ಪ್ರಾಣಿಯ ಜೀವ ತೆಗೆದ ಬೈಕ್ ಸವಾರರ ವಿರುದ್ದ ರೊಚ್ಚಿಗೆದ್ದ ಗ್ರಾಮಸ್ಥರು

ಭಾರತದ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ನಿಜವಾಗಿಯೂ ಸವಾಲಿನ ಕೆಲಸ. ಭಾರತದ ರಸ್ತೆಗಳಲ್ಲಿ ಯಾವಾಗ, ಏನು ಸಂಭವಿಸುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಜಾನುವಾರುಗಳು, ಮನುಷ್ಯರು ಇದ್ದಕ್ಕಿದ್ದಂತೆ ವಾಹನಕ್ಕೆ ಅಡ್ಡ ಬರುವ ಸಾಧ್ಯತೆಗಳೇ ಹೆಚ್ಚು.

ಬೈಕ್ ಸವಾರನಿಂದ ಅಸು ನೀಗಿದ ಮೇಕೆ, ರೊಚ್ಚಿಗೆದ್ದ ಗ್ರಾಮಸ್ಥರು

ಈ ಕಾರಣಗಳಿಂದ ಭಾರತದ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚು. ಭಾರತದ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಸಂಬಂಧಿಸಿದ ಹಲವಾರು ವೀಡಿಯೊಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಅತಿ ವೇಗವಾಗಿ ಬೈಕಿನಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಯುವಕನೊಬ್ಬ ಅಡ್ಡ ಬಂದ ಮೇಕೆಗೆ ಡಿಕ್ಕಿ ಹೊಡೆದಿದ್ದಾನೆ. ಮುಂದೇನಾಯಿತು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬೈಕ್ ಸವಾರನಿಂದ ಅಸು ನೀಗಿದ ಮೇಕೆ, ರೊಚ್ಚಿಗೆದ್ದ ಗ್ರಾಮಸ್ಥರು

ಈ ವೀಡಿಯೊವನ್ನು ಮಿಸ್ಟರ್ ಸ್ಪೀಡ್‌ಎಂಬ ಯೂಟ್ಯೂಬ್ ಚಾನೆಲ್ ಅಪ್‌‌ಲೋಡ್ ಮಾಡಿದೆ. ಈ ವೀಡಿಯೊದಲ್ಲಿ ಹಲವು ಬೈಕ್ ಸವಾರರು ಗುಂಪಿನಲ್ಲಿ ಹೋಗುವುದನ್ನು ಕಾಣಬಹುದು. ಬೈಕರ್‌ಗಳ ಗುಂಪು ಭುವನೇಶ್ವರದಿಂದ ಭೂತಾನ್‌ಗೆ ಪ್ರಯಾಣಿಸುತ್ತಿತ್ತು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಬೈಕ್ ಸವಾರನಿಂದ ಅಸು ನೀಗಿದ ಮೇಕೆ, ರೊಚ್ಚಿಗೆದ್ದ ಗ್ರಾಮಸ್ಥರು

ಬಹುತೇಕ ಎಲ್ಲಾ ಬೈಕರ್‌ಗಳು ಹೆಚ್ಚಿನ ಪರ್ಫಾಮೆನ್ಸ್‌ನ ಸೂಪರ್ ಬೈಕ್‌ಗಳನ್ನು ಚಲಾಯಿಸುತ್ತಿದ್ದರು.ಕಿರಿದಾದ ರಸ್ತೆಗಳಿದ್ದ ಪಶ್ಚಿಮ ಬಂಗಾಳದ ಹಳ್ಳಿಯನ್ನು ತಲುಪಿದಾಗ ಬೈಕರ್‌ಗಳು ನಿಧಾನಕ್ಕೆ ಚಲಿಸುತ್ತಿದ್ದರು. ಪೊಲೀಸ್ ಚೆಕ್‌ಪೋಸ್ಟ್ ಇದ್ದ ಕಾರಣ ಬೈಕಿನ ವೇಗವನ್ನು ನಿಧಾನಗೊಳಿಸಿದ್ದಾರೆ.

