ದೇಶದ ಮೊದಲ 'ಜಲವಿಮಾನ' ಸಂಚಾರ ಕೇರಳದಲ್ಲಿ ಆರಂಭ
ಪ್ರವಾಸಿಗರ ಸ್ವರ್ಗ ಎಂದೇ ವಿಶ್ಲೇಷಿಸಬಹುದಾದ 'ದೇವರ ಸ್ವಂತ ನಾಡು' ನೆರೆಯ ಕೇರಳ ವಿನೋದ ಸಂಚಾರದಲ್ಲಿ ಮತ್ತೊಂದು ಮೈಲುಗಲ್ಲನ್ನು ಇಟ್ಟಿದ್ದು, ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಜಲವಿಮಾನ (seaplane service) ಸಂಚಾರ ಆರಂಭಿಸಿದೆ.
ಪ್ರಮುಖವಾಗಿ ಕೇರಳಕ್ಕೆ ಆಗಮಿಸುತ್ತಿರುವ ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ವಿನೂತನ ಅನುಭವ ನೀಡುವುದು ಜಲವಿಮಾನ ಸಂಚಾರದ ಮುಖ್ಯ ಉದ್ದೇಶವಾಗಿರಲಿದೆ. ಇದರೊಂದಿಗೆ ಕೇರಳ ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಆದಾಯವನ್ನು ಗಳಿಸಲಿದೆ.
ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನೂತನ ಜಲವಿಮಾನ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಅಷ್ಟಮುಡಿ ಸರೋವರದಿಂದ ಪುನ್ನಮಡ ವರೆಗೂ ಮೊದಲ ಸಂಚಾರ ಆರಂಭಿಸಲಾಗಿದೆ. ಆದರೆ ಭಾರಿ ಮಳೆಯಾಗಿದ್ದರಿಂದ ಮೊದಲ ಸರ್ವೀಸ್ ರದ್ದುಪಡಿಸಲಾಗಿತ್ತು.

ಕೆಟ್ಟ ಹವಾಮಾನ ಪರಿಸ್ಥಿತಿ ನಡುವೆಯೂ ನೂತನ ಜಲವಿಮಾನ ಸಂಚಾರವನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ನೆರೆದಿದ್ದರು. ಆರು ಸೀಟಿನ ಈ ಜಲವಿಮಾನವನ್ನು ಬೆಲ್ಜಿಯಂ ಕಾಪ್ಟನ್ ಮೈಕಲ್ ಫ್ಯಾಬ್ರಿ ನಿಯಂತ್ರಿಸುತ್ತಿದ್ದಾರೆ.

ಈ ನಡುವೆ ಪ್ರಸ್ತುತ ಯೋಜನೆಯನ್ನು ಕೈಬಿಡಬೇಕೆಂಬ ಬಲವಾದ ಬೇಡಿಕೆ ಕೇರಳ ವೀನುಗಾರಿಕೆಯಿಂದ ಕೇಳಿಬರುತ್ತಿದೆ. ಇದರಿಂದ ತಮ್ಮ ಜೀವನೋಪಾಯ ಮಾರ್ಗ ಇಲ್ಲದಾಗುತ್ತದೆ ಎಂಬ ಭೀತಿ ಸೃಷ್ಟಿಯಾಗಿದೆ.

ಫಿಕ್ಸೆಡ್ ವಿಂಗ್ ಏರ್‌ಕ್ರಾಫ್ಟ್‌ಗಳಿಂದ ನಿಯಂತ್ರಿಸಲ್ಪಡುವ ಜಲವಿಮಾನ ನೀರಿನಿಂದಲೇ ಟೇಕ್ ಆಫ್ ಹಾಗೂ ಲ್ಯಾಂಡ್ ಆಗುವ ಸಾಮರ್ಥ್ಯವನ್ನು ಹೊಂದಿದೆ.

ತಂತ್ರಗಾರಿಕೆಯ ದೃಷ್ಟಿಕೋನದಲ್ಲಿ ಜಲವಿಮಾನವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಫ್ಲೂಟ್‌ಪ್ಲೇನ್ (floatplanes) ಹಾಗೂ ಫ್ಲೈಯಿಂಗ್ ಬೋಟ್ಸ್ (flying boats)









Click it and Unblock the Notifications








