ಚಲಿಸುತ್ತಿರುವ ಕಾರಿನಿಂದ ಹೊರ ಬಿದ್ದ ಮಗು..!

ಸಾರ್ವಜನಿಕ ರಸ್ತೆಗಳಲ್ಲಿ ಪ್ರಯಾಣಿಸುವಾಗ ಭಾರತೀಯರು ಸುರಕ್ಷತೆಯತ್ತ ಹೆಚ್ಚಿನ ಗಮನವನ್ನು ನೀಡುವುದಿಲ್ಲ. ಇದರಿಂದಾಗಿ ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇವುಗಳಿಂದಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ.

ಚಲಿಸುತ್ತಿರುವ ಕಾರಿನಿಂದ ಹೊರ ಬಿದ್ದ ಮಗು..!

ರಸ್ತೆ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸುತ್ತಿದ್ದರೂ, ಜನರು ಅವುಗಳನ್ನು ಪರಿಗಣಿಸುತ್ತಲೇ ಇಲ್ಲ. ರಸ್ತೆ ಅಪಘಾತಗಳ ಬಗ್ಗೆ ಹಲವಾರು ವೀಡಿಯೊಗಳಿದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪೋಸ್ಟ್ ಮಾಡಲಾಗುತ್ತಿದೆ.

ಚಲಿಸುತ್ತಿರುವ ಕಾರಿನಿಂದ ಹೊರ ಬಿದ್ದ ಮಗು..!

ಈಗ ಜನರು ಬೆಚ್ಚಿ ಬೀಳುವ ವೀಡಿಯೊವೊಂದನ್ನು ಬಿಡುಗಡೆಗೊಳಿಸಲಾಗಿದೆ. ಈ ವೀಡಿಯೊದಲ್ಲಿ ಚಿಕ್ಕ ಮಗುವೊಂದು ಚಲಿಸುತ್ತಿರುವ ಕಾರಿನಿಂದ ಹೊರ ಬೀಳುವುದನ್ನು ಕಾಣಬಹುದು. ಆದರೆ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಚಲಿಸುತ್ತಿರುವ ಕಾರಿನಿಂದ ಹೊರ ಬಿದ್ದ ಮಗು..!

ಈ ಘಟನೆ ನಡೆದಿರುವುದು ಕೇರಳದಲ್ಲಿ. ಈ ಘಟನೆಯು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೊದಲ್ಲಿ ಎರಡು ಲೇನ್‍‍ಗಳ ರಸ್ತೆಯನ್ನು ಕಾಣಬಹುದು. ತಿರುವು ರಸ್ತೆಗಳಾದ ಕಾರಣಕ್ಕೆ ಈ ರಸ್ತೆಗಳಲ್ಲಿ ಯಾವುದೇ ಡಿವೈಡರ್‍‍ಗಳಿಲ್ಲ.

ಚಲಿಸುತ್ತಿರುವ ಕಾರಿನಿಂದ ಹೊರ ಬಿದ್ದ ಮಗು..!

ಈ ರಸ್ತೆಯಲ್ಲಿ ಹ್ಯಾಚ್‍‍ಬ್ಯಾಕ್ ಕಾರ್ ಒಂದು ಬಂದು ಎಡಕ್ಕೆ ತಿರುಗುತ್ತದೆ. ತಕ್ಷಣವೇ ಕಾರಿನ ಹಿಂಬದಿಯ ಬಲಭಾಗದ ಡೋರ್ ತೆರೆದುಕೊಳ್ಳುತ್ತದೆ. ಡೋರ್ ತೆರೆದುಕೊಂಡ ತಕ್ಷಣ ಕಾರಿನಲ್ಲಿದ್ದ ಮಗು ಹೊರಗೆ ಬೀಳುತ್ತದೆ. ಅದೇ ವೇಳೆ ಹಲವು ವಾಹನಗಳು ಆ ರಸ್ತೆಯಲ್ಲಿ ಬರುತ್ತವೆ.

ಚಲಿಸುತ್ತಿರುವ ಕಾರಿನಿಂದ ಹೊರ ಬಿದ್ದ ಮಗು..!

ಮಗು ರಸ್ತೆಯಲ್ಲಿ ಬಿದ್ದಿರುವುದನ್ನು ಗಮನಿಸುವ ಬೇರೆ ವಾಹನಗಳ ಚಾಲಕರು, ತಮ್ಮ ವಾಹನಗಳನ್ನು ನಿಧಾನಗೊಳಿಸುವುದರ ಜೊತೆಗೆ, ಅಲ್ಲಿಯೇ ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಮಗುವಿನ ಜೀವಕ್ಕೆ ಯಾವುದೇ ಅಪಾಯ ಸಂಭವಿಸದಿದ್ದರೂ ಸಣ್ಣ ಪುಟ್ಟ ಗಾಯಗಳಾಗಿರುವ ಸಾಧ್ಯತೆಗಳಿವೆ.

