kia Car Accident: ಡೆಡ್ಲಿ ಆಕ್ಸಿಡೆಂಟ್..ನಜ್ಜುಗುಜ್ಜಾದ ಕಿಯಾ ಕ್ಯಾರೆನ್ಸ್, ಪ್ರಯಾಣಿಕರು ಎಸ್ಕೇಪ್ ಆಗಿದ್ದೇಗೆ?
ಪ್ರತಿದಿನ ಒಂದಲ್ಲೊಂದು ರಸ್ತೆ ಅಪಘಾತಗಳು ನಡೆಯುತ್ತಿವೆ. ಯಾರೂ ಸಹ ಇದನ್ನು ಬಯಸುವುದಿಲ್ಲ. ಆದರೂ ನಾನಾ ಕಾರಣಗಳಿಗೆ ನಡೆದು, ಕೆಲವೊಮ್ಮೆ ಪ್ರಾಣ ಕಳೆದುಕೊಳ್ಳುವ ಸನ್ನಿವೇಶಗಳು ಎದುರಾಗುತ್ತವೆ. ನಾವು ಪ್ರಯಾಣಿಸುವ ವಾಹನಗಳಲ್ಲಿ ಅಗತ್ಯ ಸುರಕ್ಷಿತ ಪರಿಕರಗಳಿದ್ದರೆ ದೊಡ್ಡ ಮಟ್ಟದ ಆಕ್ಸಿಡೆಂಟ್ ಜರುಗದಂತೆ ತಪ್ಪಿಸಬಹುದು.
ಅದೇ ರೀತಿಯ ಘಟನೆಯೊಂದಕ್ಕೆ ಸಂಬಂಧಿಸಿರುವ ವಿಡಿಯೋವೊಂದನ್ನು ಇಂಟರ್ನೆಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಆದರೆ, ಯಾವ ಸ್ಥಳದಲ್ಲಿ ಈ ಅಪಘಾತ ನಡೆದಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ವಿಡಿಯೋವನ್ನು ಗಮನಿಸಿದಾಗ ಸಣ್ಣದಾಗಿ ನೀರು ಹರಿಯುವ ಹಳ್ಳಕ್ಕೆ ಕಿಯಾ ಕ್ಯಾರೆನ್ಸ್ (Kia Carens) ಎಂಪಿವಿ ಬಿದ್ದಿರುವುದು ಗೊತ್ತಾಗುತ್ತದೆ. ಜೊತೆಗೆ ಅದರ ಮುಂಭಾಗ ಸಂಪೂರ್ಣ ಜಖಂಕೊಂಡಿದ್ದು, ಭೀಕರ ಅಪಘಾತವಾದರೂ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.

ಅಪಘಾತಕ್ಕೀಡಾದ ಕಾರು, ಏರ್‌ಬ್ಯಾಗ್ ಹೊಂದಿದ್ದರಿಂದ ಗಂಭೀರವಾಗಿ ಗಾಯಗೊಳ್ಳದೆ ಸುಲಭವಾಗಿ ಅದರಿಂದ ಹೊರಬರಲು ಸಾಧ್ಯವಾಯಿತೆಂದು ಪ್ರಯಾಣಿಕರು ಹೇಳಿದ್ದಾರೆ ಎಂದು ವರದಿಯಾಗಿದೆ. ಕಿಯಾ ಕ್ಯಾರೆನ್ಸ್ ಸೇಫ್ಟಿ ಸಲುವಾಗಿ ಗ್ಲೋಬಲ್ ಎನ್‌ಸಿಎಪಿಯಿಂದ ವಯಸ್ಕರ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 3 ಸ್ಟಾರ್ ರೇಟಿಂಗ್ ಪಡೆದಿದೆ. ದೊಡ್ಡ ಮಟ್ಟದಲ್ಲಿ ಅಪಘಾತಕ್ಕೆ ಒಳಗಿದ್ದರೂ ಈ ಕಾರು ಸುರಕ್ಷತಾ ಪರಿಕರಗಳನ್ನು ಹೊಂದಿದ್ದ ಕಾರಣ, ಪ್ರಯಾಣಿಕರೆಲ್ಲರೂ ಪಾರಾಗಿದ್ದಾರೆ.
ಈ ಏಳು ಆಸನಗಳ ಕಿಯಾ ಕ್ಯಾರೆನ್ಸ್ ಎಂವಿಪಿ ಯಾವೆಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, ಇದು 6 ಏರ್‌ಬ್ಯಾಗ್, ESC (ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್), ಸೀಟ್‌ಬೆಲ್ಟ್ ಪ್ರಿಟೆನ್ಷನರ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಆಲ್ ವೀಲ್ ಡಿಸ್ಕ್ ಬ್ರೇಕ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತು ಹಲವು ಸೇಫ್ಟಿ ಫೀಚರ್ಸ್ ಹೊಂದಿದೆ.
