ಬಿಎಂಡಬ್ಲ್ಯು ಹೊಸ ಬೈಕ್‌ಗಳನ್ನು ಟ್ರೋಲ್ ಮಾಡಿದ ಕವಾಸಕಿ ಡೀಲರ್ಸ್‌ಗಳು

By Praveen Sannamani

ಕಳೆದ ವಾರವಷ್ಟೇ ಮೆಡ್ ಇನ್ ಇಂಡಿಯಾ ಖ್ಯಾತಿಯ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು ಬಿಡುಗಡೆಗೊಂಡಿದ್ದು, ಹೊಸ ಬೈಕ್‌ಗಳ ಕುರಿತಾಗಿ ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗಲೇ 300ಸಿಸಿ ಸಾಮರ್ಥ್ಯದ ಇತರೆ ಬೈಕ್‌ ಮಾದರಿಗಳು ಬಿಎಂಡಬ್ಲ್ಯು ಹೊಸ ಬೈಕ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದ್ದು, ಕವಾಸಕಿ ಡೀಲರ್ಸ್‌ಗಳು ಹೊಸ ಬೈಕ್‌ಗಳ ವಿರುದ್ದ ಟ್ರೋಲ್ ಆರಂಭಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಬಿಎಂಡಬ್ಲ್ಯು ಹೊಸ ಬೈಕ್‌ಗಳನ್ನು ಟ್ರೋಲ್ ಮಾಡಿದ ಕವಾಸಕಿ ಡೀಲರ್ಸ್‌ಗಳು

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌‌ಗಳಿಂತಲೂ ಕಡಿಮೆ ಬೆಲೆಯ ಉತ್ತಮ ಮಾದರಿಯ ಬೈಕ್ ಆವೃತ್ತಿಗಳು ಲಭ್ಯವಿದ್ದು, ಇವುಗಳಲ್ಲಿ ಪ್ರಮುಖವಾಗಿ ಕವಾಸಕಿ ನಿಂಜಾ 300 ಬೈಕ್ ಮಾದರಿಯು ಬಿಎಂಡಬ್ಲ್ಯು ಹೊಸ ಬೈಕ್‌ಗಳ ಮೊದಲ ಪ್ರತಿಸ್ಪರ್ಧಿ ಅಂದ್ರೆ ತಪ್ಪಾಗುವುದಿಲ್ಲ.

ಬಿಎಂಡಬ್ಲ್ಯು ಹೊಸ ಬೈಕ್‌ಗಳನ್ನು ಟ್ರೋಲ್ ಮಾಡಿದ ಕವಾಸಕಿ ಡೀಲರ್ಸ್‌ಗಳು

ಹೀಗಾಗಿಯೇ ಬಿಎಂಡಬ್ಲ್ಯು ಹೊಸ ಬೈಕ್‌ಗಳ ವಿರುದ್ದ ಟ್ರೋಲ್ ಆರಂಭಿಸಿರುವ ಕವಾಸಕಿ ಡೀಲರ್ಸ್‌ಗಳು ದುಬಾರಿ ಬೆಲೆಯ ಬೈಕ್ ಖರೀದಿಗಿಂತ ಅತ್ಯುತ್ತಮ ಎಂಜಿನ್ ಸಾಮರ್ಥ್ಯದ ನಿಂಜಾ 300 ಬೈಕ್ ಖರೀದಿಗಾಗಿ ಹೊಸ ಹೊಸ ಆಫರ್‌ಗಳನ್ನು ನೀಡುತ್ತಿದ್ದಾರೆ.

ಬಿಎಂಡಬ್ಲ್ಯು ಹೊಸ ಬೈಕ್‌ಗಳನ್ನು ಟ್ರೋಲ್ ಮಾಡಿದ ಕವಾಸಕಿ ಡೀಲರ್ಸ್‌ಗಳು

ಅಸಲಿಗೆ ಬೆಲೆಯಲ್ಲಿ ದುಬಾರಿ ಎನ್ನಿಸಲಿರುವ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಕವಾಸಕಿ ನಿಂಜಾ 300 ಬೈಕಿಗಿಂತಲೂ ಕಡಿಮೆ ಪ್ರಮಾಣದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಇದೀಗ ಬೈಕ್ ಖರೀದಿದಾರರನ್ನ ತನ್ನತ್ತ ಸೆಳೆಯಲು ಮುಂದಾಗಿರುವ ಕವಾಸಕಿ ಸಂಸ್ಥೆಯು ನಿಂಜಾ 300 ಬೈಕ್‌ಗಳ ಬೆಲೆಯಲ್ಲಿ ಬರೋಬ್ಬರಿ 50 ಸಾವಿರಕ್ಕಿಂತಲೂ ಹೆಚ್ಚು ಬೆಲೆ ಇಳಿಕೆ ಮಾಡಿದೆ.

ಬಿಎಂಡಬ್ಲ್ಯು ಹೊಸ ಬೈಕ್‌ಗಳನ್ನು ಟ್ರೋಲ್ ಮಾಡಿದ ಕವಾಸಕಿ ಡೀಲರ್ಸ್‌ಗಳು

ಹಾಗೆಯೇ ಭಾರತೀಯ ಗ್ರಾಹಕರಿಗಾಗಿ ಸಿದ್ದವಾಗಿರುವ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಹತ್ತು ಹಲವು ವಿಶೇಷ ವೈಶಿಷ್ಟ್ಯತೆಗಳೊಂದಿಗೆ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸುಳಿವು ನೀಡಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಜಿ 310 ಆರ್ ಬೈಕ್ ಮಾದರಿಯು ರೂ. 2.99 ಲಕ್ಷಕ್ಕೆ ಮತ್ತು ಜಿ 310 ಜಿಎಸ್ ಬೈಕ್ ಮಾದರಿಯು ರೂ.3.49 ಲಕ್ಷಕ್ಕೆ ಖರೀದಿ ಮಾಡಬಹುದಾಗಿದೆ.

