ಗರ್ಭಿಣಿ ಪತ್ನಿಗಾಗಿ ನಾಲ್ಕು ಸಾವಿರ ಕಿ.ಮೀ ಸಂಚರಿಸಿದ ಪತಿರಾಯ

ಲಾಕ್‌ಡೌನ್ ಅವಧಿಯಲ್ಲಿ 4000 ಕಿಲೋಮೀಟರ್ ಪ್ರಯಾಣಿಸಬೇಕೆಂದು ಯಾರಿಗಾದರೂ ಹೇಳಿದರೆ, ಯಾರೊಬ್ಬರೂ ಅಷ್ಟು ದೂರದ ಪ್ರಯಾಣಕ್ಕೆ ಒಪ್ಪುವುದಿಲ್ಲ. ಆದರೆ ತೀರಾ ಅನಿವಾರ್ಯವಾಗಿರುವವರಿಗೆ ಅಷ್ಟು ದೂರ ಪ್ರಯಾಣ ಮಾಡದೇ ಬೇರೆ ವಿಧಿ ಇರುವುದಿಲ್ಲ.

ಗರ್ಭಿಣಿ ಪತ್ನಿಗಾಗಿ ನಾಲ್ಕು ಸಾವಿರ ಕಿ.ಮೀ ಸಂಚರಿಸಿದ ಪತಿರಾಯ

ಇತ್ತೀಚೆಗೆ ಕೇರಳದ ವ್ಯಕ್ತಿಯೊಬ್ಬರು 4000 ಕಿ.ಮೀ ಪ್ರಯಾಣ ಬೆಳೆಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಇಂತಹ ಸುದೀರ್ಘ ಪ್ರಯಾಣವು ಯಾರಿಗೂ ಬೇಡದೇ ಇರಬಹುದು. ಆದರೆ ಕೇರಳದ ಜುಬಿಲ್ ರಾಜನ್ ಪಿ ಡಿಯೊರವರು ಕೇರಳದಿಂದ ಗುಜರಾತ್‌ಗೆ ಪ್ರಯಾಣಿಸಲೇ ಬೇಕಾಗಿತ್ತು. ಅವರು ಗುಜರಾತ್ ನಲ್ಲಿದ್ದ ತಮ್ಮ ಗರ್ಭಿಣಿ ಪತ್ನಿಯನ್ನು ಮತ್ತೆ ಕೇರಳಕ್ಕೆ ಕರೆತರಲು ಅಲ್ಲಿಗೆ ತೆರಳಿದರು. ಲಾಕ್ ಡೌನ್ ಸಮಯದಲ್ಲಿ ಅವರ ಪತ್ನಿ ರಿಯಾ ತಮ್ಮ ಪೋಷಕರೊಂದಿಗೆ ಅಹಮದಾಬಾದ್ ನಲ್ಲಿದ್ದರು.

ಗರ್ಭಿಣಿ ಪತ್ನಿಗಾಗಿ ನಾಲ್ಕು ಸಾವಿರ ಕಿ.ಮೀ ಸಂಚರಿಸಿದ ಪತಿರಾಯ

ಈ ವೇಳೆ ಅವರು ಏಳು ತಿಂಗಳ ಗರ್ಭಿಣಿಯಾಗಿದ್ದರು. ರಿಯಾರವರ ಪೋಷಕರು ಗುಜರಾತ್‌ನಲ್ಲಿಯೇ ಹೆರಿಗೆಯಾಗಲಿ ಎಂದು ನಿರ್ಧರಿಸಿದ್ದರು. ಆದರೆ ಅಹಮದಾಬಾದ್‌ನಲ್ಲಿ ದಿನದಿಂದ ದಿನಕ್ಕೆ ಕರೋನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಗರ್ಭಿಣಿ ಪತ್ನಿಗಾಗಿ ನಾಲ್ಕು ಸಾವಿರ ಕಿ.ಮೀ ಸಂಚರಿಸಿದ ಪತಿರಾಯ

