ದುಬೈ ನೋಂದಣಿ ಸಂಖ್ಯೆ ಹೊಂದಿದ್ದ ಐಷಾರಾಮಿ ಕಾರಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ವಿದೇಶಿ ನೋಂದಣಿ ಹೊಂದಿರುವ ವಾಹನಗಳು ಭಾರತಕ್ಕೆ ಪ್ರವೇಶಿಸಲು ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ ಕೆಲವೊಮ್ಮೆ ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಕಾರುಗಳಿಗೆ ತೆರಿಗೆ ಪಾವತಿಸದೇ ವಂಚನೆ ಎಸಗುವ ಪ್ರಕರಣಗಳು ವರದಿಯಾಗುತ್ತಿವೆ.

ದುಬೈ ನೋಂದಣಿ ಸಂಖ್ಯೆ ಹೊಂದಿದ್ದ ಐಷಾರಾಮಿ ಕಾರಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಇತ್ತೀಚಿಗೆ ಮದ್ರಾಸ್ ಹೈ ಕೋರ್ಟ್ ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ಪ್ರವೇಶ ತೆರಿಗೆಯಿಂದ ವಿನಾಯಿತಿ ನೀಡಬೇಕೆಂದು ಕೋರಿ ತಮಿಳು ಚಿತ್ರ ನಟ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಅವರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಈಗ ಕೇರಳದ ತಿರುವನಂತಪುರಂನಲ್ಲಿ ಇದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದೆ.

ದುಬೈ ನೋಂದಣಿ ಸಂಖ್ಯೆ ಹೊಂದಿದ್ದ ಐಷಾರಾಮಿ ಕಾರಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಈ ಘಟನೆಯಲ್ಲಿ ದುಬೈ ನೋಂದಣಿ ಸಂಖ್ಯೆ ಹೊಂದಿದ್ದ ರೋಲ್ಸ್ ರಾಯ್ಸ್ ಕಾರಿಗೆ ಕೇರಳದ ಮೋಟಾರು ಸಾರಿಗೆ ಇಲಾಖೆ ದಂಡ ವಿಧಿಸಿದೆ. ವರದಿಗಳ ಪ್ರಕಾರ ಪ್ರವೇಶ ತೆರಿಗೆ ಪಾವತಿಸದ ಕಾರಣಕ್ಕಾಗಿ ಈ ರೋಲ್ಸ್ ರಾಯ್ಸ್ ಕಾರಿಗೆ ದಂಡ ವಿಧಿಸಲಾಗಿದೆ.

ದುಬೈ ನೋಂದಣಿ ಸಂಖ್ಯೆ ಹೊಂದಿದ್ದ ಐಷಾರಾಮಿ ಕಾರಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ವಾಹನ ತಪಾಸಣೆ ವೇಳೆ ಕೇರಳ ಸಾರಿಗೆ ಇಲಾಖೆ ಈ ಕಾರಿನ ಮಾಲೀಕರಿಗೆ ರೂ.35,000 ಗಳ ದಂಡ ವಿಧಿಸಿದೆ. ಭಾರತಕ್ಕೆ ಪ್ರವೇಶಿಸುವ ವಿದೇಶಿ ನೋಂದಾಯಿತ ವಾಹನಗಳಿಗೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ದುಬೈ ನೋಂದಣಿ ಸಂಖ್ಯೆ ಹೊಂದಿದ್ದ ಐಷಾರಾಮಿ ಕಾರಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಆದರೆ ವಿದೇಶದಿಂದ ಆಮದು ಮಾಡಿಕೊಳ್ಳುವ ವಾಹನಗಳಿಗೆ 100% ಗಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತದೆ. ಇಷ್ಟೊಂದು ಭಾರೀ ಪ್ರಮಾಣದ ತೆರಿಗೆ ಪಾವತಿಸುವುದನ್ನು ತಪ್ಪಿಸಲು ರೋಲ್ಸ್ ರಾಯ್ಸ್ ಕಾರು ಮಾಲೀಕರು ಪ್ರವೇಶ ತೆರಿಗೆಯನ್ನು ಪಾವತಿಸದೇ ಇರಬಹುದು ಎಂದು ಹೇಳಲಾಗಿದೆ.

