ನೆರೆಯಮನೆಯ ಸೈಕಲ್ ಕದ್ದ ಪುಟ್ಟ ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ಕೊಟ್ಟ ಪೊಲೀಸ್ ಅಧಿಕಾರಿ

ಸೈಕಲ್ ತುಳಿಯುವ ಆಸೆಗಾಗಿ ನೆರಮನೆಯ ಸೈಕಲ್ ಕದ್ದ ಪುಟ್ಟ ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ಕೊಟ್ಟ ಪೊಲೀಸ್ ಅಧಿಕಾರಿಯ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹೃದಯ ಶ್ರೀಮಂತಿಕೆ ಹೊಂದಿರುವ ಪೊಲೀಸ್ ಅಧಿಕಾರಿಯು ಪುಟ್ಟ ಬಾಲಕನಿಗೆ ಸೈಕಲ್ ಕೊಡಿಸಿದ ಮನ ಮಿಡಿಯುವ ಕಥೆ ಇಲ್ಲಿದೆ.

ನೆರೆಯಮನೆಯ ಸೈಕಲ್ ಕದ್ದ ಪುಟ್ಟ ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ಕೊಟ್ಟ ಪೊಲೀಸ್ ಅಧಿಕಾರಿ

ಸೈಕಲ್ ತುಳಿಯುವ ಆಸೆಗೆ ಬಿದ್ದ ಪುಟ್ಟ ಬಾಲಕ ತನ್ನ ನೆರಮನೆಯಲ್ಲಿರುವ ಹೊಚ್ಚ ಹೊಸ ಸೈಕಲ್ ಅನ್ನು ಕಳ್ಳತನ ಮಾಡುತ್ತಾನೆ. ಇದನ್ನು ತಿಳಿದ ನೆರಮನೆಯವರು ಪುಟ್ಟ ಬಾಲಕ ಸೈಕಲ್ ಕಳ್ಳತನ ಮಾಡಿದ್ದಾನೆ ಎಂದು ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಬಾಲಕನ ಮನೆಗೆ ತೆರಳಿ ಪರಿಶೀಲನೆಯನ್ನು ನಡೆಸುತ್ತಾರೆ. ಈ ವೇಳೆ ಸೈಕಲ್ ಕದ್ದ ಬಾಲಕನ ಮನೆಯಲ್ಲೇ ಸೈಕಲ್ ಲಭಿಸುತ್ತದೆ.

ನೆರೆಯಮನೆಯ ಸೈಕಲ್ ಕದ್ದ ಪುಟ್ಟ ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ಕೊಟ್ಟ ಪೊಲೀಸ್ ಅಧಿಕಾರಿ

ನಂತರ ಈ ಬಾಲಕನನ್ನು ಶೋಲಾಯೂರ್ ಪೊಲೀಸ್ ಅಧಿಕಾರಿಗಳು ಠಾಣೆಗೆ ಕರೆದೊಯ್ದರು. ಪೊಲೀಸರು ವಿಚಾರಣೆ ಮಾಡುವಾಗ ಪುಟ್ಟ ಬಾಲಕನು ತಾನು ಸೈಕಲ್ ತುಳಿಯುವ ಆಸೆಯಿಂದ ತೆಗೆದುಕೊಂಡೆ ಎಂದು ಹೇಳಿದ್ದಾರೆ. ನಂತರ ಪೊಲೀಸರು ಈ ಪ್ರಕರಣವನ್ನು ಮಾತಿನಲ್ಲೇ ಬಗೆಹರಿಸಿದರು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ನೆರೆಯಮನೆಯ ಸೈಕಲ್ ಕದ್ದ ಪುಟ್ಟ ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ಕೊಟ್ಟ ಪೊಲೀಸ್ ಅಧಿಕಾರಿ

ಈ ಪುಟ್ಟ ಬಾಲಕನ ಕುಟುಂಬವು ತುಂಬಾ ಬಡತನದಲ್ಲಿದೆ. ಇದರಿಂದ ಬಾಲಕನ ಪಾಲಕರಿಗೆ ಸೈಕಲ್ ಕೊಡಿಸಲು ಸಾಧ್ಯವಾಗಿಲ್ಲ. ಈ ಕಥೆಯನ್ನು ಕೇಳಿದ ಕೇರಳದ ಶೋಲಾಯೂರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ವಿನೋದ್ ಕೃಷ್ಣ ಅವರು ದುಃಖಿತರಾಗುತ್ತಾರೆ.

ನೆರೆಯಮನೆಯ ಸೈಕಲ್ ಕದ್ದ ಪುಟ್ಟ ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ಕೊಟ್ಟ ಪೊಲೀಸ್ ಅಧಿಕಾರಿ

ನಂತರ ಪೊಲೀಸ್ ಅಧಿಕಾರಿ ವಿನೋದ್ ಕೃಷ್ಣ ಅವರು ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ನೀಡಲು ನಿರ್ಧರಿಸುತ್ತಾರೆ. ಇದಕ್ಕಾಗಿ ಅವರು ಲತೀಫ್ ಅವರ ಸೈಕಲ್ ಅಂಗಡಿಗೆ ತೆರಳುತ್ತಾರೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ನೆರೆಯಮನೆಯ ಸೈಕಲ್ ಕದ್ದ ಪುಟ್ಟ ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ಕೊಟ್ಟ ಪೊಲೀಸ್ ಅಧಿಕಾರಿ

