ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ಕೇರಳ ರಾಜ್ಯದ ಮೋಟಾರು ವಾಹನ ಇಲಾಖೆಯು 'ಆಪರೇಷನ್ ಫೋಕಸ್' ಎಂಬ ಹೊಸ ಅಭಿಯಾನಯನ್ನು ಪ್ರಾರಂಭಿಸಿದ್ದು, ರಾತ್ರಿ ಸಮಯದಲ್ಲಿ ಅನಧಿಕೃತ ಹೈ ಭೀಮ್ ಹೆಡ್ ಲ್ಯಾಂಪ್ಗಳನ್ನು ಬಳಸಿ ವಾಹನ ಚಾಲನೆ ಮಾಡುವುದರಿಂದ ಉಂಟಾಗುವ ಅಪಘಾತಗಳನ್ನು ತಡೆಗಟ್ಟಲು ಪ್ರಾರಂಭಿಸಿದೆ.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ಕೇರಳ ರಾಜ್ಯದಲ್ಲಿ ಪ್ರಸ್ತುತ ಸುಮಾರು 900 ಕಾನೂನು ಉಲ್ಲಂಘನೆದಾರರು ಈ ಕಾರ್ಯಾಚರಣೆಯ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಉಲ್ಲಂಘನೆ ಮಾಡಿದವರಿಂದ ಈವರೆಗೆ ಸುಮಾರು 3.49 ಲಕ್ಷ ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಕೇರಳದಲ್ಲಿ ರಾತ್ರಿ ವೇಳೆ ಹೈಭೀಮ್ ಹಾಕಿಕೊಂಡು ಸಂಚಿರಿಸುತ್ತಿರುವವರ ಸಂಖ್ಯೆಯನ್ನು ಕಂಡು ಸರ್ಕಾರ ದಂಗಾಗಿದೆ.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ರಾಜ್ಯದಲ್ಲಿ ಇನ್ನೂ ಹಲವು ಇಂತಹ ಪ್ರಕರಣಗಳು ಸಿಕ್ಕಿಬೀಳುವ ಸಾಧ್ಯತೆಯಿದ್ದು, ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಇದರ ಭಾಗವಾಗಿ ಕೇರಳ ರಾಜ್ಯದ ಮೋಟಾರು ವಾಹನ ಇಲಾಖೆ ಆರಂಭಿಸಿದ್ದ 'ಆಪರೇಷನ್ ಫೋಕಸ್' ಏಪ್ರಿಲ್ 4ರಂದು ಆರಂಭಿಸಲಾಗಿತ್ತು. ಈ ಕಾರ್ಯಾಚರಣೆಯು 10ದಿನಗಳ ಕಾಲ ರಾತ್ರಿ 7 ರಿಂದ ಬೆಳಿಗ್ಗೆ 10 ರವರೆಗೆ ನಡೆದಿದೆ.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ಈ 10 ದಿನಗಳ ಪರಿಶೀಲನಾ ಅಭಿಯಾನವು ದ್ವಿಚಕ್ರ ವಾಹನಗಳು ಮತ್ತು ವಾಣಿಜ್ಯ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳನ್ನು ತಪಾಸಣೆ ಮಾಡಲಾಗಿದೆ. ಈ ಜಾಗೃತಿ ಅಭಿಯಾನದ ಮುಖ್ಯ ಉದ್ದೇಶವೆಂದರೆ ರಾತ್ರಿಯಲ್ಲಿ ಅನಧಿಕೃತ ಹೈ ಭೀಮ್‌ನಲ್ಲಿ ವಾಹನಗಳನ್ನು ಓಡಿಸುವುದರಿಂದ ಉಂಟಾಗುವ ಅಪಾಯಗಳು ಮತ್ತು ಪರಿಣಾಮಗಳನ್ನು ತಡೆಯುವುದು.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ಈ ಅಭಿಯಾನದಲ್ಲಿ ಹೆಚ್ಚಿನವರು ವಾಹನಗಳ ಮುಂಭಾಗ ಮತ್ತು ಹಿಂಭಾಗದಲ್ಲಿ ಅನಧಿಕೃತ ಬಣ್ಣ ಬಣ್ಣದ ಲೈಟ್‌ಗಳನ್ನು ಬಳಸಿ ಸಿಕ್ಕಿಬಿದ್ದಿದ್ದಾರೆ. 244 ಜನರು ಇಂತಹ ಹೆಡ್‌ಲೈಟ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. 187 ಜನರನ್ನು ಬಂಧಿಸಲಾಗಿದ್ದು, ವಾಹನಗಳಲ್ಲಿ ಅತಿಯಾಗಿ ಬಣ್ಣದ ಲೈಟ್‌ಗಳನ್ನು ಬಳಸಿದ್ದವರಿಗೆ 47,000 ರೂ.ಗಳ ದಂಡ ವಿಧಿಸಲಾಗಿದೆ.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ವಾಹನಗಳಲ್ಲಿ ನಿರ್ಧಿಷ್ಟ ಹೆಡ್‌ ಲ್ಯಾಂಪ್‌ಗಳನ್ನು ಬಳಸದ ಚಾಲಕರಿಗೆ ಎಂವಿಡಿ ಚಲನ್‌ಗಳನ್ನು ಸಹ ನೀಡಲಾಗಿದೆ. ಈ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಒಟ್ಟು 356 ಚಲನ್ ಗಳನ್ನು ನೀಡಲಾಗಿದ್ದು, 89,500 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ಹೈ ಭೀಮ್‌ಗಳನ್ನು ಬಳಸಿ ವಾಹನಗಳನ್ನು ಓಡಿಸುವ ಅಪರಾಧದ ಹೊರತಾಗಿ, ಪರವಾನಗಿ ಫಲಕಗಳ ಸುತ್ತಲೂ ಸರಿಯಾದ ಬೆಳಕು ಇಲ್ಲದೆ ವಾಹನ ಚಲಾಯಿಸುವುದು, ಅನಧಿಕೃತ ಬಣ್ಣದ ಲೈಟ್‌ಗಳನ್ನು ಬಳಸುವುದು, ಅನಧಿಕೃತ ಸಹಾಯಕ ಲೈಟ್‌ಗಳ ಅತಿಯಾದ ಬಳಕೆ ಮತ್ತು ಪಾರ್ಕಿಂಗ್ ಲೈಟ್‌ಗಳ ಕೊರತೆಯಂತಹ ಅಪರಾಧಗಳಿಗೆ 'ಆಪರೇಷನ್ ಫೋಕಸ್' ಅಡಿಯಲ್ಲಿ ದಂಡವನ್ನು ವಿಧಿಸಲಾಗಿದೆ.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

