ಪೊಲೀಸರನ್ನೂ ತನ್ನತ್ತ ಸೆಳೆದ ಹೊಸ ಥಾರ್ ಎಸ್‌ಯುವಿ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಥಾರ್ ಎಸ್‌ಯುವಿಯನ್ನು ಅಕ್ಟೋಬರ್ 2ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಎಸ್‌ಯುವಿಯ ಬಿಡುಗಡೆಯನ್ನು ಭಾರತದ ಕಾರು ಪ್ರಿಯರು ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದರು.

ಪೊಲೀಸರನ್ನೂ ತನ್ನತ್ತ ಸೆಳೆದ ಹೊಸ ಥಾರ್ ಎಸ್‌ಯುವಿ

ಹೊಸ ತಲೆಮಾರಿನ ಥಾರ್ ಎಸ್‌ಯುವಿ ಸಾಮಾನ್ಯ ಜನರನ್ನು ಮಾತ್ರವಲ್ಲದೇ, ಸೆಲೆಬ್ರಿಟಿಗಳನ್ನು ಸಹ ತನ್ನತ್ತ ಆಕರ್ಷಿಸಿದೆ. ಮೊನ್ನೆಯಷ್ಟೇ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಅವರ ತಂದೆ ಫಾರೂಕ್ ಅಬ್ದುಲ್ಲಾ ಈ ಎಸ್‌ಯುವಿಯಲ್ಲಿ ಸಂಚರಿಸಿ ಮೆಚ್ಚುಗೆ ಸೂಚಿಸಿದ್ದರು.

ಪೊಲೀಸರನ್ನೂ ತನ್ನತ್ತ ಸೆಳೆದ ಹೊಸ ಥಾರ್ ಎಸ್‌ಯುವಿ

ಈಗ ಚೆಕ್‌ಪೋಸ್ಟ್ ಮೂಲಕ ಹಾದು ಹೋದ ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಕೇರಳ ಪೊಲೀಸರು ತಡೆದು ನಿಲ್ಲಿಸಿ ಆಶ್ಚರ್ಯದಿಂದ ನೋಡುತ್ತಿರುವ ವೀಡಿಯೊ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಪೊಲೀಸರನ್ನೂ ತನ್ನತ್ತ ಸೆಳೆದ ಹೊಸ ಥಾರ್ ಎಸ್‌ಯುವಿ

2020ರ ಥಾರ್ ಎಸ್‌ಯುವಿಯಲ್ಲಿ ಹಲವಾರು ಅಪ್ ಡೇಟ್ ಗಳನ್ನು ಮಾಡಲಾಗಿದೆ. ಜೊತೆಗೆ ಹಳೆಯ ತಲೆಮಾರಿನ ಥಾರ್ ಎಸ್‌ಯುವಿಯಲ್ಲಿದ್ದ ವಿನ್ಯಾಸವನ್ನೇ ಹೊಸ ಎಸ್‌ಯುವಿಯಲ್ಲಿಯೂ ಸಹ ನೀಡಲಾಗಿದೆ.

ಪೊಲೀಸರನ್ನೂ ತನ್ನತ್ತ ಸೆಳೆದ ಹೊಸ ಥಾರ್ ಎಸ್‌ಯುವಿ

ಹೊಸ ಥಾರ್ ಎಸ್‌ಯುವಿ ರಸ್ತೆಯಲ್ಲಿ ಸಾಗುವಾಗ ತನ್ನ ಆಕರ್ಷಕ ಲುಕ್ ನಿಂದಾಗಿ ಜನರನ್ನು ತನ್ನತ್ತ ಸೆಳೆಯುತ್ತಿದೆ. ಇದರಿಂದ ಪೊಲೀಸರು ಸಹ ಹೊರತಾಗಿಲ್ಲ ಎಂಬುದಕ್ಕೆ ಸದ್ಯಕ್ಕೆ ವೈರಲ್ ಆಗಿರುವ ವೀಡಿಯೊ ಸಾಕ್ಷಿಯಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಪೊಲೀಸರನ್ನೂ ತನ್ನತ್ತ ಸೆಳೆದ ಹೊಸ ಥಾರ್ ಎಸ್‌ಯುವಿ

ಒರಟು ಆಫ್-ರೋಡ್ ರಸ್ತೆಗಳಲ್ಲಿ ಹೊಸ ಥಾರ್ ಎಸ್‌ಯುವಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಮಹೀಂದ್ರಾ ಬೊಲೆರೋದಲ್ಲಿ ಆಗಮಿಸಿದ ಕೇರಳ ಪೊಲೀಸರು ಥಾರ್ ಎಸ್‌ಯುವಿ ತಡೆದು ಕುತೂಹಲದಿಂದ ನೋಡಿದ್ದಾರೆ.

