ಕಿಯಾ ಮಾಲೀಕರೇ, ಈ ಸಮಸ್ಯೆಯ ರಿಪೇರಿಗಾಗಿ ಕಾರುಗಳನ್ನು ವಾಪಸ್‌ ತರಿಸಿದ ಕಿಯಾ: ನಿಮ್ಮ ಕಾರೂ ಇದೆಯೇ?

ಕೋವಿಡ್‌ ನಂತರ ಭಾರತದಲ್ಲಿ ದೊಡ್ಡ ಕಾರುಗಳ ಬೇಡಿಕೆ ವಿಪರೀತವಾಗಿ ಹೆಚ್ಚಿದೆ. ದೊಡ್ಡ ಕಾರುಗಳೆಂದರೆ ಅದು ಐಷಾರಾಮಿ ಕಾರುಗಳಲ್ಲಿ. ಬದಲಾಗಿ 7 ಸೀಟರ್‌ ಕಾರುಗಳು. ಒಂದು ಕುಟುಂಬ ಜೊತೆಯಾಗಿ ತಮ್ಮ ಲಗೇಜುಗಳನ್ನೆಲ್ಲಾ ತೆಗೆದುಕೊಂಡು ಒಂದು ದೂರ ಪ್ರಯಾಣ ಮಾಡಲು ಸಾಧ್ಯವಿರುವಂತಹ ಕಾರುಗಳ ಬೇಡಿಕೆ ಭಾರತದಲ್ಲಿ ಹೆಚ್ಚಾಯಿತು.

ಈ ಸಂಧರ್ಭದಲ್ಲಿ ಭಾರತಕ್ಕೆ ಕಾಲಿಟ್ಟ ಕಾರೇ ಈ ಕಿಯಾ ಕರೆನ್ಸ್‌. ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಕೇವಲ ಮೂರೇ ಮೂರು ವರ್ಷದಲ್ಲಿ ಈ ಕಿಯಾ ಕರೆನ್ಸ್‌ (Kia Carens) ಕಾರು ಜನಪ್ರಿಯ ವಾಹನವಾಗಿ ಹೊರಹೊಮ್ಮಿದೆ. ಇದರ ಹಲವಾರು ಆವೃತ್ತಿಗಳು ಲಭ್ಯವಿದ್ದು, ಬಹುಬೇಗ ವಾಹನ ಪ್ರೀಯರ ನೆಚ್ಚಿನ ಕಾರಾಗಿ ಬದಲಾಗಿದೆ.

Kia Recalls Carens MPV

ಇದೀಗ ಈ ಕಿಯಾ ಕರೆನ್ಸ್‌ ಕಾರಿನಲ್ಲಿ ಒಂದು ಸಣ್ಣ ದೋಷ ಕಂಡು ಬಂದಿದ್ದು, ಅದನ್ನು ಬಗೆ ಹರಿಸುವುದಕ್ಕಾಗಿ ಕಿಯಾ, ಕರೆನ್ಸ್‌ ಮಾಲೀಕರ ಬಳಿ ತಮ್ಮ ತಮ್ಮ ಕಾರುಗಳನ್ನು ಪಕ್ಕದ ಸರ್ವೀಸ್‌ ಸೆಂಟರ್‌ಗೆ ತರುವಂತೆ ಕಂಪನಿಯು ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಕಿಯಾ ಕರೆನ್ಸ್‌ ನ ಇನ್ಸ್ಟ್ರುಮೆಂಟ್‌ ಕ್ಲಸ್ಟರ್‌ನಲ್ಲಿ ಕಂಡು ಬಂದ ದೋಷವನ್ನು ಬಗೆಹರಿಸುವುದಕ್ಕಾಗಿ ಕಿಯಾ ಇದೀಗ ಕ್ರಮವನ್ನು ಕೈಗೊಂಡಿದೆ. ಈ ಕಾರಿನ ಇನ್ಸ್ಟ್ರುಮೆಂಟ್‌ ಕ್ಲಸ್ಟರ್ ಸರಿಯಾಗಿ ಆನ್‌ ಆಗದೇ ಇರುವುದರಿಂದ ಇದನ್ನು ಒಂದು ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡುವುದರ ಮೂಲಕ ಸಮಸ್ಯೆ ಬಗೆಹರಿಸುವತ್ತ ಕಿಯಾ ಮುಖ ಮಾಡಿದೆ.

Kia Recalls Carens MPV

ಈ ಕಾರಣದಿಂದ ಕಿಯಾ ಕಂಪನಿಯು ಈಗಾಗಲೇ ಸುಮಾರು 30 ಸಾವಿರಕ್ಕೂ ಅಧಿಕ ಕಾರುಗಳನ್ನು ಹಿಂಪಡೆದಿದ್ದು ಆ ಕಾರುಗಳ ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್ ಮಾಡುವುದರ ಮೂಲಕ ಸಮಸ್ಯೆ ಬಗೆ ಹರಿಸುತ್ತಿದೆ. ಆದರೆ ಇದು ಕಿಯಾ ಕರೆನ್ಸ್‌ ಮಾಲೀಕರಿಗೆ ಕೊಂಚ ತಲೆನೋವಾಗಿ ಪರಿಣಮಿಸಿದೆ ಎಂದು ತಿಳಿದು ಬಂದಿದೆ.

2022 ರ ಸಪ್ಟೆಂಬರ್‌ ಮತ್ತು 2023 ರ ಮಾರ್ಚ್‌ ತಿಂಗಳ ನಡುವಿನ ಕಾರುಗಳಲ್ಲಿ ಈ ದೋಷಗಳು ಕಂಡು ಬಂದಿದೆ ಎಂದು ಕಂಪನಿ ತಿಳಿಸಿದ್ದು, ಈ ಕಾಲಾವಧಿಯಲ್ಲಿ ಕಾರು ಖರೀದಿಸಿದ ಗ್ರಾಹಕರನ್ನು ಕಿಯಾ ಕಂಪನಿ ಸಂಪರ್ಕಿಸಲಿದ್ದು, ಸಮಸ್ಯೆ ಎದುರಿಸುತ್ತಿರುವವರು ಈ ಸಂಧರ್ಭದಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದಾಗಿದೆ.

ಈ ಹಿಂದೆ ಅಕ್ಟೋಬರ್‌ 2019 ರಿಂದ ಮಾರ್ಚ್‌ 2020 ರ ನಡುವಿನ ಕಿಯಾ ಸೆಲ್ಟಸ್‌ ಡೀಸೆಲ್‌ ಕಾರಿನ ಫ್ಯುಯೆಲ್‌ ಪಂಪ್‌ ಸಮಸ್ಯೆಯಾದಗಲೂ ಸಹ ಕಿಯಾ ಕಂಪನಿಯು ಕಾರುಗಳನ್ನು ವಾಪಸ್‌ ಕರೆಸಿ ಆ ಸಮಸ್ಯೆಯನ್ನು ಬಗೆ ಹರಿಸಿ ಕಳಿಸಿದ್ದನ್ನು ನಾವು ಈ ಸಂಧರ್ಭದಲ್ಲಿ ನೆನಪಿಸಿಕೊಳ್ಳಬುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 27, 2023, 12:46 [IST]
English summary
Kia recalls carens mpv to fix instrument cluster issue
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+