ದುಬೈ ನೋಂದಣಿ ಸಂಖ್ಯೆ ಹೊಂದಿದ್ದ ಐಷಾರಾಮಿ ಕಾರಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಹಲವು ಅನಿವಾಸಿ ಭಾರತೀಯರು ತಮ್ಮ ವಿದೇಶಿ ನೋಂದಾಯಿತ ಐಷಾರಾಮಿ ಕಾರುಗಳನ್ನು ಕಾರ್ನೆಟ್ ಮೂಲಕ ಭಾರತಕ್ಕೆ ಆಮದು ಮಾಡಿಕೊಂಡು, ಇಲ್ಲಿ ಬಳಸುತ್ತಾರೆ. ಈ ರೀತಿ ಆಮದು ಮಾಡಿಕೊಂಡ ವಾಹನಗಳನ್ನು ಕೆಲವು ದಿನಗಳವರೆಗೆ ಅಥವಾ ಕೆಲವು ವಾರಗಳವರೆಗೆ ಮಾತ್ರ ಬಳಸಬಹುದು.

ದುಬೈ ನೋಂದಣಿ ಸಂಖ್ಯೆ ಹೊಂದಿದ್ದ ಐಷಾರಾಮಿ ಕಾರಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಇದೇ ಸಮಯದಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಿ, ಅನುಮತಿಯನ್ನು ಪಡೆಯುವ ಮೂಲಕ ಮಾನ್ಯತೆಯ ಅವಧಿಯನ್ನು ಹೆಚ್ಚಿಸಿಕೊಳ್ಳಬಹುದು. ಕಾರ್ನೆಟ್ ವಾಹನಗಳಿಗೆ ಪಾಸ್ ಪೋರ್ಟ್ ಆಗಿದೆ. ಇದು ವಾಹನಗಳನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವರ್ಗಾಯಿಸಲು ನೆರವಾಗುತ್ತದೆ.

ದುಬೈ ನೋಂದಣಿ ಸಂಖ್ಯೆ ಹೊಂದಿದ್ದ ಐಷಾರಾಮಿ ಕಾರಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಕೇರಳ ವಾಹನ ಸಾರಿಗೆ ಇಲಾಖೆ ಅಧಿಕಾರಿಗಳು ದಂಡ ವಿಧಿಸಿರುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಹೊಸ ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.6.95 ಕೋಟಿಗಳಾಗಿದೆ.

ಈ ಕಾರಿನ ಒಟ್ಟಾರೆ ತೂಕ ಸುಮಾರು 2.5 ಟನ್'ಗಳಾಗಿದೆ. ಹೊಸ ಮಾದರಿಯಲ್ಲಿ ವಿನ್ಯಾಸ ಹಾಗೂ ಐಷಾರಾಮಿ ಫೀಚರ್'ಗಳನ್ನು ಅಪ್ ಡೇಟ್ ಮಾಡಲಾಗಿದೆ. ಹೊಸ ಕಾರು 50:50 ತೂಕದ ಅನುಪಾತವನ್ನು ಹೊಂದಿದೆ.

ದುಬೈ ನೋಂದಣಿ ಸಂಖ್ಯೆ ಹೊಂದಿದ್ದ ಐಷಾರಾಮಿ ಕಾರಿಗೆ ದಂಡ ವಿಧಿಸಿದ ಸಾರಿಗೆ ಇಲಾಖೆ

ಈ ಕಾರಿನ ಬೂಟ್ ಸ್ಪೇಸ್ ಅನ್ನು 507 ಲೀಟರ್'ಗಳಿಗೆ ಹೆಚ್ಚಿಸಲಾಗಿದೆ. ಫ್ಯಾಂಟಮ್ ಕಾರುಗಳಂತೆ ಈ ಕಾರಿನಲ್ಲಿ ಅಲ್ಯೂಮಿನಿಯಂ ಬೇಸ್ ಫ್ರೇಮ್‌ಗಳನ್ನು ಬಳಸಲಾಗಿದೆ. ಇದರ ಜೊತೆಗೆ 2021 ರ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನಲ್ಲಿ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

Most Read Articles

Kannada
English summary
Kerala MVD imposes fine on car having Dubai register number. Read in Kannada.
Story first published: Friday, July 16, 2021, 16:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X