ತಿರುವಿನಲ್ಲಿ ದೊಡ್ಡ ಟ್ರಕ್ ಬರುವುದು ಕಂಡು ಗಾಬರಿಗೊಂಡು ಟ್ರಕ್‌ಗೆ ಡಿಕ್ಕಿ... ವಿಡಿಯೋ ವೈರಲ್
ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ತಿರುವುಗಳು ಹೆಚ್ಚು. ಇಂತಹ ವೇಳೆ ಸೂಚನಾ ಫಲಕಗಳನ್ನು ಗಮನಿಸುತ್ತಾ ಪ್ರಯಾಣ ಮಾಡಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ಡ್ರೈವ್ ಮಾಡುವುದು ಒಂದು ಸವಾಲು ಆಗಿದೆ. ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿನ ತಿರುವು ಹೆಚ್ಚು ಅಪಯಕಾರಿಯಾದೆ. ಇನ್ನು ಗುಡ್ಡಗಾಡು ಪ್ರದೇಶಗಳ ರಸ್ತೆಗಳು ಕಿರುದಾಗಿರುತ್ತದೆ.
ಗುಡ್ಡಗಾಡು ಪ್ರದೇಶಗಳ ಕಿರುದಾದ ರಸ್ತೆಗಳಲ್ಲಿ ದೊಡ್ಡ ವಾಹನಗಳು ಬರುವಾಗ ದಾರಿ ಬಿಟ್ಟು ಕೊಡಲು ಹೆಚ್ಚು ಸ್ಥಳಾವಕಾಶವಿರುವುದಿಲ್ಲ, ಇನ್ನು ಗುಡ್ಡಗಾಡು ಪ್ರದೇಶಗಳಲ್ಲಿ ಅಪಘಾತಗಳು ಕೂಡ ಹೆಚ್ಚಾಗಿ ನಡೆಯುತ್ತದೆ. ಇತ್ತೀಚೆಗೆ ಕಿಯಾ ಸೆಲ್ಟೋಸ್‌ನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾದ ಅಪಘಾತದ ದೃಶ್ಯ ವೀಡಿಯೋ ವೈರಲ್ ಆಗಿದೆ. ಈ ವೀಡಿಯೊ ಘಟನೆಯು ತಮಿಳುನಾಡಿನಲ್ಲಿ ಸಂಭವಿಸಿದೆ.

ವೀಡಿಯೊದಲ್ಲಿ, ಕಿಯಾ ಸೆಲ್ಟೋಸ್ ಎಸ್‍ಯುವಿಯು ರಸ್ತೆ ಹತ್ತುವಾಗ ಎಡಭಾಗದ ಮೂಲಕ ತಿರುವು ಪಡೆದುಕೊಳ್ಳುತ್ತಾರೆ. ಆದರೆ ಮುಂಭಾಗದಿಂದ ಟ್ರಕ್ ಬಂದಾಗ ಕಿಯಾ ಸೆಲ್ಟೋಸ್ ಡ್ರೈವರ್ ಗಾಬರಿಗೊಂಡು ತನ್ನ ಬಲಭಾಗ ತಿರುಗಿಸುತ್ತಾರೆ. ಇದರಿಂದ ಕಿಯಾ ಸೆಲ್ಟೋಸ್ ಎಸ್‍ಯುವಿಯು ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭಬಿಸುತ್ತದೆ. ಟ್ರಕ್ ಡ್ರೈವರ್ ಹಾರ್ನ್ ಹಾಕುವುದನ್ನು ನಾವು ವೀಡಿಯೊದಲ್ಲಿ ಕೇಳಬಹುದು ಆದರೆ ಕಿಯಾ ಸೆಲ್ಟೋಸ್ ಚಾಲಕ ಟ್ರಕ್ ಅನ್ನು ನಿರೀಕ್ಷಿಸಿರಲಿಲ್ಲ ಮತ್ತು ಆಶ್ಚರ್ಯಚಕಿತನಾದರು.
ಅಪಘಾತವಾಗುವುದನ್ನು ತಪ್ಪಿಸಲು ಕಿಯಾ ಸೆಲ್ಟೋಸ್ ಎಸ್‍ಯುವಿಯು ಡ್ರೈವರ್ ಪ್ರಯ್ನತಿಸಿದರು. ಆದರೆ ವಿಚಲಿತರಾಗಿ ಬಲಭಾಗಕ್ಕೆ ತಿರುಗಿಸಿ ಟ್ರಕ್‌ಗೆ ಡಿಕ್ಕಿ ಹೊಡಿಯುತ್ತಾರೆ. ಗುಡ್ಡಗಾಡು ರಸ್ತೆಗಳಲ್ಲಿ, ದೊಡ್ಡ ಟ್ರಕ್‌ಗಳು ಮತ್ತು ಬಸ್‌ನಂತಹ ಭಾರೀ ವಾಹನಗಳು ತಿರುವುಗಳಿಂದ ತಿರಾಗಬೇಕಾದರೆ, ಲಾಂಗ್ ಆಗಿ ಟರ್ನ್ ತೆಗೆದುಕೊಳ್ಳಬೇಕು. ಇದರಿಂದ ಈ ಘಟನೆಯಲ್ಲಿಯು ಟ್ರಕ್ ಚಾಲಕ ಲಾಂಗ್ ಟರ್ನ್ ಅನ್ನು ತೆಗೆದುಕೊಳ್ಳುತ್ತಿದ್ದರು.

