ಮಾರುತಿ ಇನ್ವಿಕ್ಟೊ VS ಟೊಯೋಟಾ ಹೈಕ್ರಾಸ್: ಈ MPV ದೊರೆಗಳ ಪ್ರಮುಖ ವ್ಯತ್ಯಾಸಗಳು ಗೊತ್ತಾ?
ಇತ್ತೀಚೆಗೆ ಭಾರತದ ಹೆಮ್ಮೆಯ ಕಾರು ನಿರ್ಮಾಣ ಕಂಪನಿ ಮಾರುತಿ ಸುಜುಕಿಯು ತನ್ನ ಫ್ಲ್ಯಾಗ್‌ಶಿಪ್ ಕಾರಾದ ಇನ್ವಿಕ್ಟೋ ವನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಇದು ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನ ರೀ ಬ್ಯಾಡ್ಜಿಂಗ್ ಎಂದು ಎಲ್ಲರಿಗೂ ತಿಳಿದಿದೆ. ಹೀಗಾಗಿಯೇ ಈ ಎರಡು ಕಾರಿನಲ್ಲಿ ಯಾವ ಕಾರನ್ನು ಕೊಳ್ಳಬೇಕು ಎಂಬ ಸಂಶಯ ಮೂಡುವುದು ಸಹಜ.
ಕಾರಣ ಈ ಕಾರುಗಳು ನೊಡುವುದಕ್ಕೆ ಮತ್ತು ಇದರ ಇತರ ಪೀಚರ್‌ಗಳು ಸಾಮಾನ್ಯವಾಗಿ ಒಂದೇ ರೀತಿ ಇದೆ. ಹೀಗಾಗಿ ಇಂದಿನ ಈ ಲೇಖನದಲ್ಲಿ ಈ ಎರಡು ಕಾರುಗಳಾದ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಸುಜುಕಿ ಇನ್ವಿಕ್ಟೋ ಮಧ್ಯೆ ಇರುವಂತಹ ಐದು ಪ್ರಮುಖ ವ್ಯತ್ಯಾಸಗಳೇನು ಎಂದು ನೊಡೋಣ.

೧. ಸ್ಟೈಲಿಂಗ್: ನೀವು ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಮತ್ತು ಟೊಯೋಟಾ ಇನ್ನೋವಾ ಹೈಕ್ರಾಸ್ ಈ ಎರಡೂ ಕಾರನ್ನು ದೂರದಿಂದ ನೋಡಿದರೆ ನಿಮಗೆ ಅದು ಒಂದೇ ರೀತಿ ಇದೆ ಎನಿಸಬಹುದು. ಆದರೆ ಸರಿಯಾಗಿ ಗಮನಿಸಿದರೆ ಎರಡೂ ಕಾರಿನ ಫ್ರಂಟ್ ಗ್ರಿಲ್‌ಗಳು ಎರಡೂ ಬೇರೆ ಬೇರೆ ವಿನ್ಯಾಸವನ್ನು ಹೊಂದಿದೆ. ಇದು ಮಾತ್ರವಲ್ಲದೇ ಇನ್ನೂ ಕೆಲವು ವಿನ್ಯಾಸಗಳು ಒಂದಕ್ಕೊಂದು ವ್ಯತ್ಯಸ್ಥವಾಗಿದೆ.
೨. ಫೀಚರ್ಸ್: ಈ ಎರಡೂ ಕಾರಿನ ಫೀಚರ್ಸ್ ನೊಡುವುದಾದರೆ ಒಂದಕ್ಕೊಂದು ಸಾಮ್ಯತೆ ಇಲ್ಲ. ಕಾರಣ ಇದರ ಬೆಲೆ, ಹೈಕ್ರಾಸ್ ಇನ್ವಿಕ್ಟೋಗಿಂತ ಹೆಚ್ಚು ದುಬಾರಿಯಾಗಿದೆ. ಇದೇ ಕಾರಣದಿಂದ ಹೈಕ್ರಾಸ್ ನಲ್ಲಿ ಇರುವ ಹಲವು ಫೀಚರ್‌ಗಳನ್ನು ನಾವು ಇನ್ವಿಕ್ಟೋದಲ್ಲಿ ಕಾಣಲು ಸಾಧ್ಯವಿಲ್ಲ. ಇದರಲ್ಲಿ ಹಲವು ಪ್ರೀಮಿಯಂ ಪೀಚರ್‌ಗಳು ಸೇರಿವೆ.

೩. ಎಂಜಿನ್: ಇನ್ನು ಎರಡೂ ವಾಹನದ ಇಂಜಿನ್ ಒಂದೇ ರೀತಿ ಇದ್ದರೂ ಅದರಲ್ಲೂ ವ್ಯತ್ಯಾಸಗಳಿವೆ. ಎರಡೂ ಕಾರುಗಳು 2 ಲೀಟರ್ ಸ್ಟ್ರಾಂಗ್ ಹೈಬ್ರಿಟ್ ಎಂಜಿನ್ ಅನ್ನು ಹೊಂದಿದ್ದು ಇದರ ಮೂಲಕ 186 ps ಮತ್ತು 206 ಎನ್‌ಮ್ ಟಾರ್ಕನ್ನು ಉತ್ಪಾದಿಸುತ್ತದೆ. ಆದರೆ ಹೈಕ್ರಾಸ್‌ನಲ್ಲಿ ಲಭ್ಯವಿರುವ 2 ಲೀಟರ್ ಪೆಟ್ರೋಲ್ ಎಂಜಿನ್ ಇನ್ವಿಕ್ಟೋದಲ್ಲಿ ಲಭ್ಯವಿಲ್ಲ.
೪. ವಾರಂಟಿ ಮತ್ತು ಸರ್ವೀಸ್: ಟೊಯೋಟಾ ಇನ್ನೋವಾ ಹೈಕ್ರಾಸ್ 3 ವರ್ಷ ಅಥವಾ ಒಂದು ಲಕ್ಷ ಕಿಲೋ ಮಿಟರ್ ಸ್ಟಾಂಡರ್ಡ್ ವಾರಂಟಿಯೊಂದಿಗೆ ಬರುತ್ತದೆ. ಆದರೆ ಇದೇ ಸಂಧರ್ಭದಲ್ಲಿ ಮಾರುತಿ ಸುಜುಕಿಯು ತನ್ನ ಇನ್ವಿಕ್ಟೋ ಕಾರಿಗೆ 2 ವರ್ಷ ಮತ್ತು 40000 ಕಿಲೋ ಮೀಟರ್ ನ ಸ್ಟಾಂಡರ್ಡ್ ವಾರಂಟಿಯನ್ನು ನೀಡುತ್ತಿದೆ.
೫. ಬೆಲೆ: ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಸುಜುಕಿ ಇನ್ವಿಕ್ಟೋ ಕಾರು ಇವೆರಡರ ಬೆಲೆಯಲ್ಲೂ ನಾವು ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್ ಎಕ್ಸ್ ಶೋ ರೂಮ್ ಬೆಲೆ ಸುಮಾರು 18.82 ಲಕ್ಷದಿಂದ 30.26 ಲಕ್ಷ. ಮತ್ತು ಇನ್ವಿಕ್ಟೋ 24.79 ಲಕ್ಷದಿಂದ 28.42 ಲಕ್ಷದವರೆಗೆ ಸಿಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications