ಐಷಾರಾಮಿ ಕಾರುಗಳ ಒಡೆಯ ಉದ್ಯಮಿ ಬಾಬಿ ಚೆಮ್ಮನೂರ್

ಯಾರ ಬಳಿಯೂ ಇಲ್ಲದಂಥ ಕಾರು ಅಥವಾ ಅತೀ ದುಬಾರಿ ಕಾರನ್ನು ಹೊಂದಬೇಕೆಂಬ ಕನಸು ಹಲವು ಸೆಲೆಬ್ರಿಟಿ ಮತ್ತು ಉದ್ಯಮಿಗಳಿಗಿರುತ್ತದೆ. ಇದಕ್ಕಾಗಿ ಅವರು ವಿಶ್ವದ ಅತಿ ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.

ಅತಿ ದುಬಾರಿ ಕಾರುಗಳನ್ನು ಹೊಂದಿರುವ ಬಾಬಿ ಚೆಮ್ಮನೂರ್

ಅದೇ ರೀತಿ ದಕ್ಷಿಣ ಭಾರತದ ಪ್ರಸಿದ್ಧ ಉದ್ಯಮಿಯಾಗಿರುವ ಬಾಬಿ ಚೆಮ್ಮನೂರ್ ಅವರಿಗೆ ಕಾರುಗಳ ಕ್ರೇಜ್ ಹೆಚ್ಚಿದೆ. ಬಾಬಿ ಚೆಮ್ಮನೂರ್ ಅವರು ಕೇರಳ ಮೂಲದ ಚೆಮ್ಮನೂರ್ ಜ್ಯುವೆಲ್ಲರ್ಸ್' ಗ್ರೂಪ್ ಮಾಲೀಕರಾಗಿದ್ದಾರೆ. ಇವರ ಬಳಿ ವಿಶ್ವದ ಅತಿ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಈ ಹಿಂದೆ ವಿವಿಧ ಕಾರಣಗಳಿಗಾಗಿ ಸುದ್ದಿಯಲ್ಲಿದ್ದರು. ಅವರು ಇತ್ತೀಚೆಗೆ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಎಲೆಕ್ಟ್ರಿಕ್ ಎಸ್‌ಯುವಿ ಇಕ್ಯೂಸಿಯನ್ನು ಖರೀದಿಸಿ ಸುದ್ದಿಯಾದರು.

ಅತಿ ದುಬಾರಿ ಕಾರುಗಳನ್ನು ಹೊಂದಿರುವ ಬಾಬಿ ಚೆಮ್ಮನೂರ್

ಬಾಬಿ ಚೆಮ್ಮನೂರ್ ಅವರು ಚೆಮ್ಮನೂರ್ ಜ್ಯುವೆಲ್ಲರ್ಸ್, ರಿಯಲ್ ಎಸ್ಟೇಟ್, ಹೋಟೆಲ್‌ಗಳು ಮತ್ತು ಇನ್ನೂ ಅನೇಕ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಅವರು ಮಲಯಾಳಂ ಮಾಧ್ಯಮವೊಂದಕ್ಕೆ ಸಂದರ್ಶನವೊಂದನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬಳಿ ಇರುವ ದುಬಾರಿ ಕಾರುಗಳ ಪ್ರದರ್ಶಿಸಿದ್ದಾರೆ. ಅವರ ಬಳಿ ಇರುವ ಕೆಲವು ಐಷಾರಾಮಿ ಕಾರುಗಳ ಮಾಹಿತಿ ಇಲ್ಲಿವೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಅತಿ ದುಬಾರಿ ಕಾರುಗಳನ್ನು ಹೊಂದಿರುವ ಬಾಬಿ ಚೆಮ್ಮನೂರ್