ಆದರೆ ಇದನ್ನು ಅರಿಯದೆ ಕಿಯಾ ಸೆಲ್ಟೋಸ್ ಚಾಲಕ ವಿಚಲಿತರಾಗಿ ಕಾರನ್ನು ಬಲಕ್ಕೆ ತಿರುಗಿಸಿದ್ದಾರೆ. ಇದರಿಂದ ಗುಡ್ಡಗಾಡು ರಸ್ತೆಗಳಲ್ಲಿ ಡ್ರೈವ್ ಮಾಡುವಾಗ ಇಂತಹ ಕೆಲವು ವಿಷಯಗಳನ್ನು ಅರಿತುಕೊಂಡರೆ ಒಳ್ಳೆಯದು. ಮೌಂಟೇನ್ ಡ್ರೈವಿಂಗ್ ಒಂದು ರೋಮಾಂಚಕ ಮತ್ತು ಸ್ಮರಣೀಯ ಅನುಭವವಾಗಬಹುದು, ಆದರೆ ಇದು ಅಪಾಯಗಳಿಂದ ಕೂಡ ಇರುತ್ತದೆ. ಎಚ್ಚರಿಕೆಯಿಂದ ಮತ್ತು ಕೆಲವು ಅಗತ್ಯ ನಿಯಮಗಳನ್ನು ಅನುಸರಿಸುವ ಮೂಲಕ ಗುಡ್ಡಗಾಡು ಪ್ರದೇಶಗಳಲ್ಲಿ ಡ್ರೈವ್ ಮಾಡಬೇಕು.
ಗುಡ್ಡಗಾಡು ರಸ್ತೆಗಳಲ್ಲಿ ಚಾಲನೆ ಮಾಡುವಾಗ ನಿಮ್ಮ ಲೇನ್‌ನಲ್ಲಿ ಉಳಿಯುವುದು ಪ್ರಾಥಮಿಕ ನಿಯಮಗಳಲ್ಲಿ ಒಂದಾಗಿದೆ. ಹೊಸ ಚಾಲಕರು ಆಗಾಗ್ಗೆ ವಿರುದ್ಧ ಲೇನ್‌ಗೆ ತಿರುಗುತ್ತಾರೆ, ಇದು ಅಪಘಾತಗಳಿಗೆ ಕಾರಣವಾಗುತ್ತದೆ. ಇನ್ನೊಂದು ನಿರ್ಣಾಯಕ ಅಂಶವೆಂದರೆ ಓವರ್‌ಟೇಕ್ ಮಾಡುವಾಗ ಎಚ್ಚರವಾಗಿರುವುದು. ಬ್ಲೈಂಡ್ ಸ್ಪಾಟ್ ಗಳಲ್ಲಿ ಓವರ್‌ಟೇಕ್ ಮಾಡುವುದು ಅತ್ಯಂತ ಅಪಾಯಕಾರಿ. ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ, ಅಪಘತಗಳನ್ನು ತಪ್ಪಿಸಬಹುದು.
ಗುಡ್ಡಗಾಡು ರಸ್ತೆಗಳಲ್ಲಿ ಹಲವಾರು ಸವಾಲುಗಳನ್ನು ನೀಡುತ್ತವೆ, ವಿಶೇಷವಾಗಿ ಶೀತ ಪರಿಸ್ಥಿತಿಗಳಲ್ಲಿ. ರಸ್ತೆಗಳಲ್ಲಿ ಮಂಜುಗಡ್ಡೆಯ ರಚನೆಯು ಗಮನಾರ್ಹ ಅಪಾಯಗಳಲ್ಲಿ ಒಂದಾಗಿದೆ, ಇದು ವಾಹನಗಳ ಟ್ರ್ಯಾಕ್ಷನ್ ಅನ್ನು ಕಳೆದುಕೊಳ್ಳಲು ಕಾರಣವಾಗಬಹುದು. ವಿಶೇಷವಾಗಿ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವಾಗ. ಇದು ಹೆಚ್ಚಿನ ಅಪಾಯಗಳನ್ನು ಉಂಟು ಮಾಡುತ್ತದೆ. ಇದರಿಂದ ಹೆಚ್ಚಿನ ಎಚ್ಚರಿಕೆಯಿಂದ ಚಾಲನೆ ಮಾಡಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications