ಮಾಡಿಫೈಗೊಂಡ ಕಾರಿನ ರಿಜಿಸ್ಟ್ರೇಷನ್ ಅಮಾನತುಪಡಿಸಿದ ಸಾರಿಗೆ ಇಲಾಖೆ

ಕಳೆದ ತಿಂಗಳು ಕೇರಳದ ಮೋಟಾರು ವಾಹನ ಇಲಾಖೆಯು ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಕಾರನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿಫೈಗೊಳಿಸಿದ್ದ ಮಾಲೀಕನ ವಿರುದ್ಧ ಕ್ರಮ ಕೈಗೊಂಡಿತ್ತು. ಈ ವ್ಯಕ್ತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ಮಾಡಿಫೈಗೊಂಡ ಕಾರಿನ ರಿಜಿಸ್ಟ್ರೇಷನ್ ಅಮಾನತುಪಡಿಸಿದ ಸಾರಿಗೆ ಇಲಾಖೆ

ಕೇರಳ ಮೋಟಾರು ವಾಹನ ಇಲಾಖೆಯು ಈ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಕಾರು ಮಾಲೀಕರ ಮನೆಗೆ ತೆರಳಿ ರೂ.48,000ಗಳ ದಂಡ ವಿಧಿಸಿತ್ತು. ಇಸುಝುಡಿ-ಮ್ಯಾಕ್ಸ್ ವಿ-ಕ್ರಾಸ್ ಮಾಲೀಕ ಅಬಿನ್ ಬಾಬ್ಸ್ ಅಬ್ರಹಾಂ, ಕೇರಳ ಮೋಟಾರು ವಾಹನ ಇಲಾಖೆಯು ವಿಧಿಸಿದ್ದ ದಂಡದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು.

ಮಾಡಿಫೈಗೊಂಡ ಕಾರಿನ ರಿಜಿಸ್ಟ್ರೇಷನ್ ಅಮಾನತುಪಡಿಸಿದ ಸಾರಿಗೆ ಇಲಾಖೆ

ಇತ್ತೀಚಿನ ವರದಿಗಳ ಪ್ರಕಾರ ಕೇರಳದ ಮೋಟಾರು ವಾಹನ ಇಲಾಖೆಯು ಈ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ವಾಹನದ ರಿಜಿಸ್ಟ್ರೇಷನ್ ಅನ್ನು ಅಮಾನತು ಪಡಿಸಿ ಕಾರಿನ ಮಾಲೀಕರಿಗೆ ನೋಟಿಸ್ ನೀಡಿದೆ. ಈ ಅಮಾನತು 6 ತಿಂಗಳವರೆಗೆ ಅಥವಾ ಮಾಡಿಫೈ ಮಾಡಲಾದ ಎಲ್ಲಾ ಭಾಗಗಳನ್ನು ವಾಹನದಿಂದ ತೆಗೆದುಹಾಕುವವರೆಗೆ ಮಾನ್ಯವಾಗಿರಲಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮಾಡಿಫೈಗೊಂಡ ಕಾರಿನ ರಿಜಿಸ್ಟ್ರೇಷನ್ ಅಮಾನತುಪಡಿಸಿದ ಸಾರಿಗೆ ಇಲಾಖೆ

ಈ ಪಿಕಪ್ ಟ್ರಕ್‌ನಲ್ಲಿದ್ದ ಬಿಡಿಭಾಗಗಳನ್ನು ಬದಲಿಸಿದ ನಂತರ ತಪಾಸಣೆಗಾಗಿ ವಾಹನವನ್ನು ಆರ್‌ಟಿಒ ಮುಂದೆ ಹಾಜರುಪಡಿಸಬೇಕಿತ್ತೆಂದು ಕೇರಳದ ಮೋಟಾರು ವಾಹನ ಇಲಾಖೆಯು ತಾನು ನೀಡಿರುವ ಅಮಾನತು ನೋಟಿಸಿನಲ್ಲಿ ತಿಳಿಸಿದೆ. ಕೇರಳದ ಮೋಟಾರು ವಾಹನ ಇಲಾಖೆಯ ನಿಯಮಗಳ ಅನುಸಾರ ಈ ರಿಜಿಸ್ಟ್ರೇಷನ್ ಅಮಾನತನ್ನು ಮುಂದೂಡಬಹುದು.

