ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬ್ಯಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

By Praveen Sannamani

ಟೋಲ್ ಪ್ಲಾಜಾಗಳಲ್ಲಿ ಯಾರೇ ಆಗಲಿ ಶುಲ್ಕವನ್ನು ಪಾವತಿಸಲೇಬೇಕು. ಆದ್ರೆ ಇಲ್ಲೊಬ್ಬ ಎಂಎಲ್ಎ ಮಾತ್ರ ಟೋಲ್ ಕೇಳಿದ್ದಕ್ಕೆ ವಿರಾವೇಶ ಪ್ರದರ್ಶನ ಮಾಡಿದ್ದಲ್ಲದೇ ಟೋಲ್ ಬ್ಯಾರಿಕೇಡ್ ಮುರಿದು ಹಾಕಿದ್ದಾನೆ. ಸಾಲದ್ದಕ್ಕೆ ಇನ್ನು ಮುಂದೆ ತನ್ನನ್ನು ಟೋಲ್ ಶುಲ್ಕ ಕೇಳದಿರುವಂತೆ ಧಮ್ಕಿ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಹೌದು, ಕೇರಳದಲ್ಲಿ ಟೋಲ್ ಕಟ್ಟುವ ವಿಚಾರವಾಗಿ ಟೋಲ್ ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಂಡಿರುವ ಪೂಂಜಾರ್ ಕ್ಷೇತ್ರದ ಪಕ್ಷೇತರ ಎಂಎಲ್ಎ ಪಿ.ಸಿ ಜಾರ್ಜ್ ಮತ್ತು ಅವರ ಪಟಾಲಾಂ ತಡರಾತ್ರಿ ಟೋಲ್ ಬ್ಯಾರಿಕೇಡ್‌ ಕಿತ್ತುಹಾಕಿದಲ್ಲದೇ ಟೋಲ್ ಕೇಳಿದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ತ್ರಿಶೂರ್‌ದಲ್ಲಿ ನಡೆದಿದೆ.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಎಂಎಲ್​ಎ ಪಿಸಿ ಜಾರ್ಜ್​ ಟೋಲ್​ ಗೇಟ್​ವೊಂದರಲ್ಲಿ ಹಣ ಪಾವತಿ ಸಂಬಂಧ ಸಿಟ್ಟಿಗೆದ್ದು ಬಾರಿಕೇಡ್​​ಗಳನ್ನು ಮುರಿದು ಹಾಕಿದ್ದು, ಇಡೀ ಘಟನೆಯು ಟೋಲ್ ಪ್ಲಾಜಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಆಪ್ತರ ಜೊತೆಗೆ ತಮ್ಮ ಐಷಾರಾಮಿ ಆಡಿ ಕಾರಿನಲ್ಲಿ ಕೊಚ್ಚಿಯಿಂದ ತ್ರಿಶೂರ್ ಕಡೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ದಾರಿ ಮಧ್ಯದ ಟೋಲ್​ ಗೇಟ್​ನಲ್ಲಿ ಎಂಎಲ್​ಎ ಜಾರ್ಜ್ ಮತ್ತಿತರರು ದರ್ಪ ಪ್ರದರ್ಶಿಸಿದ್ದಾರೆ.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಟೋಲ್ ಕಟ್ಟಲು ಯೋಗ್ಯತೆಯಿಲ್ಲದ ಎಂಎಲ್ಎ ವಿರುದ್ದ ಈಗಾಗಲೇ ಪ್ರಕರಣ ಕೂಡಾ ದಾಖಲಾಗಿದ್ದು, ಟೋಲ್ ಸಿಬ್ಬಂದಿ ಮೇಲೆ ದರ್ಪ ಪ್ರದರ್ಶನ ಮಾಡಿದ ಎಂಎಲ್ಎ ಪಿ.ಸಿ ಜಾರ್ಜ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಹಲವು ಜನಪರ ಸಂಘಟನೆಗಳು ಪ್ರತಿಭಟನೆ ಕೂಡಾ ಮಾಡುತ್ತಿವೆ.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಆದ್ರೆ ಅದೇನೇ ಇರಲಿ ಹೆದ್ದಾರಿಗಳನ್ನು ಬಳಕೆ ಮಾಡಿದಾಗ ಟೋಲ್ ಕಟ್ಟಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಹೀಗಿರುವಾಗ ಕೆಲವು ಜನಪ್ರತಿನಿಧಿಗಳು ಮತ್ತು ಸಂಘಟನೆಗಳ ಹೆಸರಿನಲ್ಲಿ ಗೂಂಡಾಗಿರಿ ಮಾಡುವ ಕೆಲವರು ಟೋಲ್ ಕಟ್ಟದೆ ಈ ರೀತಿ ಮಾಡುವುದು ಯಾವ ನ್ಯಾಯ ಹೇಳಿ? ಹೀಗಾಗಿ ತಪ್ಪಿತಸ್ಥರ ವಿರುದ್ಧ ಸರಿಯಾದ ಕಾನೂನು ಕ್ರಮ ಜರಗಿಸಿ ಮತ್ತೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ.