ಈ ಪರಿಸ್ಥಿತಿಯಲ್ಲಿ ತಮ್ಮ ಪತ್ನಿ ಹಾಗೂ ಜನಿಸಲಿರುವ ಮಗುವಿಗೆ ತೊಂದರೆಯಾಗಬಹುದೆಂದು ಯೋಚಿಸಿದ ಜುಬಿನ್ ತಮ್ಮ ಪತ್ನಿಯನ್ನು ಅಹಮದಾಬಾದ್ ನಿಂದ ಕರೆತರಲು ನಿರ್ಧರಿಸಿದರು. ಯಾವುದೇ ವಾಹನ ಚಾಲಕರು ಈ ಪರಿಸ್ಥಿತಿಯಲ್ಲಿ ಅಷ್ಟು ದೂರ ಬರಲು ಸಿದ್ಧರಿರಲಿಲ್ಲ.

ಗರ್ಭಿಣಿ ಪತ್ನಿಗಾಗಿ ನಾಲ್ಕು ಸಾವಿರ ಕಿ.ಮೀ ಸಂಚರಿಸಿದ ಪತಿರಾಯ

ತಮ್ಮ ಪತ್ನಿಯನ್ನು ಮರಳಿ ಕೇರಳಕ್ಕೆ ಕರೆತರಲೇ ಬೇಕೆಂದು ಜುಬಿನ್ ರವರು ನಿರ್ಧರಿಸಿಯಾಗಿತ್ತು. ಆದರೆ ಅವರ ಪತ್ನಿಯನ್ನು ಕರೆತರಲು ಯಾವುದೇ ಸಾರಿಗೆ ಸೌಲಭ್ಯಗಳಿರಲಿಲ್ಲ. ಎಲ್ಲಾ ರೈಲು ಸೇವೆಗಳನ್ನು ರದ್ದುಪಡಿಸಲಾಗಿತ್ತು. ಕಾರಿನಲ್ಲಿ ಕರೆತರುವುದು ಸೂಕ್ತವೆನಿಸಲಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಗರ್ಭಿಣಿ ಪತ್ನಿಗಾಗಿ ನಾಲ್ಕು ಸಾವಿರ ಕಿ.ಮೀ ಸಂಚರಿಸಿದ ಪತಿರಾಯ

ಆದರೂ ಜುಬಿನ್ ರವರು ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ತಮ್ಮ ಪತ್ನಿ ರಿಯಾರನ್ನು ಕಾರವಾನ್ ನಲ್ಲಿ ಮರಳಿ ಕರೆತರಲು ತೀರ್ಮಾನಿಸಿದರು. ಕಾರವಾನ್ ನಲ್ಲಿ ಮಲಗಲು ಸ್ಥಳ ಹಾಗೂ ಅನೇಕ ಸೌಲಭ್ಯಗಳು ಇರುವ ಕಾರಣಕ್ಕೆ ದೀರ್ಘ ಪ್ರಯಾಣಕ್ಕೆ ಹಾಗೂ ಗರ್ಭಿಣಿಯರಿಗೆ ಸೂಕ್ತವಾದ ವಾಹನವಾಗಿತ್ತು.

ಗರ್ಭಿಣಿ ಪತ್ನಿಗಾಗಿ ನಾಲ್ಕು ಸಾವಿರ ಕಿ.ಮೀ ಸಂಚರಿಸಿದ ಪತಿರಾಯ

ಈ ಸಂಬಂಧ ಜುಬಿಲ್ ಅನೇಕ ಕಾರವಾನ್ ಗಳ ಮಾಲಿಕರೊಂದಿಗೆ ಮಾತುಕತೆ ನಡೆಸಿದರು. ಆದರೆ ಅಂತರರಾಜ್ಯ ಪ್ರಯಾಣವಾದ ಕಾರಣ ಅನೇಕ ಜನರು ನಿರಾಕರಿಸಿದರು. ಜೈರಾಮ್ ಎಂಬುವವರು ಜುಬಿಲ್ ರವರ ನೆರವಿಗೆ ಧಾವಿಸಿ ತಮ್ಮ ಕಾರವಾನ್ ನೀಡಿದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಗರ್ಭಿಣಿ ಪತ್ನಿಗಾಗಿ ನಾಲ್ಕು ಸಾವಿರ ಕಿ.ಮೀ ಸಂಚರಿಸಿದ ಪತಿರಾಯ

