ನೆಚ್ಚಿನ ಜಾವಾ ಬೈಕ್ ಪಡೆದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಮಹಿಳೆ..!

ಜನರಿಗೆ ತಮ್ಮದೇ ಆದ ಕನಸಿನ ವಾಹನವಾಗಲಿರುತ್ತವೆ. ಕೆಲವರಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಗಳು ಕನಸಿನ ವಾಹನವಾದರೆ, ಇನ್ನೂ ಕೆಲವರಿಗೆ ಜಾವಾ ಬೈಕುಗಳು ಕನಸಿನ ವಾಹನವಾಗಿರುತ್ತವೆ. ತಮ್ಮ ನೆಚ್ಚಿನ ವಾಹನವನ್ನು ಹೇಗಾದರೂ ಮಾಡಿ ಖರೀದಿಸುವ ಮಹತ್ವಾಕಾಂಕ್ಷೆ ಜನರಿಗಿರುತ್ತದೆ.

ನೆಚ್ಚಿನ ಜಾವಾ ಬೈಕ್ ಪಡೆದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಮಹಿಳೆ..!

ಆದರೆ ಬೇಡಿಕೆಯಿರುವ ವಾಹನಗಳ ವಿತರಣೆಯು ಸೀಮಿತ ಸಂಖ್ಯೆಯಲ್ಲಿರುತ್ತದೆ. ತಾವು ಇಷ್ಟ ಪಟ್ಟ ಬೈಕ್ ತಮ್ಮ ಕೈ ಸೇರಿದ ನಂತರ ಆಗುವ ಅನುಭವವೇ ಬೇರೆ. ಮೈಸೂರಿನ ಮಹಿಳೆಯೊಬ್ಬರಿಗೆ ಅಂತಹ ಅನುಭವವಾಗಿದೆ. ಈ ಮಹಿಳೆಗೆ ತಮ್ಮ ನೆಚ್ಚಿನ ಜಾವಾ 42 ಬೈಕಿನ ವಿತರಣೆಯನ್ನು ಪಡೆದಿದ್ದಾರೆ. ಈ ಸಂತೋಷದಲ್ಲಿ ಅವರು ಕುಣಿದು ಕುಪ್ಪಳಿಸಿದ್ದಾರೆ. ಇದನ್ನು ನೋಡಿ ಅಲ್ಲಿದ್ದವರು ಆಶ್ಚರ್ಯಚಕಿತರಾಗಿದ್ದಾರೆ.

ನೆಚ್ಚಿನ ಜಾವಾ ಬೈಕ್ ಪಡೆದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಮಹಿಳೆ..!

ನಂದಿನಿ ಎಂಬುವವರೇ ಜಾವಾ 42 ಬೈಕಿನ ವಿತರಣೆಯನ್ನು ಪಡೆದ ಮಹಿಳೆ. ಇದನ್ನು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಪ್ರಕಾರ, ಅವರು ಕಳೆದ ಜನವರಿ 7ರಂದು ಈ ಬೈಕ್ ಅನ್ನು ಬುಕ್ ಮಾಡಿದ್ದಾರೆ. ಅದೇ ತಿಂಗಳ 21ರಂದು ಬೈಕ್ ಅನ್ನು ವಿತರಿಸಲಾಗಿದೆ. ಇದು ನಿಜಕ್ಕೂ ಪವಾಡವೇ ಸರಿ.

ನೆಚ್ಚಿನ ಜಾವಾ ಬೈಕ್ ಪಡೆದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಮಹಿಳೆ..!

ಜಾವಾ ಬೈಕ್‌ಗಳನ್ನು ಬುಕ್ಕಿಂಗ್ ಮಾಡಿದ ನಂತರ ಅವುಗಳ ವಿತರಣೆಯನ್ನು ಪಡೆಯಲು ತಿಂಗಳುಗಟ್ಟಲೇ ಕಾಯಬೇಕಾಗುತ್ತದೆ. ಭಾರತದಲ್ಲಿ ಜಾವಾ ಬೈಕುಗಳನ್ನು ಮರು ಬಿಡುಗಡೆಗೊಳಿಸಿದ ನಂತರ ಗ್ರಾಹಕರು ಪ್ರಯಾಸದಿಂದಲೇ ಈ ಬೈಕ್ ಅನ್ನು ಬುಕ್ಕಿಂಗ್ ಮಾಡಿದ್ದಾರೆ. ಆದರೆ ಬೈಕ್‌ಗಳ ವಿತರಣೆಯು ಹಲವು ಗೊಂದಲಗಳಿಗೆ ಕಾರಣವಾಗಿದೆ.