ಬೈಕ್ ಸವಾರನಿಂದ ಅಸು ನೀಗಿದ ಮೇಕೆ, ರೊಚ್ಚಿಗೆದ್ದ ಗ್ರಾಮಸ್ಥರು

ಈ ಗುಂಪಿನಲ್ಲಿದ್ದ ಯುವಕನೊಬ್ಬ ಕವಾಸಕಿ ನಿಂಜಾ ಝಡ್ಎಕ್ಸ್ 10 ಆರ್ ಸೂಪರ್ ಬೈಕ್ ಚಾಲನೆ ಮಾಡುತ್ತಿದ್ದ. ಇದ್ದಕ್ಕಿದಂತೆ ಮೇಕೆಯೊಂದು ನಿಂಜಾ ಝಡ್ಎಕ್ಸ್ 10 ಆರ್ ಬೈಕಿಗೆ ಅಡ್ಡ ಬಂದಿದೆ. ಬೈಕ್ ಸವಾರನಿಗೆ ಬೈಕಿನ ಮೇಲೆ ಕಂಟ್ರೋಲ್ ಸಿಗದೇ ಮೇಕೆಗೆ ಡಿಕ್ಕಿ ಹೊಡೆದಿದ್ದಾನೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಬೈಕ್ ಸವಾರನಿಂದ ಅಸು ನೀಗಿದ ಮೇಕೆ, ರೊಚ್ಚಿಗೆದ್ದ ಗ್ರಾಮಸ್ಥರು

ಆತನ ದುರದೃಷ್ಟಕ್ಕೆ ಮೇಕೆ ಸತ್ತುಹೋಯಿತು. ಕೂಡಲೇ ಅಲ್ಲಿದ್ದ ಗ್ರಾಮಸ್ಥರು ಬೈಕ್ ಸವಾರನನ್ನು ಸುತ್ತುವರೆದು, ಆತನೊಂದಿಗೆ ವಾಗ್ವಾದ ನಡೆಸಿದ್ದಾರೆ. ವೇಗವಾಗಿ ಬೈಕ್ ಚಾಲನೆ ಮಾಡಿದ್ದರಿಂದಲೇ ಮೇಕೆ ಸತ್ತು ಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆದರೆ ಬೈಕರ್‌ಗಳು ಹೆಲ್ಮೆಟ್‌ನಲ್ಲಿದ್ದ ಕ್ಯಾಮರಾ ಆನ್ ಮಾಡಲಾಗಿತ್ತು. ತಾವು ವೇಗವಾಗಿ ಬೈಕ್‌ಗಳನ್ನು ಚಾಲನೆ ಮಾಡಿಲ್ಲ ಎಂದು ವಾದಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಲಾಂಗ್ ಡ್ರೈವ್‌ಗಳಿಗೆ ತೆರಳುವ ಬೈಕ್ ಸವಾರರು ಕ್ಯಾಮೆರಾ ಅಳವಡಿಸಿದ ಹೆಲ್ಮೆಟ್‌ಗಳನ್ನು ಧರಿಸುತ್ತಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಬೈಕ್ ಸವಾರನಿಂದ ಅಸು ನೀಗಿದ ಮೇಕೆ, ರೊಚ್ಚಿಗೆದ್ದ ಗ್ರಾಮಸ್ಥರು

ಆದರೆ ಇದರಿಂದ ತೃಪ್ತರಾಗದ ಗ್ರಾಮಸ್ಥರು ಮೇಕೆಯನ್ನು ಸಾಯಿಸಿದ ಕಾರಣಕ್ಕೆ ಹಣ ನೀಡಬೇಕೆಂದು ಒತ್ತಾಯಿಸಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಬೈಕ್ ಸವಾರನು ಹಣ ಪಾವತಿಸಿ ಅಲ್ಲಿಂದ ತೆರಳಿದ್ದಾನೆ.

Most Read Articles

Kannada
English summary
Kawasaki Ninja ZX10R rider in West Bengal hits goat surrounded by villagers. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X