ಸೈಕಲ್'ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 8 ದಿನದಲ್ಲಿ ಚಲಿಸಿ ಹೊಸ ದಾಖಲೆ ಬರೆದ ಕಾಶ್ಮೀರಿ ಯುವಕ

ಕಾಶ್ಮೀರದ 23 ವರ್ಷದ ಯುವಕನೊಬ್ಬ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಪ್ರಯಾಣವನ್ನು ಕೇವಲ ಎಂಟು ದಿನಗಳಲ್ಲಿ ಪೂರ್ಣಗೊಳಿಸಿ ಹೊಸ ದಾಖಲೆ ಬರೆದಿದ್ದಾನೆ. ಆತ ಸೈಕಲ್‌ ಮೂಲಕ ಈ ದಾಖಲೆ ಬರೆದಿದ್ದಾನೆ ಎಂಬುದು ವಿಶೇಷ.

ಸೈಕಲ್'ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 8 ದಿನದಲ್ಲಿ ಚಲಿಸಿ ಹೊಸ ದಾಖಲೆ ಬರೆದ ಕಾಶ್ಮೀರಿ ಯುವಕ

ಹೀಗೆ ಸೈಕಲ್ ಮೂಲಕ ಹೊಸ ದಾಖಲೆ ಬರೆದ ಯುವಕನ ಹೆಸರು ಆದಿಲ್ ತೆಲಿ. ಆದಿಲ್ ತೆಲಿ ಒಟ್ಟು ಎಂಟು ದಿನ, 1 ಗಂಟೆ 37 ನಿಮಿಷಗಳಲ್ಲಿ 3,600 ಕಿ.ಮೀ ಪ್ರಯಾಣಿಸಿ ಹೊಸ ದಾಖಲೆ ಸೃಷ್ಟಿಸಿದ್ದಾನೆ. ಈ ಮೂಲಕ ಆತನ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ದಾಖಲಾಗಿದೆ. ಆದಿಲ್ ತೆಲಿ ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ನಾರ್ಬಲ್ ನಿವಾಸಿ ಎಂದು ತಿಳಿದು ಬಂದಿದೆ.

ಸೈಕಲ್'ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 8 ದಿನದಲ್ಲಿ ಚಲಿಸಿ ಹೊಸ ದಾಖಲೆ ಬರೆದ ಕಾಶ್ಮೀರಿ ಯುವಕ

ಆದಿಲ್ ತೆಲಿ ಮಾರ್ಚ್ 22ರ ಬೆಳಿಗ್ಗೆ 7:30 ಕ್ಕೆ ಶ್ರೀನಗರದ ಲಾಲ್ ಚೌಕ್‌ನಲ್ಲಿರುವ ಘಂಟಾ ಘರ್‌ನಿಂದ ತಮ್ಮ ಪ್ರಯಾಣವನ್ನು ಆರಂಭಿಸಿ, ಮಾರ್ಚ್ 30ರ ಬೆಳಿಗ್ಗೆ 9 ಗಂಟೆಗೆ ಕನ್ಯಾಕುಮಾರಿ ತಲುಪಿದ್ದಾನೆ. ಆತನ ಪ್ರಯಾಣಕ್ಕೆ ಕಾಶ್ಮೀರದ ವಿಭಾಗೀಯ ಆಯುಕ್ತ ಕಾಶ್ಮೀರ ಪಾಂಡುರಂಗ್ ಚಾಲನೆ ನೀಡಿದರು.

MOST READ: ನಿರ್ವಹಣಾ ವೆಚ್ಚ ತಗ್ಗಿಸಲು ವಾಣಿಜ್ಯ ವಾಹನಗಳಿಗಾಗಿ ಹೊಸ ಎಂಜಿನ್ ಪರಿಚಯಿಸಿದ ಟಾಟಾ ಮೋಟಾರ್ಸ್

ಸೈಕಲ್'ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 8 ದಿನದಲ್ಲಿ ಚಲಿಸಿ ಹೊಸ ದಾಖಲೆ ಬರೆದ ಕಾಶ್ಮೀರಿ ಯುವಕ

ಕಾಶ್ಮೀರದಿಂದ ಕನ್ಯಾಕುಮಾರಿಗೆ ಅತಿ ವೇಗದ ಸೈಕಲ್ ಪ್ರಯಾಣದ ವಿಶ್ವ ದಾಖಲೆಯು ಈ ಹಿಂದೆ ನಾಸಿಕ್'ನ 17 ವರ್ಷದ ಓಂ ಮಹಾಜನ್ ಎಂಬಾತನ ಹೆಸರಿನಲ್ಲಿತ್ತು. ಓಂ ಮಹಾಜನ್ ಎಂಟು ದಿನ, 7 ಗಂಟೆ 38 ನಿಮಿಷಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಪ್ರಯಾಣಿಸಿ ದಾಖಲೆ ಬರೆದಿದ್ದ.

