ಮನೆಯಲ್ಲೇ ತಯಾರಾಯ್ತು ವಿಜಯ್ ಸೂಪರ್ ಸ್ಕೂಟರ್‌ನಂತೆ ಕಾಣುವ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ನಿಧಾನವಾಗಿ ಜನಪ್ರಿಯವಾಗುತ್ತಿವೆ. ಹಲವು ವಾಹನ ಉತ್ಸಾಹಿಗಳು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಿದ್ದಾರೆ.

ಮನೆಯಲ್ಲೇ ತಯಾರಾಯ್ತು ವಿಜಯ್ ಸೂಪರ್ ಸ್ಕೂಟರ್‌ನಂತೆ ಕಾಣುವ ಎಲೆಕ್ಟ್ರಿಕ್ ಸ್ಕೂಟರ್

ಕೇರಳದ ರಾಕೇಶ್ ಬಾಬು ಎಂಬುವವರು ತಮ್ಮ ಮನೆಯಲ್ಲಿರುವ ಗ್ಯಾರೇಜ್‌ನಲ್ಲಿಯೇ ವಾಹನ ಮಾಡಿಫೈ ಮಾಡುತ್ತಾರೆ. ಈ ಹಿಂದೆ ಅವರು ಫೋಕ್ಸ್‌ವ್ಯಾಗನ್ ಬೀಟಲ್ ಶೈಲಿಯ ವಾಹನವನ್ನು ವಿನ್ಯಾಸಗೊಳಿಸಿದ್ದರು.

ಮನೆಯಲ್ಲೇ ತಯಾರಾಯ್ತು ವಿಜಯ್ ಸೂಪರ್ ಸ್ಕೂಟರ್‌ನಂತೆ ಕಾಣುವ ಎಲೆಕ್ಟ್ರಿಕ್ ಸ್ಕೂಟರ್

ಇತ್ತೀಚಿಗೆ ಅವರು ತಮ್ಮ ಗ್ಯಾರೇಜ್‌ನಲ್ಲಿಯೇ ಎಲೆಕ್ಟ್ರಿಕ್ ಸ್ಕೂಟರ್'ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ರಾಕೇಶ್ ಬಾಬು ಅಭಿವೃದ್ಧಿಪಡಿಸಿರುವ ಈ ಎಲೆಕ್ಟ್ರಿಕ್ ಸ್ಕೂಟರ್‌ ವಿಜಯ್ ಸೂಪರ್‌ನಂತೆ ಕಾಣುತ್ತದೆ.

ಮನೆಯಲ್ಲೇ ತಯಾರಾಯ್ತು ವಿಜಯ್ ಸೂಪರ್ ಸ್ಕೂಟರ್‌ನಂತೆ ಕಾಣುವ ಎಲೆಕ್ಟ್ರಿಕ್ ಸ್ಕೂಟರ್

ಸ್ಕೈ ಬ್ಲೂ ಬಣ್ಣದಲ್ಲಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ರಾಕೇಶ್ ಬಾಬು ಈ ಸ್ಕೂಟರಿನಲ್ಲಿಯೇ ಸವಾರಿ ಮಾಡುತ್ತಾರೆ. ಈ ಎಲೆಕ್ಟ್ರಿಕ್ ಸ್ಕೂಟರ್ ಜನರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.

ಮನೆಯಲ್ಲೇ ತಯಾರಾಯ್ತು ವಿಜಯ್ ಸೂಪರ್ ಸ್ಕೂಟರ್‌ನಂತೆ ಕಾಣುವ ಎಲೆಕ್ಟ್ರಿಕ್ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಫ್ರೇಮ್, ಸಸ್ಪೆಂಷನ್, ಹಬ್ ಮೋಟಾರ್ ಹಾಗೂ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಅನ್ನು ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್‌ನಿಂದ ಪಡೆಯಲಾಗಿದೆ. ಈ ಬಗ್ಗೆ ವೀಡಿಯೊದಲ್ಲಿ ಉಲ್ಲೇಖಿಸಿಲ್ಲ.

ಮನೆಯಲ್ಲೇ ತಯಾರಾಯ್ತು ವಿಜಯ್ ಸೂಪರ್ ಸ್ಕೂಟರ್‌ನಂತೆ ಕಾಣುವ ಎಲೆಕ್ಟ್ರಿಕ್ ಸ್ಕೂಟರ್

ಬಾಡಿ ಪ್ಯಾನೆಲ್'ಗಳನ್ನು ಕೈಯಿಂದ ತಯಾರಿಸಲಾಗಿದೆ. ಇದನ್ನು ರಾಕೇಶ್ ಬಾಬುರವರೇ ತಯಾರಿಸಿದ್ದಾರೆ. ಟೂ ಸ್ಟ್ರೋಕ್'ನ ಜನಪ್ರಿಯ ಸ್ಕೂಟರ್ ಆಗಿದ್ದ ವಿಜಯ್ ಸೂಪರ್ ಸ್ಕೂಟರ್‌ನಂತೆ ಈ ಸ್ಕೂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಮನೆಯಲ್ಲೇ ತಯಾರಾಯ್ತು ವಿಜಯ್ ಸೂಪರ್ ಸ್ಕೂಟರ್‌ನಂತೆ ಕಾಣುವ ಎಲೆಕ್ಟ್ರಿಕ್ ಸ್ಕೂಟರ್

ರಾಕೇಶ್ ಬಾಬು ಬ್ಯಾಟರಿಗಳನ್ನು ಸ್ಕೂಟರ್‌ನ ಸೀಟಿನ ಕೆಳಗೆ ಇರಿಸಿದ್ದಾರೆ. ಚಾರ್ಜಿಂಗ್ ಪಾಯಿಂಟ್ ಅನ್ನು ಅದರ ಕೆಳಗೆ ಇರಿಸಲಾಗಿದೆ. ಈ ಸ್ಕೂಟರ್‌ನಲ್ಲಿರುವ ಅನೇಕ ಬಿಡಿ ಭಾಗಗಳನ್ನು ವಿಭಿನ್ನ ವಾಹನಗಳಿಂದ ಪಡೆಯಲಾಗಿದೆ.