ಲತೀಫ್ ಅವರ ಬಳಿ ಇವರು ನಡೆದ ಈ ಎಲ್ಲಾ ಘಟನೆಗಳನ್ನು ಹಂಚಿಕೊಳ್ಳುತ್ತಾರೆ. ಇದರೊಂದಿಗೆ ಅವರು ತಾನು ಬಾಲ್ಯದಲ್ಲಿ ಸೈಕಲ್ ಬೇಕೆಂದು ಎಷ್ಟು ಆಸೆ ಪಟ್ಟಿದ್ದರು ಮತ್ತು ಸೈಕಲ್ ಇಲ್ಲದಿರುವುದಕ್ಕೆ ಎಷ್ಟು ಬೇಸರಗೊಂಡಿದೆ ಎಂಬ ವಿಷಯವನ್ನು ಲತೀಫ್ ಅವರ ಜೊತೆ ಹೇಳಿದರು.

ನೆರೆಯಮನೆಯ ಸೈಕಲ್ ಕದ್ದ ಪುಟ್ಟ ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ಕೊಟ್ಟ ಪೊಲೀಸ್ ಅಧಿಕಾರಿ

ಆಗ ಆಂಗಡಿಯ ಮಾಲೀಕ ಲತೀಫ್ ಕೂಡ ತಾನು ಸೈಕಲ್ ಇಲ್ಲದೇ ಬಾಲ್ಯದಲ್ಲಿ ಬಾಡಿಗೆಗೆ ಪಡೆಯುತ್ತಿದೆ ಎಂದು ನೆನಪಿಸಿಕೊಂಡರು. ಲತೀಫ್ ನಂತರ ಸೈಕಲ್‌ಗೆ ಹಣ ಪಾವತಿಸಬಾರದೆಂದು ವಿನೋದ್ ಕೃಷ್ಣ ಅವರನ್ನು ಒತ್ತಾಯಿಸಿದರು.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ನೆರೆಯಮನೆಯ ಸೈಕಲ್ ಕದ್ದ ಪುಟ್ಟ ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ಕೊಟ್ಟ ಪೊಲೀಸ್ ಅಧಿಕಾರಿ

ಪೊಲೀಸ್ ಅಧಿಕಾರಿಗಳ ವಿರುದ್ಧ ದೂರುಗಳು ಬಂದರೂ, ನಮ್ಮ ರಕ್ಷಣೆಗಾಗಿ ಉತ್ತಮ ಹೃದಯ ಹೊಂದಿರುವ ಅಂತಹ ಅಧಿಕಾರಿಗಳು ಇದ್ದಾರೆ ಎಂದು ನಾವು ಯಾವಾಗಲೂ ಹೆಮ್ಮೆ ಪಡಬಹುದು. ಶೋಲಾಯೂರ್ ಪೊಲೀಸ್ ಠಾಣೆಯ ಸಿಐ ವಿನೋದ್ ಕೃಷ್ಣ ಮತ್ತು ಅವರ ಸಹೋದ್ಯೋಗಿಗಳಿಗೆ ವಂದಿಸುತ್ತೇನೆ ಎಂದು ಲತೀಫ್ ಹೇಳಿದ್ದಾರೆ.

ನೆರೆಯಮನೆಯ ಸೈಕಲ್ ಕದ್ದ ಪುಟ್ಟ ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ಕೊಟ್ಟ ಪೊಲೀಸ್ ಅಧಿಕಾರಿ

ಹೊಸ ಸೈಕಲ್ ಕಂಡಾಗ ಪುಟ್ಟ ಬಾಲಕನ ಸಂತೋಷ ಕಂಡಾಗ ನನ್ನ ಹೃದಯ ತುಂಬಿತು ಎಂದು ಈ ಎಲ್ಲಾ ಘಟನೆಯನ್ನು ವಿವರಿಸಿ ಲತೀಫ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಅನ್ನು 11,000ಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ.

ನೆರೆಯಮನೆಯ ಸೈಕಲ್ ಕದ್ದ ಪುಟ್ಟ ಬಾಲಕನಿಗೆ ಹೊಸ ಸೈಕಲ್ ಗಿಫ್ಟ್ ಕೊಟ್ಟ ಪೊಲೀಸ್ ಅಧಿಕಾರಿ

ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಅಧಿಕಾರಿ ವಿನೋದ್ ಕೃಷ್ಣ ಮತ್ತು ಸೈಕಲ್ ಅಂಗಡಿ ಲತೀಫ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಎಷ್ಟೇ ಪೊಲೀಸ್ ಅಧಿಕಾರಿಗಳನ್ನು ದೂರಿದರು ಒಳ್ಳೆಯ ಹೃದಯವಂತ ಅಧಿಕಾರಿಗಳು ಇದ್ದಾರೆ ಎಂಬುದಕ್ಕೆ ಇಂತಹ ಘಟನೆಗಳು ಸಾಕ್ಷಿಯಾಗಿದೆ.

Most Read Articles

Kannada
English summary
Kerala Cop Gifts Bicycle To A Class 3 Boy Who Couldn’t Afford One. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X