ಮಾಡಿಫೈಗೊಂಡ ಕಾರಿನ ರಿಜಿಸ್ಟ್ರೇಷನ್ ಅಮಾನತುಪಡಿಸಿದ ಸಾರಿಗೆ ಇಲಾಖೆ

ಈ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ನಲ್ಲಿರುವ ಮಾಡಿಫೈಮಾಡಲಾದ ಭಾಗಗಳನ್ನು ಇನ್ನು ಆರು ತಿಂಗಳಲ್ಲಿ ಬದಲಿಸದಿದ್ದರೆ ಈ ವಾಹನದ ರಿಜಿಸ್ಟ್ರೇಷನ್ ನಂಬರ್ ಅನ್ನು ಶಾಶ್ವತವಾಗಿ ರದ್ದುಗೊಳಿಸಲಾಗುವುದೆಂದು ಇಲಾಖೆಯು ಎಚ್ಚರಿಕೆ ನೀಡಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮಾಡಿಫೈಗೊಂಡ ಕಾರಿನ ರಿಜಿಸ್ಟ್ರೇಷನ್ ಅಮಾನತುಪಡಿಸಿದ ಸಾರಿಗೆ ಇಲಾಖೆ

ಈ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್‌ ಅನ್ನು ಭಾರತದಲ್ಲಿ ಹಿಂದೆಂದೂ ಮಾಡದ ರೀತಿಯಲ್ಲಿ ಮಾಡಿಫೈ ಮಾಡಲಾಗಿದೆ. ಈ ಟ್ರಕ್‌ನಲ್ಲಿ 12 ಇಂಚಿನ ಬೃಹತ್ ಲಿಫ್ಟ್ ಕಿಟ್ ಬಳಸಲಾಗಿದೆ. ಹೆಚ್ಚು ಉದ್ದವಿರುವ ಈ ಕಿಟ್ ಆಫ್ಟರ್ ಮಾರ್ಕೆಟ್ ಟಯರ್‌ಗಳೊಂದಿಗೆ ಬರುತ್ತದೆ.

ಮಾಡಿಫೈಗೊಂಡ ಕಾರಿನ ರಿಜಿಸ್ಟ್ರೇಷನ್ ಅಮಾನತುಪಡಿಸಿದ ಸಾರಿಗೆ ಇಲಾಖೆ

ಇದರ ಜೊತೆಗೆ ಸ್ಟೀಲ್ ಪೈಪ್ ಹಾಗೂ ವೈಡ್‌ಬಾಡಿ ಕಿಟ್‌ನಿಂದ ಮಾಡಿದ ಕಸ್ಟಮೈಸ್ಡ್ ಫ್ರಂಟ್ ಬಂಪರ್ ಸೇರಿದಂತೆ ಹಲವಾರು ಆಫ್ಟರ್ ಮಾರ್ಕೆಟ್ ಬಿಡಿ ಭಾಗಗಳನ್ನು ಈ ವಾಹನದಲ್ಲಿ ಅಳವಡಿಸಲಾಗಿದೆ. ಇಸುಝು ಡಿ-ಮ್ಯಾಕ್ಸ್ ದೇಶದ ಅತ್ಯಂತ ಜನಪ್ರಿಯ ವಿ-ಕ್ರಾಸ್ ಪಿಕಪ್ ಟ್ರಕ್‌ಗಳಲ್ಲಿ ಒಂದಾಗಿದೆ. ಈವೆಂಟ್‌ಗಳಲ್ಲಿ ಈ ಟ್ರಕ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

Most Read Articles

Kannada
English summary
Kerala MVD suspends modified Isuzu D Max V cross registration. Read in Kannada.
Story first published: Tuesday, September 8, 2020, 19:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X