ಮನೆಯಲ್ಲೇ ತಯಾರಾಯ್ತು ವಿಜಯ್ ಸೂಪರ್ ಸ್ಕೂಟರ್‌ನಂತೆ ಕಾಣುವ ಎಲೆಕ್ಟ್ರಿಕ್ ಸ್ಕೂಟರ್

ಸೈಡ್ ಕವರ್‌ಗಳ ಲಾಕ್ ಅನ್ನು ಜೀಪ್‌ನಿಂದ ಪಡೆಯಲಾಗಿದೆ. ಹೆಚ್ಚಿನ ಭಾಗಗಳನ್ನು ಕಸ್ಟಮೈಸ್ ಮಾಡಲಾಗಿದೆ ಹಾಗೂ ಕೈಯಿಂದ ತಯಾರಿಸಲಾಗಿದೆ. ಈ ಸ್ಕೂಟರಿನ ಸೀಟ್ ಅನ್ನು ಸಂಪೂರ್ಣವಾಗಿ ಕೈಯಿಂದ ತಯಾರಿಸಲಾಗಿದೆ.

ಮನೆಯಲ್ಲೇ ತಯಾರಾಯ್ತು ವಿಜಯ್ ಸೂಪರ್ ಸ್ಕೂಟರ್‌ನಂತೆ ಕಾಣುವ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್‌ನಲ್ಲಿ 48 ವಿ ಬ್ಯಾಟರಿಯನ್ನು ಅಳವಡಿಸಲಾಗಿದೆ. ಆದರೆ ಈ ಬ್ಯಾಟರಿ ಉತ್ಪಾದಿಸುವ ಪವರ್ ಹಾಗೂ ಟಾರ್ಕ್ ಅಂಕಿ ಅಂಶಗಳ ಬಗ್ಗೆ ಮಾಹಿತಿ ನೀಡಿಲ್ಲ. ಸ್ಕೂಟರ್‌ನ ಹಿಂದಿನ ಚಕ್ರದಲ್ಲಿ ಹಬ್ ಮೋಟರ್ ಅಳವಡಿಸಲಾಗಿದೆ.

ಮನೆಯಲ್ಲೇ ತಯಾರಾಯ್ತು ವಿಜಯ್ ಸೂಪರ್ ಸ್ಕೂಟರ್‌ನಂತೆ ಕಾಣುವ ಎಲೆಕ್ಟ್ರಿಕ್ ಸ್ಕೂಟರ್

ವಿಜಯ್ ಸೂಪರ್, 1970 ಮತ್ತು 1980ರ ದಶಕಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಟೂ ಸ್ಟ್ರೋಕ್ ಸ್ಕೂಟರ್ ಆಗಿದೆ. ಈ ಸ್ಕೂಟರ್ ಅನ್ನು 1983ರಲ್ಲಿ ಮೊದಲ ಬಾರಿಗೆ ಕ್ರಿಕೆಟ್ ವಿಶ್ವಕಪ್ ಗೆದ್ದ ಪ್ರತಿ ಕ್ರಿಕೆಟಿಗರಿಗೆ ಉಡುಗೊರೆಯಾಗಿ ನೀಡಲಾಗಿತ್ತು.

ಮಾಡಿಫೈಗೊಂಡ ವಾಹನಗಳು ಭಾರತದಲ್ಲಿ ಕಾನೂನುಬದ್ಧವಲ್ಲ. ಮಾಡಿಫೈಗೊಂಡ ಯಾವುದೇ ವಾಹನಗಳು ರಸ್ತೆಗಳಲ್ಲಿ ಸಂಚರಿಸುವ ಮೊದಲು ಸುರಕ್ಷತೆಗಾಗಿ ಎಆರ್‌ಎಐ ಹಾಗೂ ಸಂಬಂಧಿತ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ.

ಮನೆಯಲ್ಲೇ ತಯಾರಾಯ್ತು ವಿಜಯ್ ಸೂಪರ್ ಸ್ಕೂಟರ್‌ನಂತೆ ಕಾಣುವ ಎಲೆಕ್ಟ್ರಿಕ್ ಸ್ಕೂಟರ್

ಮಾಡಿಫೈಗೊಂಡ ವಾಹನಗಳಿಗೆ ಅನುಮೋದನೆ ಪಡೆಯುವ ಪ್ರಕ್ರಿಯೆ ದೀರ್ಘವಾಗಿದ್ದು, ಸಾಕಷ್ಟು ಬಂಡವಾಳದ ಅಗತ್ಯವಿದೆ. ಈ ಕಾರಣಕ್ಕಾಗಿಯೇ ಕಸ್ಟಮೈಸ್ ಮಾಡಲಾದ ವಾಹನಗಳು ಭಾರತದಲ್ಲಿ ಜನಪ್ರಿಯವಾಗಿಲ್ಲ. ಈ ರೀತಿ ಕಸ್ಟಮೈಸ್ ಆಗುವ ವಾಹನಗಳಿಗೆ ಕೇರಳದಲ್ಲಿ ಭಾರಿ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ.

Most Read Articles

Kannada
English summary
Kerala youth develops electric scooter from scratch. Read in Kannada.
Story first published: Wednesday, July 7, 2021, 20:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X