ಸೈಕಲ್'ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 8 ದಿನದಲ್ಲಿ ಚಲಿಸಿ ಹೊಸ ದಾಖಲೆ ಬರೆದ ಕಾಶ್ಮೀರಿ ಯುವಕ

ಈ ದಾಖಲೆಯನ್ನು ಮುರಿಯಲು ಆದಿಲ್ ಪಂಜಾಬ್‌ನ ಅಮೃತಸರದಲ್ಲಿ ಸುಮಾರು ಐದು ತಿಂಗಳು ತರಬೇತಿ ಪಡೆದಿದ್ದ. ಆತ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಗಿನ್ನೆಸ್ ವಿಶ್ವ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಅಂಗೀಕರಿಸಲಾಯಿತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸೈಕಲ್'ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 8 ದಿನದಲ್ಲಿ ಚಲಿಸಿ ಹೊಸ ದಾಖಲೆ ಬರೆದ ಕಾಶ್ಮೀರಿ ಯುವಕ

ತನ್ನ ಪ್ರಯಾಣದ ವೇಳೆ ಆದಿಲ್ ದೆಹಲಿ, ಆಗ್ರಾ, ಗ್ವಾಲಿಯರ್, ಹೈದರಾಬಾದ್, ಮಧುರೈ ಸೇರಿದಂತೆ ಹಲವು ನಗರಗಳ ಮೂಲಕ ಹಾದು ಹೋದ. ಈ ಪ್ರಯಾಣದ ವೇಳೆ ಫಿಸಿಯೋಥೆರಪಿಸ್ಟ್, ನ್ಯೂಟ್ರಿಷನಿಸ್ಟ್, ಮೆಕ್ಯಾನಿಕ್ ಹಾಗೂ ಕ್ಯಾಮೆರಾ ಸಿಬ್ಬಂದಿ ಆತನ ಜೊತೆಗಿದ್ದರು.

ಸೈಕಲ್'ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 8 ದಿನದಲ್ಲಿ ಚಲಿಸಿ ಹೊಸ ದಾಖಲೆ ಬರೆದ ಕಾಶ್ಮೀರಿ ಯುವಕ

ಒಟ್ಟು ಎಂಟು ಸದಸ್ಯರ ತಂಡವು ಪ್ರಯಾಣದುದ್ದಕ್ಕೂ ಆದಿಲ್ ಜೊತೆಗೂಡಿತ್ತು. ಮಾಹಿತಿಯ ಪ್ರಕಾರ ಕಾಶ್ಮೀರದಿಂದ ಕನ್ಯಾಕುಮಾರಿಗೆ ಆದಿಲ್ ಕೈಗೊಂಡಿದ್ದ ಪ್ರಯಾಣವನ್ನು ಕಾಶ್ಮೀರದ ಅಬ್ರಾಕ್ ಆಗ್ರೋ ಎಂಬ ಕಂಟ್ರೋಲ್ದ್ ಎನ್ವಿರಾನ್'ಮೆಂಟ್ ಸ್ಟೋರೆಜ್ ಕಂಪನಿ ಪ್ರಾಯೋಜಿಸಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸೈಕಲ್'ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 8 ದಿನದಲ್ಲಿ ಚಲಿಸಿ ಹೊಸ ದಾಖಲೆ ಬರೆದ ಕಾಶ್ಮೀರಿ ಯುವಕ

ಆದಿಲ್ ತೆಲಿ ಸೈಕಲ್ ಮೂಲಕ ದಾಖಲೆ ನಿರ್ಮಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2019ರಲ್ಲಿ ಶ್ರೀನಗರದಿಂದ ಲೇಹ್‌ಗೆ ಕೇವಲ 26 ಗಂಟೆ 30 ನಿಮಿಷಗಳಲ್ಲಿ 440 ಕಿ.ಮೀ ಎತ್ತರದಲ್ಲಿ ಪ್ರಯಾಣಿಸಿ ಅತಿ ವೇಗದ ಸೈಕ್ಲಿಸ್ಟ್‌ ಎಂಬ ಹೊಸ ದಾಖಲೆಯನ್ನು ನಿರ್ಮಿಸಿದ್ದ.

ಸೈಕಲ್'ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 8 ದಿನದಲ್ಲಿ ಚಲಿಸಿ ಹೊಸ ದಾಖಲೆ ಬರೆದ ಕಾಶ್ಮೀರಿ ಯುವಕ

ಈ ದಾಖಲೆಯು ಆತ ಹೊಸ ದಾಖಲೆಯನ್ನು ನಿರ್ಮಿಸಲು ಮತ್ತಷ್ಟು ಪ್ರೇರಣೆ ನೀಡಿದೆ. ಆದಿಲ್ ತನ್ನ ಸಾಧನೆಯನ್ನು ಎಲ್ಲಾ ಪುರಾವೆಗಳ ಸಮೇತ ಅಧಿಕೃತ ಮಾನ್ಯತೆಗಾಗಿ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾನೆ.

ಚಿತ್ರಕೃಪೆ: ಆದಿಲ್ ತೆಲಿ

Most Read Articles

Kannada
English summary
Kashmir youth sets new record by travelling Kashmir to Kanyakumari through bicycle in 8 days. Read in Kannada.
Story first published: Friday, April 2, 2021, 18:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X