ನು ಹೊರಡಿಸಿರುವುದು ಕಾನೂನಾತ್ಮಕವಾಗಿಯೂ ಅಪರಾಧವಾಗಿರುತ್ತದೆ. ಈ ರೀತಿಯ ಯಾವುದೇ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಮೊದಲು ನಮ್ಮಿಂದ ಸರಿಯಾದ ಮಾಹಿತಿಯನ್ನು ಪಡೆಯಲು ಮತ್ತೊಮ್ಮೆ ಕೋರಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

karnataka-transport-department-reacted-shakti-scheme-stalled

ಶಕ್ತಿ ಯೋಜನೆಯ ಬಗ್ಗೆ ನಿರಂತರವಾಗಿ‌ ಇನ್ನಿಲ್ಲದಂತೆ ಸಾಮಾಜಿಕ‌ ಜಾಲತಾಣಗಳಲ್ಲಿ ಅಪ್ರಚಾರ ನಡೆಸಲಾಗುತ್ತಿದೆ. ಈ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಯಶಸ್ಸು ದೊರಕಿದ್ದು, ದಿನಾಂಕ 20-08-2023 ಕ್ಕೆ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ರೂ. 1 ಸಾವಿರ‌ ಕೋಟಿ ರೂ. ಗೂ ಹೆಚ್ಚು ವೆಚ್ಚವಾಗಿದೆ ಎಂದು ಇಲಾಖೆ ತಿಳಿಸಿದೆ.

ಈ ಉಚಿತ ಸಾರಿಗೆ ಸೇವೆಯನ್ನು ಆರಂಭಿಸಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸುದ್ದಿಯಾಗುತ್ತಲೇ ಇವೆ. ಇದೀಗ ಕೊನೆಗೆ ಈ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಇದಕ್ಕೂ ಹಲವು ಕಾರಣಗಳಿವೆ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಯಲ್ಲಿ ಈ ಹಿಂದೆ ಎಂದೂ ಕಾಣದ ಬದಲಾವಣೆಗಳು ಈಗ ಆಗಿವೆ. ಪುರುಷ ಪ್ರಯಾಣಿಕರಿಗೆ ಸೀಟ್‌ಗಳೇ ಇಲ್ಲದಂತಾಗಿದೆ. ಬಸ್‌ನಲ್ಲಿ ಶೇ60 ರಷ್ಟು ಮಹಿಳೆಯರೇ ಪ್ರಯಾಣಿಸುತ್ತಿದ್ದಾರೆ.

karnataka-transport-department-reacted-shakti-scheme-stalled

ಉಚಿತವಾಗಿ ರಾಜ್ಯ ಮಹಿಳೆಯರಿಗೆ ರಾಜ್ಯದ ಯಾವುದೇ ಮೂಲೆಗೆ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿರುವ ಕಾರಣ ಸರ್ಕಾರಿ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿ, ಖಾಸಗಿ ವಲಯಕ್ಕೆ ತೀವ್ರ ಹೊಡೆತ ಬಿದ್ದಿದೆ. ಹೀಗಿದ್ರೂ ಕೂಡ ಸರ್ಕಾರ ಯಾವುದೇ ರೀತಿಯಲ್ಲೂ ಯೋಜನೆಯನ್ನು ಸ್ಥಗಿತಗೊಳಿಸುವ ಯೋಚನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಟ್ರೋಲ್‌ಗಳು: ಉಚಿತ ಬಸ್‌ ಸೇವೆಯಿಂದ ಆಗುತ್ತಿರುವ ಕೆಲ ವಿವಾದಗಳನ್ನೇ ಹೈಲೆಟ್ ಮಾಡುತ್ತಾ ಟ್ರೋಲ್ ಮಾಡಲಾಗುತ್ತಿದೆ. ಒಂದನ್ನು ಎರಡರಂತೆ ತೋರಿಸುತ್ತಾ ಸಾರ್ವಜನಿಕರಿಗೆ ಮನರಂಜನೆ ನೀಡುವ ನೆಪದಲ್ಲಿ ಈ ಯೋಜನೆ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ ಎಂದು ಟ್ರೋಲರ್‌ಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಆದ್ರೆ ಇದ್ಯಾವುದನ್ನು ನಂಬದಿರಿ ಎಂದು ಇದೀಗ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.

karnataka-transport-department-reacted-shakti-scheme-stalled

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, August 22, 2023, 13:31 [IST]
English summary
Karnataka transport department reacted shakti scheme stalled
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+