ಗಂಡನಿಗೆ 3 ಕೋಟಿಯ ದುಬಾರಿ ಕಾರು ಗಿಫ್ಟ್ ಕೊಟ್ಟ ಕತ್ರಿನಾ ಕೈಫ್

ನಟಿ ಕತ್ರಿನಾ ಕೈಫ್ ಇತ್ತೀಚೆಗೆ ತಮ್ಮ ಪತಿ ವಿಕ್ಕಿ ಕೌಶಲ್ ಅವರಿಗೆ ಪ್ರಸ್ತುತ ತಲೆಮಾರಿನ ರೇಂಜ್ ರೋವರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತ ವಿಡಿಯೋವನ್ನು ಎಸ್‌ಕೆ ಕಾರ್ಸ್ ಅಫೀಶಿಯಲ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಆದ್ರೆ ಈ ಬಿಳಿ ಬಣ್ಣದ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‌ಯುವಿನಲ್ಲಿ ವಿಕ್ಕಿ ಕೌಶಲ್ ಈವರೆಗೆ ಕಾಣಿಸಿಕೊಂಡಿಲ್ಲ. ನಿಜವಾಗಿಯು ಕತ್ರಿನಾ ಕೈಫ್ ಉಡುಗೊರೆ ನೀಡಿದ್ದಾರೆಯೇ ಎಂಬುದು ಅಧಿಕೃತ ಮೂಲಗಳಿಂದ ಹೊರಬರಬೇಕಿದೆ.

ಪ್ರಸ್ತುತ ಆವೃತ್ತಿಯ ಹೊರತಾಗಿ, ಕತ್ರಿನಾ ಕೈಫ್ ಹಳೆಯ ತಲೆಮಾರಿನ ರೇಂಜ್ ರೋವರ್ ವೋಗ್ SE Ldwb ಡೀಸೆಲ್ ಕಾರನ್ನು ಸಹ ಹೊಂದಿದ್ದಾರೆ. ಅವರು 2019 ರಲ್ಲಿ ಈ ಎಸ್‌ಯುವಿಯನ್ನು ಖರೀದಿಸಿದಾಗ ಅದರ ಬೆಲೆ ಸುಮಾರು 2.3 ಕೋಟಿ ರೂ. ಇತ್ತು. ಕುತೂಹಲಕಾರಿಯಾಗಿ, ಅವರ ಹಳೆಯ ಮತ್ತು ಹೊಸ ರೇಂಜ್ ರೋವರ್ ಎರಡೂ 8822 ಎಂಬ ಒಂದೇ ಸಂಖ್ಯೆಯನ್ನು ಹೊಂದಿವೆ.

katrina-kaif-gifted-range-rover-car-worth-3-crores-to-her-husband

ಹೊಸದಾಗಿ ಖರೀದಿಸಿದ ರೇಂಜ್ ರೋವರ್‌ನಂತೆಯೇ, ಹಳೆಯ ಕಾರು ಸಹ ಬಿಳಿ ಬಣ್ಣದಲ್ಲಿದೆ. ಕತ್ರಿನಾ ಕೈಫ್ ಇನ್ನೂ ತನ್ನ ಗ್ಯಾರೇಜ್‌ನಲ್ಲಿ ಹಳೆಯ ರೇಂಜ್ ರೋವರ್ ಅನ್ನು ಹೊಂದಿದ್ದಾರೆಯೇ ಅಥವಾ ಪ್ರಸ್ತುತ ಆವೃತ್ತಿಗಾಗಿ ಅದನ್ನು ವಿನಿಮಯ ಮಾಡಿಕೊಂಡಿದ್ದಾರೆಯೇ ಎಂಬುದು ಖಚಿತವಿಲ್ಲ. ಇದು 4.4-ಲೀಟರ್ ಎಸ್ ಡಿವಿ 8 ಡೀಸೆಲ್ ಎಂಜಿನ್ ಹೊಂದಿದೆ.

ವೀಡಿಯೊದಲ್ಲಿ ಕಂಡುಬರುವ ಹೊಸ ರೇಂಜ್ ರೋವರ್ 3.0 L wb ಆಟೋಬಯೋಗ್ರಫಿ ರೂಪಾಂತರವಾಗಿದೆ. ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ಆರಾಮದಾಯಕ ಸವಾರಿಗೆ ಹೆಸರುವಾಸಿಯಾಗಿದೆ. ರೇಂಜ್ ರೋವರ್ ಅನ್ನು ಭಾರತದಲ್ಲಿ ಮೂರು ಸಾಲಿನ ಎಸ್‌ಯುವಿಯಾಗಿ ನೀಡುತ್ತಿರುವುದು ಇದೇ ಮೊದಲು. ಇದು L wb ರೂಪಾಂತರಗಳೊಂದಿಗೆ ಪ್ರತ್ಯೇಕವಾಗಿ ಲಭ್ಯವಿದೆ.

katrina-kaif-gifted-range-rover-car-worth-3-crores-to-her-husband

ರೇಂಜ್ ರೋವರ್‌ನ ಈ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.60 ಕೋಟಿಗಳಾಗಿದೆ. ರೇಂಜ್ ರೋವರ್ ಎಸ್‌ಯುವಿಗಳನ್ನು ತಯಾರಕರು ದೇಶದಲ್ಲಿ ಜೋಡಿಸಲು ಪ್ರಾರಂಭಿಸಿದ ನಂತರ ಭಾರತದಲ್ಲಿ ರೇಂಜ್ ರೋವರ್ ಎಸ್‌ಯುವಿಗಳ ಬೆಲೆಗಳು ಕಡಿಮೆಯಾಗಿವೆ. ಈ ಮೂಲಕ ಭಾರತದಲ್ಲಿ ರೇಂಜ್ ರೋವರ್ ಗ್ರಾಹಕರ ಸಂಖ್ಯೆ ಹೆಚ್ಚಳವಾಗಲಿದೆ.

ಇದು 35-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್ ನಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಟೈರ್ ಶಬ್ದ ಮತ್ತು ಎಂಜಿನ್ ಶಬ್ದಗಳನ್ನು ಫಿಲ್ಟರ್ ಮಾಡುತ್ತದೆ. ಇದು ಹೊಸ 13.1-ಇಂಚಿನ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ. ಹೆಡ್-ಅಪ್ ಡಿಸ್ಪ್ಲೇ, ಮಲ್ಟಿ-ಝೋನ್ ಕ್ಲೈಮೇಟ್ ಕಂಟ್ರೋಲ್, ಹಿಂಭಾಗದ ಸೀಟ್ ಮನರಂಜನಾ ಸ್ಕ್ರೀನ್ ಹೊಂದಿದೆ.

ರೇಂಜ್ ರೋವರ್ ಎಸ್‌ಯುವಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಕತ್ರಿನಾ ಕೈಫ್ ಖರೀದಿಸಿದ ಕಾರು ಪೆಟ್ರೋಲ್ ಎಸ್‌ಯುವಿಯಾಗಿದೆ. ಎಂಜಿನ್ ವಿಶೇಷತೆಗಳಿಗೆ ಸಂಬಂಧಿಸಿದಂತೆ, 3.0-ಲೀಟರ್, 6-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 394 ಬಿಹೆಚ್ ಪವರ್ ಮತ್ತು 550 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, September 24, 2024, 16:20 [IST]
English summary
Katrina kaif gifted range rover car worth 3 crores to her husband
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+