ಮಗನಿಗಾಗಿ ಮಿನಿ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿದ ಅಪ್ಪ..!

ರಾಯಲ್ ಎನ್‍‍ಫೀಲ್ಡ್ ಬೈಕ್ ಪ್ರಪಂಚದಲ್ಲಿರುವ ಹಳೆಯ ಬೈಕುಗಳ ಪೈಕಿ ಒಂದಾಗಿದೆ. ಭಾರತದಲ್ಲಿ ಹಾಗೂ ಪ್ರಪಂಚದ್ಯಾಂತ ಈ ಬೈಕ್ ಅನ್ನು ಆರಾಧಿಸುವ ಅಭಿಮಾನಿಗಳಿದ್ದಾರೆ. ಈ ಬೈಕಿನ ಬಗ್ಗೆ ಇರುವ ಕ್ರೇಜ್ ಎಷ್ಟೆಂದರೆ ಪ್ರತಿಯೊಬ್ಬ ಬೈಕ್ ಪ್ರಿಯರು ತಾವು ಸಾಯುವುದರೊಳಗೆ ಒಮ್ಮೆಯಾದರೂ ಈ ಬೈಕಿನ ಮಾಲೀಕರಾಗ ಬೇಕೆಂದು ಬಯಸುತ್ತಾರೆ.

ಮಗನಿಗಾಗಿ ಮಿನಿ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿದ ಅಪ್ಪ..!

ಈ ರೀತಿಯ ಕನಸನ್ನು ತಮ್ಮ ಯೌವ್ವನದಲ್ಲಿ ಕಾಣುತ್ತಾರೆ. ಆದರೆ ಕೆಲವು ಅದೃಷ್ಟವಂತರು ಚಿಕ್ಕ ವಯಸ್ಸಿನಲ್ಲಿಯೇ ಈ ಬೈಕಿನ ಮಾಲೀಕರಾಗುತ್ತಾರೆ. ಈ ವೀಡಿಯೊದಲ್ಲಿ ತಂದೆಯೊಬ್ಬರು ತಮ್ಮ ಮಗನಿಗಾಗಿ ರಾಯಲ್ ಎನ್‍‍ಫೀಲ್ಡ್ ಬುಲೆಟ್ ಬೈಕ್ ಅನ್ನು ಸ್ವತಃ ತಾವೇ ತಯಾರಿಸಿ ನೀಡಿರುವುದನ್ನು ಕಾಣಬಹುದು.

ಈ ವೀಡಿಯೊವನ್ನು ಈ ಟಿವಿ ಅಂಧ್ರ ಪ್ರದೇಶ್ ಅಪ್‍‍ಲೋಡ್ ಮಾಡಿದೆ. ಈ ಘಟನೆಯು ಕೇರಳದ ಕೊಲ್ಲಂನಲ್ಲಿ ನಡೆದಿದೆ. ಈ ವೀಡಿಯೊದಲ್ಲಿ 5 ರಿಂದ 7 ವರ್ಷ ವಯಸ್ಸಿನ ಬಾಲಕನು ಮಿನಿ ರಾಯಲ್ ಎನ್‍‍ಫೀಲ್ಡ್ ಬುಲೆಟ್ ಬೈಕ್ ಅನ್ನು ಚಾಲನೆ ಮಾಡುವುದನ್ನು ಕಾಣಬಹುದು.

ಮಗನಿಗಾಗಿ ಮಿನಿ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿದ ಅಪ್ಪ..!

ತಂದೆಯು ತನ್ನ ಮಗನಿಗಾಗಿ ಮನೆಯಲ್ಲಿಯೇ ಈ ಬೈಕ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ಮಿನಿ ಬೈಕ್ ರಾಯಲ್ ಎನ್‍‍ಫೀಲ್ಡ್ ಬುಲೆಟ್ ಬೈಕಿನಂತೆಯೇ ಕಾಣುತ್ತದೆ. ಈ ಮಿನಿ ಬೈಕ್ ಅನ್ನು ಪೂರ್ತಿಯಾಗಿ ಫೈಬರ್‍‍ನಿಂದ ತಯಾರಿಸಲಾಗಿದೆ.

ಮಗನಿಗಾಗಿ ಮಿನಿ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿದ ಅಪ್ಪ..!

ಎಲ್ಲಾ ಬಿಡಿಭಾಗಗಳನ್ನು ಮನೆಯಲ್ಲಿಯೇ ಅಸೆಂಬ್ಲ್ ಮಾಡಲಾಗಿದೆ. ಈ ಬೈಕ್ ಅನ್ನು ಎಲೆಕ್ಟ್ರಿಕ್ ಬ್ಯಾಟರಿಯಿಂದ ಚಲಾಯಿಸಲಾಗುತ್ತದೆ. ಬ್ಯಾಟರಿ ಚಾಲಿತ ಈ ಮಿನಿ ಬೈಕ್ ಆಕರ್ಷಕವಾಗಿ ಕಾಣುವುದರ ಜೊತೆಗೆ ಥೇಟ್ ರಾಯಲ್ ಎನ್‍‍ಫೀಲ್ಡ್ ಬೈಕಿನಂತಿದೆ.

ಮಗನಿಗಾಗಿ ಮಿನಿ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿದ ಅಪ್ಪ..!

ಈ ಮಿನಿ ಬೈಕಿನಲ್ಲಿ ರಾಯಲ್ ಎನ್‍‍ಫೀಲ್ಡ್ ಬೈಕಿನಲ್ಲಿರುವಂತಹ ಹೆಡ್‍‍ಲ್ಯಾಂಪ್, ಸಿಂಗಲ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳಿವೆ. ಈ ಮಿನಿ ಬೈಕಿನ ಫ್ಯೂಯಲ್ ಟ್ಯಾಂಕಿನ ಮೇಲೆ ರಾಯಲ್ ಎನ್‍‍ಫೀಲ್ಡ್ ಬ್ಯಾಡ್ಜ್ ಹಾಕಲಾಗಿದೆ.

ಮಗನಿಗಾಗಿ ಮಿನಿ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿದ ಅಪ್ಪ..!

ಮಿನಿ ಬೈಕಿನಲ್ಲಿರುವ ಅಳವಡಿಸಲಾಗಿರುವ ಸಸ್ಪೆಂಷನ್, ಇಂಡಿಕೇಟರ್, ಮಿರರ್ ಹಾಗೂ ಲೆಗ್ ಗಾರ್ಡ್‍‍ಗಳನ್ನು ವೀಡಿಯೊದಲ್ಲಿ ಕಾಣಬಹುದು. ಈ ಬೈಕಿನಲ್ಲಿರುವ ಚಾಸೀಸ್ ಅನ್ನು ಕೈಯಿಂದ ಅಭಿವೃದ್ಧಿಪಡಿಸಲಾಗಿದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಮಗನಿಗಾಗಿ ಮಿನಿ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿದ ಅಪ್ಪ..!

ಚಿಕ್ಕ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‍‍ಗಳನ್ನು ಈ ರೀತಿಯ ಮಿನಿ ಬೈಕುಗಳಲ್ಲಿ ಸುಲಭವಾಗಿ ಅಳವಡಿಸಬಹುದು. ಆದರೆ ಎಲೆಕ್ಟ್ರಿಕ್ ಎಂಜಿನ್ ಅನ್ನು ಅಳವಡಿಸಿದರೆ ಈ ಬೈಕ್ ಅನ್ನು ಟ್ರಾನ್ಸ್ ಮಿಷನ್ ಇಲ್ಲದೇ ಆಪರೇಟ್ ಮಾಡಬಹುದು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಮಗನಿಗಾಗಿ ಮಿನಿ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿದ ಅಪ್ಪ..!

ಈ ಎಲೆಕ್ಟ್ರಿಕ್ ಮೋಟರ್ ಹಾಗೂ ಬ್ಯಾಟರಿಯ ಸಾಮರ್ಥ್ಯದ ಬಗ್ಗೆ ನಿರ್ದಿಷ್ಟವಾಗಿ ತಿಳಿದುಬಂದಿಲ್ಲ. ಆದರೆ ಇವೆರಡೂ ಖಂಡಿತವಾಗಿಯೂ ಸಣ್ಣ ಸಾಮರ್ಥ್ಯವನ್ನು ಹೊಂದಿವೆ. ಈ ಬೈಕಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 30 ನಿಮಿಷಗಳ ಕಾಲ ಈ ಮಿನಿ ಬೈಕ್ ಅನ್ನು ಚಲಾಯಿಸಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಮಗನಿಗಾಗಿ ಮಿನಿ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿದ ಅಪ್ಪ..!

ಈ ಮಿನಿ ಎಲೆಕ್ಟ್ರಿಕ್ ಬೈಕ್ ಅನ್ನು ತಂದೆಯು ತನ್ನ ಮಗನಿಗಾಗಿ ತಯಾರಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದ ರಾಯಲ್ ಎನ್‍‍ಫೀಲ್ಡ್ ಬೈಕುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಬಯಸಿದೆ.

ಮಗನಿಗಾಗಿ ಮಿನಿ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿದ ಅಪ್ಪ..!

ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿರುವ 350ಸಿಸಿಯ ರಾಯಲ್ ಎನ್‍‍ಫೀಲ್ಡ್ ಬೈಕುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಕಂಪನಿಯ ಬೈಕುಗಳಿಗಾಗಿ ಬಿ‍ಎಸ್6 ಎಂಜಿನ್‍‍ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಮಗನಿಗಾಗಿ ಮಿನಿ ಎಲೆಕ್ಟ್ರಿಕ್ ಬುಲೆಟ್ ಬೈಕ್ ತಯಾರಿಸಿದ ಅಪ್ಪ..!

ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ 650ಸಿಸಿಯ ಜನಪ್ರಿಯ ಬೈಕುಗಳಾದ ಕಾಂಟಿನೆಂಟಲ್ ಜಿ‍‍ಟಿ ಹಾಗೂ ಇಂಟರ್‍‍ಸೆಪ್ಟರ್ ರೀತಿಯಲ್ಲಿ ಹಿಮಾಲಯನ್ ಬೈಕುಗಳನ್ನೂ ಸಹ 650ಸಿಸಿ ಸಾಮರ್ಥ್ಯದ ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Image Courstey: ETV Andhra Pradesh/YouTube

Most Read Articles

Kannada
English summary
Dad builds Royal Enfield Electric ‘Mini Bullet’ for son - Read in kannada
Story first published: Monday, September 23, 2019, 17:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X