ಅದ್ಭುತ ಲೋಕ... ರಾಜಧಾನಿ ಸುತ್ತಿ ನೋಡಲು ಡಬಲ್ ಡೆಕ್ಕರ್ ಬಸ್ ಸವಾರಿ: ವಿಡಿಯೋ ನೋಡಿ
ಭಾರತದಲ್ಲಿ ಇಲ್ಲಿಯವರೆಗೆ ನಾವು ಎಲೆಕ್ಟ್ರಿಕ್ ಬೈಕ್‌ಗಳು, ಕಾರುಗಳು ಮತ್ತು ಬಸ್‌ಗಳನ್ನು ನೋಡಿದ್ದೇವೆ. ಆದರೆ ಡಬಲ್ ಡೆಕ್ಕರ್ ಬಸ್ (Double Decker Bus) ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿ ಹೋಗುವುದನ್ನು ನೋಡಿಲ್ಲ. ಈಗ ನೋಡುವ ಅವಕಾಶ ಸಿಕ್ಕಿದೆ. ಕೇರಳ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಸಿಟಿ ಸರ್ಕ್ಯುಲರ್ ಸೇವೆ ಆರಂಭಿಸಿದೆ
ಕೇರಳದಲ್ಲಿ ಇದು ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಸಿಟಿ ಸರ್ಕ್ಯುಲರ್ ಸೇವೆಯಾಗಿದೆ. ಸ್ಮಾರ್ಟ್ ಸಿಟಿ ತಿರುವನಂತಪುರಂ ಲಿಮಿಟೆಡ್ ಮತ್ತು ಕೆಎಸ್‌ಆರ್‌ಟಿಸಿ (KSRTC) ನಡುವಿನ ಜಂಟಿ ಉದ್ಯಮ ಇದಾಗಿದೆ. ತಿರುವನಂತಪುರಂ ನಗರ ತಲುಪುವ ಪ್ರವಾಸಿಗರಿಗೆ ಉತ್ತಮ ಪ್ರಯಾಣ ಸೌಲಭ್ಯ ಒದಗಿಸುತ್ತದೆ. ಪ್ರಸ್ತುತ ನಿಗಮವು 2 ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಸೇವೆಯಲ್ಲಿದೆ. ಕೇರಳ ರಸ್ತೆ ಸಾರಿಗೆ ನಿಗಮ ಜತೆಗೆ ಪ್ರವಾಸೋದ್ಯಮ ಗುರಿಯೊಂದಿಗೆ ಹೊಸ ಬಸ್ ಖರೀದಿಸಲಾಗುವುದು.
ಕೆಎಸ್‌ಆರ್‌ಟಿಸಿ ತಾಂತ್ರಿಕ ವಿಭಾಗದ ಮೌಲ್ಯಮಾಪನದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ನಾನ್ ಎಸಿ ಓಪನ್ ರೂಫ್, ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಕೆಎಸ್‌ಆರ್‌ಟಿಸಿ ಟೆಂಡರ್ ನೀಡಿದೆ. ಬಸ್‌ನಲ್ಲಿ ವಿದ್ಯುತ್ ಚಾಲಿತ ಸ್ವಯಂ ತೆರೆಯವ, ಮುಚ್ಚುವ ರೂಫ್ ಮತ್ತು ಚಾರ್ಜರ್ ಇರಲಿರೋದು ಗಮನಾರ್ಹ. ಅಶೋಕ್ ಲೈಲ್ಯಾಂಡ್‌ನ ಸ್ವಿಚ್ ಎಂಬ ಕಂಪೆನಿಯಿಂದ ಬಸ್ ಖರೀದಿಸಲಾಗುವುದು.
ಡಬಲ್ ಡೆಕ್ಕರ್ ಬಸ್ ಪ್ರಯಾಣಿಕ ದರ ರೂ.100 ಆಗಿದೆ. ಎರಡೂ ಗಂಟೆಯಲ್ಲಿ ಪೂರ್ತಿ ತಿರುವನಂತಪುರಂ ಸಿಟಿಯನ್ನು ತೋರಿಸುತ್ತಾರೆ. ಇನ್ನು ಈ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಪವರ್ ಟ್ರೆನ್ ಬಗ್ಗೆ ಹೇಳುವುದಾದರೆ, 235 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, 231 ಪವರ್ ಅನ್ನು ಉತ್ಪಾದಿಸುತದೆ. ಇನ್ನು ಇದರ ಟಾರ್ಕ್ ಬಗ್ಗೆ ಹೇಳುವುದಾದರೆ, 3,100 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮುಖ್ಯವಾಗಿ ಶೋಕ್ ಲೈಲ್ಯಾಂಡ್‌ನ ಸ್ವಿಚ್ ಎಂಬ ಡಬಲ್ ಡೆಕ್ಕರ್ ಬಸ್ ರೇಂಜ್ ಬಗ್ಗೆ ಹೇಳುವುದಾದರೆ, ಕಂಪನಿ 250 ಕಿ.ಮೀ ರೇಂಜ್ ನೀಡುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಇನ್ನು ಸಾರಿಗೆ ಬಸ್ ನಿಗಮದ ಪ್ರಕಾರ, 200 ಕಿ.ಮೀ ರೇಂಜ್ ಅನ್ನು ನೀಡುತ್ತಿದೆ. ಇನ್ನೂ ಇಂತಹ ಡಬಲ್ ಡೆಕ್ಕರ್ ಬಸ್ ನಮ್ಮ ಬೆಂಗಳೂರಿನಲ್ಲಿ ಪ್ರಾರಂಭಿಸಿದರೆ ಚೆನ್ನಾಗಿರುತ್ತದೆ. ಆದರೆ ಇನ್ನೊಂದು ಕಡೆ ದೊಡ್ಡ ಬಸ್ ಆಗಿರುವುದರಿಂದ ಟ್ರಾಫಿಕ್ ಹೆಚ್ಚಾಗಲು ಕಾರಣ ಕೂಡ ಆಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications