ಕಾರು ಸ್ಕ್ರಾಚ್ ಮಾಡಿದ ಪಾದ್ರಿ ಮೇಲೆ ಬಿತ್ತು ಕೇಸ್..!

ಕಳ್ಳತನ, ಕೊಲೆ, ರಾಬರಿ, ಅತ್ಯಾಚಾರದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಪರಾಧಗಳನ್ನು ತಡೆಗಟ್ಟಲು ಹಾಗೂ ಆರೋಪಿಗಳನ್ನು ಪತ್ತೆಹಚ್ಚಲು ಹಲವೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿರುತ್ತಿದೆ.

ಕಾರು ಸ್ಕ್ರಾಚ್ ಮಾಡಿದ ಪಾದ್ರಿ ಮೇಲೆ ಬಿತ್ತು ಕೇಸ್..!

ಸಿಸಿಟಿವಿಗಳು ರಸ್ತೆ ಅಪಘಾತ, ವಾಹನ ಕಳ್ಳತನ, ರಾಬರಿಗಳಂತಹ ಪ್ರಕರಣಗಳನ್ನು ಪತ್ತೆಹಚ್ಚಲು ನೆರವಾಗುತ್ತಿವೆ. ಇದರ ಜೊತೆಗೆ ಸಿಸಿಟಿವಿಗಳಲ್ಲಿ ಕೆಲವು ಹಾಸ್ಯದ ಸನ್ನಿವೇಶಗಳು ಸಹ ಸೆರೆಯಾಗುತ್ತಿವೆ. ಸಿಸಿಟಿವಿಯಲ್ಲಿ ಕೇರಳದ ಪಾದ್ರಿಯೊಬ್ಬರ ವಿಚಿತ್ರ ವರ್ತನೆ ಸೆರೆಯಾಗಿದೆ.

ಕಾರು ಸ್ಕ್ರಾಚ್ ಮಾಡಿದ ಪಾದ್ರಿ ಮೇಲೆ ಬಿತ್ತು ಕೇಸ್..!

ಈ ಮೂಲಕ ಪಾದ್ರಿಗಳು ಈ ರೀತಿಯಲ್ಲಿಯೂ ಇರುತ್ತಾರೆ ಎಂಬುದು ಜಗತ್ತಿಗೆ ತಿಳಿದು ಬಂದಿದೆ. ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಬೇರೊಬ್ಬ ವ್ಯಕ್ತಿಗೆ ಸೇರಿದ್ದ ಕಾರ್ ಅನ್ನು ಪಾದ್ರಿಯೊಬ್ಬರು ಕಲ್ಲಿನಿಂದ ಕೆರೆಯುತ್ತಿರುವ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರು ಸ್ಕ್ರಾಚ್ ಮಾಡಿದ ಪಾದ್ರಿ ಮೇಲೆ ಬಿತ್ತು ಕೇಸ್..!

ಪಾದ್ರಿ ಎಂದಿನಂತೆ ತಮ್ಮ ಪೂಜಾ ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ವಾಪಸಾಗುವಾಗ ಈ ಘಟನೆ ನಡೆದಿದೆ. ಪಾದ್ರಿ ಮನೆಗೆ ಕಾರಿನಲ್ಲಿ ವಾಪಸಾಗುವಾಗ ಆ ರಸ್ತೆಯಲ್ಲಿ ಕೆಂಪು ಬಣ್ಣದ ಮಾರುತಿ ಸುಜುಕಿ ಬಲೆನೊ ಕಾರ್ ಅನ್ನು ಪಾರ್ಕ್ ಮಾಡಲಾಗಿದೆ.

ಕಾರು ಸ್ಕ್ರಾಚ್ ಮಾಡಿದ ಪಾದ್ರಿ ಮೇಲೆ ಬಿತ್ತು ಕೇಸ್..!

ಪಾದ್ರಿ ತನ್ನ ಕಾರಿನಿಂದ ಕೆಳಗಿಳಿದು ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಮುಂದೆ ಹೇಗೆ ಬರಬೇಕೆಂದು ಹೇಳುತ್ತಿದ್ದಾರೆ. ಕಾರು ಮುಂದೆ ಬಂದ ನಂತರ ಪಾರ್ಕ್ ಮಾಡಲಾಗಿದ್ದ ಕಾರಿನ ಪಕ್ಕಕ್ಕೆ ತೆರಳಿ ಅಲ್ಲಿ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಆ ಕಾರಿನ ಮುಂಭಾಗದಲ್ಲಿ ಕೆರೆದು ಓಡಿಹೋಗಿ ತಮ್ಮ ಕಾರಿನಲ್ಲಿ ಕುಳಿತುಕೊಂಡಿದ್ದಾರೆ.

