Mangaluru Water Metro: ಮಂಗಳೂರಿನಲ್ಲಿ ವಾಟರ್ ಮೆಟ್ರೋ.. ಇನ್ನೂ ಪ್ರಯಾಣ ಸುಲಭ

ನದಿ ಹಾಗೂ ತೀರ ಪ್ರದೇಶಗಳ ಅಭಿವೃದ್ಧಿಗೆ ಸಾರ್ವಜನಿಕ ಸಾರಿಗೆ ತುಂಬಾ ಮುಖ್ಯವಾಗಿದ್ದು, ದೇಶಾದ್ಯಂತ ವಿವಿಧ ರಾಜ್ಯಗಳು ವಾಟರ್ ಮೆಟ್ರೋ (Water Metro) ಆರಂಭಿಸುತ್ತಿವೆ. ಅದಕ್ಕೆ ಕರ್ನಾಟಕ (Karnataka) ಸಹ ಹೊರತಾಗಿಲ್ಲ. ಕರಾವಳಿ ನಗರಿ ಮಂಗಳೂರಿನಲ್ಲಿ (Mangaluru) ಈ ಸೇವೆಯನ್ನು ಶುರು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಜಲಸಾರಿಗೆ ಮಂಡಳಿ ಸಭೆ ಜರುಗಿತು. ಇಲ್ಲಿ ಕೇರಳ (Kerala) ರಾಜ್ಯದ ಕೊಚ್ಚಿ ಮಾದರಿಯಂತೆ ಮಂಗಳೂರಿನಲ್ಲಿಯೂ ರೂ.1,600 ಕೋಟಿ ವೆಚ್ಚದ 'ವಾಟರ್ ಮೆಟ್ರೊ' ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಯಿತು. ಆದಷ್ಟು ಬೇಗ ವಿಸ್ತೃತ ಯೋಜನಾ ವರದಿ (Detailed Project Report - DPR) ತಯಾರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

Mangaluru Water Metro

ಮೊದಲ ಹಂತದಲ್ಲಿ ಬೆಂಗ್ರೆಯಿಂದ ಮಂಗಳೂರು, ಉಳ್ಳಾಲದಿಂದ ಮಂಗಳೂರಿಗೆ ವಾಟರ್ ಮೆಟ್ರೋ (Water Metro) ಸೇವೆ ಪ್ರಾರಂಭಿಸುವ ಸಂಬಂಧ ಚರ್ಚಿಸಲಾಯಿತು. ಕಾರ್ಯಸಾಧ್ಯತಾ ವರದಿ (Feasibility Report) ಆಧಾರ ಮೇಲೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಅಥವಾ ಬೇರೆ ಯಾವ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಜಲಸಾರಿಗೆ ಮಂಡಳಿ ನಿರ್ಧರಿಸಲಿದೆ ಎಂದು ವರದಿಯಾಗಿದೆ.

ವಾಟರ್ ಮೆಟ್ರೋ ಸಣ್ಣ ಹಡಗಿನ ರೀತಿ ಇರಲಿದೆ. ನದಿ ಅಥವಾ ಸಮುದ್ರ ಮಾರ್ಗದಲ್ಲಿ ಸಂಚರಿಸಿ, ಕರಾವಳಿ ಮತ್ತು ನದಿ ಪಾತ್ರದಲ್ಲಿರುವ ಪ್ರಮುಖ ಪಟ್ಟಣಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಆಕರ್ಷವಾಗಿ ವಿನ್ಯಾಸಗೊಳಿಸಲಾದ ವಾಟರ್ ಮೆಟ್ರೋ, ವೇಗವಾಗಿ ಚಲಿಸುವ ಮೂಲಕ ಪ್ರಯಾಣಿಕರನ್ನು ಬೇಗನೇ ನಿರ್ದಿಷ್ಟ ಗಮ್ಯ ಸ್ಥಾನವನ್ನು ಸೇರಿಸುತ್ತದೆ. ಅಲ್ಲದೆ, ರಸ್ತೆಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಕಡಿಮೆಗೊಳಿಸಲು ಸಹಕಾರಿಯಾಗಿದೆ.

ಕಳೆದ ವರ್ಷದ (2023) ಏಪ್ರಿಲ್‌ನಲ್ಲಿ ದೇಶದಲ್ಲಿ ಮೊದಲ ವಾಟರ್ ಮೆಟ್ರೋಗೆ ಕೇರಳದ ಕೊಚ್ಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದರು. ಉದ್ಘಾಟನೆಗೊಂಡ ದಿನದಿಂದ ನವೆಂಬರ್ 7 ರವರೆಗೆ ಕೊಚ್ಚಿ ವಾಟರ್ ಮೆಟ್ರೋದಲ್ಲಿ ಒಟ್ಟು 1,113,615 ಮಂದಿ ಪ್ರಯಾಣಿಸಿದ್ದಾರೆ. ಇವು ಎಲೆಕ್ಟ್ರಿಕ್ ಹೈಬ್ರಿಡ್ ಚಾಲಿತವಾಗಿದ್ದು, ಬೃಹತ್ ಬ್ಯಾಟರಿಯನ್ನು ಹೊಂದಿವೆ. 38 ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತವೆ.

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ನಿರ್ಮಿತ 2 ವಾಟರ್ ಮೆಟ್ರೋ ಬೋಟ್ ಗಳನ್ನು ಉತ್ತರ ಪ್ರದೇಶದಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಇವು ಅಯೋಧ್ಯೆ, ವಾರಣಾಸಿ, ಮಥುರಾ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಚಾರಿಸಲಿವೆ ಎನ್ನಲಾಗಿದೆ. ಇದರೊಂದಿಗೆ ಎಲೆಕ್ಟ್ರಿಕ್ ಹೈಬ್ರಿಡ್ ಚಾಲಿತ 6 ಬೋಟ್ ಗಳು ತಯಾರಿಕಾ ಹಂತದಲ್ಲಿ ಇದ್ದು, ಜೂನ್‌ನಲ್ಲಿ ವಿತರಣೆಯಾಗುವ ನೀರಿಕ್ಷೆಯಿದೆ.

ಇನ್ನು, ಕೇರಳದ ಕೊಚ್ಚಿಯಲ್ಲಿ ಬಿಟ್ಟರೆ ದೇಶದ ಯಾವುದೇ ಭಾಗದಲ್ಲಿ ವಾಟರ್ ಮೆಟ್ರೋ ಸೇವೆ ಇಲ್ಲವೇ ಇಲ್ಲ. ಈ ಬೋಟ್ ಗಳನ್ನು ಸಾರ್ವಜನಿಕ ಸಾರಿಗೆ ವಿಧಾನವಾಗಿ ಹೇರಳವಾಗಿ ಬಳಕೆ ಮಾಡಿದರೆ, ತೀರಾ ಪ್ರದೇಶದಲ್ಲಿ ಸಂಪರ್ಕ ಜಾಲ ಬಲಗೊಂಡು ಪ್ರವಾಸೋದ್ಯಮ ಹಾಗೂ ವ್ಯಾಪಾರ ಚಟುವಟಿಕೆಗಳು ವೃದ್ಧಿಸಲಿದ್ದು, ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ. ಈ ಮೂಲಕ ಸಾಮಾನ್ಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 22, 2024, 13:25 [IST]
English summary
Karnataka water metro soon in mangaluru travel very easy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+