ರೋಲ್ಸ್ ರಾಯ್ಸ್ ಫ್ಯಾಂಟಮ್ 7 ಎಲ್‍‍ಡಬ್ಲ್ಯು

ದುಬಾರಿ ಕಾರುಗಳ ಸಾಲನ್ನು ಗಮನಿಸಿದಾಗ ನಮಗೆ ರೋಲ್ಸ್‌ ರಾಯ್ಸ್‌ ಕೂಡ ಆ ಸಾಲಿನಲ್ಲಿ ಕಂಡು ಬರುತ್ತದೆ. ಹೌದು, ರೋಲ್ಸ್‌ ರಾಯ್ಸ್‌ ಅತಿ ದುಬಾರಿ ಕಾರು ಬ್ರ್ಯಾಂಡ್. ಆದರೆ ಇವರ ಬಳಿ ಇರುವ ರೋಲ್ಸ್‌ ರಾಯ್ಸ್‌ ಚಿನ್ನದ ಲೇಪನದಿಂದ ಮತ್ತಷ್ಟು ಐಷಾರಾಮಿಯಾಗಿದೆ.

ಅತಿ ದುಬಾರಿ ಕಾರುಗಳನ್ನು ಹೊಂದಿರುವ ಬಾಬಿ ಚೆಮ್ಮನೂರ್

ಇದೇ ಮೊದಲ ಬಾರಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ 7 ಎಲ್‍‍ಡಬ್ಲ್ಯು ಕಾರ್ ಅನ್ನು ಟ್ಯಾಕ್ಸಿಯಾಗಿ ಬದಲಿಸಲಾಗಿದೆ. ಬಾಬಿರವರು ಈ ರೋಲ್ಸ್ ರಾಯ್ಸ್ ಕಾರ್ ಅನ್ನು ಟ್ಯಾಕ್ಸಿ ಮಾಡಲು ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ. ಈ ಕಾರಿನಲ್ಲಿ ಗೋಲ್ಡನ್ ವೈಪರ್‍‍ಗಳನ್ನು ನೀಡಲಾಗಿದೆ. ಈ ಕಾರಿನ ರೂಫ್‍‍ನಲ್ಲಿ ಟ್ಯಾಕ್ಸಿ ಎಂದು ಬರೆಯಲಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಅತಿ ದುಬಾರಿ ಕಾರುಗಳನ್ನು ಹೊಂದಿರುವ ಬಾಬಿ ಚೆಮ್ಮನೂರ್

ಕಾರಿನ ಡೋರ್‍‍ಗಳ ಮೇಲೆ ಬಾಬಿ ಟ್ಯಾಕ್ಸಿ ಎಂಬ ಸ್ಟಿಕ್ಕರ್‍‍ಗಳನ್ನು ಅಳವಡಿಸಲಾಗಿದೆ. ಬಾಬಿರವರು ಈ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ಕಳೆದ ವರ್ಷ ಖರೀದಿಸಿದ್ದರು. ಸಾಮಾನ್ಯ ಜನರಿಗೆ ರೂ.25 ಸಾವಿರಕ್ಕೆ ಬಾಡಿಗೆಗೆ ನೀಡುತ್ತಾರೆ, ಇದರಲ್ಲಿ ಅವರ ರೆಸಾರ್ಟ್‌ಗಳಲ್ಲಿ 3 ದಿನಗಳ ಕಾಲ ತಂಗಲು ಅವಕಾಶ ಇದೆ.

ಅತಿ ದುಬಾರಿ ಕಾರುಗಳನ್ನು ಹೊಂದಿರುವ ಬಾಬಿ ಚೆಮ್ಮನೂರ್

ಮರ್ಸಿಡಿಸ್ ಬೆಂಝ್ ಇಕ್ಯೂಸಿ

ಮರ್ಸಿಡಿಸ್ ಬೆಂಝ್ ತನ್ನ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‍ಯುವಿಯಾದ ಇಕ್ಯೂಸಿ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಮೊದಲ ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಇವರು ಖರೀದಿಸಿದ್ದಾರೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅತಿ ದುಬಾರಿ ಕಾರುಗಳನ್ನು ಹೊಂದಿರುವ ಬಾಬಿ ಚೆಮ್ಮನೂರ್

ಈ ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತಕ್ಕೆ ಸಿಬಿಯು ಮಾರ್ಗದ ಮೂಲಕ ತರಲಾಗುತ್ತಿದೆ. ಈ ಹೊಸ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 80 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 471 ಕಿ.ಮೀಗಳವರೆಗೆ ಚಲಿಸುತ್ತದೆ.

