ಪವಾಡ ಸದೃಶ ರೀತಿಯಲ್ಲಿ ಅಪಘಾತದಿಂದ ಪಾರಾದ ಕಾರ್ಮಿಕ
ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯ ಅಪಾಯಕಾರಿ ರಸ್ತೆಗಳು ಭಾರತದಲ್ಲಿವೆ. ಭಾರತದ ರಸ್ತೆಗಳಲ್ಲಿ ಯಾವಾಗ ಬೇಕಾದರೂ ಅಪಘಾತ ಸಂಭವಿಸಬಹುದು. ಭಾರತದ ಬಹುತೇಕ ವಾಹನ ಸವಾರರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವುದೇ ಇಲ್ಲ. ಈ ಕಾರಣಕ್ಕೆ ಭಾರತದಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತವೆ.

ಭಾರತದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವುದು ಹಾಗೂ ಕುಡಿದು ವಾಹನ ಚಲಾಯಿಸುವುದು ಈ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ. ಅತಿ ವೇಗದಲ್ಲಿ ಬರುವ ವಾಹನಗಳು ಚಾಲಕನ ನಿಯಂತ್ರಣವನ್ನು ಕಳೆದುಕೊಂಡು ಅಪಘಾತಗಳಿಗೆ ಕಾರಣವಾಗುತ್ತವೆ.

ರಸ್ತೆ ಅಪಘಾತಗಳ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ವೀಡಿಯೊಗಳು ವೈರಲ್ ಆಗುತ್ತವೆ. ಇದೇ ರೀತಿಯ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವೀಡಿಯೊದಲ್ಲಿ ಅದೃಷ್ಟವಶಾತ್ ಯಾವುದೇ ರಸ್ತೆ ಅಪಘಾತ ಸಂಭವಿಸಿಲ್ಲ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಅತಿ ವೇಗವಾಗಿ ಬಂದ ವಾಹನವೊಂದು ಗುದಿಯುವುದರಿಂದ ಪಾದಚಾರಿಯೊಬ್ಬರು ಪಾರಾಗಿದ್ದಾರೆ. ಈ ವೀಡಿಯೊದಲ್ಲಿ ಕಾರ್ಮಿಕರೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಅತಿ ವೇಗದಲ್ಲಿ ಬಂದ ಪಿಕ್ ಅಪ್ ಟ್ರಕ್ ಅವರ ಪಕ್ಕದಲ್ಲಿಯೇ ಹಾದು ಹೋಗಿದೆ. ಅತಿ ವೇಗದಲ್ಲಿದ್ದ ಕಾರಣ ಈ ಪಿಕ್ ಅಪ್ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಕಾರ್ಮಿಕನ ಅದೃಷ್ಟಕ್ಕೆ ಆ ವಾಹನವು ಅವರಿಗೆ ಡಿಕ್ಕಿ ಹೊಡೆಯಲಿಲ್ಲ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪಿಕ್ ಅಪ್ ಟ್ರಕ್ ಸ್ವಲ್ಪ ದೂರ ಚಲಿಸಿದ ನಂತರವೂ ವೇಗದಲ್ಲಿಯೇ ಇತ್ತು. ನಂತರ ಅದರ ಚಾಲಕನು ವಾಹನವನ್ನು ನಿಯಂತ್ರಣಕ್ಕೆ ತಂದಿದ್ದಾನೆ. ವೀಡಿಯೊ ನೋಡುವವರಿಗೆ ಈ ದೃಶ್ಯ ನಡುಕ ಹುಟ್ಟಿಸುತ್ತಿದೆ. ಇನ್ನು ಈ ಘಟನೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ಅನುಭವ ಊಹಿಸಲಾಸಾಧ್ಯ.

ಈ ವೀಡಿಯೊದಲ್ಲಿ ಭಯದಿಂದ ಓಡುವ ಆ ಕಾರ್ಮಿಕನನ್ನು ಕಾಣಬಹುದು. ಅಂದ ಹಾಗೆ ಈ ಘಟನೆ ನಡೆದಿರುವುದು ಕೇರಳದ ಕೊಲ್ಲಂ ಜಿಲ್ಲೆಯ ಸವರಾದಲ್ಲಿ. ಈ ಘಟನೆ ಕಳೆದ ಶುಕ್ರವಾರ ನಡೆದಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ
ರಸ್ತೆ ಅಪಘಾತದಿಂದ ಪಾರಾದ ವ್ಯಕ್ತಿ ಶ್ರೀ ಕುಮಾರ್ ತಮಿಳುನಾಡು ಮೂಲದವರು. ಅವರು ಹಲವು ವರ್ಷಗಳಿಂದ ಕೇರಳದಲ್ಲಿ ವಾಸವಾಗಿದ್ದಾರೆ. ಅವರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಆಘಾತದಿಂದ ಜರ್ಜರಿತರಾಗಿದ್ದಾರೆ.

ಆಘಾತದಿಂದ ಹೊರ ಬರಲು ಸಾಧ್ಯವಾಗದೆ ಆ ದಿನ ಅವರು ಕೆಲಸಕ್ಕೆ ತೆರಳದೇ ಮನೆಗೆ ವಾಪಸಾಗಿದ್ದಾರೆ. ಶ್ರೀ ಕುಮಾರ್ ನಿಜಕ್ಕೂ ಅದೃಷ್ಟಶಾಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಲಾಗುತ್ತಿದೆ.


Click it and Unblock the Notifications