ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ಭಾರತದಲ್ಲಿ ಆಫ್‌ರೋಡ್‌ ಡ್ರೈವಿಂಗ್‌ಗಾಗಿ ಮಹೀಂದ್ರಾ ಥಾರ್ ಸಾಕಷ್ಟು ಜನಪ್ರಿಯವಾಗಿದೆ. ಈ ವಾಹನವನ್ನು ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಖರೀದಿಸುತ್ತಿದ್ದಾರೆ.

ಇತ್ತೀಚೆಗೆ ಕೆಜಿಎಫ್ ನಟಿ ರವೀನಾ ಟಂಡನ್ ಅವರು ಕೂಡ ತಮ್ಮ ಇಷ್ಟವಾದ ಕಾರು ಮಹೀಂದ್ರಾ ಥಾರ್ ಆಗಿದ್ದು, ಎರಡನೇ ಜನರೇಷನ್ ಥಾರ್ ಖರೀದಿಸುವುದಾಗಿ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿ ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್ ಮಾಡಿದ್ದಾರೆ. ನಟಿಯ ನಿರ್ಧಾರಕ್ಕೆ ಈಗ ಆನಂದ್ ಮಹೀಂದ್ರಾ ಅವರು ಪ್ರತಿಕ್ರಿಯಿಸಿದ್ದಾರೆ.

ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ಬಾಲಿವುಡ್ ಮಂದಿಗೆ ದುಬಾರಿ ಕಾರುಗಳು, ಐಷಾರಾಮಿ ಮನೆ, ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿ ಸಾಮಾಜಿಕ ಜಾಲತಾಣದಲ್ಲಿ ತೋರಿಸಿಕೊಳ್ಳುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಈಗ ಕೆಜಿಎಫ್ ನಟಿಗೆ ಐಷಾರಾಮಿ ದುಬಾರಿ ಕಾರುಗಳ ಬದಲಿಗೆ ಸಾಮಾನ್ಯ ಮಹೀಂದ್ರಾ ಥಾರ್ ಅಂದ್ರೆ ಬಹಳ ಇಷ್ಟವೆಂಬುದನ್ನು ವ್ಯಕ್ತಪಡಿಸಿದ್ದಾರೆ.

ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ಅವರು ಟ್ವಿಟ್ಟರ್‌ನಲ್ಲಿ, ಆಫ್‌ರೋಡ್‌ನಲ್ಲಿ ಕಾರು ಓಡಿಸುವುದರ ಕುರಿತು ತಮ್ಮ ಆಸಕ್ತಿಯನ್ನು ತೋರಿದ್ದಾರೆ. ಕುತೂಹಲಕಾರಿಯಾಗಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, ಆಕೆಯ ನಿರ್ಧಾರವನ್ನು ಬೆಂಬಲಿಸುವ ಮೂಲಕ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. "ಕ್ಲಬ್ ಮಹೀಂದ್ರಾ ರೆಸಾರ್ಟ್‌ಗೆ ಥಾರ್ ಅನ್ನು ತೆಗೆದುಕೊಂಡು ಹೋಗುವಂತೆ ಏನೂ ಇಲ್ಲ! ( MahindraRise ಗೆ ಎರಡು ಲಾಭ) ಎಂದಿದ್ದಾರೆ."

ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ಆನಂದ್ ಮಹೀಂದ್ರಾ ಹೀಗೆಕೆ ಹೇಳಿದ್ರು ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ, ನಟಿ ರವೀನ್ ಟಂಡನ್ ಅವರು ಕ್ಲಬ್ ಮಹೀಂದ್ರಾಗಾಗಿ ಟಿವಿಸಿಯಲ್ಲಿ (ಜಾಹೀರಾತು) ಇತ್ತೀಚೆಗೆ ಪಾಲ್ಗೊಂಡಿದ್ದರು. ಇದನ್ನು ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರತಿಕ್ರಿಯೆಯಾಗಿ, ನಟಿ ಕಂಪನಿಯ 3-ಬಾಗಿಲಿನ ಆಫ್‌ರೋಡ್ ಅನ್ನು ಖರೀದಿಸುವ ಯೋಜನೆಯನ್ನು ಬಹಿರಂಗಪಡಿಸಿದರು. ತನ್ನ ಕಾಲೇಜು ದಿನಗಳಲ್ಲಿ ಮಹೀಂದ್ರಾ ಜೀಪ್ ಓಡಿಸುವುದನ್ನು ಕಲಿತಿರುವ ಬಗ್ಗೆ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ಮಹೀಂದ್ರ ಥಾರ್ ಕುರಿತು ಮಾತನಾಡುವುದಾದರೆ, ಇದು ಈಗ ಅದರ ಎರಡನೇ-ಜನ್ ರೆಂಡಿಶನ್‌ನಲ್ಲಿ ಮಾರಾಟದಲ್ಲಿದೆ. ಇದು ಸುಮಾರು ಒಂದು ವರ್ಷದವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ಥಾರ್ ಹೊಸ ಕಾರು ಮಾದರಿಯಲ್ಲಿ 3 ಡೋರ್ ವರ್ಷನ್ ಮಾತ್ರ ಮಾರಾಟ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಮಾದರಿಯಲ್ಲಿ 5 ಡೋರ್ ವರ್ಷನ್ ಸಹ ಅಭಿವೃದ್ದಿಪಡಿಸುತ್ತಿದೆ.

ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ಹೊಸ 5 ಡೋರ್ ವರ್ಷನ್ ಕಾರ್ಯಕ್ಷಮತೆ ಕುರಿತಾಗಿ ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದ್ದು, ಕಂಪನಿಯು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಪರಿಚಯಿಸಲಿದೆ. ಆಫ್-ರೋಡ್ ಪ್ರಿಯರಿಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಥಾರ್ ಕಾರು ಮಾದರಿಯು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ನೊಂದಿಗೆ 60 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿವೆ.

ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸದ್ಯ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದ್ದು, ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.

ಕೆಜಿಎಫ್ ನಟಿ ರವೀನಾ ಟಂಡನ್‌ಗೆ ಮಹೀಂದ್ರಾ ಥಾರ್ ಕೊಳ್ಳುವ ಆಸೆಯಂತೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ!

ಥಾರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.53 ಲಕ್ಷದಿಂದ ರೂ. 16.03 ಲಕ್ಷ ಬೆಲೆ ಹೊಂದಿದ್ದು, 5 ಡೋರ್ ವರ್ಷನ್ ಬೆಲೆಯು 3 ಡೋರ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.

Most Read Articles

Kannada
English summary
KGF actress Raveena Tandon wants to buy a Mahindra Thar Anand Mahindra reacts
Story first published: Friday, September 2, 2022, 11:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X