ಬಿಎಂಡಬ್ಲ್ಯು ಹೊಸ ಬೈಕ್‌ಗಳನ್ನು ಟ್ರೋಲ್ ಮಾಡಿದ ಕವಾಸಕಿ ಡೀಲರ್ಸ್‌ಗಳು

ಬಿಎಂಡಬ್ಲ್ಯು ಸಂಸ್ಥೆಯು ಯಾವಾಗ ತನ್ನ ಹೊಸ ಬೈಕ್‌ಗಳ ಬೆಲೆಯನ್ನು ಘೋಷಣೆ ಮಾಡಿತೊ ಅದೇ ದಿನವೇ ನಿಂಜಾ 300 ಬೈಕಿನ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿರುವ ಕವಾಸಕಿ ಸಂಸ್ಥೆಯು ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 2.98 ಲಕ್ಷಕ್ಕೆ ದರ ನಿಗದಿ ಮಾಡಿದೆ.

ಬಿಎಂಡಬ್ಲ್ಯು ಹೊಸ ಬೈಕ್‌ಗಳನ್ನು ಟ್ರೋಲ್ ಮಾಡಿದ ಕವಾಸಕಿ ಡೀಲರ್ಸ್‌ಗಳು

ಅಸಲಿಗೆ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಜಿ 310 ಆರ್ ಮತ್ತು ಜಿ 310 ಜಿಎಸ್ ಎರಡು ಬೈಕ್‌ಗಳು ತಾಂತ್ರಿಕವಾಗಿ ಬೇರೆ ಬೇರೆ ವಿನ್ಯಾಸಗಳನ್ನು ಪಡೆದುಕೊಂಡಿದ್ದರೂ ಎರಡು ಬೈಕ್‌ಗಳಲ್ಲೂ 313 ಸಿಸಿ ಇನ್‌ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 34-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಬಿಎಂಡಬ್ಲ್ಯು ಹೊಸ ಬೈಕ್‌ಗಳನ್ನು ಟ್ರೋಲ್ ಮಾಡಿದ ಕವಾಸಕಿ ಡೀಲರ್ಸ್‌ಗಳು

ಅದೇ ರೀತಿಯಾಗಿ 296 ಸಿಸಿ ಲಿಕ್ವಿಡ್ ಕೂಲ್ಡ್ 2 ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿರುವ ಕವಾಸಕಿ ನಿಂಜಾ 300 ಬೈಕ್‌ಗಳು, 38-ಬಿಎಚ್‌ಪಿ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು. ಇದರೊಂದಿಗೆ ಬಿಎಂಡಬ್ಲ್ಯು ಬೈಕ್‌ಗಳಿಂತಲೂ ಹೆಚ್ಚಿನ ಪರ್ಫಾಮೆನ್ಸ್ ಹೊಂದಿರುವ ನಿಂಜಾ 300 ಬೈಕ್‌ಗಳು ಕಮ್ಯೂಟರ್ ವಿಭಾಗದಲ್ಲಿ ಭಾರೀ ಬೇಡಿಕೆ ಹೊಂದಿದೆ.

ಬಿಎಂಡಬ್ಲ್ಯು ಹೊಸ ಬೈಕ್‌ಗಳನ್ನು ಟ್ರೋಲ್ ಮಾಡಿದ ಕವಾಸಕಿ ಡೀಲರ್ಸ್‌ಗಳು

ಈ ಹಿನ್ನೆಲೆಯಲ್ಲಿ ಕವಾಸಕಿ ನಿಂಜಾ 300 ಮತ್ತು ಬಿಎಂಡಬ್ಲ್ಯು ಅವಳಿ ಬೈಕ್‌ಗಳ ಮಧ್ಯೆ ಪೈಪೋಟಿ ಶುರುವಾಗಿದ್ದು, ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಅಂದ್ರೆ ಬಿಎಂಡಬ್ಲ್ಯು ಅವಳಿ ಬೈಕ್‌ಗಳು ಹಾಗೂ ಕವಾಸಕಿ ನಿಂಜಾ 300 ಬೈಕ್ ಇದೇ ಮೊದಲ ಬಾರಿಗೆ ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಂಡು ಮಾರಾಟಗೊಳ್ಳುತ್ತಿವೆ.

ಬಿಎಂಡಬ್ಲ್ಯು ಹೊಸ ಬೈಕ್‌ಗಳನ್ನು ಟ್ರೋಲ್ ಮಾಡಿದ ಕವಾಸಕಿ ಡೀಲರ್ಸ್‌ಗಳು

ಒಟ್ಟಿನಲ್ಲಿ ಹೊಸ ಬೈಕ್‌ಗಳ ಮಧ್ಯೆ ಭಾರೀ ಪೈಪೋಟಿ ಶುರುವಾಗಿದ್ದು, 300 ಸಿಸಿ ವಿಭಾಗದ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಇದೀಗ ಬಿಎಂಡಬ್ಲ್ಯು ಅವಳಿ ಬೈಕ್ ಹಾಗೂ ಕವಾಸಕಿ ನಿಂಜಾ 300 ಬೈಕ್‌ಗಳದ್ದೇ ಕಾರುಬಾರು ಅಂದ್ರೆ ತಪ್ಪಾಗುದಿಲ್ಲ.

Most Read Articles

Kannada
Read more on auto facts off beat
English summary
Kawasaki India Dealer Trolls BMW New 310 Bikes.
Story first published: Monday, July 23, 2018, 19:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X