ಕಾರು ಸ್ಕ್ರಾಚ್ ಮಾಡಿದ ಪಾದ್ರಿ ಮೇಲೆ ಬಿತ್ತು ಕೇಸ್..!

ಬೆಳಿಗ್ಗೆ ತನ್ನ ಕಾರ್ ಅನ್ನು ಹೊರತೆಗೆದಾಗ ಕಾರು ಮಾಲೀಕನಿಗೆ ತನ್ನ ಕಾರಿನಲ್ಲಿ ಸ್ಕ್ರಾಚ್‍‍ಗಳಿರುವುದು ಕಂಡು ಬಂದಿದೆ. ಈ ಸ್ಕ್ರಾಚ್‍‍ಗಳು ಪ್ರಾಣಿಗಳಿಂದ ಉಂಟಾಗಿಲ್ಲ ಎಂದು ತಿಳಿದ ನಂತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.

ಕಾರು ಸ್ಕ್ರಾಚ್ ಮಾಡಿದ ಪಾದ್ರಿ ಮೇಲೆ ಬಿತ್ತು ಕೇಸ್..!

ಸಿಸಿಟಿವಿ ನೋಡಿದ ನಂತರ ಗಾಬರಿಗೊಳಗಾದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆ ಪಾದ್ರಿಯ ವಿರುದ್ಧ ಕಾರು ನಾಶ ಪಡಿಸಿರುವ ಪ್ರಕರಣವನ್ನು ದಾಖಲಿಸಿದ್ದಾರೆ. ಮತ್ತೊಬ್ಬರ ವಾಹನವನ್ನು ನಾಶಪಡಿಸುವಂತಹ ವಿಕೃತ ಘಟನೆಗಳು ಭಾರತದಲ್ಲಿ ನಡೆಯುತ್ತಲೇ ಇರುತ್ತವೆ.

ಕಾರು ಸ್ಕ್ರಾಚ್ ಮಾಡಿದ ಪಾದ್ರಿ ಮೇಲೆ ಬಿತ್ತು ಕೇಸ್..!

ಬಹುತೇಕ ಪ್ರಕರಣಗಳು ಹೊಟ್ಟೆ ಉರಿಯ ಕಾರಣಕ್ಕೆ, ಇನ್ನು ಕೆಲವು ಪ್ರಕರಣಗಳು ತಮ್ಮ ಸಿಟ್ಟನ್ನು ಹೊರ ಹಾಕುವ ಕಾರಣಕ್ಕೆ ನಡೆಯುತ್ತವೆ. ಜನರು ತಮ್ಮ ವಾಹನಗಳನ್ನು ಸರಿಯಾಗಿ ಪಾರ್ಕ್ ಮಾಡಿರದಿದ್ದರೆ, ಬೇರೆಯವರಿಗಿಂತ ಬೆಲೆಬಾಳುವ ಕಾರುಗಳನ್ನು ಹೊಂದಿದ್ದರೆ ಈ ರೀತಿಯ ಘಟನೆಗಳು ನಡೆಯುತ್ತವೆ.

ಈ ಕಾರಣಕ್ಕೆ ಜನರು ತಮ್ಮ ವಾಹನಗಳನ್ನು ತಾವೇ ರಕ್ಷಿಸಿಕೊಳ್ಳಬೇಕು. ಆದಷ್ಟು ಸುರಕ್ಷಿತವಾದ ಜಾಗಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಬೇಕು. ಇದರ ಜೊತೆಗೆ ತಮ್ಮ ವಾಹನಗಳಲ್ಲಿ ಅಲಾರಾಂ ಅಥವಾ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು.

ಕಾರು ಸ್ಕ್ರಾಚ್ ಮಾಡಿದ ಪಾದ್ರಿ ಮೇಲೆ ಬಿತ್ತು ಕೇಸ್..!

ವಾಹನಗಳಲ್ಲಿ ಅಲಾರಾಂ ಹೊಂದುವುದರಿಂದ ಯಾರಾದರೂ ವಾಹನವನ್ನು ಕದಿಯಲು ಪ್ರಯತ್ನಿಸಿದರೆ ಅಥವಾ ಹಾಳು ಮಾಡಲು ಪ್ರಯತ್ನ ಪಟ್ಟರೆ ಅಲಾರಾಂಗಳು ಅಲರ್ಟ್ ನೀಡುತ್ತವೆ. ವಾಹನಗಳಲ್ಲಿ ಕ್ಯಾಮರಾಗಳಿದ್ದರೆ ಹಾಳು ಮಾಡುವವರು ಸಿಕ್ಕಿ ಬೀಳುತ್ತಾರೆ.

Most Read Articles

Kannada
English summary
Kerala priest gets police case for scratching car with stone. Read in Kannada.
Story first published: Wednesday, January 22, 2020, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X