ಅತಿ ದುಬಾರಿ ಕಾರುಗಳನ್ನು ಹೊಂದಿರುವ ಬಾಬಿ ಚೆಮ್ಮನೂರ್

ಡಿಸಿ ಅವಾಂಟಿ

ಡಿಸಿ ಅವಾಂಟಿ ಬಹಳ ವರ್ಷಗಳ ಹಿಂದೆ ಭಾರತದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದ ಸೂಪರ್‌ ಸ್ಪೋರ್ಟ್ಸ್ ಕಾರು. ಭಾರತದ ವಾಹನ ತಯಾರಕರಿಂದ ಉತ್ಪಾದಿಸಲ್ಪಟ್ಟ ಏಕೈಕ ಸ್ಪೋರ್ಟ್ಸ್‌ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಾರು ಈ ಡಿಸಿ ಅವಾಂಟಿ. ಡಿಸಿ ಅವಾಂಟಿ ಎರಡು ಡೋರಿನ ಸ್ಪೋರ್ಟ್ಸ್ ಕಾರು ಆಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಅತಿ ದುಬಾರಿ ಕಾರುಗಳನ್ನು ಹೊಂದಿರುವ ಬಾಬಿ ಚೆಮ್ಮನೂರ್

ಡಿಸಿ ಅವಾಂಟಿ ಕಾರಿನಲ್ಲಿ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಕಾರು 250 ಬಿಹೆಚ್‍ಪಿ ಪವರ್ ಮತ್ತು 40 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಬಾಬಿ ಅವರ ಮೆಚ್ಚಿನ ಕಾರುಗಳಲ್ಲಿ ಇದು ಕೂಡ ಒಂದಾಗಿದೆ.

ರೇಂಜ್ ರೋವರ್ ಸ್ಪೋರ್ಟ್

ಬಾಬಿ ಚೆಮ್ಮನೂರ್ ಅವರ ಗ್ಯಾರೇಜ್‌ನಲ್ಲಿರುವ ಮತ್ತೊಂದು ಐಷಾರಾಮಿ ವಾಹನವೆಂದರೆ 2017ರ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯಾಗಿದೆ. ಈ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯಲ್ಲಿ 3.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 296 ಬಿಹೆಚ್‌ಪಿ ಮತ್ತು 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಅತಿ ದುಬಾರಿ ಕಾರುಗಳನ್ನು ಹೊಂದಿರುವ ಬಾಬಿ ಚೆಮ್ಮನೂರ್

ಬಾಬಿ ಚೆಮ್ಮನೂರ್ ಅವರ್ ಬಳಿ ಇತರ ದುಬಾರಿ ಮತ್ತು ಐಷಾರಾಮಿ ಕಾರುಗಳಿವೆ ಆದರೆ ವೀಡಿಯೋದಲ್ಲಿ ಈ ನಾಲ್ಕು ದುಬಾರಿಗಳನ್ನು ಪ್ರದರ್ಶಿಸಿದ್ದಾರೆ. ಬಾಬಿ ಬಾಬಿ ಚೆಮ್ಮನೂರ್ ಅವರಿಗೆ ಕಾರು ಡ್ರೈವ್ ಮಾಡುವ ಕ್ರೇಜ್ ಕೂಡ ಹೆಚ್ಚಿದೆ.

Most Read Articles

Kannada
English summary
Billionaire Boby Chemmanur Talks About His New Mercedes EQC electric SUV. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X