ನೆಚ್ಚಿನ ಜಾವಾ ಬೈಕ್ ಪಡೆದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಮಹಿಳೆ..!

ಇದರಿಂದ ರೋಸಿ ಹೋದ ಕೆಲವು ಬುಕ್ಕಿಂಗ್ ಗಳನ್ನು ರದ್ದುಗೊಳಿಸಿದ್ದರೆ, ಇನ್ನೂ ಕೆಲವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕ್ಲಾಸಿಕ್ ಲೆಜೆಂಡ್ಸ್ ಜಾವಾ ಹಾಗೂ ಜಾವಾ 42 ಬೈಕುಗಳ ಉತ್ಪಾದನೆಯನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಅಂದ ಹಾಗೆ ಕ್ಲಾಸಿಕ್ ಲೆಜೇಂಡ್ಸ್ ಭಾರತದಲ್ಲಿ ಜಾವಾ ಬೈಕುಗಳನ್ನು ಮಾರಾಟ ಮಾಡುತ್ತದೆ. ಇಷ್ಟೆಲ್ಲಾ ಗೊಂದಲಗಳ ನಡುವೆಯೂ ನಂದಿನಿರವರು ಇಷ್ಟು ಬೇಗ ಬೈಕಿನ ವಿತರಣೆಯನ್ನು ಪಡೆದಿರುವುದು ಆಶ್ಚರ್ಯ ತರದೇ ಇರದು.

ನೆಚ್ಚಿನ ಜಾವಾ ಬೈಕ್ ಪಡೆದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಮಹಿಳೆ..!

ಜಾವಾ 42 ಬೈಕ್, ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡುತ್ತದೆ. ಈ ಬೈಕ್ ಜಾವಾ ಕಂಪನಿಯ ಎಂಟ್ರಿ ಲೆವೆಲ್ ಬೈಕ್ ಆಗಿದೆ. ಜಾವಾ 42 ಬೈಕ್‌ನ ಆರಂಭಿಕ ಬೆಲೆ ಎಕ್ಸ್ ಶೋ ರೂಂ ದರದಂತೆ ರೂ.1.55 ಲಕ್ಷಗಳಾಗಿದೆ. ಈ ಬೈಕಿನಲ್ಲಿ 293 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ನೆಚ್ಚಿನ ಜಾವಾ ಬೈಕ್ ಪಡೆದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಮಹಿಳೆ..!

ಈ ಎಂಜಿನ್ 27 ಬಿಹೆಚ್‌ಪಿ ಪವರ್ ಹಾಗೂ 28 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಡ್ಯುಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಜಾವಾ ಬೈಕುಗಳು ಭಾರತದಲ್ಲಿ ಬಹಳ ಜನಪ್ರಿಯವಾಗಿವೆ. ಜಾವಾ ಕಂಪನಿ ಸದ್ಯಕ್ಕೆ ಜಾವಾ ಹಾಗೂ ಜಾವಾ 42 ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ.

ಇದರ ಜೊತೆಗೆ ಕಳೆದ ವರ್ಷದ ಕೊನೆಯಲ್ಲಿ ಪೆರಾಕ್ ಎಂಬ ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ಬೈಕಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ. 1.94 ಲಕ್ಷಗಳಾಗಿದೆ. ಜಾವಾ ಪೆರಾಕ್ ಮೋಟಾರ್‌ಸೈಕಲ್ ವಿತರಣೆಯನ್ನು ಇನ್ನೂ ಆರಂಭಿಸಿಲ್ಲ.

ನೆಚ್ಚಿನ ಜಾವಾ ಬೈಕ್ ಪಡೆದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಮಹಿಳೆ..!

ಈ ಬೈಕಿನಲ್ಲಿ 334 ಸಿಸಿ, ಫೋರ್-ಸ್ಟ್ರೋಕ್, ಫ್ಯೂಯಲ್ ಇಂಜೆಕ್ಷನ್, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 30 ಬಿಹೆಚ್‌ಪಿ ಪವರ್ ಹಾಗೂ 31 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದ್ದು, ಬೈಕುಗಳನ್ನು ಏಪ್ರಿಲ್‌ನಿಂದ ವಿತರಿಸಲಾಗುವುದು.

Most Read Articles

Kannada
English summary
Karnataka woman rider gets delivery of Jawa 42 dances with joy. Read in Kannada.
Story first published: Thursday, March 19, 2020, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X