ಪೊಲೀಸರನ್ನೂ ತನ್ನತ್ತ ಸೆಳೆದ ಹೊಸ ಥಾರ್ ಎಸ್‌ಯುವಿ

ಈ ವೀಡಿಯೊವನ್ನು ರೆವೋಕಿಡ್ ವಿಲಾಗ್ಸ್ ಯೂಟ್ಯೂಬ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ . ಈ ವೀಡಿಯೊದಲ್ಲಿರುವ ಪೊಲೀಸರು ಈ ಎಸ್‌ಯುವಿಯನ್ನು ಚಾಲನೆ ಮಾಡಿದವರ ಬಳಿ ವಾಹನಕ್ಕೆ ಸಂಬಂಧಪಟ್ಟ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪೊಲೀಸರನ್ನೂ ತನ್ನತ್ತ ಸೆಳೆದ ಹೊಸ ಥಾರ್ ಎಸ್‌ಯುವಿ

ಇನ್ನೂ ಕೆಲವರು ನೇರವಾಗಿ ವಾಹನದೊಳಗೆ ಹೋಗಿ ಈ ಎಸ್‌ಯುವಿಯ ಕ್ಯಾಬಿನ್‌ನಲ್ಲಿರುವ ಫೀಚರ್ ಗಳನ್ನು ನೋಡುತ್ತಾರೆ. ಪೊಲೀಸರು ಥಾರ್ ಎಸ್‌ಯುವಿಯನ್ನು ವೀಕ್ಷಿಸಿದ ನಂತರ ಈ ಎಸ್‌ಯುವಿಯಲ್ಲಿದ್ದವರು ವಾಹನದ ಸಾಮರ್ಥ್ಯವನ್ನು ಪರೀಕ್ಷಿಸಲು ಬೀಚ್ ಗೆ ತೆರಳುತ್ತಾರೆ.

ಪೊಲೀಸರನ್ನೂ ತನ್ನತ್ತ ಸೆಳೆದ ಹೊಸ ಥಾರ್ ಎಸ್‌ಯುವಿ

ಹೊಸ ತಲೆಮಾರಿನ ಥಾರ್ ಎಸ್‌ಯುವಿಯು ಹಳೆಯ ತಲೆಮಾರಿನ ಥಾರ್ ಗಿಂತ ದೊಡ್ಡದಾಗಿ ಹಾಗೂ ವಿಶಾಲವಾಗಿದೆ. ಹೊಸ ಥಾರ್ ಎಸ್‌ಯುವಿಯನ್ನು ಮೊದಲ ಬಾರಿಗೆ ಸ್ಕಾರ್ಪಿಯೋ ಆಧಾರಿತ ಪ್ಲಾಟ್ ಫಾರಂನಲ್ಲಿ ನಿರ್ಮಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮಹೀಂದ್ರಾ ಕಂಪನಿಯು 2020ರ ಹೊಸ ಥಾರ್ ಎಸ್‌ಯುವಿಯಲ್ಲಿ ಹಲವಾರು ಹೊಸ ಫೀಚರ್ ಗಳನ್ನು ನೀಡಿದೆ. ಹೊಸ ಥಾರ್ ಎಸ್‌ಯುವಿಯನ್ನು 2.0-ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಹಾಗೂ 2.2-ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಪೊಲೀಸರನ್ನೂ ತನ್ನತ್ತ ಸೆಳೆದ ಹೊಸ ಥಾರ್ ಎಸ್‌ಯುವಿ

ಮಹೀಂದ್ರಾ ಕಂಪನಿಯು ಇದುವರೆಗೂ ಹೊಸ ಥಾರ್ ಎಸ್‌ಯುವಿಗಾಗಿ 9,000 ಕ್ಕೂ ಹೆಚ್ಚು ಬುಕಿಂಗ್ ಗಳನ್ನು ಸ್ವೀಕರಿಸಿದೆ. ನವೆಂಬರ್‌ ತಿಂಗಳಿನಿಂದ ಈ ಎಸ್‌ಯುವಿಯ ವಿತರಣೆಗಳು ಆರಂಭವಾಗಲಿವೆ. ಹೊಸ ಥಾರ್ ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.9.8 ಲಕ್ಷಗಳಾಗಿದೆ.

Most Read Articles

Kannada
English summary
Kerala Police attracted towards new generation Mahindra Thar. Read in Kannada.
Story first published: Wednesday, October 7, 2020, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X