ಕಿಯಾ ಕ್ಯಾರೆನ್ಸ್ ಎಂವಿಪಿಯ ಬೆಲೆ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಹೇಳುವುದಾದರೆ, ಇದು ರೂ.10.45 ಲಕ್ಷದಿಂದ ರೂ.18.95 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 6 ರೂಪಾಂತರಗಳಲ್ಲಿ ಖರೀದಿಗೆ ಸಿಗಲಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಈ ಕಿಯಾ ಕ್ಯಾರೆನ್ಸ್ ಎಂವಿಪಿಯಂತೆ ಭಾರತದಲ್ಲಿ ಗ್ಲೋಬಲ್ ಎನ್‌ಸಿಎಪಿ ಉತ್ತಮ ರೇಟಿಂಗ್ ಪಡೆದಿರುವ ಕಾರುಗಳು ಯಾವುವೆಂದು ನೋಡುವುದಾದರೆ, ಮಹೀಂದ್ರಾ ಕಂಪನಿಯ ಬಹುನೀರಿಕ್ಷಿತ ಸ್ಕಾರ್ಪಿಯೊ ಎನ್, ಗ್ಲೋಬಲ್ ಎನ್‌ಸಿಎಪಿ ನಡೆಸುವ ಕ್ರ್ಯಾಶ್ ಟೆಸ್ಟ್ ನಲ್ಲಿ ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.25 ಅಂಕ ಪಡೆದು 5 ಸ್ಟಾರ್ ರೇಟಿಂಗ್ ಗಳಿಸಿದ್ದು, ಮಕ್ಕಳ ರಕ್ಷಣೆಯಲ್ಲಿ 49ಕ್ಕೆ 28.93 ಅಂಕ ಗಳಿಸಿ 3 ಸ್ಟಾರ್ ರೇಟಿಂಗ್ ಪಡೆದಿದೆ.
ಇತ್ತೀಚಿಗೆ ಗ್ಲೋಬಲ್ ಎನ್‌ಸಿಎಪಿಯಿಂದ ಸ್ಕೋಡಾ ಸ್ಲಾವಿಯಾ ಮತ್ತು ಪೋಕ್ಸ್‌ವ್ಯಾಗನ್ ವರ್ಟಸ್ ಮಿಡ್ ಸೈಜ್ ಸೆಡಾನ್ ಗಳು ಸುರಕ್ಷತೆಯ ದೃಷ್ಟಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿವೆ. ಇವಷ್ಟೇ ಅಲ್ಲದೆ, ಟಾಟಾ ಪಂಚ್, ವಯಸ್ಕರ ರಕ್ಷಣೆ ವಿಭಾಗದಲ್ಲಿ 5 ಸ್ಟಾರ್ ರೇಟಿಂಗ್ ಗಳಿಸಿದೆ. ಟಾಟಾ ಆಲ್ಟ್ರೋಜ್, ಹ್ಯಾಚ್‌ಬ್ಯಾಕ್, ನೆಕ್ಸಾನ್ ಕೂಡ 5 ಸ್ಟಾರ್ ರೇಟಿಂಗ್ ಪಡೆದಿವೆ. ಇನ್ನುಳಿದಂತೆ ಮಹೀಂದ್ರಾ XUV300 ಹಾಗೂ XUV700 ಕಾರುಗಳು ಸಹ 5 ಸ್ಟಾರ್ ರೇಟಿಂಗ್ ಗಳಿಸಿವೆ.
ಕಿಯಾ ಕ್ಯಾರೆನ್ಸ್ ಭೀಕರ ಅಪಘಾತಕ್ಕೆ ತುತ್ತಾಗಿದೆ. ಆದರೆ, ಏರ್‌ಬ್ಯಾಗ್ ಹೊಂದಿದ್ದರಿಂದ ಪ್ರಯಾಣಿಕರು ಗಂಭೀರವಾಗಿ ಗಾಯಗೊಳ್ಳದೆ ಸುಲಭವಾಗಿ ಅದರಿಂದ ಹೊರಬರಲು ಸಾಧ್ಯವಾಗಿದೆ. ಇದನ್ನು ಗಮನಿಸಿದಾಗ ಪ್ರಸ್ತುತ ದಿನಮಾನಗಳಲ್ಲಿ ಕಾರು ಖರೀದಿಸುವ ಗ್ರಾಹಕರು ಅದರ ಬೆಲೆಗಿಂತ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬುದು ತಿಳಿಯುತ್ತದೆ. ನೆನಪಿರಲಿ.. ನಮ್ಮ ಕಾರು ಸಾಕಷ್ಟು ಸೇಫ್ಟಿ ಫೀಚರ್ಸ್ ಹೊಂದಿದೆ ಎಂದು ಅಡ್ಡಾದಿಡ್ಡಿಯಾಗಿ ಓಡಿಸದೆ, ಎಚ್ಚರಿಕೆಯಿಂದ ಡ್ರೈವ್ ಮಾಡಿರಿ.


Click it and Unblock the Notifications