ಟೋಲ್ ಸಿಬ್ಬಂದಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಬ್ಯಾರಿಕೇಡ್ ಮುರಿದು ಹಾಕುತ್ತಿರುವ ವಿಡಿಯೋ ಇಲ್ಲಿದೆ ನೋಡಿ..

Source: Times Now

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಫಾಸ್ಟ್ ಟ್ಯಾಗ್ ಬಳಸಿ ಸಮಯ ಉಳಿಸಿ

ಇನ್ಮುಂದೆ ನೀವು ಹೆದ್ದಾರಿಗಳಲ್ಲಿ ಟೋಲ್‌ ಕಟ್ಟಲು ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಿಲ್ಲ. ಯಾಕೇಂದ್ರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಪಾವತಿಗೆ 'ಫಾಸ್ಟ್ ಟ್ಯಾಗ್' ಎಂಬ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ಮಾಡಿದೆ.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ವೇಳೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ತರಲಾಗಿದ್ದು, ನಾಲ್ಕು ಚಕ್ರದ ಹೊಸ ವಾಹನಗಳು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳಬೇಕೆಂಬ ನಿಯಮವನ್ನು ಕೂಡಾ ಜಾರಿಗೆ ಮಾಡಿದೆ. ಹೀಗಾಗಿ ಫಾಸ್ಟ್ ಟ್ಯಾಗ್ ಬಳಕೆ ಮಾಡುವುದು ಹೇಗೆ? ಎನ್ನುವ ಬಗ್ಗೆ ಮುಂದಿನ ಸ್ಲೈಡರ್‌ಗಳತ್ತ ಸಾಗಿರಿ..

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಫಾಸ್ಟ್ ಟ್ಯಾಗ್‌ಗಳಿಗೆ ಮೊಬೈಲ್ ಮಾದರಿಯಲ್ಲೇ ಕರೆನ್ಸಿ ಹಾಕಿಸಿಕೊಳ್ಳುವ ಮೂಲಕ ಟೋಲ್ ಪಾವತಿ ಮಾಡುವ ಒಂದು ವಿಧಾನವಾಗಿದ್ದು, ಹೊಸ ವ್ಯವಸ್ಥೆಯಿಂದ ಹಲವಾರು ಲಾಭಗಳಿವೆ.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಹೊಸ ವ್ಯವಸ್ಥೆಯಿಂದ ನೀವು ಟೋಲ್‌ ಕೇಂದ್ರಗಳಲ್ಲಿ ಹಣ ಪಾವತಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದ್ದು, ಒಂದು ಭಾರೀ ನೀವು ನೋಂದಣಿ ಮಾಡಿಕೊಂಡಿದಲ್ಲಿ ಐದು ವರ್ಷ ಕಾಲ ನೀವು ಈ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಹಾಗಾದ್ರೆ ಫಾಸ್ಟ್ ಟ್ಯಾಗ್ ಪಡೆಯುವುದು ಹೇಗೆ?