ಈ ಪ್ರಯಾಣದಲ್ಲಿ ಜುಬಿಲ್ ರವರಿಗೆ ಅವರ ಸ್ನೇಹಿತ ರಾಯ್ ಆಂಟನಿ ಜೊತೆಯಾದರು. ಕೆಲ ಅವಧಿಯ ಪ್ರಯಾಣದ ನಂತರ ಬೆಂಗಳೂರು ತಲುಪಿದ್ದಾರೆ. ಬೆಂಗಳೂರಿನಲ್ಲಿ ರಿಯಾಳ ಸ್ನೇಹಿತೆ ಜಹಾನ್ ಹಾಗೂ ಆಕೆಯ ಪತಿ ಜುಬಿನ್ ರವರಿಗೆ ಅಗತ್ಯ ವಸ್ತುಗಳನ್ನು ನೀಡಿ ನೆರವಾಗಿದ್ದಾರೆ.

ಗರ್ಭಿಣಿ ಪತ್ನಿಗಾಗಿ ನಾಲ್ಕು ಸಾವಿರ ಕಿ.ಮೀ ಸಂಚರಿಸಿದ ಪತಿರಾಯ

ಪ್ರಯಾಣದ ಅವಧಿಯಲ್ಲಿ ರೇಡಿಯೇಟರ್ ನಲ್ಲಿ ಸೋರಿಕೆ, ಅದರ ದುರಸ್ತಿಗೆ ತಲುಪಿದಾಗ ಸ್ಕೂಟರ್‌ಗೆ ಡಿಕ್ಕಿಯಂತಹ ತೊಂದರೆಗಳು ಎದುರಾಗಿವೆ. ಈ ಪ್ರಯಾಣದುದ್ದಕ್ಕೂ ಅವರಿಗೆ ಹಲವಾರು ಜನರು ಸಹಾಯ ಮಾಡಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಗರ್ಭಿಣಿ ಪತ್ನಿಗಾಗಿ ನಾಲ್ಕು ಸಾವಿರ ಕಿ.ಮೀ ಸಂಚರಿಸಿದ ಪತಿರಾಯ

ನಾಲ್ಕು ದಿನಗಳ ಪ್ರಯಾಣದ ನಂತರ ಅಹಮದಾಬಾದ್ ತಲುಪಿದ್ದಾರೆ. ಕೇರಳಾಗೆ ಮರಳಿ ಬರುವಾಗ ರಿಯಾರವರ ಪೋಷಕರು ಸಹ ಅವರ ಜೊತೆಗಿದ್ದರು.ಮರಳಿ ಬರುವಾಗ ಅನೇಕ ಸ್ಥಳಗಳಲ್ಲಿ ಕಾರವಾನ್ ನಿಲ್ಲಿಸಿ ಆಹಾರವನ್ನು ಸಿದ್ಧಪಡಿಸಿಕೊಂಡಿದ್ದಾರೆ.

ಗರ್ಭಿಣಿ ಪತ್ನಿಗಾಗಿ ನಾಲ್ಕು ಸಾವಿರ ಕಿ.ಮೀ ಸಂಚರಿಸಿದ ಪತಿರಾಯ

ಗರ್ಭಿಣಿ ರಿಯಾರವರನ್ನು ನೋಡಿದ ಅನೇಕರು ಕಾರವಾನ್ ಚಾರ್ಜ್ ಮಾಡಲು ಸಹಕರಿಸಿದ್ದಾರೆ. ರಿಯಾ ಹಾಗೂ ಜುಬಿಲ್ ತಮ್ಮ ಈ ಪ್ರಯಾಣವನ್ನು ಅವಿಸ್ಮರಣೀಯ ಎಂದು ಬಣ್ಣಿಸಿದ್ದಾರೆ. ತಮ್ಮ ಈ ಕಥೆಯನ್ನು ಹುಟ್ಟಲಿರುವ ತಮ್ಮ ಮಗುವಿಗೆ ಹೇಳಲು ಬಯಸಿದ್ದಾರೆ.

ಮೂಲ: ಆನ್ ಮನೋರಮಾ

Most Read Articles

Kannada
English summary
Kerala man drives 4000 kms to bring pregnant wife back home. Read in Kannada.
Story first published: Tuesday, July 21, 2020, 10:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X