ಚಲಿಸುತ್ತಿರುವ ಕಾರಿನಿಂದ ಹೊರ ಬಿದ್ದ ಮಗು..!

ಮಗುವನ್ನು ಕಾರಿನಲ್ಲಿದ್ದವರು ಹೊರಕ್ಕೆ ಎಸೆದಿರುವ ಸಾಧ್ಯತೆಗಳಿಲ್ಲ. ಆದರೆ ಕಾರಿನ ಡೋರ್ ಅನ್ನು ಸರಿಯಾಗಿ ಮುಚ್ಚದ ಕಾರಣಕ್ಕೆ, ಡೋರ್ ತೆರೆದುಕೊಂಡು ಮಗು ಹೊರಗೆ ಬಿದ್ದಿರುವ ಸಾಧ್ಯತೆಗಳಿವೆ. ರಸ್ತೆಯಲ್ಲಿ ತಿರುವಿದ್ದ ಕಾರಣಕ್ಕೆ ಡೋರ್ ತೆರೆದುಕೊಂಡಿದೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಚಲಿಸುತ್ತಿರುವ ಕಾರಿನಿಂದ ಹೊರ ಬಿದ್ದ ಮಗು..!

ಇದರಿಂದಾಗಿ ಮಗು ಕಾರಿನಿಂದ ಹೊರ ಬಿದ್ದಿದೆ. ಈ ಘಟನೆ ನಡೆದಾಗ ಮಗು ಸೀಟ್ ಬೆಲ್ಟ್ ಧರಿಸದೇ ಇರುವುದು ಸ್ಪಷ್ಟವಾಗಿದೆ. ಸೀಟ್ ಬೆಲ್ಟ್ ಧರಿಸಿದ್ದರೆ ಮಗು ಕಾರಿನಿಂದ ಹೊರ ಬೀಳುತ್ತಿರಲಿಲ್ಲ. ಕಾರುಗಳಲ್ಲಿ ಹಿಂಬದಿಯ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಗಳನ್ನು ನೀಡಲಾಗಿರುತ್ತದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಚಲಿಸುತ್ತಿರುವ ಕಾರಿನಿಂದ ಹೊರ ಬಿದ್ದ ಮಗು..!

ಈ ಘಟನೆಯಿಂದ ಕಾರುಗಳಲ್ಲಿ ಎಷ್ಟು ಜಾಗರೂಕತೆಯಿಂದ ಪ್ರಯಾಣ ಮಾಡಬೇಕೆಂಬುದನ್ನು ತಿಳಿಯಬಹುದು. ಅದರಲ್ಲೂ ಚಿಕ್ಕ ಮಕ್ಕಳಿರುವಾಗ ಹೆಚ್ಚು ಜಾಗರೂಕರಾಗಿರ ಬೇಕಾಗುತ್ತದೆ. ಕಾರಿನ ಮುಂಭಾಗದಲ್ಲಿರಲಿ ಅಥವಾ ಹಿಂಭಾಗದಲ್ಲಿರಲಿ ಸೀಟ್ ಬೆಲ್ಟ್ ಗಳನ್ನು ಧರಿಸುವುದು ಸೂಕ್ತ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೊಸ ಮೋಟಾರು ವಾಹನ ಕಾಯ್ದೆಯನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಿನಿಂದ ಜಾರಿಗೆ ತರಲಾಗಿದೆ. ಇದರನ್ವಯ ಸೀಟ್ ಬೆಲ್ಟ್ ಧರಿಸದ ಕಾರಿನ ಮುಂಭಾಗದ ಪ್ರಯಾಣಿಕರಿಗೂ ದಂಡ ವಿಧಿಸಲಾಗುತ್ತಿದೆ. ಈ ದಂಡಕ್ಕೆ ಹೆದರಿ ಕಾರಿನ ಮುಂಭಾಗದಲ್ಲಿರುವವರು ಸೀಟ್ ಬೆಲ್ಟ್ ಧರಿಸುತ್ತಿದ್ದಾರೆ.

ಚಲಿಸುತ್ತಿರುವ ಕಾರಿನಿಂದ ಹೊರ ಬಿದ್ದ ಮಗು..!

ಆದರೆ ಹಿಂಭಾಗದಲ್ಲಿರುವ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುತ್ತಿಲ್ಲ. ಯಾವುದೇ ಅಪಘಾತ ಸಂಭವಿಸಿದಾಗ ಸೀಟ್ ಬೆಲ್ಟ್ ಧರಿಸದೇ ಇರುವವರಿಗೆ ಹೆಚ್ಚು ಅಪಾಯವಾಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

Most Read Articles

Kannada
English summary
Kid falls out of the car in Kerala - Read in Kannada
Story first published: Wednesday, December 25, 2019, 10:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X