'ಆಪರೇಷನ್ ಫೋಕಸ್' ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅನಗತ್ಯವಾಗಿ ಹೈ ಭೀಮ್‌ಗಳೊಂದಿಗೆ ಚಾಲನೆ ಮಾಡುವ ಹಲವಾರು ಅಪರಾಧಿಗಳನ್ನು ಹಿಡಿದಿದೆ. ಈ ಉಲ್ಲಂಘನೆ ಮಾಡುವವರಿಗೆ ಅನಧಿಕೃತ ದೀಪಗಳನ್ನು ತೆಗೆದುಹಾಕಲು ಮತ್ತು ಅವುಗಳನ್ನು ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ಆರ್‌ಟಿಒ ಮುಂದೆ ವಾಹನವನ್ನು ಹಾಜರುಪಡಿಸುವಂತೆ ಸೂಚಿಸಲಾಯಿತು.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ಅತ್ಯಂತ ಗಂಭೀರ ಪ್ರಕರಣಗಳಲ್ಲಿ, ನೋಂದಣಿ ಪ್ರಮಾಣಪತ್ರಗಳನ್ನು ರದ್ದುಗೊಳಿಸುವುದು ಅಂತಿಮ ಶಿಕ್ಷೆಯಾಗಿದೆ. ಈ ರೀತಿಯಾಗಿ, ಹೈ ಭೀಮ್‌ನಲ್ಲಿ ವಾಹನವನ್ನು ಚಲಿಸುವುದರಿಂದ ವಿರುದ್ಧ ದಿಕ್ಕಿನಿಂದ ಬರುವ ಇತರ ಡ್ರೈವರ್‌ಗಳನ್ನು ಕುರುಡಾಗಿಸುತ್ತದೆ. ಇದು ರಸ್ತೆ ಅಪಘಾತಗಳಿಗೆ ಕಾರಣವಾಗಬಹುದು ಮತ್ತು ದ್ವಿಚಕ್ರ ವಾಹನವನ್ನು ಚಲಾಯಿಸುವವರು ಭೀತಿಗೊಳಗಾಗಬಹುದು.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ಈ ಪರಿಣಾಮಗಳು ಕೆಲವು ಸಂದರ್ಭಗಳಲ್ಲಿ ಮಾರಣಾಂತಿಕ ಗಾಯಗಳಿಗೆ ಮತ್ತು ಕೆಲವು ಸಂದರ್ಭಗಳಲ್ಲಿ ಜೀವಹಾನಿಗೆ ಕಾರಣವಾಗಿವೆ. ಹೈ ಭೀಮ್‌ಗಳೊಂದಿಗೆ ವಾಹನ ಚಲಾಯಿಸುವ ಜನರ ಈ ಅಜಾಗರೂಕತೆಯು ಕಳೆದ ಐದು ಅಥವಾ ಆರು ವರ್ಷಗಳಲ್ಲಿ ರಸ್ತೆ ಅಪಘಾತಗಳಲ್ಲಿ ಅನಗತ್ಯ ಹೆಚ್ಚಳಕ್ಕೆ ಕಾರಣವಾಗಿದೆ.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ರಾಷ್ಟ್ರೀಯ ಸಾರಿಗೆ ಯೋಜನೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಸ್ಯಾಮ್ಸನ್ ಮ್ಯಾಥ್ಯೂ, ಮುಂಬರುವ ವರ್ಷಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಂಚಾರ ಕಾನೂನುಗಳು ಮತ್ತು ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅನಿವಾರ್ಯವಾಗಿದೆ ಎಂದು ಈ ವಿಶಿಷ್ಟ ಅಭಿಯಾನದ ಘೋಷಣೆಯ ಸಮಯದಲ್ಲಿ ಹೇಳಿದರು.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ಸಹಾಯಕ ಲೈಟ್‌ಗಳಿಗೆ ನೈಜ ವೈರಿಂಗ್ ಮತ್ತು ಬ್ಯಾಟರಿ ಸಂಪರ್ಕಗಳಲ್ಲಿನ ಬದಲಾವಣೆಗಳನ್ನು ನಿರುತ್ಸಾಹಗೊಳಿಸಬೇಕು ಎಂದು ಹೇಳುವ ಮೂಲಕ ಕಾಂಟ್ರಾಕ್ಟ್ ಕ್ಯಾರೇಜ್ ಆಪರೇಟರ್ಸ್ ಅಸೋಸಿಯೇಷನ್ (ಸಿಸಿಒಎ) ಕಳವಳ ವ್ಯಕ್ತಪಡಿಸಿದೆ.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ಸಾಮಾನ್ಯವಾಗಿ ಇಂತಹ ಹೆಡ್‌ಲೈಟ್‌ಗಳನ್ನು ಯುವಜನತೆ ಹೆಚ್ಚಾಗಿ ಬಳಸುತ್ತಿದೆ. ತಮ್ಮ ಮೋಜು ಮಸ್ತಿಗಳಿಗಾಗಿ ಬಳಸುವ ಇಂತಹ ಲೈಟ್‌ಗಳು ರಸ್ತೆಯಲ್ಲಿ ಇನ್ನೊಬ್ಬರ ಜೀವಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇಂತಹ ಹೈ ಭೀಮ್ ಲೈಟ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಿದೆ.

