Karnataka: ರಾಜ್ಯದಲ್ಲಿ ಓಡಾಡುವ ವಂದೇ ಭಾರತ್ ರೈಲುಗಳ ವೇಳಾಪಟ್ಟಿ, ನಿಲುಗಡೆ ನಿಲ್ದಾಣಗಳಿವು

ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಸೆಮಿ - ಹೈಸ್ವೀಡ್ ರೈಲಾಗಿ ಖ್ಯಾತಿಗಳಿಸಿದೆ. ಕರ್ನಾಟಕ (Karnataka)ದ ವಿವಿಧ ಮಾರ್ಗದಲ್ಲಿಯೂ ಈ ರೈಲು ಸಂಚರಿಸುತ್ತಿದೆ. ಇಲ್ಲಿ ವಂದೇ ಭಾರತ್ ಹೊರಡುವ ಸಮಯ ಹಾಗೂ ನಿಲುಗಡೆ ನಿಲ್ದಾಣದ ಬಗ್ಗೆ ವಿವರಿಸಿದ್ದೇವೆ.

ಬೆಂಗಳೂರು-ಹುಬ್ಬಳ್ಳಿ-ಧಾರವಾಡ (Bengaluru-Hubballi-Dharwad) ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್, ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಟು ಮಧ್ಯಾಹ್ನ 12.10ಕ್ಕೆ ಧಾರವಾಡ ನಿಲ್ದಾಣವನ್ನು ತಲುಪುತ್ತದೆ. ಮಾರ್ಗ ಮಧ್ಯೆ ಯಶವಂತಪುರ, ದಾವಣಗೆರೆ ಹಾಗೂ ಹುಬ್ಬಳ್ಳಿ ನಿಲ್ದಾಣದಲ್ಲಿ ನಿಲುಗಡೆಯಾಗುತ್ತದೆ. ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಸಂಚಾರ ಆರಂಭಿಸಿ ಈ ರೈಲು ರಾತ್ರಿ 7.45ಕ್ಕೆ ಬೆಂಗಳೂರಿಗೆ ಬರುತ್ತದೆ. ಮಂಗಳವಾರ ಹೊರತುಪಡಿಸಿ ವಾರದ ಎಲ್ಲ ದಿನವು ಸಂಚರಿಸುತ್ತದೆ.

Karnataka Vande Bharat Express Trains Timings Stop Station Details

ಚೆನ್ನೈ-ಬೆಂಗಳೂರು-ಮೈಸೂರು (Chennai-Bengaluru-Mysuru) ಮಧ್ಯೆ ಓಡಾಟದ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್, ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಬೆಳಗ್ಗೆ 5.50ಕ್ಕೆ ಸಂಚಾರವನ್ನು ಆರಂಭಿಸಿ, ಮಧ್ಯಾಹ್ನ 12.20ಕ್ಕೆ ಮೈಸೂರು ತಲುಪುತ್ತದೆ. ಕಟ್ಪಾಡಿ ಮತ್ತು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ನಿಲುಗಡೆಯಾಗುತ್ತದೆ. ಬುಧವಾರ ಹೊರತುಪಡಿಸಿ, ವಾರದ ಉಳಿದೆಲ್ಲ ದಿನವು ಕಾರ್ಯಾಚರಣೆಯನ್ನು ನಡೆಸುತ್ತದೆ. ಮೈಸೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಟು ರಾತ್ರಿ 7.20ಕ್ಕೆ ಚೆನ್ನೈ ತಲುಪುತ್ತದೆ.

ಕಾಚಿಗುಡ (ಹೈದರಾಬಾದ್) ಹಾಗೂ ಯಶವಂತಪುರ (ಬೆಂಗಳೂರು) ನಡುವೆಯು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಬುಧವಾರ ಹೊರತುಪಡಿಸಿ ವಾರದ ಎಲ್ಲ ಓಡಾಟವನ್ನು ನಡೆಸುತ್ತಿದೆ. ಕಾಚಿಗುಡದಿಂದ ಬೆಳಗ್ಗೆ 5.45ಕ್ಕೆ ಹೊರಟು ಮಧ್ಯಾಹ್ನ 2 ಗಂಟೆ ಸುಮಾರಿಗೆ ಯಶವಂತಪುರವನ್ನು ತಲುಪುತ್ತದೆ. ಮಾರ್ಗ ಮಧ್ಯೆ ಮೆಹಬೂಬ್ ನಗರ, ಕರ್ನುಲ್, ಅನಂತಪುರಂ ಮತ್ತು ಧರ್ಮಾವರಂ ನಿಲ್ದಾಣದಲ್ಲಿ ನಿಲ್ಲುತ್ತದೆ. ಯಶವಂತಪುರದಿಂದ 2.45ಕ್ಕೆ ಸಂಚಾರವನ್ನು ಪ್ರಾರಂಭಿಸಿ, ರಾತ್ರಿ 11.8 ಗಂಟೆ ಸುಮಾರಿಗೆ ಕಾಚಿಗುಡಕ್ಕೆ ಹೋಗುತ್ತದೆ.