ಟೋಲ್ ಪ್ಲಾಜ್‌ಗಳಲ್ಲೇ ಫಾಸ್ಟ್ ಟ್ಯಾಗ್ ಖರೀದಿ ಮಾಡಬಹುದಾಗಿದ್ದು, ಇಲ್ಲವೇ ಫಾಸ್ಟ್ ಟ್ಯಾಗ್ ಮಾರಾಟ ಮಾಡುವ ಖಾಸಗಿ ಏಜೆನ್ಸಿಗಳಿಂದಲೂ ಖರೀದಿ ಮಾಡಬಹುದು. ಇದಕ್ಕಾಗಿ ನೀವು ಕೆಲವು ದಾಖಲೆ ಸಲ್ಲಿಸುವುದು ಅವಶ್ಯಕತೆಯಿದೆ.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಫಾಸ್ಟ್‌ಟ್ಯಾಗ್ ಹೊಂದಿದ್ದರೆ ಹಲವು ಪ್ರಯೋಜನಗಳಿದ್ದು, ಸುಲಭವಾಗಿ ಟೋಲ್ ಶುಲ್ಕ ಪಾವತಿ ಮಾಡಬಹುದಲ್ಲದೇ ಆನ್‌ಲೈನ್ ರೀಚಾರ್ಜಿಂಗ್, ಎಸ್ಎಂಎಸ್ ಅಲರ್ಟ್ ಸೌಲಭ್ಯವಿರುತ್ತದೆ.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಇದರಿಂದ ನಿಮ್ಮ ಫಾಸ್ಟ್‌ಟ್ಯಾಗ್‌ನಲ್ಲಿರುವ ಮೊತ್ತ ಮತ್ತು ನೀವು ಹೊರಟಿರುವ ಸ್ಥಳಗಳಲ್ಲಿನ ಟೋಲ್ ಸಂಗ್ರಹ ಕೇಂದ್ರಗಳ ಮಾಹಿತಿ, ಶುಲ್ಕುಗಳ ಮಾಹಿತಿ ಸಂದೇಶಗಳನ್ನು ಪಡೆಯಬಹುದಾಗಿದ್ದು, ವಿಶೇಷ ಸಂದರ್ಭಗಳಲ್ಲಿ ನೀವು ಕ್ಯಾಶ್ ಬ್ಯಾಕ್ ಆಫರ್ ಪಡೆಯುವ ಅವಕಾಶವಿರುತ್ತೆ.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಫಾಸ್ಟ್‌ಟ್ಯಾಗ್ ರೀಚಾರ್ಜ್ ಹೇಗೆ?

ಕ್ರೇಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಕಿಂಗ್ ಇಲ್ಲವೇ ಚೆಕ್ ಪಾವತಿಸಿ ರೀಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ರೂ.100 ರಿಂದ 1 ಲಕ್ಷ ತನಕ ರೀಚಾರ್ಜ್ ಮಿತಿ ಹೊಂದಿರುತ್ತೆ.

ಟೋಲ್ ಕಟ್ಟಿ ಅಂದಿದ್ದೆ ತಪ್ಪಾಯ್ತು- ಬಾರಿಕೇಡ್ ಮುರಿದ ಹಾಕಿದ ಶಾಸಕ ಜಾರ್ಜ್

ಫ್ಯಾಸ್ಟ್ ಟ್ಯಾಗ್ ಹೇಗೆ ಕಾರ್ಯನಿರ್ವಹಿಸುತ್ತೆ?

ಆರ್‌ಎಫ್ಐಡಿ ಎನ್ನುವ ತಂತ್ರಜ್ಞಾನ ಸಹಾಯದೊಂದಿಗೆ ಕಾರ್ಯನಿರ್ವಹಿಸುವ ಫಾಸ್ಟ್ ಟ್ಯಾಗ್‌ಗಳು ಕಾರಿನ ವಿಂಡ್‌ಸ್ಕೀನ್ ಬಳಿ ಅಳವಡಿಸಲಾಗಿರುತ್ತದೆ. ಇದು ಟೋಲ್ ಪ್ಲಾಜ್‌ದಲ್ಲಿರುವ ಫಾಸ್ಟ್ ಟ್ಯಾಗ್ ಲೈನ್ ಮೂಲಕ ಹಾಯ್ದುಹೋಗುವಾಗ ಆಟೋಮ್ಯಾಟಿಕ್ ಆಗಿ ನಿಮ್ಮ ಫಾಸ್ಟ್ ಟ್ಯಾಗ್ ಅಕೌಂಟ್‌ನಿಂದ ಶುಲ್ಕ ಸಂದಾಯವಾಗುತ್ತೆ.

Most Read Articles

Kannada
Read more on off beat crime
English summary
Kerala MLA Breaks Toll barrier along with His Aides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more