ಆಪರೇಷನ್ ಫೋಕಸ್ ಅಭಿಯಾನ: ಅನಧಿಕೃತ ಹೈ ಭೀಮ್ ಬಳಸಿದ 900 ಮಂದಿಗೆ ದಂಡ

ಇಂತಹ ಪ್ರಕರಣಗಳು ಕೇರಳದಲ್ಲಿ ಮಾತ್ರವಲ್ಲದೇ ದೇಶದ ಬಹುತೇಕ ಪ್ರಮುಖ ನಗರಗಳಲ್ಲೂ ಹೆಚ್ಚಾಗಿವೆ. ಬೆಂಗಳೂರಿನಲ್ಲೂ ಹೈ ಭೀಮ್ ಬಳಕೆದಾದರರು ಸಾಕಷ್ಟು ಮಂದಿ ಇದ್ದು, ರಾಜ್ಯ ಸರ್ಕಾರ ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇದರಿಂದ ಸಾಮಾನ್ಯ ಜನರ ವಾಹನ ಚಾಲನೆಗೂ ಇದು ತುಂಬಾ ಉಪಯುಕ್ತವಾಗಲಿದೆ.

Most Read Articles

Kannada
English summary
Kerala mvd attains 3 49 lakh in fining offenders using high beam lights
Story first published: Wednesday, April 27, 2022, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X