Karnataka Vande Bharat Express Trains Timings Stop Station Details

ಮಂಗಳೂರು ಮತ್ತು ಮಡಗಾಂವ್ (Mangaluru & Madgaon) ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್, ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಬೆಳಗ್ಗೆ 8.30ಕ್ಕೆ ಹೊರಟು ಮಧ್ಯಾಹ್ನ 1.15ರ ಸುಮಾರಿಗೆ ಮಡಗಾಂವ್ (ಗೋವಾ)ವನ್ನು ತಲುಪತ್ತದೆ. ಇಲ್ಲಿಂದ ಸಂಜೆ 6.10ಕ್ಕೆ ಕಾರ್ಯಾಚರಣೆಯನ್ನು ಆರಂಭಿಸಿ, ರಾತ್ರಿ 10.45ಕ್ಕೆ ಮಂಗಳೂರಿಗೆ ಬರುತ್ತದೆ. ಗುರುವಾರ ಹೊರತುಪಡಿಸಿ ಉಳಿದೆಲ್ಲ ದಿನವು ಸಂಚರಿಸುತ್ತದೆ. ಕಾರವಾರ ಹಾಗೂ ಉಡುಪಿ ನಿಲ್ದಾಣದಲ್ಲಿ ನಿಲುಗಡೆಯಾಗುತ್ತದೆ.

ಇತ್ತಿಚೆಗೆ ಕೊಯಮತ್ತೂರು ಜಂಕ್ಷನ್ (Coimbatore Junction) ಮತ್ತು ಬೆಂಗಳೂರು ಕಂಟೋನ್ಮೆಂಟ್ (Bengaluru Cantonment) ನಡುವೆ ಓಡಾಟ ನಡೆಸುವ ವಂದೇ ಭಾರತ್ ರೈಲಿನ ವೇಳಾಪಟ್ಟಿಯನ್ನು ಪ್ರಯಾಣಿಕರ ಮನವಿ ಮೇರೆಗೆ ಬದಲಾಯಿಸಲಾಯಿತು. ಮಾರ್ಚ್ 11, 2024ರಿಂದ ನೂನತ ವೇಳಾಪಟ್ಟಿ ಜಾರಿಗೆ ಬಂದಿದೆ. ಕೊಯಮತ್ತೂರಿನಿಂದ 7.25ಕ್ಕೆ ಹೊರಟು ಮಧ್ಯಾಹ್ನ 1.50ಕ್ಕೆ ಬೆಂಗಳೂರಿಗೆ ಬರುತ್ತದೆ. ಇಲ್ಲಿಂದ ಮಧ್ಯಾಹ್ನ 2.20ಕ್ಕೆ ಸಂಚಾರವನ್ನು ಆರಂಭಿಸಿ, ರಾತ್ರಿ 8.45ಕ್ಕೆ ಕೊಯಮತ್ತೂರನ್ನು ತಲುಪುತ್ತದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಅತ್ಯಂತ ವೇಗದಲ್ಲಿ ಸಂಚರಿಸಲಿದ್ದು, ವಿಶ್ವದರ್ಜೆಯ ಸೌಕರ್ಯವನ್ನು ಒಳಗೊಂಡಿದೆ. ವಿಶೇಷವಾಗಿ ಆರಾಮದಾಯ ಪ್ರಯಾಣಿಕ ಆಸನಗಳು, ಸಂಪೂರ್ಣ ಹವಾ ನಿಯಂತ್ರಿತ ಬೋಗಿಗಳು, ವೈಫೈ, ಜೈವಿಕ ಶೌಚಾಲಯ, ಸ್ವಯಂ ಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, March 3, 2024, 9:00 [IST]
English summary
Karnataka vande bharat express trains timings stop station details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+